ಸೆಟ್ಟಿನಲ್ಲಿ ವರನಟನ ಕೈಗೆ ಸೆರಗು ಕೊಟ್ಟು ಗಾಬರಿ ಬೀಳಿಸಿದ್ದ ಜಯಂತಿ; ಅಣ್ಣಾವ್ರು ಬೆಚ್ಚಿಬಿದ್ದಿದ್ದೇಕೆ?
ಡಾ.ರಾಜ್‌ಕುಮಾರ್ ಜೊತೆ ನಟಿಸಿದ ನಾಯಕಿಯರು ಒಬ್ಬಿಬ್ಬರಲ್ಲ. ವರನಟನ ಜೊತೆ ನಟಿಸಿದ ಪ್ರತಿಯೊಬ್ಬ ನಾಯಕ ನಟಿಯ ಬಳಿ ನೂರೆಂಟು ಕಥೆಗಳಿವೆ. ಅಣ್ಣಾವ್ರೊಂದಿಗೆ ಸಿನಿಮಾಗಳಲ್ಲಿ ನಟಿಸಿದ ಮಧುರ ಕ್ಷಣಗಳನ್ನು ಈ ಹಿಂದೆ ನೆನಪಿಸಿಕೊಂಡಿದ್ದಾರೆ. ಅದರಲ್ಲೂ ಸೆಟ್ಟಿನಲ್ಲಿ ರಾಜ್‌ಕುಮಾರ್ ಹಾಗೂ ಜಯಂತಿ ಜೋಡಿ ಆತ್ಮೀಯರಾಗಿ ಇರುತ್ತಿದ್ದರು.
ರಾಜ್‌ಕುಮಾರ್ ಸಿನಿಮಾ ಸೆಟ್ಟಿನಲ್ಲಿ ಕೆಲಸದ ಕಡೆಗೆ ಹೆಚ್ಚು ಇಡುತ್ತಿದ್ದರು. ತಮ್ಮ ಭಾಗದ ದೃಶ್ಯಗಳನ್ನು, ಸಂಭಾಷಣೆಗಳನ್ನು ಪ್ರಾಕ್ಟೀಸ್ ಮಾಡುತ್ತಿದ್ದರು. ಹೀಗಾಗಿ ಅವರೊಂದಿಗೆ ನಟಿಸುವ ನಟಿಯರು ಕೂಡ ಅವರಷ್ಟೇ ಗಂಭೀರವಾಗಿ ಇರುತ್ತಿದ್ದರು. ಆದರೆ, ಜಯಂತಿ ಕಥೆ ಮಾತ್ರ ಕೊಂಚ ಡಿಫ್ರೆಂಟ್.

ರಾಜ್‌ಕುಮಾರ್ ಜೊತೆ ಹೆಚ್ಚಾಗಿ ಹುಡುಗಾಟಿಕೆಯಿಂದ ಇರುತ್ತಿದ್ದ ನಟಿ ಅಂದರೆ ಜಯಂತಿ. ಅಣ್ಣಾವ್ರನ್ನ ಎಂದು ಸೈಲೆಂಟ್ ಆಗಿ ಇರುವ ವ್ಯಕ್ತಿತ್ವ ಇರದ್ದು ಆಗಿರಲಿಲ್ಲ. ಹುಡುಕಾಟಿ ಸ್ವಭಾವ. ವರನಟನನ್ನು ಸಿಕ್ಕಾಪಟ್ಟೆ ಗೋಳು ಹೊಯ್ದುಕೊಳ್ಳುತ್ತಿದ್ದರು. ಇಂತಹದ್ದೇ ಸಂದರ್ಭದಲ್ಲಿ ಅಣ್ಣಾವ್ರ ಕೈಗೆ ತನ್ನ ಸೆರಗು ಕೊಟ್ಟು ಕೀಟಲೆ ಮಾಡಿದ್ದ ಒಂದು ಘಟನೆಯನ್ನು ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ಹಿರಿಯ ಪತ್ರಕರ್ತ ಹರಿಹರಪುರ ಮಂಜುನಾಥ್ ಸ್ವಾರಸ್ಯಕರವಾಗಿ ವಿವವರಿಸಿದ್ದಾರೆ.
