2023ರ 10 ಬಹುನಿರೀಕ್ಷಿತ ಸಿನಿಮಾ ಲಿಸ್ಟ್ ರಿಲೀಸ್ ಮಾಡಿದ IMDb: 'ಮಾರ್ಟಿನ್','UI' ಕಥೆಯೇನು?

IMDb ಸಿನಿಮಾಗಳು, ವೆಬ್‌ ಸಿರೀಸ್ ಕುರಿತಾದ ಮಾಹಿತಿಯನ್ನು ನೀಡುವ ವೆಬ್‌ಸೈಟ್. ಇದರೊಂದಿಗೆ ಸಿನಿಮಾ ಸ್ಟಾರ್‌ಗಳ ಬಗ್ಗೆ ಮಾಹಿತಿಯನ್ನೂ ನೀಡುತ್ತಿದೆ. ಮನರಂಜನೆಗೆ ಸಂಬಂಧಿಸಿದ ಮಾಹಿತಿಯನ್ನು ನೀಡುವ IMDb 2023ರ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯನ್ನು ರಿಲೀಸ್ ಮಾಡಿದೆ.

ಹಲವು ಮಾನದಂಡಗಳನ್ನು ಇಟ್ಟುಕೊಂಡು ಭಾರತೀಯ ಯಾವ ಸಿನಿಮಾವನ್ನು ನೋಡಲು ಇಷ್ಟಪಡುತ್ತಿದ್ದಾರೆ. ಯಾವ ಭಾಷೆಯ ಸಿನಿಮಾಗಾಗಿ ಕಾದು ಕೂತಿದ್ದಾರೆ? ಅನ್ನೋದನ್ನು ಆಧರಿಸಿ ಪಟ್ಟಿಯೊಂದನ್ನು ಬಿಡುಗಡೆ ಮಾಡಿದೆ.

IMDb The Most Anticipated Indian Movies of 2023 List Released: Martin UI is missing

IMDb ಬಿಡುಗಡೆ ಮಾಡಿರುವ ಟಾಪ್ 10 ಪಟ್ಟಿಯಲ್ಲಿ ಯಾವ್ಯಾವ ಸಿನಿಮಾಗಳಿವೆ? ಎಷ್ಟು ಭಾಷೆಯ ಸಿನಿಮಾಗಳು ಎಷ್ಟೆಷ್ಟಿವೆ? ಯಾವ ಸ್ಟಾರ್ ಸಿನಿಮಾಗಳು ಈ ಪಟ್ಟಿಯಲ್ಲಿವೆ? ಕನ್ನಡ ಸಿನಿಮಾ ಇದೆಯೋ? ಇಲ್ವೋ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

ಟಾಪ್ 10 ನಿಂದ 6ರವರೆಗೆ ಸಿನಿಮಾ ಲಿಸ್ಟ್

IMDb 2023ರ ಟಾಪ್ 10 ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಟಾಪ್ 10 ನಿಂದ 6ನೇ ಸ್ಥಾನದವರೆಗೆ ಇರುವ ಸಿನಿಮಾಗಳ ಲಿಸ್ಟ್ ಇಲ್ಲಿದೆ. 10ನೇ ಸ್ಥಾನದಲ್ಲಿ ನಾಗ ಚೈತನ್ಯ ನಟನೆಯ 'ಕಸ್ಟಡಿ' ಸಿನಿಮಾವಿದೆ. ಹಾಗೇ 9ನೇ ಸ್ಥಾನದಲ್ಲಿ 'ಹನುಮಾನ್', 8ನೇ ಸ್ಥಾನದಲ್ಲಿ ಆಲಿಯಾ ಭಟ್ ಹಾಗೂ ರಣ್‌ವೀರ್ ಸಿಂಗ್ ಅಭಿನಯದ 'ರಾಕಿ ಔರ್ ರಾಣಿ ಕಿ ಕಹಾನಿ' ಇದೆ.

ಹಾಗೇ ಸಿದ್ಧಾರ್ಥ್ ಮಲ್ಹೋತ್ರ ಅಭಿನಯದ 'ಯೋಧ' IMDb ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಇನ್ನು 6ನೇ ಸ್ಥಾನದಲ್ಲಿ ಅಜಯ್ ದೇವಗನ್ ಅಭಿನಯದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಮೈದಾನ್' ಇದೆ. ಈ ಐದೂ ಸಿನಿಮಾಗಳನ್ನು ನೋಡಲು ಪ್ರೇಕ್ಷಕರು ಆಸಕ್ತಿ ತೋರಿಸಿದ್ದಾರೆ.

