ಮಹೇಶ್ ಬಾಬು ಲೇಡಿ ಫ್ಯಾನ್ ಜೀವನ ಹಾಳು ಮಾಡಿದ್ರಾ ನಮ್ರತಾ? ನಿರ್ದೇಶಕ ಮಾಡಿದ ಕಮೆಂಟ್ ಏನು?

ಟಾಲಿವುಡ್‌ ಸೂಪರ್‌ಸ್ಟಾರ್ ಮಹೇಶ್ ಬಾಬು ವಿವಾದಗಳಿಂದ ದೂರವಿರುವ ನಟ. ಸಿನಿಮಾ, ಫ್ಯಾಮಿಲಿ ಮಕ್ಕಳು, ಉದ್ಯಮ, ಸಮಾಜ ಸೇವೆ ಅಂತಿರೋ ನಟ ಅಷ್ಟೇ. ಆದರೆ, ನಿರ್ದೇಶಕರೊಬ್ಬರು ಮಹೇಶ್ ಬಾಬು ಬಗ್ಗೆ ಸಂಚಲನ ಸೃಷ್ಟಿಸುವಂತಹ ಕಮೆಂಟ್ ಮಾಡಿದ್ದರು. ಮಹೇಶ್ ಬಾಬು ಪತ್ನಿ ನಮ್ರತಾ ಶಿರೊಡ್ಕರ್‌ನಿಂದಲೇ ಮಹಿಳಾ ಅಭಿಮಾನಿಯೊಬ್ಬರ ಜೀವನ ಹಾಳಾಗಿತ್ತು ಎಂದಿದ್ದರು.

ಈ ಕಮೆಂಟ್‌ಗಳನ್ನು ಮಹೇಶ್ ಬಾಬು ಅಭಿಮಾನಿಗಳಿಗೆ ಅರಗಿಸಿಕೊಳ್ಳುವುದಕ್ಕೆ ಆಗುವುದಿಲ್ಲ. ಸೂಪರ್ ಸ್ಟಾರ್ ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್ ಯಾವ ಹುಡುಗಿಯ ಜೀವನ ಹಾಳು ಮಾಡಿದರು? ಅನ್ನೋ ಪ್ರಶ್ನೆ ಕಾಡುತ್ತಿರಬಹುದು. ಈ ಮಾತನ್ನು ಹೇಳಿರುವ ನಿರ್ದೇಶಕರು ಯಾರು? ಅನ್ನೋ ಗೊಂದಲನೂ ಇರಬಹುದು.

Is really Mahesh Babu wife namrata shirodkar ruined his fan life

ಮಹೇಶ್ ಬಾಬು ಹಾಗೂ ನಮ್ರತಾ ಶಿರೋಡ್ಕರ್ ದಂಪತಿ ಟಾಲಿವುಡ್‌ನ ಅದೆಷ್ಟೋ ಮಂದಿಗೆ ಮಾದರಿಯಾಗಿದ್ದಾರೆ. ಮದುವೆಯಾಗಿ ಸಂಸಾರ ನಡೆಸುವುದಕ್ಕೆ ಆರಂಭ ಮಾಡಿದ ದಿನದಿಂದ ಇಬ್ಬರೂ ಅನ್ಯೋನ್ಯವಾಗಿ ಸಂಸಾರ ನಡೆಸುತ್ತಿದ್ದಾರೆ. ಪತ್ನಿ, ಮಕ್ಕಳು ಹೆಂಡತಿ ಅಷ್ಟೇ. ಗಾಳಿ ಸುದ್ದಿಗಳು ಇವರ ಹತ್ತಿರಕ್ಕೂ ಸುಳಿದಿಲ್ಲ. ಹೀಗಿದ್ದೂ ನಿರ್ದೇಶಕ ಮಾಡಿದ ಆರೋಪ ನಂಬಲು ಸಾಧ್ಯವೇ?

ಮಹೇಶ್ ಬಾಬು ಹಾಗೂ ನಮ್ರತಾ ಶಿರೋಡ್ಕರ್ ಪ್ರೀತಿ ಮದುವೆ ಆಗಿದ್ದು ಗೊತ್ತಿರೋ ಸಂಗತಿನೇ. ಈ ಜೋಡಿ ಮದುವೆಯಾದ ಸಂದರ್ಭದಲ್ಲಿ ನಡೆದ ಘಟನೆಯೊಂದನ್ನು ನಿರ್ದೇಶಕ ಇಂದ್ರಗಂಟಿ ಮೋಹನ ಕೃಷ್ಣ ಬಹಿರಂಗಪಡಿಸಿದ್ದಾರೆ. ಇವರು ನಾನಿ ಅಭಿನಯದ ಮೊದಲ ಸಿನಿಮಾ 'ಅಷ್ಟಾ ಚಮ್ಮಾ'ವನ್ನು ನಿರ್ದೇಶಿಸಿದ್ದಾರೆ. ಈ ಸಿನಿಮಾ ಬಗ್ಗೆ ಮಾತಾಡುತ್ತಾ ಮಹೇಶ್ ಬಾಬು ಹಾಗೂ ನಮ್ರತಾ ವಿವಾಹ ಸಮಯದಲ್ಲಿ ನಡೆದ ಘಟನೆ ವಿವರಿಸಿದ್ದಾರೆ.

