ಐಎಂಡಿಬಿಯಿಂದ 2025ರ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿ ರಿಲೀಸ್; 'ಸಿಕಂದರ್' ನಂ 1.. 'ಟಾಕ್ಸಿಕ್‌'ಗೆ ಎಷ್ಟನೇ ಸ್ಥಾನ?

ವಿಶ್ವದಾದ್ಯಂತ ಸಿನಿಮಾ, ಟಿವಿ ಶೋ ಹಾಗೂ ಸೆಲೆಬ್ರಿಟಿಗಳ ಅಧಿಕೃತ ಮಾಹಿತಿಯನ್ನು ನೀಡುವ ವೆಬ್‌ ಸೈಟ್ ಐಎಂಡಿಬಿ (www.imdb.com). ಪ್ರತಿಕ್ಷಣ ವಿಶ್ವದಾದ್ಯಂತ ಕೋಟ್ಯಾಂತರ ಮಂದಿ ಈ ವೆಬ್‌ ಸ್ಟೈಟ್‌ಗೆ ವೀಕ್ಷಕರು ವಿಸಿಟ್ ಹಾಕುತ್ತಲೇ ಇರುತ್ತಾರೆ. ಪ್ರತಿವರ್ಷದಂತೆ ಐಎಂಡಿಬಿ ಹೊಸ ವರ್ಷದ ಆರಂಭದಲ್ಲಿ ಆ ವರ್ಷದ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿಯನ್ನು ರಿಲೀಸ್ ಮಾಡುತ್ತೆ.

ವೀಕ್ಷಕರು ತನ್ನ ವೆಬ್‌ ಸೈಟ್‌ನಲ್ಲಿ ಯಾವ ಸಿನಿಮಾವನ್ನು ಹೆಚ್ಚು ವೀಕ್ಷಣೆ ಮಾಡಿದ್ದಾರೆ ಅನ್ನುವ ಅಂಕಿ ಅಂಶಗಳನ್ನು ಇಟ್ಟುಕೊಂಡು 2025ರ ಬಹು ನಿರೀಕ್ಷಿತ 20 ಸಿನಿಮಾಗಳ ಲಿಸ್ಟ್ ಅನ್ನು ರಿಲೀಸ್ ಮಾಡಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯ ಸಿನಿಮಾಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆ ಲಿಸ್ಟ್ ಇಲ್ಲಿದೆ.

Imdb released most anticipated Indian movies of 2025 Sikindar no 1 What about Yash Toxic

ಅಂದ್ಹಾಗೆ ಐಎಂಡಿಬಿ ರಿಲೀಸ್ ಮಾಡಿರುವ 2025ರ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಪಟ್ಟಿಯಲ್ಲಿ ಸಲ್ಮಾನ್ ಖಾನ್ ನಟಿಸಿದ 'ಸಿಕಂದರ್' ಸಿನಿಮಾ ಬಗ್ಗೆ ಹೆಚ್ಚು ಹುಡುಕಾಟ ನಡೆಸಿದ್ದಾರೆ. ಈ ಸಿನಿಮಾವನ್ನು ದಕ್ಷಿಣ ಭಾರತದ ಜನಪ್ರಿಯ ನಿರ್ದೇಶಕ ಎ.ಆರ್.ಮುರುಗದಾಸ್ ನಿರ್ದೇಶನ ಮಾಡಿದ್ದಾರೆ. 2025ರಲ್ಲಿ ಬಿಡುಗಡೆ ಆಗಲಿರುವ ಭಾರತೀಯ ಸಿನಿಮಾಗಳಲ್ಲಿ 20 ಚಿತ್ರಗಳ ಬಗ್ಗೆ ವೀಕ್ಷಕರು ಹೆಚ್ಚು ಹುಡುಕಿದ್ದಾರೆ. ಇದನ್ನು ಐಎಂಡಿಬಿಗೆ ಒಂದು ತಿಂಗಳಲ್ಲಿ ವಿಶ್ವಾದ್ಯಂತ 250 ಮಿಲಿಯನ್‌ಗಿಂತಲೂ ಅಧಿಕ ವೀಕ್ಷಕರ ಸಂಖ್ಯೆಯನ್ನು ಆಧರಿಸಿ ನಿರ್ಧರಿಸಲಾಗಿದೆ.

ಐಎಂಡಿಬಿ ಲಿಸ್ಟ್‌ನಲ್ಲಿರುವ 20 ಟೈಟಲ್‌ಗಳ ಪೈಕಿ 12 ಹಿಂದಿ ಸಿನಿಮಾಗಳು, ಮೂರು ತಮಿಳು ಹಾಗೂ ಕನ್ನಡ, ಮಲಯಾಳಂ ಮತ್ತು ತೆಲುಗಿನ ತಲಾ ಒಂದು ಚಿತ್ರಗಳು ಇವೆ. ವಿಶೇಷ ಅಂದರೆ, ಈ ಲಿಸ್ಟ್‌ನಲ್ಲಿ ಅಕ್ಷಯ್‌ ಕುಮಾರ್ ನಟನೆಯ 3 ಸಿನಿಮಾಗಳು ಈ ಪಟ್ಟಿಯಲ್ಲಿವೆ. ಹಾಗೇ ರಶ್ಮಿಕಾ ಮಂದಣ್ಣ ನಟಿಸುತ್ತಿರುವ ಮೂರು ಸಿನಿಮಾಗಳು ಈ ಪಟ್ಟಿಯಲ್ಲಿವೆ. ಇದರೊಂದಿಗೆ ಯಶ್, ಮೋಹನ್‌ ಲಾಲ್‌, ಪ್ರಭಾಸ್, ಹೃತಿಕ್ ರೋಶನ್, ಪೂಜಾ ಹೆಗಡೆ ಮತ್ತು ಕೈರಾ ಅಡ್ವಾಣಿ ಸಿನಿಮಾಗಳು ಲಿಸ್ಟ್‌ನಲ್ಲಿ ಇವೆ. ಆ 20 ಸಿನಿಮಾಗಳನ್ನು ನೋಡುವುದಾದರೇ.