ರಾಜ್‌ಕುಮಾರ್ ಮತ್ತು ಜಯಂತಿ ತೆರೆಮೇಲೆ ಕಂಡಂತೆ ಗಂಭೀರವಾಗಿ ಇರುತ್ತಿರಲಿಲ್ಲ. ಜಯಂತಿ ತೆರೆ ಹಿಂದೆ ಸಿಕ್ಕಾಪಟ್ಟೆ ಕೀಟಲೆ ಮಾಡಿತ್ತಿದ್ದರು. ಹಾಗೇ ಅಣ್ಣಾವ್ರನ್ನು ರಾಜ್ ಅಂತ ಕರೆಯುತ್ತಿದ್ದ ಏಕೈಕ ನಟಿ. ಸೆಟ್ಟಿನಲ್ಲಿ ಅಣ್ಣಾವ್ರನ್ನು ದಿವಂಗತ ನಟಿ ಜಯಂತಿ ಹೇಗೆಲ್ಲ ಗೋಳಾಡಿಸುತ್ತಿದ್ದರು. ಇಷ್ಟೆ ಅಲ್ಲದೆ ರಾಜ್‌ಕುಮಾರ್ ಅವರದ್ದು ಅಂತ ಮುಗ್ಧ ಮನಸ್ಸು ಅಂತ ಜಯಂತಿಯವರು ಹೇಳುತ್ತಿದ್ದರು ಅಂತ ಪತ್ರಕರ್ತ ಹರಿಹರಪುರ ಮಂಜುನಾಥ್ ಹೇಳಿಕೊಂಡಿದ್ದಾರೆ.
"ಕನ್ನಡದ ಮತ್ತೊಂದು ಜನಪ್ರಿಯ ಜೋಡಿಗಳಲ್ಲಿ ರಾಜ್‌ಕುಮಾರ್ ಮತ್ತು ಜಯಂತಿ ಜೋಡಿ ಕೂಡ ಒಂದು. ರಾಜ್‌ಕುಮಾರ್ ಮತ್ತು ಪಾರ್ವತಿ ದಂಪತಿಗಳ ಮನೆಯಲ್ಲಿ ಕೈ ತುತ್ತು ತಿಂದ ಅದೃಷ್ಟವಂತೆಯರಲ್ಲಿ ನಾನು ಒಬ್ಬಳು ಅಂತ ಜಯಂತಿಯವರು ಹೇಳುತ್ತಾರೆ. ಜಯಂತಿಯವರ ವೈಶಿಷ್ಟ್ಯ ಅಂದರೆ, ನಮ್ಮ ಹಾಗೇ ರಾಜಣ್ಣ, ಅಣ್ಣಾವ್ರು, ರಾಜ್‌ಕುಮಾರ್ ಹೀಗೆಲ್ಲ ಕರೆಯುತ್ತಿರಲಿಲ್ಲ. ರಾಜ್ ಅಂತ ಎರಡನೇ ಅಕ್ಷರದಲ್ಲಿ ಕರೆಯುತ್ತಿದ್ದರು." ಎಂದು ಹೇಳಿದ್ದಾರೆ.