ಇಂದ್ರಗಂಟಿ ಮೋಹನ ಕೃಷ್ಣ 'ಅಷ್ಟಾ ಚಮ್ಮಾ' ಸಿನಿಮಾ ಮಾಡುವಾಗ ಮಹೇಶ್ ಬಾಬುಗೆ ಸಿಕ್ಕಾಪಟ್ಟೆ ಮಹಿಳಾ ಫ್ಯಾನ್ಸ್ ಇದ್ದರು. ಹೀಗಾಗಿ ಸಿನಿಮಾದಲ್ಲಿ ಮಹೇಶ್ ಬಗ್ಗೆ ಸೀನ್ ಒಂದನ್ನು ಇಟ್ಟಿದ್ದರು. ಅಲ್ಲಿಂದಲೇ ಕಥೆ ಮುಂದಕ್ಕೆ ಸಾಗುತ್ತೆ. ಈ ಸಿನಿಮಾ ನಾಯಕಿ ಸ್ವಾತಿ ರೆಡ್ಡಿ ಅಪ್ಪಟ ಮಹೇಶ್ ಬಾಬು ಆಗಿರುತ್ತಾರೆ. ಮಹೇಶ್ ಬಾಬು ಮದುವೆ ಆದ ಸುದ್ದಿ ತಿಳಿದು ಅವರ ಹೆಸರಿನ ಹುಡುಗನನ್ನೇ ಮದುವೆ ಆಗಬೇಕು ಅಂತ ಹೊರಡುವ ನಾಯಕಿಯ ಬಾಳಲ್ಲಿ ಏನೇನಾಗುತ್ತೆ ಅನ್ನೋದು ಸಿನಿಮಾ.

Is really Mahesh Babu wife namrata shirodkar ruined his fan life

ಈ ಸಿನಿಮಾಗೆ ಮಹೇಶ್ ಬಾಬು ಹಾಗೂ ಅವರ ತಂದೆ ಸೂಪರ್‌ಸ್ಟಾರ್ ಕೃಷ್ಣರನ್ನು ಅತಿಥಿ ಪಾತ್ರಕ್ಕೆ ಕರೆದುಕೊಂಡು ಬರಬೇಕು ಅಂತ ನಿರ್ದೇಶಕರು ಪ್ರಯತ್ನ ಪಟ್ಟಿದ್ದರು. ಆದರೆ, ಅದು ಸಾಧ್ಯವಾಗಲಿಲ್ಲ. ಈ ವೇಳೆ ತಿರುಪತಿಯಲ್ಲಿ ಮಹೇಶ್ ಬಾಬು ನಮ್ರತಾ ಶಿರೋಡ್ಕರ್ ಅನ್ನು ಮದುವೆಯಾದ ಸುದ್ದಿ ತಿಳಿದು ಮಹಿಳಾ ಅಭಿಮಾನಿಯೊಬ್ಬರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾಳೆ. ಆಕೆಯ ಮಾನಸಿಕ ಸ್ಥಿತಿ ಹದಗೆಟ್ಟಿದೆಯೆಂದು ಇಂದ್ರಗಂಟಿ ಶಾಕಿಂಗ್ ಕಮೆಂಟ್ ಮಾಡಿದ್ದರೆಂದು ವರದಿಗಳಾಗಿದ್ದವು. ನಮ್ರತಾ ಶಿರೋಡ್ಕರ್ ಮಹೇಶ್ ಬಾಬು ಮದುವೆ ಆಗಿದ್ದರಿಂದ ಹುಡುಗಿಯೊಬ್ಬಳ ಜೀವನ ಹಾಳಾಗಿದೆ ಎಂದು ಟೀಕೆ ಟಿಪ್ಪಣಿಗಳಾಗಿದ್ದವು. ಆದರೆ, ಇದರ ಬಗ್ಗೆ ನನಗೆ ಗೊತ್ತಿಲ್ಲ ಎಂದು ನಿರ್ದೇಶಕರು ಹೇಳಿಕೊಂಡಿದ್ದಾರೆ.

ಮಹೇಶ್ ಬಾಬು ಟಾಲಿವುಡ್‌ನ ಹ್ಯಾಂಡ್ಸಮ್ ಹೀರೊ. ಇಂದಿಗೂ ಅವರಿಗೆ ಮಹಿಳಾ ಅಭಿಮಾನಿಗಳಿಗೇನು ಕೊರತೆಯಿಲ್ಲ. ಮಹೇಶ್ ಬಾಬು ಅಂತ ಬಾಯ್‌ಫ್ರೆಂಡ್ ಇರಬೇಕು ಅಂತ ಅದೆಷ್ಟೋ ಹುಡುಗಿಯರು ಕನಸು ಕಾಣುತ್ತಿದ್ದಾರೆ. ಪ್ರತಿಯೊಬ್ಬ ಸ್ಟಾರ್ ಲೈಫ್‌ನಲ್ಲಿ ಇಂತಹದ್ದೊಂದು ಘಟನೆ ನಡೆದೇ ನಡೆದಿರುತ್ತೆ. ಸದ್ಯ ಮಹೇಶ್ ಬಾಬು 'ಗುಂಟೂರು ಖಾರಂ' ರಿಲೀಸ್ ಅಗಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸದ್ಯ ಎಲ್ಲರ ಕಣ್ಣೀಗ ರಾಜಮೌಳಿ ನಿರ್ದೇಶಿಸುತ್ತಿರುವ ಸಿನಿಮಾ ಮೇಲಿದೆ.

More from Filmibeat

English summary
Director Indraganti Mohan Krishna comment on Mahesh Babu wife Namrata Shirodkar ruined his fan life.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X