ಕನ್ನಡ ನಿರ್ದೇಶಕನಿಗೆ ಎಲ್‌ಟಿಟಿಇ ಸಂಪರ್ಕ ಸಿಕ್ಕಿದ್ದು ಹೇಗೆ? ಪ್ರಭಾಕರನ್ ಕುರಿತ ಸಿನಿಮಾ ಜಸ್ಟ್ ಮಿಸ್ ಆಗಿದ್ದೇಗೆ?
ಶ್ರೀಲಂಕಾದ ಸರ್ಕಾರಕ್ಕೆ ದುಸ್ವಪ್ನದಂತೆ ಕಾಡಿದ್ದ ಲಿಬರೇಷನ್ ಟೈಗರ್ಸ್ ಆಫ್ ತಮಿಳು ಇಲಂ (ಎಲ್‌ಟಿಟಿಇ)ನ ನಾಯಕ ವೇಲುಪಿಳ್ಳೈ ಪ್ರಭಾಕರನ್. ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯನ್ನು ಹತ್ಯೆಯ ಹಿಂದಿನ ರುವಾರಿ. ಶ್ರೀಲಂಕಾ ತಮಿಳು ಪ್ರತ್ಯೇಕವಾದಗಿದ್ದ ಪ್ರಭಾಕರನ್ ಅಲ್ಲಿನ ಸರ್ಕಾರದ ವಿರುದ್ಧ ಪ್ರತ್ಯೇಕ ರಾಷ್ಟ್ರಕ್ಕಾಗಿ ಹೋರಾಟ ಮಾಡುತ್ತಿದ್ದರು. ಸುಮಾರು 25 ವರ್ಷಗಳ ಕಾಲ ಶ್ರೀಲಂಕಾ ಸರ್ಕಾರದ ವಿರುದ್ಧ ಸೆಣೆಸಾಡಿದ ಪ್ರಭಾಕರನ್ 2009ರಲ್ಲಿ ಹತನಾಗಿದ್ದರು.
ಎಲ್‌ಟಿಟಿಇಯ ಮುಖಂಡ ಪ್ರಭಾಕರನ್ ಕುರಿತು ಹಲವು ಸಿನಿಮಾಗಳು ಈಗಾಗಲೇ ಬಂದಿವೆ. ಆದರೆ, 2006ರಲ್ಲಿ ಪ್ರಭಾಕರನ್ ಭೇಟಿ ಮಾಡಿ, ಅವರ ಕುರಿತು ಸಿನಿಮಾ ಮಾಡುವ ಪ್ರಯತ್ನ ನಡೆದಿತ್ತು. ಅದು ಕನ್ನಡದ ನಿರ್ದೇಶಕರೊಬ್ಬರು ಇಂತಹ ಸಾಹಸಕ್ಕೆ ಮುಂದಾಗಿದ್ದರು. ಎಲ್‌ಟಿಟಿಇ ಮುಖಂಡರನ್ನು ಸಂಪರ್ಕ ಮಾಡಿದ್ದರು. ಇನ್ನೇನು ಪ್ರಭಾಕರನ್ ಸಂದರ್ಶನ ಮಾಡಿ ಸಿನಿಮಾ ಮಾಡುವುದಕ್ಕೂ ವೇದಿಕೆ ರೆಡಿಯಾಗಿತ್ತು. ಆದರೆ, ಆ ಸಿನಿಮಾ ಸೆಟ್ಟೇರಲಿಲ್ಲ.

ಪ್ರಭಾಕರನ್ ಕುರಿತು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಾಕಷ್ಟು ಸಿನಿಮಾಗಳು ಬಂದು ಹೋಗಿವೆ. 2007ರಲ್ಲಿ 'ಲನ್‌ಹೋಲಿ ಗ್ರೌಂಡ್' ಎನ್ನುವ ಸಿನಿಮಾ ಬಂದಿತ್ತು. ಇದು ಶ್ರೀಲಂಕಾದ ಸಿವಿಲ್ ವಾರ್ ಕುರಿತ ಸಿನಿಮಾ ಆಗಿತ್ತು. 'ಪ್ರಭಾಕರನ್' ಎನ್ನುವ ಟೈಟಲ್ ಇಟ್ಟು ಶ್ರೀಲಂಕಾದ ಫಿಲ್ಮ್ ಮೇಕರ್ಸ್ ಸಿನಿಮಾ ಮಾಡಿದ್ದರು. 2014ರಲ್ಲಿ 'ಪುಲಿಪಾರ್ವೈ', 'ಸೇರುಂ ಪುಲಿ', 'ಮೆತಾಗು' ಅಂತಹ ಸಿನಿಮಾಗಳು ಬಂದಿವೆ. ಆದರೆ, ಈ ಎಲ್ಲಾ ಸಿನಿಮಾಗಳು ಬರುವುದಕ್ಕೂ ಮುನ್ನವೇ ಕನ್ನಡ ನಿರ್ದೇಶಕ ಎಎಂಆರ್ ರಮೇಶ್ 'ಪ್ರಭಾಕರನ್' ಕುರಿತು ಸಿನಿಮಾ ಮಾಡುವುದಕ್ಕೆ ಹೊರಟಿದ್ದರು.
