ಥಿಯೇಟರ್‌ನಲ್ಲಿ ತೆರೆಕಂಡ 2023ರ ಭಾರತದ ಜನಪ್ರಿಯ ಸಿನಿಮಾಗ್ಯಾವುವು? ಟಾಪ್ 10 ಲಿಸ್ಟ್‌ನಲ್ಲಿ ಕನ್ನಡಕ್ಕಿದೆಯಾ ಸ್ಥಾನ?

2023 ಮುಗೀತಾ ಬಂತು. ಈ ವರ್ಷದ ಕೊನೆಯ ತಿಂಗಳಲ್ಲಿ ಇದ್ದೇವೆ. ಈ ವರ್ಷ ಕನ್ನಡ ಚಿತ್ರರಂಗಕ್ಕೆ ಹೆಚ್ಚೇನು ಸಕ್ಸಸ್ ಸಿಕ್ಕಿಲ್ಲ. ಕಳೆದ ವರ್ಷ ಹಿಂದಿ, ತೆಲುಗು, ತಮಿಳು ಚಿತ್ರರಂಗವನ್ನೇ ಬೆಚ್ಚಿಬೀಳಿಸಿದ್ದ ಸ್ಯಾಂಡಲ್‌ವುಡ್ ಈ ಬಾರ ಸೈಲೆಂಟ್ ಆಗಿದೆ.

ಕಳೆದ ಬಾರಿ ಸೋಲಿನ ಸುಳಿಗೆ ಸಿಲುಕಿದ್ದ ಬಾಲಿವುಡ್‌ ಈ ಬಾರಿ ದಕ್ಷಿಣ ಭಾರತಕ್ಕಿಂತ ಹೆಚ್ಚು ಸಕ್ಸಸ್‌ಫುಲ್ ಸಿನಿಮಾಗಳನ್ನು ಕೊಟ್ಟಿದೆ. 2023ಯ ಅಂತ್ಯದಲ್ಲಿ ಪ್ರತಿ ವರ್ಷದಂತೆ ಸಿನಿಮಾ, ಟಿವಿ ಶೋ ಹಾಗೂ ಸಿನಿಮಾ ತಾರೆಯರ ಅಧಿಕೃತ ಮಾಹಿತಿ ನೀಡುವ ಐಎಂಡಿಬಿ (IMdb) ಥಿಯೇಟರ್‌ ಸದ್ದು ಮಾಡಿದ ಭಾರತೀಯ ಸಿನಿಮಾಗಳ ಪಟ್ಟಿಯನ್ನು ರಿಲೀಸ್ ಮಾಡಿದೆ.

imdb-most-popular-indian-movie-2023

2023ರಲ್ಲಿ ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಅತ್ಯಂತ ಜನಪ್ರಿಯ 10 ಭಾರತೀಯ ಸಿನಿಮಾಗಳ ಪಟ್ಟಿಯನ್ನು ರಿವೀಲ್ ಮಾಡಿದೆ. ಈ ವೆಬ್ ತಾಣಕ್ಕೆ ಪ್ರತಿ ತಿಂಗಳು ಸುಮಾರು 200 ದಶಲಕ್ಷಕ್ಕೂ ಹೆಚ್ಚು ವೀಕ್ಷಕರು ಸಿನಿಮಾಗೆ ಸಂಬಂಧಿಸಿದ ಮಾಹಿತಿಗಾಗಿ ಭೇಟಿ ಕೊಡುತ್ತಾರೆ. ಇದನ್ನೇ ಆಧಾರವಾಗಿಟ್ಟುಕೊಂಡು ಟಾಪ್ 10 ಪಟ್ಟಿಯನ್ನು ರಿಲೀಸ್ ಮಾಡಲಾಗಿದೆ.

ಟಾಪ್ 1 ಪಟ್ಟಿಯಲ್ಲಿ 'ಜವಾನ್' ಸಿನಿಮಾ

2023ರಲ್ಲಿ ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಸಿನಿಮಾಗಳ ಪೈಕಿ 'ಜವಾನ್' ನಂಬರ್‍ 1 ಸ್ಥಾನದಲ್ಲಿದೆ. ಅಟ್ಲಿ ಹಾಗೂ ಶಾರುಖ್ ಖಾನ್ ಕಾಂಬಿನೇಷನ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸಾವಿರ ಕೋಟಿಗೂ ಅಧಿಕ ಗಳಿಕೆ ಮಾಡಿತ್ತು. ಸಮಾಜದಲ್ಲಿರುವ ಅನ್ಯಾಯಗಳನ್ನು ಸರಿ ಮಾಡಲು ಹೊರಟ ವ್ಯಕ್ತಯೊಬ್ಬನ ಹೋರಾಟದ ಕಥೆಯನ್ನು ತೆರೆಮೇಲೆ ಸೂಕ್ಷ್ಮವಾಗಿ ಕಟ್ಟಿಕೊಡಲಾಗಿತ್ತು. ಶಾರುಖ್ ಖಾನ್ ನಿರ್ಮಾಣ ಸಂಸ್ಥೆ ರೆಡ್ ಚಿಲ್ಲೀಸ್ ಈ ಸಿನಿಮಾಗೆ ಹಣ ಹೂಡಿತ್ತು. ವಿಶೇಷ ಅಂದರೆ, ಎರಡನೇ ಸ್ಥಾನದಲ್ಲೂ ಶಾರುಖ್ ಖಾನ್ ಸಿನಿಮಾ ಪಠಾಣ್ ಇದೆ.

