ICUನಲ್ಲಿದ್ದ ಅಮಿತಾಭ್ ನೋಡಲು ಇಂದಿರಾ, ರಾಜೀವ್ ಗಾಂಧಿಗೆ ಅನುಮತಿ ಇತ್ತು: ರೇಖಾಗೆ ಮಾತ್ರ ನಿರ್ಬಂಧವಿತ್ತು

ಬಾಲಿವುಡ್‌ನಲ್ಲಿ ಅದೆಷ್ಟೊ ಲವ್‌ ಸ್ಟೋರಿಗಳಿವೆ. ಕೆಲವು ಪ್ರೇಮ್‌ ಕಹಾನಿಗಳೂ ಇಂದಿಗೂ ಸುದ್ದಿಯಲ್ಲಿವೆ. ಅಮಿತಾಭ್ ಬಚ್ಚನ್ ಹಾಗೂ ರೇಖಾ ಪ್ರೇಮ ಪ್ರಕರಣ ಈ ಸಾಲಿನಲ್ಲಿ ನಿಲ್ಲುತ್ತವೆ. ಅದಾಗಲೇ ಮದುವೆಯಾಗಿದ್ದ ಅಮಿತಾಭ್ ಪ್ರೀತಿಯಲ್ಲಿ ಬಿದ್ದಿದ್ದ ರೇಖಾ ಮದುವೆನೇ ಆಗಲಿಲ್ಲ. ಪ್ರೀತಿ ಅಷ್ಟೊಂದು ಗಾಢವಾಗಿತ್ತು.

ಈ ಲವ್ ಸ್ಟೋರಿಯನ್ನು ಅಮಿತಾಭ್ ಬಚ್ಚನ್ ಹಾಗೂ ರೇಖಾ ಅಭಿಮಾನಿಗಳಿಂದ ಮುಚ್ಚಿಡಲೂ ಸಾಧ್ಯವಾಗಲೇ ಇಲ್ಲ. ಇತ್ತ ರೇಖಾ ಕೂಡ ಆಗಾಗ ಅಮಿತಾಭ್ ಬಚ್ಚನ್ ಮೇಲಿದ್ದ ಪ್ರೀತಿಯನ್ನು ಓಪನ್ ಆಗಿಯೇ ಹೇಳಿಕೊಂಡಿದ್ದಾರೆ. ಬಿಗ್ ಬಿ ಜೊತೆ ಸಾಂಸಾರಿಕ ಜೀವನ ನಡೆಸಲು ಸಾಧ್ಯವಾಗದೇ ಇರೋದಕ್ಕೆ ಬೇಸರ ವ್ಯಕ್ತಪಡಿಸಿದ್ದೂ ಇದೆ.

Jaya Bachchan did not allow Rekha to see Amitabh Bachchan while he was in the ICU

ಅಮಿತಾಭ್ ಬಚ್ಚನ್ ಹಾಗೂ ರೇಖಾ ನಡುವಿನ ಪ್ರೀತಿಯ ವಿಷಯ ಜಯಾ ಬಚ್ಚನ್‌ಗೆ ಸಿಕ್ಕಿತ್ತು. ಹೀಗಾಗಿ ಇವರಿಬ್ಬರೂ ಮುಖಾ-ಮುಖಿಯಾಗದಂತೆ ನಿರ್ಬಂಧವನ್ನು ಹೇರಿದ್ದರು. ಅದೂ, ಅಮಿತಾಭ್ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ಸಂದರ್ಭದಲ್ಲೂ ಜಯಾ ಬಚ್ಚನ್ ನಟಿ ರೇಖಾ ಮೇಲೊಂದು ಕಣ್ಣು ಇರಿಸಿದ್ದರು. ಆದರೂ ರೇಖಾ ಐಸಿಯುನಲ್ಲಿದ್ದ ಅಮಿತಾಭ್‌ರನ್ನು ನೋಡಲು ಬಂದಿದ್ದರು. 1982ರಲ್ಲಿ ಕಥೆ ಕೇಳುವುದಕ್ಕೆ ರೋಚಕ.

ಜುಲೈ 26, 1982..

ಅಮಿತಾಭ್ ಬಚ್ಚನ್ 'ಕೂಲಿ' ಸಿನಿಮಾದ ಶೂಟಿಂಗ್‌ನಲ್ಲಿ ಇದ್ದರು. ಈ ವೇಳೆ ಆಕ್ಷನ್ ದೃಶ್ಯವೊಂದರಲ್ಲಿ ಬಿಗ್‌ಬಿಗೆ ತೀವ್ರವಾಗಿ ಪೆಟ್ಟು ಬಿದ್ದಿತ್ತು. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಮಿತಾಭ್ ಬಚ್ಚನ್‌ಗೆ ಬಿದ್ದಿರೋ ಏಟಿನಿಂದ ಅವರು ಕೋಮಾಗೆ ಹೋಗಿದ್ದರು. ಈ ವೇಳೆ ಬಿಗ್‌ಬಿಯನ್ನು ಬೆಂಗಳೂರಿನಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು.

