ಪತ್ನಿ ಬಿಟ್ಟು 2ನೇ ಮದುವೆ.. ಮತ್ತೆ ವಿಚ್ಚೇದನ..ವರದಕ್ಷಿಣೆ ಕೇಸ್; ಇಷ್ಟಾದ್ಮೇಲೂ ಆದಿ ಮೊದಲನೇ ಹೆಂಡ್ತಿಯನ್ನು ಸೇರಿದ್ದೇಗೆ?
ಕನ್ನಡದ ಖ್ಯಾತ ಹಾಸ್ಯ ನಟ ಮೈಸೂರು ಲೋಕೇಶ್ ಅವರ ಪುತ್ರ ಆದಿ ಲೋಕೇಶ್. ಸ್ಯಾಂಡಲ್‌ವುಡ್‌ನಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ನಟ ಸಿನಿಪ್ರಿಯರಿಗೆ ತುಂಬಾನೇ ಜನಪ್ರಿಯ. ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಆರಂಭದಲ್ಲಿ ಆದಿ ಲೋಕೇಶ್ ಸಿಕ್ಕಾಪಟ್ಟೆ ಬೇಡಿಕೆಯ ನಟನಾಗಿದ್ದರು. ಅದರಲ್ಲೂ ಜೋಗಿ ಸಿನಿಮಾ ಬಂದ್ಮೇಲೆ ಆದಿ ಲೋಕೇಶ್ ಜನಪ್ರಿಯತೆ ದುಪ್ಪಟ್ಟಾಗಿತ್ತು.
ಇತ್ತ ವೃತ್ತಿ ಬದುಕು ಉತ್ತಮವಾಗಿ ಸಾಗುತ್ತಿತ್ತು. ಆದರೆ, ಅತ್ತ ವೈಯಕ್ತಿಕ ಬದುಕು ಬೀದಿಗೆ ಬಂದಿತ್ತು. ಚಿಕ್ಕ ವಯಸ್ಸಿನಲ್ಲಿಯೇ ಆದಿ ಲೋಕೇಶ್ ಮದುವೆ ಆಗಿದ್ದರು. ಆದರೆ, ಮೊದಲನೇ ಪತ್ನಿಯೊಂದು ಮನಸ್ಸು ಮುರಿದುಕೊಂಡು ಎರಡನೇ ಮದುವೆಯಾದರು. ಅದೂ ಕೂಡ ಹೆಚ್ಚು ದಿನ ಉಳಿಯಲಿಲ್ಲ. ಎರಡನೇ ಮದುವೆ ವಿವಾದಕ್ಕೆ ತಿರುಗಿಬಿಟ್ಟಿತ್ತು. ಆಮೇಲೆ ಏನಾಯ್ತು ಅನ್ನೋದನ್ನು ಚಿತ್ರಲೋಕ.ಕಾಮ್ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ಅದರ ಝಲಕ್ ಇಲ್ಲಿದೆ.

"2004ನಲ್ಲಿ ನನಗೆ ಮಗ ಹುಟ್ಟುತ್ತಾನೆ. ಆಗ ನಾನು ಬಂದು ಮಗನನ್ನು ನೋಡಿಕೊಂಡು ಹೋಗಿರುತ್ತೇನೆ. ಆಗ ನಾನು ಸಿಕ್ಕಾಪಟ್ಟೆ ಬ್ಯುಸಿ. ಜೋಗಿ ಆದ್ಮೇಲೆ ಕೆಲಸ ಕೆಲಸ ಅಂತಾಗಿತ್ತು. ನನಗೆ ಮೈಸೂರಿನ ಕಡೆಗೆ ಬರುವುದಕ್ಕೆ ಆಗುತ್ತಿರಲ್ಲ. ಒಂದು ಸಮಯದಲ್ಲಿ ನಾನು ನನ್ನ ಪತ್ನಿ ಸೌಮ್ಯಾಗೆ ವಾಪಾಸ್ ಬರುವಂತೆ ಕೇಳುತ್ತೇನೆ. ಆಗ ನಮ್ಮ ತಂದೆಯನ್ನು ರಿಕ್ವೆಸ್ಟ್ ಮಾಡಿಕೊಳ್ಳಬೇಕು. ಬಂದು ಕಾಲು ಹಿಡಿದು ಕೊಳ್ಳಬೇಕು ಅಂತ ನನ್ನ ಪತ್ನಿ ಸೌಮ್ಯಾ ಹೇಳಿದರು. ನನಗೆ ಅಹಂ ಅಡ್ಡ ಬಂತು."
