"ಏನ್ರಿ ಈಕೆ ಮೈಮೇಲೆ ಬಂದು ಬೀಳ್ತಾರೆ" ಎಂದು ಅನಂತ್‌ನಾಗ್ ದೂರಿದ್ದು ಯಾರನ್ನ? ಅಶ್ವಥ್ ಮಧ್ಯಸ್ಥಿಕೆಯಲ್ಲಿ ಏನಾಯ್ತು?
ಕನ್ನಡ ಚಿತ್ರರಂಗ ಕಂಡದ ಸ್ಪುರದ್ರೂಪಿ ನಟಿ ಅನಂತ್‌ನಾಗ್. ಕನ್ನಡ ಚಿತ್ರರಂಗದ ಮೊದಲ ಚಾಕೊಲೇಟ್ ಹೀರೋ ಅಂತನೂ ಹೇಳಬಹುದು. ಇವರು ಸುಮಾರು 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲಿ ಕನ್ನಡದಲ್ಲಿಯೇ 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವುದು ವಿಶೇಷ. ಕನ್ನಡ, ತೆಲುಗು, ಹಿಂದಿ, ಮರಾಠಿ, ಮಲಯಾಳಂ ಹಾಗೂ ಇಂಗ್ಲಿಷ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಂದಿಗೂ ಪ್ರೇಕ್ಷಕರನ್ನು ರಂಜಿಸುತ್ತಿರುವ ಅನಂತ್‌ನಾಗ್ ಇಂದು (ಸೆಪ್ಟೆಂಬರ್ 4) 76ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
ಅನಂತ್‌ನಾಗ್ ಆರಂಭದ ದಿನಗಳಲ್ಲಿ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ರಂಗಭೂಮಿಯಲ್ಲಿಯೇ ನಟಿಸುತ್ತಾ ಕಲಾತ್ಮಕ ಸಿನಿಮಾಗಳಲ್ಲಿ ನಟಿಸುವುದಕ್ಕೆ ಶುರು ಮಾಡಿದ್ದರು. ಈ ವೇಳೆ ಹಿಂದಿ, ಮರಾಠಿ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ್ದರು. ಕನ್ನಡದಲ್ಲೂ 'ಸಂಕಲ್ಪ', 'ಹಂಸಗೀತೆ'ಯಂತಹ ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಇದೇ ಸಂದರ್ಭದಲ್ಲಿ ಅವ್ರಿಗೆ ಕನ್ನಡದ ಮೊದಲ ಕಮರ್ಷಿಯಲ್ ಸಿನಿಮಾ ಸಿಕ್ಕಿತ್ತು.

