Don't Miss!
- Automobiles
ಬೆಂಗಳೂರು - ಮೈಸೂರು JUST 90 ನಿಮಿಷ: ಹೇಗಿರಲಿದೆ ಎಕ್ಸ್ಪ್ರೆಸ್ ವೇ!
- News
GATE Exam 2023: ದೇಶದ 29 ನಗರಗಳಲ್ಲಿ ಪರೀಕ್ಷೆ, ವೇಳಾಪಟ್ಟಿ ಮಾಹಿತಿ ತಿಳಿಯಿರಿ
- Technology
ಫಾಸ್ಟ್ಯಾಗ್ ರೀಚಾರ್ಜ್ ಮಾಡುವ ನೆಪದಲ್ಲಿ ಒಂದು ಲಕ್ಷ ಎಗರಿಸಿದ ವಂಚಕರು!
- Lifestyle
Chanakya Neeti: ಚಾಣಕ್ಯ ಪ್ರಕಾರ ಪುರುಷನ ಬದುಕಿನಲ್ಲಿ ಅದೃಷ್ಟ ತರುವ 3 ವ್ಯಕ್ತಿಗಳಿವರು
- Sports
ಸರಣಿ ಗೆದ್ದ ಬಳಿಕ ನಾಯಕನ ಮಾತು: ಯುವ ಆಟಗಾರರ ಪ್ರದರ್ಶನಕ್ಕೆ ಹಾರ್ದಿಕ್ ವಿಶೇಷ ಮೆಚ್ಚುಗೆ
- Finance
Tax Regime: ಹಳೆ ತೆರಿಗೆ ಪದ್ಧತಿ Vs ಹೊಸ ತೆರಿಗೆ ಪದ್ಧತಿ, 2023ರಲ್ಲಿ ಯಾವುದು ಬೆಸ್ಟ್?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Imdbಯಿಂದ 2023ಯ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿ ರಿಲೀಸ್: ಲಿಸ್ಟ್‌ನಲ್ಲಿರೋ ಕನ್ನಡದ ಏಕೈಕ ಚಿತ್ರ 'ಕಬ್ಜ'!
2022ರಲ್ಲಿ ಕನ್ನಡ ಸಿನಿಮಾಗಳು ದೇಶಾದ್ಯಂತ ಸದ್ದು ಮಾಡಿದ್ದವು. 'ಕೆಜಿಎಫ್ 2', 'ಕಾಂತಾರ', '777 ಚಾರ್ಲಿ', 'ವಿಕ್ರಾಂತ್ ರೋಣ' ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ್ದವು. ಆದರೆ, 2023ರಲ್ಲೂ ಕನ್ನಡ ಸಿನಿಮಾಗಳು ಹೀಗೆ ಟಕ್ಕರ್ ಕೊಡುತ್ತವೆಯೇ? ಅನ್ನೋ ಪ್ರಶ್ನೆಗೆ ಉತ್ತರ ಇನ್ನೂ ಸಿಕ್ಕಿಲ್ಲ.
ಸಿನಿಮಾ, ಟಿವಿ ಶೋ ಹಾಗೂ ಸಿನಿಮಾ ತಾರೆಯರ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡುವ ಜಾಲತಾಣ Imdb. ಈ ಸಂಸ್ಥೆ 2023ರ ಬಹು ನಿರೀಕ್ಷಿತ ಭಾರತೀಯ ಸಿನಿಮಾಗಳ ಪಟ್ಟಿ ಬಿಡುಗಡೆ ಮಾಡಿದೆ.
ಕೆಜಿಎಫ್
2,
ಗಂಧದ
ಗುಡಿ,
ವಿಕ್ರಾಂತ್
ರೋಣ
ಟ್ರೈಲರ್
ದಾಖಲೆ
ಮುರಿದು
ನಂ.1
ಆಗುತ್ತಾ
ಕ್ರಾಂತಿ
ಟ್ರೈಲರ್?
2022ಲ್ಲಿ ಜನರು Imdb ಜಾಲತಾಣಕ್ಕೆ ಭೇಟಿ ನೀಡಿದ ವೀಕ್ಷಣೆಯನ್ನು ಆಧಾರವಾಗಿಟ್ಟುಕೊಂಡು ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಈ ಪಟ್ಟಿಯಲ್ಲಿ ಕನ್ನಡದ ಒಂದೇ ಒಂದು ಸಿನಿಮಾವಿದೆ. ಅದುವೇ 'ಕಬ್ಜ'.

