ಮೆಜೆಸ್ಟಿಕ್‌ ಬಸ್ ನಿಲ್ದಾಣದಲ್ಲಿ ಶೂಟ್ ಆದ ಮೊದಲ ಸಿನಿಮಾ ಯಾವ್ದು?ವಿಷ್ಣುದಾದ ನಟಿಸಿದ ಆ ಚಿತ್ರ ನಿಮಗೆ ಗೊತ್ತಾ?

ಯಾವುದೇ ಊರಿಂದ ಬೆಂಗಳೂರಿಗೆ ಬರೋರಿಗೆ ಮೆಜೆಸ್ಟಿಕ್ ಬಸ್‌ ನಿಲ್ದಾಣ ಹೊಸದೇನು ಅಲ್ಲ. ಬೆಂಗಳೂರಿನಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವವರಿಗೂ ಮೆಜೆಸ್ಟಿಕ್ ತುಂಬಾನೇ ಚಿರಪರಿಚಿತ. ಈ ಮೆಜೆಸ್ಟಿಕ್ ಬಸ್‌ ನಿಲ್ದಾಣದ ಜೊತೆ ಒಂದು ಅವಿನಾಭಾವ ಸಂಬಂಧವನ್ನು ಬೆಳೆಸಿಕೊಂಡಿರುತ್ತಾರೆ.

ಹಾಗಂತ ಕೇವಲ ಜನರಿಗಷ್ಟೇ ಅಲ್ಲ. ಸ್ಯಾಂಡಲ್‌ವುಡ್ ಮಂದಿಗೂ ಮೆಜೆಸ್ಟಿಕ್ ಜೊತೆ ಬಿಡಲಾರದ ನಂಟಿದೆ. ಇಲ್ಲಿ ಸಾಕಷ್ಟು ಸಿನಿಮಾಗಳು ಚಿತ್ರೀಕರಣಗೊಂಡಿವೆ. ಕನ್ನಡದ ದಿಗ್ಗಜರು ಮೆಜೆಸ್ಟಿಕ್ ಬಸ್‌ ನಿಲ್ದಾಣದಲ್ಲಿ ಹಲವು ಸಿನಿಮಾಗಳನ್ನು ಶೂಟಿಂಗ್ ಮಾಡಿದ್ದಾರೆ. ಆ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸೂಪರ್ ಹಿಟ್ ಆಗಿವೆ. ಇನ್ನು ದರ್ಶನ್ ನಾಯಕನಾಗಿ ನಟಿಸಿದ ಮೊದಲ ಸಿನಿಮಾದ ಟೈಟಲ್ ಕೂಡ 'ಮೆಜೆಸ್ಟಿಕ್'.

Kannada actor Vishnuvardhan movie first shot at Majestic Bus Stand in Bangalore

ದಿನಕ್ಕೆ ಲಕ್ಷಾಂತರ ಜನರು ಬಂದು ಹೋಗುವ ಬೆಂಗಳೂರಿನ ಹೃದಯ ಭಾಗ 'ಮೆಜೆಸ್ಟಿಕ್'. ಇಲ್ಲಿ ಚಿತ್ರೀಕರಣಗೊಂಡ ಮೊದಲ ಸಿನಿಮಾ ಯಾವುದು ಗೊತ್ತೇ? ಮೆಜೆಸ್ಟಿಕ್‌ನ ಈ ಸೆಮಿ ಸರ್ಕಲ್ ಆಕಾರದ ಈ ಬಸ್ ನಿಲ್ದಾಣ ಸಿನಿ ಮಂದಿಯ ನೆಚ್ಚಿನ ಸ್ಪಾಟ್ ಆಗಿತ್ತು. ಆಗ ಸಂಖ್ಯೆ ಕೂಡ ಕಡಿಮೆ ಇದ್ದಿದ್ದರಿಂದ ಇಲ್ಲಿ ಚಿತ್ರೀಕರಣ ಕೂಡ ಅಷ್ಟೇ ಸಲೀಸಾಗಿ ಆಗುತ್ತಿತ್ತು.

ಬೆಂಗಳೂರಿನ ಈ ಮೆಜೆಸ್ಟಿಕ್ ಬಸ್ ನಿಲ್ದಾಣದ ನಿರ್ಮಾಣ 1965ರಲ್ಲಿ ಶುರುವಾಗಿತ್ತು. ನಾಲ್ಕು ವರ್ಷಗಳ ಕಾಲ ನಿರ್ಮಾಣಗೊಂಡ ಈ ಬಸ್ ನಿಲ್ದಾಣ 1969ರಲ್ಲಿ ಲೋಕಾರ್ಪಣೆ ಮಾಡಲಾಗಿತ್ತು. ಆದರೆ, 1980ರ ದಶಕದಲ್ಲಿ ಮೆಜೆಸ್ಟಿಕ್ ನಿಲ್ದಾಣಕ್ಕೆ ಸೆಮಿ ಸರ್ಕಲ್ ರೂಪವನ್ನು ಕೊಡಲಾಗಿತ್ತು. ಈ ಸಂದರ್ಭದಲ್ಲಿ ವಿಷ್ಣುದಾದ ನಟಿಸುತ್ತಿದ್ದ ಸಿನಿಮಾದ ಚಿತ್ರೀಕರಣ ಮಾಡಲಾಗಿತ್ತು. ಆ ಸಿನಿಮಾ ಮತ್ಯಾವುದೂ ಅಲ್ಲ 'ಸಾಹಸ ಸಿಂಹ'.

