ಪಾರ್ಲೆ ಜಿ ಬಿಸ್ಕೆಟ್ ಪ್ಯಾಕೆಟ್ ಮೇಲಿದ್ದ ಮಗುವಿನ ಫೋಟೊ ಸುಧಾಮೂರ್ತಿ ಅವರದ್ದಾ? ಅಸಲಿ ವಿಷಯ ಏನು?

ಪಾರ್ಲೆ ಜಿ ಬಿಸ್ಕೆಟ್ ಹಾಗೂ ಸುಧಾಮೂರ್ತಿ ಈ ಎರಡೂ ಹೆಸರುಗಳು ಭಾರತೀಯರಿಗೆ ತುಂಬಾನೇ ಚಿರಪರಿಚಿತ. ಪಾರ್ಲೆ ಜಿ ಬಿಸ್ಕೆಟ್ ಭಾರತದ ಬೋಲ್ಡ್ ಬಿಸ್ಕೆಟ್ ಉತ್ಪನ್ನಗಳಲ್ಲೊಂದು. 80 ಹಾಗೂ 90ರ ದಶಕದಲ್ಲಿ ಮಕ್ಕಳಿಗೆ ಈ ಬಿಸ್ಕೆಟ್ ಒಂದು ಸವಿನೆನಪು. ಇಂದಿಗೂ ಈ ಬೆಸ್ಕೆಟ್‌ನ ಅಭಿಮಾನಿಗಳು ಇದ್ದಾರೆ.

85 ವರ್ಷಗಳಷ್ಟು ಇತಿಹಾಸ ಹೊಂದಿರುವ 'ಪಾರ್ಲೆ' ಕಂಪನಿಯ ಉತ್ಪನ್ನವಿದು. ಒಂದು ಕಪ್ ಟೀ ಜೊತೆ ಪಾರ್ಲೆ ಜಿ ಬಿಸ್ಕೆಟ್ ಇದ್ದರೆ ಮುಗೀತು ಅನ್ನುವಂತಹ ಕಾಲವಿತ್ತು. ಆದ್ರೀಗ ಆ ಅನುಭವ ಇಂದಿನ ಮಕ್ಕಳಿಗೆ ಸಿಗಲ್ಲ. ಇದೆಲ್ಲ ಏನೇ ಇದ್ದರೂ, ಪಾರ್ಲೆ ಜಿ ಪ್ಯಾಕೆಟ್ ಮೇಲಿದ್ದ ಪುಟ್ಟ ಬಾಲಕಿ ಸಿಕ್ಕಾಪಟ್ಟೆ ಬಿಸ್ಕೆಟ್‌ನಷ್ಟೇ ಫೇಮಸ್.

Is Sudhamurthy s photo on Parle G Biscuit What did the company s marketing head say

ಪಾರ್ಲೆ ಜಿ ಬಿಸ್ಕೆಟ್‌ ಮೇಲಿದ್ದ ಆ ಪುಟ್ಟ ಬಾಲಕಿಗೆ ಅಭಿಮಾನಿಗಳು ಇದ್ದಾರೆ. ಹಲವು ವರ್ಷಗಳ ಕಾಲ ಪಾರ್ಲೆ ಜಿ ಕಂಪನಿ ಇದೇ ಪುಟ್ಟ ಬಾಲಕಿಯ ಫೋಟೊವನ್ನು ಇಟ್ಟುಕೊಂಡು ಬಿಸ್ಕೆಟ್ ಅನ್ನು ಮಾರಾಟ ಮಾಡುತ್ತಿತ್ತು. ಕಳೆದ ಕೆಲವು ವರ್ಷಗಳಿಂದ ಈ ಬೆಸ್ಕೆಟ್ ಮೇಲಿರುವ ಪುಟ್ಟ ಬಾಲಕಿ ಫೋಟೊ ಸುಧಾಮೂರ್ತಿಯವರದ್ದೇ ಎಂದು ಹೇಳಲಾಗುತ್ತಿತ್ತು. ಅಸಲಿಗೆ ಆ ಫೋಟೊ ಸುಧಾಮೂರ್ತಿಯವರದ್ದಾ? ಈ ಕಂಪನಿಯ ಮಾರ್ಕೆಟಿಂಗ್ ಹೆಡ್ ನೀಡುವ ಇತ್ತೀಚೆಗೆ ನೀಡಿರುವ ಸಂದರ್ಶನದಲ್ಲಿ ಅಸಲಿ ಸತ್ಯ ಬಿಚ್ಚಿಟ್ಟಿದ್ದಾರೆ.

ಒಂದಿಷ್ಟು ದಿನ 'ಪಾರ್ಲೆ ಜಿ' ಬಿಸ್ಕೆಟ್ ಮೇಲಿರುವ ಮಗುವಿನ ಫೋಟೊ ಇನ್‌ಫೋಸಿಸ್ ಮುಖ್ಯಸ್ಥ ನಾರಾಯಣಮೂರ್ತಿ ಅವರ ಪತ್ನಿ ಸುಧಾಮೂರ್ತಿ ಅವರದ್ದೇ ಎಂದು ಸುದ್ದಿಯಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿಯೂ ಈ ವಿಷಯ ಸಿಕ್ಕಾಪಟ್ಟೆ ಹಲ್‌ಚಲ್ ಎಬ್ಬಿಸಿತ್ತು. ಈ ಬಗ್ಗೆ ಆ ಕಂಪನಿಯ ಮುಖ್ಯಸ್ಥ ನೀಡಿರುವ ಸಂದರ್ಶನವೀಗ ವೈರಲ್ ಆಗುತ್ತಿದೆ.