ಅಮಿತಾಬ್ ಬಚ್ಚನ್ ಆರೋಗ್ಯ ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಅನ್ನೋ ಸ್ಥಿತಿಯಿತ್ತು. ಹೀಗಾಗಿ ವೈದ್ಯ ಐಸಿಯುನಲ್ಲಿ ಇಟ್ಟು ಚಿಕಿತ್ಸೆಯನ್ನು ನೀಡುತ್ತಿದ್ದರು. ಇತ್ತ ಅಮಿತಾಭ್ ಆರೋಗ್ಯ ಕ್ಷೀಣಿಸುತ್ತಿದ್ದರೆ, ಇನ್ನೊಂದು ಕಡೆ ಗುಣಮುಖರಾಗಲು ಜಯಾ ಬಚ್ಚನ್ ದೇವಸ್ಥಾನಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸುತ್ತಿದ್ದರು.

Jaya Bachchan did not allow Rekha to see Amitabh Bachchan while he was in the ICU

ಇಂದಿರಾ, ರಾಜೀವ್ ಗಾಂಧಿಗೆ ಪ್ರವೇಶ್.. ರೇಖಾಗಿಲ್ಲ

ಅಮಿತಾಭ್ ಬಚ್ಚನ್‌ರನ್ನು ಆಸ್ಪತ್ರೆಗೆ ನೋಡಲು ನಿರ್ಬಂಧವನ್ನು ಹೇರಲಾಗಿತ್ತು. ಆದರೆ, ಇಂದಿರಾ ಗಾಂಧಿ, ಗೆಳೆಯ ರಾಜೀವ್ ಗಾಂಧಿ ನೇರವಾಗಿ ಆಸ್ಪತ್ರೆಯೊಳಗೆ ಬರಬಹುದಿತ್ತು. ಆದರೆ, ನಟಿ ರೇಖಾರನ್ನೂ ಮಾತ್ರ ಬಿಡಲಿಲ್ಲ. ಜಯಾ ಬಚ್ಚನ್ ನಟಿ ರೇಖಾರನ್ನು ಒಳಗೆ ಪ್ರವೇಶ ಮಾಡದಂತೆ ಸೂಚನೆ ನೀಡಿದ್ದರು.

ರೇಖಾ ಕೆಲವು ಬಾರಿ ಆಸ್ಪತ್ರೆಗಯೊಳಗೆ ಪ್ರವೇಶ ಮಾಡಲು ಯತ್ನಿಸಿದ್ದರು ಎಂದೂ ಹೇಳಲಾಗಿತ್ತು. ಆದರೆ, ಜಯಾ ಬಚ್ಚನ್ ಆ ಕ್ಷಣದಲ್ಲಿ ಈ ನಟಿಯನ್ನು ಒಳಗೆ ಬಿಡಲೇ ಬಾರದು ಎಂದು ಸಿಬ್ಬಂದಿಗಳಿಗೆ ಕಟ್ಟಪ್ಪಣೆ ಮಾಡಿದ್ದರು ಎಂದು ಹೇಳಾಗಿತ್ತು.

ರಹಸ್ಯವಾಗಿ ಐಸಿಯು ಪ್ರವೇಶಿಸಿದ್ದ ರೇಖಾ

ಜಯಾ ಬಚ್ಚನ್ ಅದೆಷ್ಟೇ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಂಡಿದ್ದರು. ರೇಖಾ ರಹಸ್ಯವಾಗಿ ಅಮಿತಾಭ್ ಬಚ್ಚನ್ ಇದ್ದ ಐಸಿಯು ಪ್ರವೇಶ ಮಾಡಿದ್ದರು. ಒಂದು ದಿನ ರೇಖಾ ಬೆಳಗ್ಗೆನೇ ಮೇಕಪ್ ಇಲ್ಲದೆ, ಬಿಳಿ ಸೀರೆಯನ್ನು ಉಟ್ಟು ಆಸ್ಪತ್ರೆಗೆ ಬಂದಿದ್ದರು. ಇದರಿಂದ ಸಿಬ್ಬಂದಿಗೆ ಗುರುತಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಐಸಿಯು ಬಳಿಗೆ ಬಂದು ಹೊರಗಿನಿಂದಲೇ ಅಮಿತಾಭ್ ಬಚ್ಚನ್‌ರನ್ನು ನೋಡಿ ಹಿಂತಿರುಗಿದ್ದರು ಎಂದು ವರದಿಯಾಗಿತ್ತು.

ಐಸಿಯು ಮುಂದೆ ಅಮಿತಾಭ್ ಬಚ್ಚನ್ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ದರು. ಸ್ವಲ್ಪ ಸಮಯದ ಬಳಿಕ ಐಸಿಯು ಬಾಗಿಲಿನ ಬಳಿ ಹತಾಶರಾಗಿ ನಿಂತು ಆಸ್ಪತ್ರೆಯಿಂದ ನಿರ್ಗಮಿಸಿದ್ದರು. ಬಹುಶ: ಅಮಿತಾಬ್ ಮೇಲಿದ್ದ ಪ್ರೀತಿ ರೇಖಾ ಆಸ್ಪತ್ರೆವರೆಗೂ ಕರೆದು ತಂದಿತ್ತು ಎಂದು ಚಿತ್ರರಂಗದಲ್ಲಿ ಸುದ್ದಿ ಹರಿದಾಡಿತ್ತು.

More from Filmibeat

English summary
Jaya Bachchan did not allow Rekha to see Amitabh Bachchan while he was in the ICU, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X