ಕನ್ನಡ ಚಿತ್ರರಂಗದ ಹಿರಿಯ ವಿತರಕ ಮುನಿರಾಜು ಕನ್ನಡ ಮಾಣಿಕ್ಯ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದ ವೇಳೆ ಮೆಜೆಸ್ಟಿಕ್‌ನಲ್ಲಿ ಚಿತ್ರೀಕರಣ ಮಾಡಿದ ಮೊದಲ ಸಿನಿಮಾ 'ಸಾಹಸ ಸಿಂಹ' ಎಂದು ಮಾಹಿತಿ ನೀಡಿದ್ದಾರೆ. ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನು ಬರೆದಿತ್ತು. ಅಷ್ಟೇ ಅಲ್ಲದೆ ಡಾ.ವಿಷ್ಣುವರ್ಧನ್‌ಗೆ 'ಸಾಹಸ ಸಿಂಹ' ಅನ್ನುವ ಬಿರುದನ್ನು ತಂದುಕೊಟ್ಟಿತ್ತು.

Kannada actor Vishnuvardhan movie first shot at Majestic Bus Stand in Bangalore

"1983ರಲ್ಲಿ ಗುಂಡೂರಾವ್ ಸರ್ಕಾರವಿದ್ದಾಗ ಮೆಜೆಸ್ಟಿಕ್ ಬಸ್‌ಸ್ಯಾಂಡ್ ಇನ್ನೂ ಕಟ್ಟುತ್ತಲೇ ಇದ್ದರು. ಆ ಬಸ್‌ಸ್ಟ್ಯಾಂಡ್‌ನಲ್ಲಿ ಮೊದಲು ಸಿನಿಮಾ ಶೂಟಿಂಗ್ ಆಗಿದ್ದು ಸಾಹಸ ಸಿಂಹ. ಅಲ್ಲಿ ಫೈಟ್ ಸೀನ್ ನಡೆದಿತ್ತು. ನಾನು ಕಣ್ಣಾರೆ ಅದನ್ನು ನೋಡಿದ್ದೇನೆ. ಆಗ ಅದು ಅದ್ಭುತ ಆಗಿತ್ತು. ಆ ಸಿನಿಮಾ ರಿಲೀಸ್ ಕೂಡ ಆಯ್ತು. ಆಗ ರೆಕಾರ್ಡ್ ಬ್ರೇಕ್ ಆಯ್ತು. ಈ ಸಿನಿಮಾ ವಿಷ್ಣು ಸರ್‌ಗೆ ಮೈಲಿಗಲ್ಲು ಆಯ್ತು." ಎಂದು ವಿತರಕ ಮುನಿರಾಜು ಕನ್ನಡ ಮಾಣಿಕ್ಯ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತಾಡಿದ್ದರು.

ಹಾಗೇ ವಿಷ್ಣುದಾದ ನಟಿಸಿದ 'ಸಾಹಸ ಸಿಂಹ' ಸಿನಿಮಾದ ಖದರ್ ಹೇಗಿತ್ತು? ಅನ್ನೋದನ್ನು ಮುನಿರಾಜು ವಿವರಿಸಿದ್ದಾರೆ. "ಸಾಹಸ ಸಿಂಹ ಅನ್ನೋ ಹೆಸರಿಗೆ, ಅಂದರೆ ಅವರು ಮಾಡಿದ್ದಕ್ಕೂ, ಅವರ ಟೈಟಲ್‌ಗೂ ಅದ್ಭುತ ಅಂತ ಅನಿಸಿತ್ತು. ಅವರು ಫೈಟ್ ಮಾಡುವುದಕ್ಕೆ ನಿಂತುಕೊಂಡರೆ, ಮೈಯೆಲ್ಲ ಝುಂ ಅಂತಾಗುತ್ತಿತ್ತು. ಅವರು ನಿಂತುಕೊಳ್ಳುವ ಸ್ಟೈಲ್ ಆಗಬಹುದು. ಅವರ ಅಭಿನಯ ಆಗಬಹುದು. ಟೈಗರ್ ಪ್ರಭಾಕರ್ ಹಾಗೂ ವಿಷ್ಣು ಸರ್ ಫೈಟ್ ಬಿದ್ದರೆ ಅದ್ಭುತ." ಎಂದು ವಿತರಕ ಮುನಿರಾಜು ಹೇಳಿದ್ದರು.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X