ಅಸಲಿಗೆ ಪಾರ್ಲೆ ಜಿ ಬಿಸ್ಕೆಟ್ ಮೇಲಿರುವ ಬಾಲಕಿಯ ಫೋಟೊ ಸುಧಾಮೂರ್ತಿಯವರ ಬಾಲ್ಯದ ಫೋಟೊ ಅಲ್ಲ. ಈಗಾಗಲೇ ಆ ಬಗ್ಗೆ ಸಾಕಷ್ಟು ವರದಿಗಳು ಆಗಿವೆ. ಆದರೂ, ಕೆಲವು ಮಂದಿ ಇನ್ನೂ ಒಪ್ಪುವುದಕ್ಕೆ ರೆಡಿಯಿಲ್ಲ. ಸದ್ಯ ಇನ್‌ಸ್ಟಾಗ್ರಾಂನಲ್ಲಿ ಈ ಕಂಪನಿಯ ಮಾರ್ಕೆಟಿಂಗ್ ಹೆಡ್ ಕೃಷ್ಣರಾವ್ ಬುದ್ಧ ನೀಡಿರುವ ಸಂದರ್ಶನ ಎಲ್ಲಾ ಕಡೆ ಸದ್ದು ಮಾಡುತ್ತಿದೆ.

Is Sudhamurthy s photo on Parle G Biscuit What did the company s marketing head say

ಪಾರ್ಲೆ ಜಿ ಬಿಸ್ಕೆಟ್ ಪ್ಯಾಕ್ ಮೇಲಿರುವ ಮಗುವಿನ ಫೋಟೊ ಜನಪ್ರಿಯ ಲೇಖಕಿ, ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕಿ ಸುಧಾಮೂರ್ತಿಯವರ ಬಾಲ್ಯದ ಫೋಟೊ ಅಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಈ ಬಿಸ್ಕೆಟ್ ಪ್ಯಾಕ್‌ನ ಮೇಲಿರುವ ಮಗು ಈ ಜಗತ್ತಿನಲ್ಲೇ ಇಲ್ಲ ಎಂದು ಹೇಳಿದ್ದಾರೆ. ಅಂದರೆ, ಪಾರ್ಲೆ ಜಿ ಬಿಸ್ಕೆಟ್ ಪ್ಯಾಕ್‌ ಮಾರುಕಟ್ಟೆಗೆ ಬಿಡುವ ವೇಳೆ ಅವರದ್ದೇ ಕಂಪನಿಯ ಗ್ರಾಫಿಕ್ ಡಿಸೈನರ್ ಕಲ್ಪನೆಯಲ್ಲಿ ಮೂಡಿ ಬಂದಿರುವ ಫೋಟೊ ಇದು. ಹೀಗಾಗಿ ಇದು ಈ ಮಗು ರಿಯಲ್ ಲೈಫ್‌ನಲ್ಲಿ ಅಸ್ಥಿತ್ವದಲ್ಲಿ ಇಲ್ಲ ಎಂದು ಹೇಳಿದ್ದಾರೆ.

ಪಾರ್ಲೆ ಜಿ ಒಂದು ಕಾಲದಲ್ಲಿ ಅತೀ ಹೆಚ್ಚು ಮಾರಾಟವಾಗುತ್ತಿದ್ದ ಬಿಸ್ಕೆಟ್ ಆಗಿತ್ತು. 1982ರಲ್ಲಿ ಪಾರ್ಲೆ ಜಿ ಮೊದಲ ಜಾಹೀರಾತು ರಿಲೀಸ್ ಮಾಡಿತ್ತು. ಆ ಜಾಹೀರಾತಿನಲ್ಲಿ ಅಂದಿನ ಸೂಪರ್ ಹೀರೊ 'ಶಕ್ತಿಮಾನ್' ನಟಿಸಿದ್ದರು. ಇಂದಿಗೂ ಪಾರ್ಲೆ ಜಿ ಮಾರುಕಟ್ಟೆಯಲ್ಲಿ ಉತ್ತಮ ಬ್ಯುಸಿನೆಸ್ ಮಾಡುತ್ತಿದೆ. ಭಾರತದಲ್ಲಷ್ಟೇ ಅಲ್ಲ, ಅಮೆರಿಕದಲ್ಲಿರುವ ಭಾರತೀಯರು ಹೆಚ್ಚು ಇಷ್ಟ ಪಡುತ್ತಿದ್ದಾರೆಂದು ವರದಿಯಾಗಿತ್ತು.

More from Filmibeat

English summary
Is Sudhamurthy's photo on Parle G Biscuit? What's the truth. Know more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X