ಟಾಪ್ 10 ಸಿನಿಮಾ ಲಿಸ್ಟ್‌ ಇಲ್ಲಿದೆ

IMdb ಭಾರತದ ಟಾಪ್ 10 ಜನಪ್ರಿಯ ಸಿನಿಮಾಗಳ ಪಟ್ಟಿ ಹೊರ ಬಿಟ್ಟಿದೆ. ಇದರಲ್ಲಿ ಬಹುತೇಕ ಬಾಲಿವುಡ್‌ ಸಿನಿಮಾಗಳೇ ಇವೆ. ಬಿಟ್ಟರೆ, ತಮಿಳು ಸಿನಿಮಾಗಳ ಕಾಣಿಸಿಕೊಂಡಿವೆ. ದಳಪತಿ ವಿಜಯ್ ಸಿನಿಮಾ ಲಿಯೋ 4ನೇ ಸ್ಥಾನದಲ್ಲಿದ್ದರೆ, ಸೂಪರ್‌ಸ್ಟಾರ್ ರಜನಿಕಾಂತ್ ಸಿನಿಮಾ 'ಜೈಲರ್' ಆರನೇ ಸ್ಥಾನದಲ್ಲಿದೆ. ಒಟ್ಟು ಟಾಪ್ 10 ಪಟ್ಟಿಯಲ್ಲಿರೋ ಸಿನಿಮಾಗಳ ಲಿಸ್ಟ್ ಇಲ್ಲಿದೆ.

imdb-most-popular-indian-movie-2023

ಜನಪ್ರಿಯ ಟಾಪ್ 10 ಸಿನಿಮಾ ಲಿಸ್ಟ್ ಇಲ್ಲಿದೆ

1. ಜವಾನ್
2. ಪಠಾಣ್
3. ರಾಕಿ ಔರ್ ರಾಣಿ ಕಿ ಪ್ರೇಮ್‌ ಕಹಾನಿ
4. ಲಿಯೊ
5. ಒಎಂಜಿ 2
6. ಜೈಲರ್
7. ಗದರ್ -2
8. ದಿ ಕೇರಳ ಸ್ಟೋರಿ
9. ತು ಝೂಠಿ ಮೈ ಮಕ್ಕಾರ್
10. ಭೋಲಾ

ಟಾಪ್ 10 ಪಟ್ಟಿಯಲ್ಲಿ ಕನ್ನಡ ಸಿನಿಮಾ ಇಲ್ಲ

IMdb ರಿಲೀಸ್ ಮಾಡಿದ 2023ರಲ್ಲಿ ಥಿಯೇಟರ್‌ನಲ್ಲಿ ಸದ್ದು ಮಾಡಿದ ಜನಪ್ರಿಯ ಸಿನಿಮಾಗಳ ಪಟ್ಟಿಯಲ್ಲಿ ಒಂದೇ ಒಂದು ಕನ್ನಡ ಸಿನಿಮಾ ಇಲ್ಲ. ಕಳೆದ ಬಾರಿ ಐದಾರು ಸಿನಿಮಾಗಳು ಈ ಪಟ್ಟಿಯಲ್ಲಿ ಬರುವುದಕ್ಕೆ ಪೈಪೋಟಿ ಒಡ್ಡಿದ್ದವು. ಈ ವರ್ಷ ಕನ್ನಡ ಚಿತ್ರರಂಗದಿಂದ ಬೆರಳೆಣಿಕೆಯಷ್ಟು ಸಿನಿಮಾ ಹಿಟ್ ಲಿಸ್ಟ್ ಸೇರಿವೆ. ಹೀಗಾಗಿ ಈ ಪಟ್ಟಿಯಲ್ಲಿ ಕನ್ನಡ ಸಿನಿಮಾಗಳಿಲ್ಲ

ತೆಲುಗು, ಮಲಯಾಳಂ ಸಿನಿಮಾಗಳೂ ಇಲ್ಲ

ಹಾಗಂತ ಕನ್ನಡದ ಅಷ್ಟೇ ಅಲ್ಲ. ತೆಲುಗು ಹಾಗೂ ಮಲಯಾಳಂ ಸಿನಿಮಾಗಳು ಈ ಪಟ್ಟಿಯಲ್ಲಿ ಇಲ್ಲ. ಜನವರಿ 1 ರಿಂದ ನವೆಂಬರ್ 6ರವರೆಗೆ ತೆರೆಕಂಡ ಭಾರತೀಯ ಸಿನಿಮಾಗಳಲ್ಲಿ 5ಕ್ಕಿಂತ ಹೆಚ್ಚು ರೇಟಿಂಗ್ ಪಡೆದ ಸಿನಿಮಾಗಳನ್ನು ಈ ಪಟ್ಟಿಯಲ್ಲಿ ಸೇರಿಸಿದ್ದಾಗಿ IMdb ಹೇಳಿಕೊಂಡಿದೆ. ವರ್ಷದ ಕೊನೆಯಲ್ಲಿ ಒಂದೊಂದೇ ಪಟ್ಟಿ ರಿಲೀಸ್ ಆಗುತ್ತಿದೆ.

More from Filmibeat

English summary
Imdb Most popular 2023 top 10 Indian movies Theatrical
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X