"2 ಲಿವರ್ ಎಕ್ಸ್‌ಟ್ರಾ" ಎಂತಲೇ ಫೇಮಸ್ ಆಗಿದ್ದ ಕುಮಾರಿ ಆಂಟಿಯನ್ನು ಬಿಗ್ ಬಾಸ್‌ಗೆ ಕಳಿಸಿ ಅಂತಿರೋದೇಕೆ?
ಈ ಸೋಶಿಯಲ್ ಮೀಡಿಯಾ ಜಮಾನದಲ್ಲಿ ಪ್ರತಿಭೆ ಇದ್ದವರು ಕಣ್ಮುಚ್ಚಿ ಕಣ್ಣು ಬಿಡುವುದರೊಳಗೆ ಫೇಮಸ್ ಆಗಿ ಬಿಡುತ್ತಾರೆ. ಸದ್ಯ ಹೈದರಾಬಾದ್‌ನ ಕುಮಾರಿ ಆಂಟಿ ದಿಢೀರನೇ ದೇಶಾದ್ಯಂತ ಟ್ರೆಂಡ್ ಆಗಿ ಬಿಟ್ಟಿದ್ದಾರೆ. ಟ್ವಿಟರ್ (ಎಕ್ಸ್), ಫೇಸ್‌ಬುಕ್, ಇನ್‌ಸ್ಟಾಗ್ರಾಂನಲ್ಲಿ ಇವರ ಬಗ್ಗೆನೇ ವಿಡಿಯೋಗಳು ಹರಿದಾಡುವುದಕ್ಕೆ ಶುರುವಾಗಿವೆ.
ಕುಮಾರಿ ಆಂಟಿ ಹೈದರಾಬಾದ್‌ನ ಫುಟ್‌ಪಾತ್‌ನಲ್ಲಿ ಬಾಯಲ್ಲಿ ನೀರು ತರಿಸುವ ಊಟ ನೀಡುತ್ತಿದ್ದರು. ಐಟಿ ಕಂಪನಿಯಲ್ಲಿ ಕೆಲಸ ಮಾಡುವವರಿಗೆ, ಬ್ಯಾಚುಲರ್‌ಗಳಿಗೆ ಕುಮಾರಿ ಆಂಟಿಯ ನಾನ್ ವೆಜ್ ಊಟ ಅಂದ್ರೆ ಬಲು ಇಷ್ಟ. ತೆಲುಗಿನ ಕೆಲವು ಯೂಟ್ಯೂಬ್ ಚಾನೆಲ್‌ಗಳು ವಿಡಿಯೋ ಮಾಡಿದ ಮೇಲೆ ಗ್ರಾಹಕ ಸಂಖ್ಯೆ ಮತ್ತಷ್ಟು ಹೆಚ್ಚಾಗಿತ್ತು.