Imdb released most anticipated Indian movies of 2025 Sikindar no 1 What about Yash Toxic

IMDbಯ 2025ರ ಭಾರತದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿ ಇಲ್ಲಿದೆ

1. ಸಿಕಂದರ್
2. ಟಾಕ್ಸಿಕ್‌
3. ಕೂಲಿ
4. ಕ್ರಿಶ್‌ 4
5. ಹೌಸ್‌ಫುಲ್‌ 5
6. ಬಾಘಿ 4
7. ದಿ ರಾಜಾ ಸಾಬ್
8. ವಾರ್‍‌ 2
9. ಎಲ್‌ 2: ಎಂಪುರಾನ್‌
10. ದೇವ
11. ಛಾವಾ
12. ಕಣ್ಣಪ್ಪ
13. ರೆಟ್ರೊ
14. ಥಗ್‌ ಲೈಫ್‌
15. ಜಾಟ್‌
16. ಸ್ಕೈಫೋರ್ಸ್
17. ಸಿತಾರೆ ಝಮೀನ್‌ ಪರ್
18. ಥಾಮಾ
19. ಕಾಂತಾರ ಎ ಲೆಜೆಂಡ್‌: ಚಾಪ್ಟರ್ 1
20. ಆಲ್ಫಾ

ಐಎಂಡಿಬಿಯ ಈ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ನಂ. 1 ಸ್ಥಾನದಲ್ಲಿರುವ 'ಸಿಕಂದರ್' ಸಿನಿಮಾದ ನಿರ್ದೇಶಕ ಎ. ಆರ್. ಮುರುಗದಾಸ್‌ ಹರ್ಷ ವ್ಯಕ್ತಪಡಿಸಿದ್ದಾರೆ. ಐಎಂಡಿಬಿಗೆ ನೀಡಿದ ಪ್ರತಿಕ್ರಿಯೆಯಲ್ಲಿ ನೀಡಿದ ಅವರ ಪ್ರತಿಕ್ರಿಯೆ ಹೀಗಿದೆ. "2025ರ ಐಎಂಡಿಬಿಯ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಸಿಕಂದರ್ ಮೊದಲ ಸ್ಥಾನ ಪಡೆದಿದ್ದನ್ನು ಕೇಳಿ ಖುಷಿಯಾಗಿದೆ. ಸಲ್ಮಾನ್‌ಖಾನ್‌ ಜೊತೆಯಲ್ಲಿ ಕೆಲಸ ಮಾಡಿದ್ದು ಅದ್ಭುತ ಅನುಭವ ಕೊಟ್ಟಿದೆ. " ಎಂದು ಸಿಕಂದರ್ ನಿರ್ದೇಶಕ ಎ.ಆರ್.ಮುರುಗದಾಸ್ ಹೇಳಿದ್ದಾರೆ.

ಈ ಪಟ್ಟಿಯಲ್ಲಿ ಇನ್ನೊಂದು ವಿಶೇಷತೆಯಿದೆ. ಐಎಂಡಿಬಿಯ 20 ಸಿನಿಮಾಗಳಲ್ಲಿ 6 ಸಿನಿಮಾಗಳು ಸೀಕ್ವೆಲ್ ಸೇರಿವೆ. ಆ ಸಿನಿಮಾಗಳೆಂದರೆ, ಕ್ರಿಶ್ವ 4 ಇದು ನಾಲ್ಕನೇ ಸ್ಥಾನದಲ್ಲಿದೆ. ಹೌಸ್‌ಫುಲ್‌ ಐದನೇ ಸ್ಥಾನದಲ್ಲಿದೆ. ಬಾಘಿ 4 ಆರನೇ ಸ್ಥಾನದಲ್ಲಿದೆ. ವಾರ್‍‌ 2 ಸಿನಿಮಾ 8ನೇ ಸ್ಥಾನದಲ್ಲಿದೆ. ಸಿತಾರೆ ಝಮೀನ್‌ ಪರ್‍‌ ಸಿನಿಮಾ 17ನೇ ಸ್ಥಾನದಲ್ಲಿದೆ. ಹಾಗೇ ಕನ್ನಡದ ಸಿನಿಮಾ ಕಾಂತಾರಾ ಎ ಲೆಜೆಂಡ್‌ : ಚಾಪ್ಟರ್‍‌ 1 19ನೇ ಸ್ಥಾನದಲ್ಲಿದೆ.

More from Filmibeat

English summary
Imdb released most anticipated Indian movies of 2025. Sikindar no 1 What about Yash Toxic?
Read more about: imdb movies toxic
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X