2025ರಲ್ಲಿ ಅತೀ ಜನಪ್ರಿಯ ಸಿನಿಮಾ ಯಾವುದು? ಜುಲೈನಿಂದ ಡಿಸೆಂಬರ್‌ವರೆಗೆ ಬಹು ನಿರೀಕ್ಷಿತ ಚಿತ್ರಗಳಲ್ಲಿ 'ಕಾಂತಾರ' ಯಾಕಿಲ್ಲ?
2025 ಭಾರತೀಯ ಚಿತ್ರರಂಗಕ್ಕೆ ಅಷ್ಟೇನೂ ಆಶಾದಾಯಕವಲ್ಲ. ಬಾಲಿವುಡ್‌ನಿಂದ ಹಿಡಿದು ಸ್ಯಾಂಡಲ್‌ವುಡ್ ವರೆಗೂ ಯಾವ ಚಿತ್ರರಂಗಕ್ಕೂ ಮೆಗಾ ಹಿಟ್ ಸಿನಿಮಾಗಳು ಸಿಕ್ಕಿಲ್ಲ. ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡಿಲ್ಲ. ಹೀಗಾಗಿ 2025 ಸಿನಿಮಾ ಮಂದಿಗೆ ಅಷ್ಟೊಂದು ಅದೃಷ್ಟ ತಂದುಕೊಟ್ಟಿಲ್ಲ ಅನ್ನೋದು ಅಷ್ಟೇ ಸತ್ಯ. ಅದರಲ್ಲೂ ಮೊದಲ ಆರು ತಿಂಗಳು ಎಲ್ಲಾ ಚಿತ್ರರಂಗದಲ್ಲೂ ಒಂದೆರಡು ಸಿನಿಮಾಗಳು ಸದ್ದು ಮಾಡಿವೆ ಅಷ್ಟೇ.
ಸಿನಿಮಾಗಳು, ಟಿವಿ ಶೋಗಳು ಹಾಗೂ ಸೆಲೆಬ್ರಿಟಿಗಳ ಬಗ್ಗೆ ಮಾಹಿತಿ ನೀಡುವ ವಿಶ್ವದ ಅತ್ಯಂತ ಜನಪ್ರಿಯ ವೆಬ್ ಸೈಟ್ imdb ಪ್ರತಿ ವರ್ಷದಂತೆ ಜನಪ್ರಿಯ ಸಿನಿಮಾಗಳ ಪಟ್ಟಿಯನ್ನು ರಿಲೀಸ್ ಮಾಡಿದೆ. 2025ರ ಮುಗಿಯುವುದಕ್ಕೆ ಇನ್ನೂ ಆರು ತಿಂಗಳು ಬಾಕಿ ಇರುವುದರಿಂದ ಎರಡು ಭಾಗಗಳಾಗಿ ವಿಂಗಡನೆ ಮಾಡಿಕೊಂಡಿದೆ. ಅದರಲ್ಲಿ ಮೊದಲ ಆರು ತಿಂಗಳ ಜನಪ್ರಿಯ ಸಿನಿಮಾಗಳ ಪಟ್ಟಿ ಇದ್ದರೆ. ಇನ್ನೊಂದು ಭಾಗದಲ್ಲಿ ಉಳಿದ ಆರು ತಿಂಗಳಲ್ಲಿ ಬಹು ನಿರೀಕ್ಷಿತ ಸಿನಿಮಾಗಳ ಲಿಸ್ಟ್ ಇದೆ.