ಈ ವೇಳೆ ಆದಿ ಲೋಕೇಶ್‌ಗೆ ಅಹಂ ಅನ್ನೋದು ಅಡ್ಡ ಬಂದಿತ್ತು. 25 26ನೇ ವಯಸ್ಸಿನಲ್ಲಿ ಆದಿ ಲೋಕೇಶ್ ಅವರ ಮನಸ್ಥಿತಿ ಹಾಗಿತ್ತು. ನನ್ನ ಪಾಡಿಗೆ ನಾನು ಇರುತ್ತೇನೆ. ಕೆಲಸ ಇದೆ ದುಡಿದುಕೊಂಡು ಇರುತ್ತೇನೆ ಅಂದುಕೊಂಡಿದ್ದರು. ಅವರಿಗೊಂದಿಷ್ಟು ಸ್ನೇಹಿತರಿದ್ದರು. ಅವರೊಂದಿಗೆ ಕಾಲ ಕಳೆಯುತ್ತಿದ್ದರು. ಆ ವೇಳೆ ಅವರಿಗೆ ಮಾಡಲ್ ಆಗಿದ್ದ ಅರುಣ ಎಂಬುವವರನ್ನು ಪರಿಚಯ ಆಗುತ್ತೆ. ಪರಿಚಯ ಪ್ರೀತಿಗೆ ತಿರುಗಿ ಒಂದು ದಿನ ಮದುವೆ ಆಗೋಣ ಅಂತ ತೀರ್ಮಾನ ಮಾಡಿದ್ದರು.
"ನಾವಿಬ್ಬರೇ ನಿರ್ಧಾರ ತೆಗೆದುಕೊಳ್ಳುತ್ತೇವೆ. ಹಿಂದೆ ಮುಂದೆ ಯೋಚನೆ ಮಾಡುವುದಿಲ್ಲ. ಆಗ ಅದು ಕಾಂಟ್ರವರ್ಸಿ ಆಗುತ್ತೆ. ಒಂದು ರಿಲೇಷನ್‌ಶಿಫ್ ಅನ್ನು ಮುಗಿಸಿ, ಇನ್ನೊಂದಕ್ಕೆ ಕಾಲಿಡಬೇಕಾಗುತ್ತೆ. ಎರಡು ದೋಣಿ ಮೇಲೆ ಕಾಲಿಡುತ್ತೇನೆ ಅಂದರೆ, ನಿಮ್ಮ ತಪ್ಪಾಗುತ್ತೆ. ಆಗ ನಾನು ಎರಡು ದೋಣಿ ಮೇಲೆ ಕಾಲಿಟ್ಟಿರಲಿಲ್ಲ. ಮದುವೆ ಏನೋ ಆಗಿ ಹೋಯ್ತು. ಆ ಮೇಲೆ ಪೇಪರ್‌ನಲ್ಲಿ ಬಂದುಬಿಡ್ತು. ಇವರ ಮನೆಯಲ್ಲೂ ಗೊತ್ತಾಯ್ತು. ಸೌಮ್ಯಾ ನನಗೆ ಒಂದೇ ಪ್ರಶ್ನೆ ಕೇಳಿದ್ದು, ಮದುವೆ ಆಗಿದ್ದು ನಿಜನಾ? ಅಂತ ಕೇಳಿದ್ಲು. ಹೌದು ಅಂದ್ಮೇಲೆ, ಆಯ್ತು ಚೆನ್ನಾಗಿರು ಅಂತ ಹೇಳಿ ಸುಮ್ಮನಾಗಿದ್ದಳು."
ಪೇಪರ್‌ನಲ್ಲಿ ಬಂದ್ಮೇಲೆ ವಿವಾದ ಆಗುವುದಕ್ಕೆ ಶುರುವಾಗಿತ್ತು. ಹೀಗಾಗಿ ಮೊದಲ ಪತ್ನಿ ಸೌಮ್ಯಾಗೆ ವಿಚ್ಚೇದನ ಕೊಡಬೇಕು ಅಂತ ನಿರ್ಧಾರ ಮಾಡಿದ್ದರು. ಈ ವೇಳೆ ಜೀವನದಲ್ಲಿ ಸಾಕಷ್ಟು ಕಷ್ಟ ಅನುಭವಿಸಿದ್ದರಿಂದ ಜೀವನದಲ್ಲಿ ದುಡಿಬೇಕು ಅನ್ನೋದಷ್ಟೇ ಅವರ ತಲೆಯಲ್ಲಿತ್ತು. ಅವರು ಯಾವ ಸಂಬಂಧಗಳಿಗೂ ಹೋಗುತ್ತಿರಲಿಲ್ಲ. ಅವರೊಂದಿಗೆ ಶ್ರೀಮಂತ ಸ್ನೇಹಿತರೊಂದಿಗೆ ಪಾರ್ಟಿ ಮಾಡುತ್ತಿದ್ದರು. ದುಡಿದಿದ್ದನ್ನು ಕಳೆಯುತ್ತಿದ್ದರು. ಈ ವೇಳೆ ಎರಡನೇ ಪತ್ನಿ ಅರುಣಾ ಅವರೊಂದಿಗೂ ಜಗಳ ಆಗುತ್ತೆ. ಇಬ್ಬರು ಬೇರೆಯಾಗುತ್ತಾರೆ.