ಕುಮಾರಿ ಆಂಟಿ ಮಾಡುವ ಚಿಕನ್, ಮಟನ್ ಕರಿಗೆ ಹೈದರಾಬಾದ್‌ನ ಜನರು ಫಿದಾ ಆಗಿದ್ದಾರೆ. ಹೀಗಾಗಿ ಆಂಟಿ ಫುಡ್ ಸ್ಟಾಲ್‌ಗೆ ಬರುವ ಗ್ರಾಹಕ ಸಂಖ್ಯೆ ಹೆಚ್ಚಾಗಿತ್ತು. ಇಷ್ಟೇ ಅಲ್ಲ ನಾನ್ ವೆಜ್ ತೆಗೆದುಕೊಂಡವರಿಗೆ "ಎರಡು ಲಿವರ್ ಎಕ್ಸ್‌ಟ್ರಾ" ಅಂತಿದ್ದ ಕುಮಾರಿ ಆಂಟಿ ಡೈಲಾಗ್ ಕೂಡ ಅಷ್ಟೇ ಫೇಮಸ್. ಹೀಗಾಗಿ ತೆಲುಗು ಮಂದಿಗೆ ಕುಮಾರಿ ಆಂಟಿ ಕ್ಷಣ ಮಾತ್ರದಲ್ಲಿ 'ವೈರಲ್ ಕುಮಾರಿ ಆಂಟಿ' ಆಗಿ ಬದಲಾಗಿದ್ದರು.
ಆದರೆ, ಜನವರಿ 30ರಂದು ಹೈದರಾಬಾದ್‌ನ ರಾಯದುರ್ಗಂ ಟ್ರಾಫಿಕ್ ಪೊಲೀಸರು ಈಕೆ ಫುಟ್‌ಪಾತ್ ಸ್ಟಾಲ್ ಅನ್ನು ಬಂದ್ ಮಾಡುವಂತೆ ಹೇಳಿದ್ದರು. ಈಕೆಯ ಫುಡ್‌ಸ್ಟಾಲ್‌ನಿಂದ ಟ್ರಾಫಿಕ್ ಹೆಚ್ಚಾಗುತ್ತಿದೆ ಎಂದು ಐಟಿ ಕಂಪನಿಗಳು ದೂರು ನೀಡಿದ ಬೆನ್ನಲ್ಲೇ ಈ ನಿರ್ಧಾರಕ್ಕೆ ಬಂದಿದ್ದರು. ಹೀಗಾಗಿ ಕುಮಾರಿ ಆಂಟಿಯ ಮೇಲೆ ದೂರು ಕೂಡ ದಾಖಲಾಗಿತ್ತು. ಆದರೆ, ಆಂಟಿಯ ಜನಪ್ರಿಯತೆ ಮನಗಂಡ ತೆಲಂಗಾಣದ ಸಿಎಂ ಕಚೇರಿ ಅವರ ಮೇಲಿನ ಕೇಸ್ ಅನ್ನು ತಕ್ಷಣವೇ ಹಿಂಪಡೆಯುವಂತೆ ಆದೇಶ ನೀಡಿದೆ.
ಸಿಎಂ ಕಚೇರಿ ಕುಮಾರಿ ಆಂಟಿಯ ಫುಡ್ ಟ್ರಕ್ ಓಡಿಸುವುದಕ್ಕೆ ಅವಕಾಶ ನೀಡುತ್ತಿದ್ದಂತೆ ಮತ್ತೆ ಟ್ರೆಂಡ್ ಆಗುತ್ತಿದ್ದಾರೆ. ಈ ಬಾರಿ ತೆಲುಗು ರಾಜ್ಯಗಳಲ್ಲಿ ಅಷ್ಟೇ ಅಲ್ಲದೆ, ಇಡೀ ದೇಶದಲ್ಲೇ ಸದ್ದು ಮಾಡುತ್ತಿದ್ದಾರೆ. ಮತ್ತೆ ಕುಮಾರಿ ಆಂಟಿ ಕೈರುಚಿ ಸವಿಯಲು ಜನರು ಸಾಗರೋಪಾದಿಯಲ್ಲಿ ಬರುತ್ತಿದ್ದಾರೆ. ಯೂಟ್ಯೂಬ್ ಚಾನೆಲ್‌ಗಳು ಆಂಟಿಯ ಸಂದರ್ಶನಕ್ಕೆ ಮತ್ತೆ ಮುಗಿಬಿದ್ದಿವೆ.

ಈ ವೇಳೆ ಕೆಲ ಯೂಟ್ಯೂಬ್ ಚಾನೆಲ್‌ಗಳು ಆಂಟಿಯ ಕೈ ರುಚಿ ಸವಿಯಲು ಬಂದಿದ್ದವರನ್ನು ಮಾತಾಡಿಸಿದೆ. ಈ ವೇಳೆ ಒಬ್ಬೊಬ್ಬರು ಒಂದೊಂದು ಪ್ರತಿಕ್ರಿಯೆ ನೀಡಿದ್ದಾರೆ. ಕೆಲವು ಕುಮಾರಿ ಆಂಟಿಯ ಫುಡ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ರೆ, ಮತ್ತೆ ಕೆಲವರು ಕೈರುಚಿಯ ಬಗ್ಗೆ ಹೊಗಳಿಸಿದ್ದಾರೆ. ಇದೇ ವೇಳೆ ಇಂಟ್ರೆಸ್ಟಿಂಗ್ ಕಮೆಂಟ್‌ಗಳು ಬಂದಿವೆ. "ಕುಮಾರಿ ಆಂಟಿಯನ್ನು ಬಿಗ್‌ಬಾಸ್‌ಗೆ ಕಳುಹಿಸಿ" ಎಂದು ಹೇಳಿದ್ದಾರೆ. ಮತ್ತೆ ಕೆಲವರು "ಕುಮಾರಿ ಆಂಟಿಯನ್ನು ರಾಜಕೀಯಕ್ಕೆ ಕರ್ಕೊಂಡು ಬರೋಣ.. ಎಂಎಲ್‌ಎ ಮಾಡೋಣ" ಅಂತನೂ ತಮಾಷೆ ಮಾಡಿದ್ದಾರೆ.


Click it and Unblock the Notifications