2025 ಜನವರಿಯಿಂದ ಜೂನ್‌ವರೆಗೆ ಬಿಡುಗಡೆಯಾಗಿರುವ ಹಾಗೂ ಜುಲೈನಿಂದ ಡಿಸೆಂಬರ್‌ವರೆಗೆ ರಿಲೀಸ್ ಆಗಲಿರುವ ಜನಪ್ರಿಯ ಸಿನಿಮಾಗಳ ಪಟ್ಟಿ ಮಾಡಿದೆ. ಪ್ರತಿ ತಿಂಗಳಯ ತನ್ನ ವೆಬ್ ಸೈಟ್‌ನಲ್ಲಿ ವೀಕ್ಷಕರು ಸರ್ಚ್ ಮಾಡುವ ಅಂಕಿ ಅಂಶಗಳನ್ನು ಇಟ್ಟುಕೊಂಡು ಈ ಪಟ್ಟಿಯನ್ನು ರಿಲೀಸ್ ಮಾಡಲಾಗಿದೆ. ಸುಮಾರು 250 ಮಿಲಿಯನ್‌ಗೂ ಅಧಿಕ ವೀಕ್ಷಕರು ಈ ವೆಬ್‌ಸೈಟ್‌ಗೆ ಭೇಟಿ ಕೊಟ್ಟಿದ್ದು, ಅವರು ಸಿನಿಮಾಗಳ ಬಗ್ಗೆ ಹುಡುಕಾಡಿದ ಪಟ್ಟಿಯನ್ನು ಇಟ್ಟುಕೊಂಡು ಈ ಪಟ್ಟಿಯನ್ನು ಸಿದ್ಧ ಪಡಿಸಲಾಗಿದೆ. ಆ ಪಟ್ಟಿಗಳನ್ನು ನೋಡುವುದಾರೇ..
2025ರಲ್ಲಿ ಜನವರಿಯಿಂದ ಜೂನ್ ತಿಂಗಳವರೆಗೂ ಬಿಡುಗಡೆಯಾಗಿರುವ ಸಿನಿಮಾಗಳಲ್ಲಿ ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ ಹಾಗೂ ಅಕ್ಷಯ್ ಖನ್ನಾ ನಟನೆಯ 'ಛಾವಾ' ಸಿನಿಮಾ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಈ ಸಿನಿಮಾವನ್ನು ಲಕ್ಷ್ಮಣ್ ಉಟೇಕರ್ ನಿರ್ದೇಶನ ಮಾಡಿದ್ದರು. "ಇದು ಪ್ರೇಕ್ಷಕರ ನೇರ ಅಭಿಪ್ರಾಯ. ಹೀಗಾಗಿ ಈ ಲಿಸ್ಟ್ ನನಗೆ ಸ್ಪೆಷಲ್ ಎನಿಸುತ್ತೆ. ಅತೀವ ಪ್ರೀತಿ ಹಾಗೂ ಪಾಸಿಟಿವ್ ಆಗಿ ಸಿನಿಮಾವನ್ನು ಸ್ವೀಕರಿಸಿದ್ದಕ್ಕೆ ಖುಷಿಯಾಗಿದೆ. ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ ಹಾಗೂ ಅಕ್ಷಯ್ ಖನ್ನಾ ನಟಿಸಿದ್ದು, ವೀಕ್ಷಕರಿಗೆ ಹತ್ತಿರ ಆಗುವಂತಹ ಪಾತ್ರವನ್ನು ಹೇಳುವುದಕ್ಕೆ ಇದು ಖುಷಿ ಕೊಡುತ್ತೆ" ಎಂದು ನಿರ್ದೇಶಕ ಲಕ್ಷ್ಮಣ್ ಉಟೇಕರ್ ಅಭಿಪ್ರಾಯ ಪಟ್ಟಿದ್ದಾರೆ. 2025ರ ಫಸ್ಟ್ ಹಾಫ್ ಟಾಪ್ 10 ಸಿನಿಮಾಗಳ ಪಟ್ಟಿ ಹೀಗಿದೆ.