ಅನಂತ್‌ನಾಗ್ ನಟಿಸಿದ ಮೊದಲ ಕಮರ್ಷಿಯಲ್ ಸಿನಿಮಾ 'ಬಯಲು ದಾರಿ'. ದೊರೈ-ಭಗವಾನ್ ನಿರ್ದೇಶಿಸಿದ ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸವನ್ನೇ ಬರೆದಿತ್ತು. ಆದರೆ, ಕಲಾತ್ಮಕ ಸಿನಿಮಾಗಳಲ್ಲಿ ನಟಿಸಿದ್ದ ಅನಂತ್‌ನಾಗ್‌ಗೆ ಕಮರ್ಷಿಯಲ್ ಸಿನಿಮಾದಲ್ಲಿ ನಟಿಸುವಾಗ ಕಷ್ಟ ಆಗಿತ್ತು. ಅದರಲ್ಲೂ ಡ್ಯುಯೆಟ್ ಸೀನ್‌ಗಳು ಬಾರಿ ಕಷ್ಟ ಆಗುತ್ತಿತ್ತು. ಈ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ಕಲ್ಪನಾ ಮೇಲೆ ಅನಂತ್ ನಾಗ್ ರೇಗಾಡಿದ್ದ ಸಂದರ್ಭವನ್ನು ಹಿರಿಯ ಪತ್ರಕರ್ತ ಎನ್‌ಎಸ್ ಶ್ರೀಧರಮೂರ್ತಿ ಟೋಟಲ್ ಕನ್ನಡದಲ್ಲಿ ರಿವೀಲ್ ಮಾಡಿದ್ದಾರೆ.
ಡ್ಯುಯೆಟ್ ಸೀನ್ ಬಂದಾಗ ಅನಂತ್‌ನಾಗ್‌ಗೆ ಮುಜುಗರ ಆಗುತ್ತಿತ್ತು. ಕಲ್ಪನಾ ಯಾಕೆ ಹೀಗೆ ಮೈ ಮೇಲೆ ಬಂದು ಬೀಳುತ್ತಿದ್ದಾರೆ ಅಂತ ಅನಿಸುತ್ತಿತ್ತು. ಆ ಸಂಗತಿಯನ್ನು ಹಿರಿಯ ಪತ್ರಕರ್ತ ಎನ್‌ಎಸ್ ಶ್ರೀಧರಮೂರ್ತಿ ಹೀಗೆ ವಿವರಿಸಿದ್ದಾರೆ ನೋಡಿ. "ಡ್ಯುಯೆಟ್ ಸೀನ್‌ಗಳೆಲ್ಲ ಬಂದಾಗ, ಅನಂತ್‌ನಾಗ್ ಅವರು ಭಗವಾನ್ ಹತ್ತಿರ ಕಂಪ್ಲೇಟ್ ಮಾಡೋರು. ಏನೀ ಹುಡುಗಿ ಮೈಮೇಲೆ ಬಂದು ಬೀಳುತ್ತೆ. ಹೀಗೆಲ್ಲ ಯಾಕ್ರಿ ಆಕ್ಟ್ ಮಾಡಬೇಕು. ಲವ್ ಅನ್ನು ಹೀಗೆಲ್ಲ ತೋರಿಸ್ಬೇಕಾ? ಅಂತ ಅನಂತ್‌ನಾಗ್ ಹೇಳಿದ್ರೆ, ಕಲ್ಪನಾ ಡೈರೆಕ್ಟರ್‌ಗೆ ಬಂದು ಡೈರೆಕ್ಟರ್‌ಗೆ ಇದೇನು ದೂರ ದೂರು ನಿಲ್ತಾರೆ. ಇದೇನು ಲವ್ ಸಿನಿಮಾನಾ? ಏನ್ ಸಿನಿಮಾ ಮಾಡುತ್ತಿದ್ದೀರ ನೀವು ಹೇಳುತ್ತಾರೆ." ಎಂದು ಇಬ್ಬರು ಅಸಮಧಾನ ಹೊರಹಾಕಿದ್ದನ್ನು ರಿವೀಲ್ ಮಾಡಿದ್ದಾರೆ.
ಅನಂತ್‌ನಾಗ್ ಚಿತ್ರರಂಗಕ್ಕೆ ಹೊಸಬರಾಗಿದ್ದರು. ಅತ್ತ ಕಲ್ಪನಾಗೆ ಚಿತ್ರರಂಗದ ಅನುಭವವಿತ್ತು. ಇವರಿಬ್ಬರನ್ನೂ ಒಟ್ಟಿಗೆ ಕೂರಿಸಿ, ದಿವಂಗತ ನಟ ಅಶ್ವಥ್ ಅವರು ತಿಳಿ ಹೇಳಿದ್ದರು. "ಅಶ್ವಥ್ ಅದರಲ್ಲಿ ಪ್ರಧಾನ ಪಾತ್ರ ವಹಿಸಿದ್ದಾರೆ. ಇವರಿಬ್ಬರನ್ನೂ ಕರೆದು ಕೂರಿಸಿಕೊಂಡು ಅನಂತ್‌ನಾಗ್‌ಗೆ ನೋಡಪ್ಪ ಇದು ಕಾಡು ಸಿನಿಮಾ ಅಲ್ಲ. ಕಮರ್ಷಿಯಲ್ ಸಿನಿಮಾ. ಇಲ್ಲಿ ಒಂದು ಚೂರು ಜಾಸ್ತಿನೇ ಬೇಕಾಗುತ್ತೆ. ಹಾಗೇ ಕಲ್ಪನಾಗೂ ನೋಡಿ ಇವನು ಹೊಸ ಕಲಾವಿದ. ಇಲ್ಲಿ ನೀನು ಸ್ವಲ್ಪ ಬೇರೆ ತರಹದ ಆಕ್ಟಿಂಗ್ ಅನ್ನು ಮಾಡು ಅಂತ ಹೇಳಿದ್ದರು." ಎಂದು ಎನ್.ಎಸ್. ಶ್ರೀಧರ್ ಮೂರ್ತಿ ನೆನಪಿಸಿಕೊಂಡಿದ್ದಾರೆ.

'ಬಯಲು ದಾರಿ' ಸಿನಿಮಾ ಮುಗಿಯುವ ಹೊತ್ತಿಗೆ ಕಲ್ಪನಾರಿಂದ ಕಮರ್ಷಿಯಲ್ ಸಿನಿಮಾ ಏನು ಕೇಳುತ್ತೆ ಅನ್ನೋದನ್ನು ಕಲಿತುಕೊಂಡೆ ಅಂತ ಅನಂತ್‌ನಾಗ್ ಹೇಳಿ ಕೊಂಡಿದ್ದರು. ಹಾಗೇ 'ಬಯಲು ದಾರಿ' ಸೂಪರ್ ಹಿಟ್ ಸಿನಿಮಾ ಆಗಿ ಹೋಯ್ತು. ಆಗ ಎಲ್ಲರೂ ಅನಂತ್‌ನಾಗ್ ಕಡೆ ತಿರುಗಿ ನೋಡುವ ಹಾಗೆ ಆಯ್ತು.
ಇಲ್ಲಿಂದ ಕಮರ್ಷಿಯಲ್ ಸಿನಿಮಾ ಮಾಡುವಾಗ ಅನಂತ್‌ನಾಗ್ ಎರಡು ಷರತ್ತುಗಳನ್ನು ಹಾಕುತ್ತಿದ್ದರು. ಒಂದು ಫೈಟ್ ಮಾಡಲ್ಲ. ಇನ್ನೊಂದು ಡ್ಯಾನ್ಸ್ ಮಾಡಲ್ಲ ಎಂದು ಹೇಳುತ್ತಿದ್ದರು ಎಂದು ಎನ್.ಎಸ್. ಶ್ರೀಧರ್ ಮೂರ್ತಿ ನೆನಪಿಸಿಕೊಂಡಿದ್ದಾರೆ. 'ಬಯಲು ದಾರಿ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೊಂದು ಸೂಪರ್ ಹಿಟ್ ಸಿನಿಮಾ ಸಿಕ್ಕಿತ್ತು. ಕನ್ನಡಕ್ಕೊಬ್ಬ ಸ್ಪುರದ್ರೂಪಿ ನಟ ಸಿಕ್ಕಿದ್ದರು.


Click it and Unblock the Notifications