3ಸಾವಿರ ಅತಿಥಿಗಳು, 1 ಕೋಟಿ ಸೀರೆ Jr.NTR ಮದುವೆಯಲ್ಲಿ ನೀರಿನಂತೆ ಖರ್ಚು; ಕೋಟಿ ಕೋಟಿ ಸುರಿದಿದ್ದು ಏನಕ್ಕೆ?

ದಕ್ಷಿಣ ಭಾರತೀಯ ಚಿತ್ರರಂಗದ ಸೂಪರ್‌ಸ್ಟಾರ್‌ಗಳಲ್ಲಿ ಜೂ.ಎನ್‌ಟಿಆರ್‌ ಹೆಸರು ಮುಂಚೂಣಿಯಲ್ಲಿ ಇರುತ್ತೆ. RRR ಸಿನಿಮಾ ಬಳಿಕವಂತೂ 'ಯಂಗ್ ಟೈಗರ್' ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ತೆಲುಗು ಚಿತ್ರರಂಗದ ದಿಗ್ಗಜರ ಕುಟುಂಬದ ಕುಡಿ ಜೂ.ಎನ್‌ಟಿಆರ್ ಸಿನಿ ಎಂಟ್ರಿಯಲ್ಲೇ ಒಂದು ಖದರ್ ಇತ್ತು.

ಜೂ.ಎನ್‌ಟಿಆರ್ ಅಂದುಕೊಂಡಿದ್ದಕ್ಕಿಂತ ಬೇಗನೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಟಾಲಿವುಡ್‌ನಲ್ಲಿ ಯಶಸ್ಸು ಕೂಡ ಅಷ್ಟೇ ಬೇಗ ಸಿಕ್ಕಿತ್ತು. ಒಂದರ ಹಿಂದೊಂದು ಸೂಪರ್‌ ಹಿಟ್ ಸಿನಿಮಾಗಳನ್ನು ನೀಡುತ್ತಾ ಬಂದಿದ್ದ ಜೂ.ಎನ್‌ಟಿಆರ್ ಬಹುಬೇಗನೇ ಅಭಿಮಾನಿಗಳ ಫೇವರಿಟ್ ಸ್ಟಾರ್ ಆಗಿದ್ದರು. ಅದರಲ್ಲೂ RRR ಬಳಿಕ ಸೀದಾ ಗ್ಲೋಬಲ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ.

Jr NTR reportedly spent 100 crore rupees for his marriage it was the South Cinema Industry s biggest wedding

ಇನ್ನು ಜೂ.ಎನ್‌ಟಿಆರ್ ಮದುವೆ ಕೂಡ ಅಷ್ಟೇ ಬೇಗನೇ ನಡೆದಿತ್ತು. ಕೇವಲ 28ನೇ ವಯಸ್ಸಿನಲ್ಲಿ ಜೂ.ಎನ್‌ಟಿಆರ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ತೆಲುಗಿನ ಉದ್ಯಮಿಯ ಪುತ್ರಿಯನ್ನು ಮದುವೆ ಆಗಿದ್ದರು. ಆ ವೇಳೆ ಜೂ.ಎನ್‌ಟಿಆರ್ ತಮ್ಮ ಮದುವೆಗೆ ಬರೋಬ್ಬರಿ 100 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದರು ಎಂದು ವರದಿಯಾಗಿದೆ.

ಜೂ.ಎನ್‌ಟಿಆರ್ ಹಾಗೂ ಪತ್ನಿ ಲಕ್ಷ್ಮಿ ಪ್ರಣತಿ ಮದುವೆ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ನಡೆದ ದುಬಾರಿ ಮದುವೆಗಳಲ್ಲಿ ಒಂದು ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ ಜೂ.ಎನ್‌ಟಿಆರ್ ತಮ್ಮ ಮದುವೆ 100 ಕೋಟಿ ರೂಪಾಯಿಯನ್ನು ಏನಕ್ಕೆಲ್ಲ ಖರ್ಚು ಮಾಡಿದ್ದರು? ಎಷ್ಟು ಜನ ಬಂದಿದ್ದರು? ಇವೆಲ್ಲವನ್ನು ಡಿಎನ್‌ಎ ವರದಿ ಮಾಡಿದೆ.