"ಅರುಣಾಗೂ ನನಗೂ ಜಗಳ ಆಗುತ್ತೆ. ನಾವಿಬ್ಬರೂ ಬೇರೆಯಾಗುತ್ತೇವೆ. ಅವಳು 498/A ವರದಕ್ಷಿಣೆ ಕೇಸ್ ಹಾಕುತ್ತಾಳೆ. ಸೌಮ್ಯಾ ಮೇಲಿನ ಅಹಂಗೆ ನಾನು ಅರುಣಾ ಅವರನ್ನು ಮದುವೆ ಆದೆ. ನಾನು ಅರುಣಾ ಅವರ ಅಪ್ಪನಿಗೆ ಪೋನ್‌ನಲ್ಲಿ ಏನ್ ಕಿತ್ಕೋತಿಯಾ ಕಿತ್ಕೋ ಎಂದು ಹೇಳಿಬಿಟ್ಟೆ. ಆಗ ಅವರು ಬಂದು ಪೊಲೀಸ್ ಸ್ಟೇಷನ್‌ನಲ್ಲಿ ದೂರನ್ನು ಕೊಡುತ್ತಾರೆ. ಅಷ್ಟರಲ್ಲಿ ಇಬ್ಬರೊಂದಿಗಿನ ಮದುವೆ ಡಾಕ್ಯೂಮೆಂಟೇಷನ್ ಅನ್ನು ಅವರು ಇವರಿಗೆ, ಇವರು ಅವರಿಗೆ ಕೊಟ್ಟಿಕೊಂಡಿತ್ತಾರೆ. ಆಗ ಅರುಣಾನೇ ಬಂದು ಸೌಮ್ಯಾ ಅಪ್ಪನ ಫ್ಯಾಕ್ಟರಿಗೆ ಬಂದು ಡಾಕ್ಯೂಮೆಂಟ್ ಕೊಟ್ಟು ಹೋದರು ಎಂದು ಹೇಳಿದರು. ಆಗ ನನಗೆ ನಿಜವಾದ ಪ್ರೀತಿ ಏನು ಅಂತ ಅರ್ಥ ಆಯ್ತು."
ಆಗ ಕೇಸ್ ಇತ್ಯರ್ಥ ಆಗುತ್ತೆ. ಅರುಣಾ ಹಾಗೂ ಆದಿ ಲೋಕೇಶ್ ಇಬ್ಬರೂ ಬೇರೆಯಾಗುತ್ತಾರೆ. ಆಗ ಒಂದಿಷ್ಟು ದಿನಗಳ ಕಾಲ ಆದಿ ಲೋಕೇಶ್ ಒಬ್ಬರೇ ಇರುತ್ತಾರೆ. ಅದಾದ್ಮೇಲೆ ಮತ್ತೆ ಸೌಮ್ಯಾ ಹಾಗೂ ಆದಿ ಲೋಕೇಶ್ ಇಬ್ಬರೂ ಒಂದಾಗುತ್ತಾರೆ. ಅಷ್ಟೊತ್ತಿಗಾಗಲೇ ಸೌಮ್ಯಾ ಅವರ ತಂದೆ ತೀರಿಕೊಂಡಿರುತ್ತಾರೆ. ಆದಿ ಲೋಕೇಶ್ ಹೋಗಿ ಮೊದಲನೇ ಪತ್ನಿ ಸೌಮ್ಯಾ ಅವರ ಬಳಿ ಕ್ಷಮೆ ಕೇಳುತ್ತಾರೆ. ಬಳಿಕ ಇಬ್ಬರೂ ಒಂದಾಗುತ್ತಾರೆ.


Click it and Unblock the Notifications