ಅಣ್ಣಾವ್ರಿಗೆ ದೃಶ್ಯಗಳು ಹಾಗೂ ಸಂಭಾಷಣೆ ಹೆಚ್ಚು ಇರುತ್ತಿದ್ದರಿಂದ ಬಿಡುವು ಸಿಕ್ಕಾಗ ಅಭ್ಯಾಸದಲ್ಲಿ ನಿರತರಾಗಿರುತ್ತಿದ್ದರು. ಇಂತಹ ಸಂದರ್ಭದಲ್ಲಿ ಅಣ್ಣಾವ್ರನ್ನು ಒಮ್ಮೆ ಜಯಂತಿ ಬೆಚ್ಚಿಬೀಳಿಸಿದ್ದರು. "ಸೆಟ್ಟಿನಲ್ಲಿ ಜಯಂತಿಯವರದ್ದು ತುಂಬಾ ತುಂಟತನದ ಸ್ವಭಾವ. ರಾಜ್‌ಕುಮಾರ್ ಸೆಟ್ಟಿನಲ್ಲಿ ಇದ್ದಾಗ ಅವರ ಜವಾಬ್ದಾರಿ ಜಾಸ್ತಿ ಇರುತ್ತಿತ್ತು. ತುಂಬಾ ಸನ್ನಿವೇಶಗಳು, ಸಂಭಾಷಣೆ ಇರುತ್ತಿತ್ತು. ಹಾಗಾಗಿ ತುಂಬಾ ತಯಾರಿ ಮಾಡಿಕೊಳ್ಳಬೇಕಿತ್ತು. ಅವರು ಒಂದು ಕೂತು ಸಂಭಾವಷಣೆಯಲ್ಲಿ ಮಗ್ನರಾಗಿ ಇರುತ್ತಿದ್ದರಂತೆ. ಆ ಸಮಯದಲ್ಲಿ ಅವರಿಗೆ ಹೊರಗೆ ಏನು ನಡೆಯುತ್ತಿದೆ ಅನ್ನೋದೇ ಗೊತ್ತಾಗುತ್ತಿರಲಿಲ್ವಂತೆ. " ಎಂದಿದ್ದಾರೆ.
ಅಂದ್ಹಾಗೆ ಘಟನೆ ಏನಪ್ಪಾ ಅಂದರೆ, ಅಣ್ಣಾವ್ರ ತಮ್ಮ ಡೈಲಾಗ್ ಅನ್ನು ಮನನ ಮಾಡುತ್ತಾ ಕೂತಿದ್ದಾಗ, ರಾಜ್‌ಕುಮಾರ್ ಕೈಗೆ ತಮ್ಮ ಸೀರೆಯ ಸೆರಗು ಕೊಟ್ಟಿದ್ದರಂತೆ. ಆಮೇಲೆ ಏನಾಯ್ತು? ಅನ್ನೋದನ್ನು ಕೇಳಿ. "ಜಯಂತಿಯವರು ಸಂಭಾಷಣೆ ಮನನ ಮಾಡಿಕೊಳ್ಳುವ ಸಮಯದಲ್ಲಿ ಸೆರಗಿನ ಚುಂಗನ್ನು ಅವರ ಕೈಗೆ ಕೊಟ್ಟುಬಿಡುತ್ತಿದ್ದರಂತೆ. ರಾಜ್‌ಕುಮಾರ್ ಅದನ್ನು ಹಿಡಿದುಕೊಂಡು ಅಭ್ಯಾಸದಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದರಂತೆ. ಒಂದಿಷ್ಟು ಹೊತ್ತು ಆದ್ಮೇಲೆ ಜಯಂತಿಯವರು ರೀ ಸೆರಗು ಬಿಡ್ರಿ ಅಂತ ಹೇಳುತ್ತಿದ್ದಂತೆ. ಆಗ ರಾಜ್‌ಕುಮಾರ್ ಅವರು ತಬ್ಬಿಬ್ಬಾಗಿ ಅಯ್ಯಯ್ಯೋ ನಾನು ಇದನ್ನು ಯಾವಾಗ ಹಿಡ್ಕೊಂಡೆ ಅಂತ ಹೇಳಿದ್ದರಂತೆ." ಎಂದು ಹಿರಿಯ ಪತ್ರಕರ್ತ ಹರಿಹರಪುರ ಮಂಜುನಾಥ್ ವಿವರಿಸಿದ್ದಾರೆ.


Click it and Unblock the Notifications