Jr NTR reportedly spent 100 crore rupees for his marriage it was the South Cinema Industry s biggest wedding

ಸಿನಿಮಾ ಮಂದಿ ಮದುವೆ ಈಗ ದುಬಾರಿ ಎನಿಸುತ್ತಿದೆ. ಸೆಲೆಬ್ರಟಿಗಳು ತಮ್ಮ ಮದುವೆಗೆ ಕೋಟಿ ಲೆಕ್ಕದಲ್ಲಿ ಹಣವನ್ನು ಖರ್ಚು ಮಾಡುತ್ತಾರೆ. ಆದರೆ, ಜೂ.ಎನ್‌ಟಿಆರ್ 2011ರಲ್ಲಿ ಸುಮಾರು 100 ಕೋಟಿ ರೂಪಾಯಿಯನ್ನು ಖರ್ಚು ಮಾಡಿದ್ದರು ಎನ್ನಲಾಗಿದೆ. 18ನೇ ವಯಸ್ಸಿನಲ್ಲಿಯೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಜೂ.ಎನ್‌ಟಿಆರ್ 10 ವರ್ಷಗಳ ಬಳಿಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

ತೆಲುಗಿನ ಉದ್ಯಮಿ ನಾರ್ನೆ ಶ್ರೀನಿವಾಸ ರಾವ್ ಅವರ ಪುತ್ರಿ ಲಕ್ಷ್ಮಿ ಪ್ರಣತಿಯನ್ನು ಗ್ರ್ಯಾಂಡ್ ಆಗಿ ಮದುವೆ ಆಗಿದ್ದರು. ಈ ಮದುವೆಗೆ ಸುಮಾರು 3 ಸಾವಿರ ಮಂದಿ ಅತಿಥಿಗಳು ಬಂದಿದ್ದರು. ಇವರೆಲ್ಲರಿಗೂ ರಾಜಾತಿಥ್ಯವನ್ನು ನೀಡಲಾಗಿತ್ತು. ಪತ್ನಿ ಲಕ್ಷ್ಮಿ ಪ್ರಣತಿ ಮದುವೆ ವೇಳೆ ಒಂದು ಕೋಟಿ ರೂಪಾಯಿ ವೆಚ್ಚದ ದುಬಾರಿ ಸೀರೆಯುಟ್ಟಿದ್ದರು ಎಂದು ಹೇಳಲಾಗುತ್ತಿದೆ. ಮದುವೆ ಮಂಟಪಕ್ಕೆ ಸುಮಾರು 18 ಕೋಟಿ ರೂಪಾಯಿ ವೆಚ್ಚದ ಮಾಡಿದ್ದರು. 5 ಕೋಟಿ ವೆಚ್ಚದಲ್ಲಿ ವೆಡ್ಡಿಂಗ್ ಹಾಲ್ ಇತ್ತು. ಅದರಲ್ಲಿ ಪ್ರತಿಮೆ, ವಾಟರ್ ಫಾಲ್ಸ್ ನಿರ್ಮಾಣ ಮಾಡಲಾಗಿತ್ತು. ಸುಮಾರು 55 ವಿಧದ ಖಾದ್ಯ ಆರೇಂಜ್ ಮಾಡಲಾಗಿತ್ತು. ಇದಕ್ಕೆ ಬರೋಬ್ಬರು 22 ಕೋಟಿ ರೂಪಾಯಿ ಖರ್ಚಾಗಿತ್ತು. 17 ಸಾವಿರ ಫ್ಯಾನ್ಸ್ ಬಂದಿದ್ದರು ಎಂದು ಈ ಹಿಂದೆ ವರದಿಯಾಗಿತ್ತು.

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಮದುವೆಗೆ ಕೂಡ 100 ಕೋಟಿ ರೂಪಾಯಿ ಖರ್ಚು ಮಾಡಿರುವ ಬಗ್ಗೆ ವರದಿಯಾಗಿತ್ತು. ಆದರೆ, ಈ ಮದುವೆಗೆ ಕೇವಲ 50 ಮಂದಿ ಅತಿಥಿಗಳಷ್ಟೇ ಇದ್ದರು. ಆದರೆ, ಜೂ.ಎನ್‌ಟಿಆರ್ ಹಾಗೂ ಲಕ್ಷ್ಮಿ ಪ್ರಣತಿ ತಮ್ಮ ಮದುವೆ 2011ರಲ್ಲೇ ನೂರು ಕೋಟಿ ರೂಪಾಯಿ ಖರ್ಚು ಮಾಡಿದ್ದು ದೊಡ್ಡ ಮಟ್ಟಕ್ಕೆ ಸದ್ದು ಮಾಡಿತ್ತು.

More from Filmibeat

English summary
Jr. NTR's wedding, costing 100 crore rupees, has been highlighted as the most lavish and grandest event in the history of South Cinema.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X