Imdbಯ ಟಾಪ್ 20 ಸಿನಿಮಾಗಳ ಪಟ್ಟಿ
ಪ್ರತಿಷ್ಠಿತ Imdb ಸಂಸ್ಥೆ 2023ರಲ್ಲಿ ಸದ್ದು ಮಾಡುತ್ತಿರುವ ಸಿನಿಮಾ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಸುಮಾರು 20 ಸಿನಿಮಾಗಳಲ್ಲಿ ಕನ್ನಡದ ಏಕೈಕ ಸಿನಿಮಾ ಕಬ್ಜ ಸ್ಥಾನ ಪಡೆದುಕೊಂಡಿದೆ. ಇನ್ನು ಉಳಿದಂತೆ ಬಹುಪಾಲು ಬಾಲಿವುಡ್ ಸಿನಿಮಾಗಳೇ ಇವೆ. ಇದರಲ್ಲಿ ಮೊದಲ ಸ್ಥಾನದಲ್ಲಿರೋದು ಶಾರುಖ್ ಖಾನ್ ಅಭಿನಯದ 'ಪಠಾಣ್'. ಉಪೇಂದ್ರ ಹಾಗೂ ಸುದೀಪ್ ಅಭಿನಯದ 'ಕಬ್ಜ' 7ನೇ ಸ್ಥಾನದಲ್ಲಿದೆ. ಅಂದ್ಹಾಗೆ ಆ ಟಾಪ್ 10 ಸಿನಿಮಾಗಳ ಪಟ್ಟಿ ಇಲ್ಲಿದೆ.
1.
ಪಠಾಣ್
2.
ಪುಷ್ಪ:
ದಿ
ರೂಲ್
-
ಭಾಗ
2
3.
ಜವಾನ್
4.
ಆದಿಪುರುಷ್
5.
ಸಲಾರ್
6.
ವಾರಿಸು
7.
ಕಬ್ಜ
8.
ದಳಪತಿ
67
9.
ದಿ
ಆರ್ಚಿಸ್
10.
ಡಂಕಿ

11–20ರ ಸ್ಥಾನದಲ್ಲಿರೋ ಸಿನಿಮಾಗಳ ಪಟ್ಟಿ
ಇನ್ನು ಟಾಪ್ 11 ರಿಂದ 20ರವರೆಗೆ ಹಿಂದಿ, ತಮಿಳು, ತೆಲುಗು ಸಿನಿಮಾಗಳಿವೆ. ಆ 10 ಸಿನಿಮಾಗಳ ಪಟ್ಟಿ ಇಲ್ಲಿದೆ.
11.
ಟೈಗರ್
3
12.
ಕಿಸಿ
ಕ
ಭಾಯ್
ಕಿಸಿ
ಕಿ
ಜಾನ್
13.
ತುನಿವು
14.
ಅನಿಮಲ್
15.
ಏಜೆಂಟ್
16.
ಇಂಡಿಯನ್
2
17.
ವಾಡಿವಾಸಲ್
18.
ಶೆಹಜಾದ
19.
ಬಡೇ
ಮಿಯಾ
ಛೋಟೆ
ಮಿಯಾ
20.
ಭೋಲಾ

ಟ್ರ್ಯಾಕ್‌ಗೆ ಮರಳಿದ ಖಾನ್ಸ್
ಮೋಸ್ಟ್ ಎಕ್ಸ್‌ಪೆಕ್ಟೆಡ್ ಇಂಡಿಯನ್ ಸಿನಿಮಾಗಳ ಪಟ್ಟಿಯಲ್ಲಿ ಸುಮಾರು 11 ಹಿಂದಿ ಸಿನಿಮಾಗಳಿವೆ. ಹಾಗೇ 5 ತಮಿಳು, 3 ತೆಲುಗು ಹಾಗೂ 1 ಕನ್ನಡ ಸಿನಿಮಾವಿದೆ. ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಸೂಪರ್ ಸ್ಟಾರ್ ಶಾರುಖ್ ಖಾನ್ ನಟನೆಯ 'ಪಠಾಣ್', 'ಜವಾನ್' ಮತ್ತು 'ಡಂಕಿ' ಸಿನಿಮಾಗಳು ಸದ್ದು ಮಾಡುತ್ತಿವೆ. ಹಾಗೇ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ನಟನೆಯ ಮೊದಲ ಸಿನಿಮಾ ಜೋಯಾ ಅಖ್ತರ್ ನಿರ್ದೇಶನದ 'ದಿ ಆರ್ಚಿಸ್' ಕೂಡ ಪಟ್ಟಿಯಲ್ಲಿದೆ. ಇದರೊಂದಿಗೆ ಸಲ್ಮಾನ್ ಖಾನ್ ನಟನೆಯ 2 ಸಿನಿಮಾಗಳು 'ಕಿಸಿ ಕ ಭಾಯ್ ಕಿಸಿ ಕಿ ಜಾನ್' ಮತ್ತು 'ಟೈಗರ್ 3' ಸಿನಿಮಾಗಳು ರಿಲೀಸ್‌ಗೆ ರೆಡಿಯಾಗಿವೆ.

'ಇಂಡಿಯನ್ 2' ಮೇಲೆ ಎಲ್ಲರ ಕಣ್ಣು
1996ರಲ್ಲಿ ರಿಲೀಸ್ ಆಗಿ ದಾಖಲೆ ಬರೆದ ಸಿನಿಮಾ 'ಇಂಡಿಯನ್'. ಕಮಲ್ ಹಾಸನ್ ಹಾಗೂ ಶಂಕರ್ ಕಾಂಬಿನೇಷನ್‌ನಲ್ಲಿ ಈ ಸಿನಿಮಾ ಮೂಡಿ ಬಂದಿತ್ತು. ಈಗ ಇದೇ ಸಿನಿಮಾದ ಸೀಕ್ವೆಲ್ 'ಇಂಡಿಯನ್-2' ಅದೇ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿದೆ. ಈ ಸಿನಿಮಾ ಈ ವರ್ಷವೇ ರಿಲೀಸ್ ಆಗುವ ಸಾಧ್ಯತೆಯಿದ್ದು, ದಕ್ಷಿಣ ಭಾರತದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳಲ್ಲೊಂದಾಗಿದೆ.