ಎವರ್‌ಗ್ರೀನ್ ಬ್ಯೂಟಿ ರೇಖಾ ಜೊತೆ ಶಂಕರ್‌ನಾಗ್ ನಟಿಸಿದ ಏಕೈಕ ಸಿನಿಮಾ ಯಾವುದು ಗೊತ್ತೇ? ಅದರಲ್ಲೇನು ಪಾತ್ರ?

ಕನ್ನಡ ಚಿತ್ರರಂಗ ಬಹುಬೇಗನೇ ಕಳೆದುಕೊಂಡ ಅಪ್ರತಿಮ ಪ್ರತಿಭೆ ಶಂಕರ್‌ ನಾಗ್. ಇಂದಿನ ಪೀಳಿಗೆಗೆ ಶಂಕರ್ ನಾಗ್ ವ್ಯಕ್ತಿತ್ವ ಅಚ್ಚರಿ ಮೂಡಿಸುತ್ತೆ. ಇವರನ್ನು ಹತ್ತಿರದಿಂದ ನೋಡಿದವರು, ಒಡನಾಟ ಇಟ್ಟುಕೊಂಡವರು ಇದೂವರೆಗೂ ಬಿಚ್ಚಿಟ್ಟಿರುವ ಒಂದೊಂದು ಕಥೆಯೂ ಅದ್ಭುತ ಅಂತ ಅನಿಸುತ್ತೆ. ಹೀಗೂ ಇರುವುದಕ್ಕೆ ಸಾಧ್ಯನಾ? ಅನ್ನೋ ಪ್ರಶ್ನೆ ಮೂಡುತ್ತೆ.

ಕನ್ನಡ ಸಿನಿಮಾ ಪ್ರಿಯರಿಗೆ ಶಂಕರ್ ನಾಗ್ ಒಬ್ಬ ಕ್ರಿಯೇಟಿವ್ ಡೈರೆಕ್ಟರ್. ಶಂಕರ್ ನಾಗ್ ಒಬ್ಬ ಅದ್ಭುತ ನಟ. ಅಭಿಮಾನಿಗಳ ಪಾಲಿಗೆ ಶಂಕರ್ ನಾಗ್ 'ಕರಾಟೆ ಕಿಂಗ್'. ಆಟೋ ಚಾಲಕರಿಗೆ ಶಂಕ್ರಣ್ಣ 'ಆಟೋರಾಜ'. ಕನ್ನಡ ಚಿತ್ರರಂಗದಲ್ಲಿ ಇದ್ದಷ್ಟು ದಿನ 'ಮಿಂಚಿನ ಓಟ' ಮಾಡಿದ್ದ ಶಂಕರ್ ನಾಗ್ ಅನ್ನೋ ಪ್ರತಿಭೆ ಬಾಲಿವುಡ್ ಸಿನಿಮಾದಲ್ಲೂ ನಟಿಸಿದ್ದರು. ಆ ಸಿನಿಮಾ ಎವರ್‌ಗ್ರೀನ್ ಬ್ಯೂಟಿ ರೇಖಾ ಕೂಡ ನಟಿಸಿದ್ದರು. ಆ ಸಿನಿಮಾ ಯಾವುದು ಗೊತ್ತೇ?

In which movie late Kannada legend Shankar Nag acted with Rekha directed by Girish Karnad

ಶಂಕರ್‌ ನಾಗ್ ಹಾಗೂ ರೇಖಾ ಒಂದೇ ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾ ರಿಲೀಸ್ ಆಗಿ ಸುಮಾರು 40 ವರ್ಷಗಳಾಗಿವೆ. ಇಂದಿಗೂ ಆ ಸಿನಿಮಾ ಚರ್ಚೆಯ ವಿಷಯವಾಗಿದೆ. ಅಷ್ಟಕ್ಕೂ ಆ ಎವರ್‌ಗ್ರೀನ್ ಸಿನಿಮಾವೇ 'ಉತ್ಸವ್'. ಕನ್ನಡದ ನಿರ್ದೇಶಕ ಗಿರೀಶ್ ಕಾರ್ನಾಡ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದರು. 1984ರಲ್ಲಿ ಈ ಸಿನಿಮಾ ತೆರೆಕಂಡಿತ್ತು. ಇದೇ ಸಿನಿಮಾ ರೇಖಾ ಜೊತೆ ಶಂಕರ್‌ ನಾಗ್ ನಟಿಸಿದ್ದರು.

ಚಿತ್ರರಂಗದ ಮತ್ತೊಬ್ಬ ದಿಗ್ಗಜ ಗಿರೀಶ್ ಕಾರ್ನಾಡ್ 'ಉತ್ಸವ್' ಸಿನಿಮಾದ ಹಿಂದಿನ ಸೂತ್ರಧಾರ. ಬಾಲಿವುಡ್‌ನ ಲೆಜೆಂಡ್ ಶಶಿ ಕಪೂರ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಶುಧ್ರಕನ 'ಮೃಚ್ಚಕಟಿಕ' ನಾಟಕವನ್ನು ಸಿನಿಮಾ ರೂಪ ಕೊಟ್ಟಿದ್ದರು. ಇದರಲ್ಲಿ ಭಾರತೀಯ ಚಿತ್ರರಂಗದ ದಿಗ್ಗಜರು ನಟಿಸಿದ್ದರು. ರೇಖಾ, ಶಂಕರ್‌ನಾಗ್, ನೀನಾ ಗುಪ್ತಾ, ಶೇಖರ್ ಸುಮನ್ ಸೇರಿದಂತೆ ಹಲವು ಮಂದಿ ನಟಿಸಿದ್ದರು.