ಟಾಪ್ 5ರಿಂದ 1ನೇ ಸ್ಥಾನದವರೆಗಿರುವ ಲಿಸ್ಟ್

IMDb ಪಟ್ಟಿಯ ಐದನೇ ಸ್ಥಾನದಲ್ಲಿರೋದು 'ಛತ್ರಪತಿ'. ಪ್ರಭಾಸ್ ನಟಿಸಿದ 'ಛತ್ರಪತಿ' ಸಿನಿಮಾ ಹಿಂದಿ ರಿಮೇಕ್ ಇದು. ವಿವಿ ವಿನಾಯಕ್ ನಿರ್ದೇಶಿಸಿರೋ ಈ ಸಿನಿಮಾ ಮೇ 12ರಂದು ರಿಲೀಸ್ ಆಗುತ್ತಿದೆ. 4ನೇ ಸ್ಥಾನದಲ್ಲಿ ಸನ್ನಿ ಡಿಯೋಲ್ ಹಾಗೂ ಅಮಿಶಾ ಪಟೇಲ್ ನಟನೆ 'ಗದರ್ 2', 3ನೇ ಸ್ಥಾನದಲ್ಲಿ ಪ್ರಭಾಸ್ ನಟನೆಯ 'ಆದಿಪುರುಷ್', 2 ನೇ ಸ್ಥಾನದಲ್ಲಿ ರಣ್ಬೀರ್ ಕಪೂರ್ ರಶ್ಮಿಕಾ ಅಭಿನಯದ 'ಎನಿಮಲ್' ಇದೆ. ಹಾಗೇ ಮೊದಲನೇ ಸ್ಥಾನದಲ್ಲಿ ಶಾರುಖ್ ಖಾನ್ ಸಿನಿಮಾ 'ಜವಾನ್' ಇದೆ.

ಒಂದೇ ಒಂದು ಕನ್ನಡ ಸಿನಿಮಾವಿಲ್ಲ

2023ಯಲ್ಲಿ ಸ್ಯಾಂಡಲ್‌ವುಡ್‌ನ ಎರಡು ಪ್ಯಾನ್ ಇಂಡಿಯಾ ಸಿನಿಮಾಗಳು ಹಲ್‌ಚಲ್ ಎಬ್ಬಿಸುತ್ತಿವೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಹಾಗೂ ರಿಯಲ್ ಸ್ಟಾರ್ ಉಪೇಂದ್ರ ನಟಿಸಿ, ನಿರ್ದೇಶಿಸಿರೋ 'ಯುಐ' ಕೂಡ ಇದೇ ವರ್ಷ ಬಿಡುಗಡೆಯಾಗುತ್ತಿದೆ. ಆದರೂ, ಈ ಎರಡೂ ಸಿನಿಮಾಗಳು IMDb ಪಟ್ಟಿಯಲ್ಲಿ ಇಲ್ಲ.

ಹಾಗೇ ರಕ್ಷಿತ್ ಶೆಟ್ಟಿ ನಟಿಸಿರೋ 'ಸಪ್ತ ಸಾಗರದಾಚೆ ಎಲ್ಲೋ' ಕೂಡ ಕನ್ನಡದ ಬಹು ನಿರೀಕ್ಷೆಯ ಸಿನಿಮಾ. ಹಾಗೇ ಶಿವರಾಜ್‌ಕುಮಾರ್, ಅನುಪಮ್ ಖೇರ್ ನಟಿಸುತ್ತಿರುವ 'ಗೋಸ್ಟ್' ಸಿನಿಮಾ ಕೂಡ ಸದ್ದು ಮಾಡುತ್ತಿದೆ. ಆದರೆ, ಈ ಸಿನಿಮಾ ಕೂಡ ಪಟ್ಟಿಯಲ್ಲಿ ಇಲ್ಲ. ಒಟ್ನಲ್ಲಿ ಈ ಬಾರಿಯ 2023 ಬಹುನಿರೀಕ್ಷಿತ ಪಟ್ಟಿಯಲ್ಲಿ ಕನ್ನಡದ ಒಂದೇ ಒಂದು ಸಿನಿಮಾವಿಲ್ಲ.

More from Filmibeat

English summary
IMDb The Most Anticipated Indian Movies of 2023 List Released: Martin UI is missing, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X