2025 ರ ಜನಪ್ರಿಯ ಸಿನಿಮಾಗಳು (ಜೂನ್‌ವರೆಗೆ)
1. ಛಾವಾ
2. ಡ್ರ್ಯಾಗನ್
3. ದೇವಾ
4. ರೇಡ್ 2
5. ರೆಟ್ರೋ
6. ದಿ ಡಿಪ್ಲೊಮ್ಯಾಟ್
7.L2: ಎಂಪುರಾನ್
8. ಸಿತಾರೆ ಜಮೀನ್ ಪರ್
9. ಕೇಸರಿ ಚಾಪ್ಟರ್ 2:
10. ವಿದಾಮುಯಾರ್ಚಿ
2025ರ ಜನವರಿಯಿಂದ ಜೂನ್‌ವರೆಗೆ ಬಿಡುಗಡೆಯಾದ ಟಾಪ್ 10 ಜನಪ್ರಿಯ ಸಿನಿಮಾಗಳ ಲಿಸ್ಟ್. ಈ ಟಾಪ್ 10 ಪಟ್ಟಿಯನ್ನು ಐಎಂಡಿಬಿ ವಿಶ್ವದ ಎಲ್ಲೆಡೆಯಿಂದ 250 ಮಿಲಿಯನ್‌ಗೂ ಹೆಚ್ಚು ವೀಕ್ಷಕರು ನಡೆಸಿದ ಸರ್ಚ್ ಅನ್ನು ಆಧಾರವಾಗಿಟ್ಟುಕೊಂಡು ಲಿಸ್ಟ್ ಅನ್ನು ಸಿದ್ಧಪಡಿಸಲಾಗಿದೆ. ಹಾಗೇ ಈ ವರ್ಷ ಜುಲೈನಿಂದ ಡಿಸೆಂಬರ್‌ವರೆಗೆ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿಯನ್ನು ರಿಲೀಸ್ ಮಾಡಿದೆ.

2025 ಜುಲೈ- ಡಿಸೆಂಬರ್; ಬಹು ನಿರೀಕ್ಷಿತ ಸಿನಿಮಾಗಳು
1. ಕೂಲಿ
2. ವಾರ್ 2
3. ದಿ ರಾಜಾ ಸಾಬ್
4. ಆಂಖೋ ಕಿ ಗುಸ್ತಾಖಿಯಾಂ
5. ಸೈಯಾರಾ
6. ಬಾಘಿ 4
7. ಸನ್ ಆಫ್ ಸರ್ದಾರ್ 2
8. ಹೃದಯಪೂರ್ವಮ್
9. ಮಹಾವತಾರ ನರಸಿಂಹ
10. ಆಲ್ಫಾ
ಈ ಟಾಪ್ 10 ಸಿನಿಮಾಗಳ ಆಯ್ಕೆ ಕೂಡ ಮೊದಲಿನ ಪ್ರಕ್ರಿಯೆಯಂತೆ ನಡೆದಿದೆ. ವಿಶೇಷ ಅಂದರೆ, ಈ ಟಾಪ್ 10 ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ರಜನಿಕಾಂತ್ ಹಾಗೂ ಲೋಕೇಶ್ ಕನಗರಾಜ್ ಕಾಂಬಿನೇಷನ್ ಸಿನಿಮಾ 'ಕೂಲಿ' ಇದೆ. ಎರಡನೇ ಸ್ಥಾನದಲ್ಲಿ ಹೃತಿಕ್ ಹಾಗೂ ಜೂನಿಯರ್ ಎನ್‌ಟಿಆರ್ ಸಿನಿಮಾ 'ವಾರ್ 2' ಇದೆ. ಆದರೆ, ಈ ಟಾಪ್ 10 ಪಟ್ಟಿಯಲ್ಲಿ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 'ಕಾಂತಾರ: ಚಾಪ್ಟರ್ 1' ಇಲ್ಲ. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ಈ ಸಿನಿಮಾ ಈ ಲಿಸ್ಟ್‌ನಲ್ಲಿ ಇಲ್ಲದೆ ಇರೋದು ಅಚ್ಚರಿ ಮೂಡಿಸಿದೆ.


Click it and Unblock the Notifications