'ಉತ್ಸವ್' ಸಿನಿಮಾದಲ್ಲಿ ನಟಿಸುವುದಕ್ಕೂ ಮುನ್ನ ಶಂಕರ್ ನಾಗ್ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. 1978ರಲ್ಲಿ ಗಿರೀಶ್ ಕಾರ್ನಾಡ್ ಅವರೇ ನಿರ್ದೇಶಿಸಿದ್ದ 'ಒಂದಾನೊಂದು ಕಾಲದಲ್ಲಿ' ಸಿನಿಮಾದ ಮೂಲಕ ಶಂಕರ್‌ನಾಗ್ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಇಲ್ಲಿಂದ ಸಾಕಷ್ಟು ಕಮರ್ಷಿಯಲ್ ಸಿನಿಮಾಗಳಲ್ಲಿ ಶಂಕರ್ ನಾಗ್ ನಟಿಸಿದ್ದಾಗಿತ್ತು. 1984ರಲ್ಲಿ ಮತ್ತೆ ಗಿರೀಶ್ ಕಾರ್ನಾಡ್ ನಿರ್ದೇಶಿಸಲು ಹೊರಟಿದ್ದ 'ಉತ್ಸವ್' ಸಿನಿಮಾದಲ್ಲಿ ಶಂಕರ್‌ ನಾಗ್‌ಗೆ ವಿಶೇಷ ಪಾತ್ರವನ್ನು ನೀಡಿದ್ದರು. ಈ ಸಿನಿಮಾದಲ್ಲಿ ಕರಾಟೆ ಕಿಂಗ್ ಕಳ್ಳನ ಪಾತ್ರದಲ್ಲಿ ನಟಿಸಿದ್ದರು.

In which movie late Kannada legend Shankar Nag acted with Rekha directed by Girish Karnad

ಇನ್ನೊಂದು ಕಡೆ ವಸಂತ್ ಸೇನಾ ಪಾತ್ರದಲ್ಲಿ ರೇಖಾ ಕಾಣಿಸಿಕೊಂಡಿದ್ದರು. ಶಂಕರ್ ನಾಗ್ ಹಾಗೂ ರೇಖಾ ಒಂದೇ ಸಿನಿಮಾದಲ್ಲಿ ನಟಿಸಿದ ಏಕೈಕ ಸಿನಿಮಾವಿದು. ಅಲ್ಲದೆ ಎವರ್‌ಗ್ರೀನ್ ಬ್ಯೂಟಿ ರೇಖಾ ಸಿನಿಮಾದಲ್ಲಿ ನಟಿಸಿದ ಕನ್ನಡ ಎರಡನೇ ಹೀರೊ. ಈ ಹಿಂದೆ ರೇಖಾ ಕನ್ನಡದ ವರನಟ ಡಾ.ರಾಜ್‌ಕುಮಾರ್ ಜೊತೆ 'ಆಪರೇಷನ್ ಜಾಕ್‌ಪಾಟ್‌ನಲ್ಲಿ ಸಿಐಡಿ 999'ನಲ್ಲಿ ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾ 1969ರಲ್ಲಿ ಈ ಸಿನಿಮಾ ರಿಲೀಸ್ ಆಗಿತ್ತು.

ವಿಶೇಷ ಅಂದರೆ, ಈ ಸಿನಿಮಾದಲ್ಲಿ ಬಾಲಿವುಡ್‌ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ನಟಿಸಬೇಕಿತ್ತು. 'ಉತ್ಸವ್' ಸಿನಿಮಾದಲ್ಲಿ ಸಂಸ್ತಾನಕ್ ಅನ್ನುವ ಪಾತ್ರದಲ್ಲಿ ನಟಿಸುವುದಕ್ಕೆ ಅಮಿತಾಬ್ ಬಚ್ಚನ್ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಆದರೆ, ಅದೇ ವೇಳೆ ಬಿಗ್‌ ಬಿ 'ಕೂಲಿ' ಸಿನಿಮಾ ಶೂಟಿಂಗ್ ವೇಳೆ ಗಂಭೀರವಾಗಿ ಗಾಯಗೊಂಡಿದ್ದರು. ಹೀಗಾಗಿ ಆ ಪಾತ್ರವನ್ನು ನಿರ್ಮಾಪಕ ಶಶಿ ಕಪೂರ್ ನಿಭಾಯಿಸಿದ್ದರು.

More from Filmibeat

English summary
Do you know which movie Shankar Nag acted with Rekha?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X