ಪ್ರಭಾಕರನ್ ಸಂದರ್ಶನ ಮಾಡುವುಕ್ಕೆ ಬೇಕಿದ್ದ ಸಲಕ ಸಿದ್ಧತೆಗಳು ಆಗಿದ್ದವು. ಆದರೆ, ಚೆನ್ನೈ ಏರ್‌ಪೋರ್ಟ್‌ನಲ್ಲಿ ಅವರೊಬ್ಬರು ಸಿಕ್ಕಿ ಬೀಳದೆ ಹೋಗಿದ್ದಿದ್ದರೆ. ಈ ಎಲ್ಲಾ ಸಿನಿಮಾಗಳಿಗೂ ಮುನ್ನವೇ 'ಸೈನೈಡ್' ರೀತಿಯ ಮತ್ತೊಂದು ಸಿನಿಮಾ ರೆಡಿಯಾಗುತ್ತಿತ್ತೋ ಏನೋ? ಆದರೆ, ಅದೊಂದು ಘಟನೆ ಮತ್ತೆಂದೂ ಪ್ರಭಾಕರನ್ ಭೇಟಿಗೆ ಅವಕಾಶ ಸಿಗಲೇ ಇಲ್ಲ. ಅಷ್ಟಕ್ಕೂ ಎಎಂಆರ್ ರಮೇಶ್ ಎಲ್‌ಟಿಟಿಇ ಸಂಪರ್ಕಕ್ಕೆ ಬಂದಿದ್ದು ಹೇಗೆ? ಪ್ರಭಾಕರ್ ಕನ್ನಡ ನಿರ್ದೇಶಕನ ಭೇಟಿಗೆ ಒಪ್ಪಿದ್ದೇಕೆ? ಚೆನ್ನೈ ಏರ್‌ಪೋರ್ಟ್‌ನಲ್ಲಿ ಏನು ನಡೀತು? ಅನ್ನೋದನ್ನು ಫಿಲ್ಮಿಬೀಟ್ ಕನ್ನಡದ ಜೊತೆ ವಿಸ್ತಾರವಾಗಿ ಹಂಚಿಕೊಂಡಿದ್ದಾರೆ.
ಮುಂದೆ ಓದಿ
'ಸೈನೈಡ್' ಬಳಿಕ ಪ್ರಭಾಕರನ್ ಕುರಿತ ಸಿನಿಮಾ ಮುಂದಾಗಿದ್ದ ನಿರ್ದೇಶಕ
6 ತಿಂಗಳು ಎಲ್‌ಟಿಟಿಇ ಹಾಗೂ ಎಎಂಆರ್ ರಮೇಶ್ ನಡುವೆ ಮಾತುಕತೆ
ಎಎಂಆರ್ ರಮೇಶ್‌ಗೆ ಎಲ್‌ಟಿಟಿಇ ಮುಖಂಡರಿಂದ ಆಹ್ವಾನ
ಚೆನ್ನೈ ಏರ್‌ಪೋರ್ಟ್‌ನಲ್ಲಿ ಎಲ್‌ಟಿಟಿಇ ಬೆಂಬಲಿಗನ ಬಂಧನ
ರಾಜೀವ್ ಗಾಂಧಿ ಹತ್ಯೆ ಹಿನ್ನೆಲೆಯುಳ್ಳ 'ಸೈನೈಡ್' ಸಿನಿಮಾವನ್ನು ಎಎಂಆರ್ ರಮೇಶ್ ನಿರ್ದೇಶನ ಮಾಡಿದ್ದರು. ಅದು ರಿಲೀಸ್‌ಗೂ ಮುನ್ನವೇ ಈ ಸಿನಿಮಾ ಒಂದು ಕಾಪಿ ಎಲ್‌ಟಿಟಿಇ ಮುಖಂಡರ ಕೈ ಸೇರಿತ್ತು. ಅದರಲ್ಲಿ ಒಂದು ಸಂಭಾಷಣೆಯನ್ನು ತಿದ್ದುಪಡಿ ಮಾಡಬೇಕೆಂಬ ಒತ್ತಡ ಬಂದಿತ್ತು. ಅಲ್ಲಿಂದ ಎಲ್‌ಟಿಟಿಇ ಸದಸ್ಯರು ರಮೇಶ್ ಸಂಪರ್ಕಕ್ಕೆ ಸಿಕ್ಕಿದ್ದರು.
"ಸೈನೈಡ್ ಸಿನಿಮಾದಲ್ಲಿ ಒಂದು ಸೀನ್ ಇದೆ. ಅದರಲ್ಲಿ ಶುಭ ಆಯುಧಗಳನ್ನು ಕಳ್ಳತನ ಮಾಡಿದ್ದೀರ ಅಂತ ಇದೆ. ನಾವು ವಾರ್‌ನಲ್ಲಿ ವಶ ಪಡಿಸಿಕೊಂಡ್ವಿ ಅಂತ ಮಾಡುವುದಕ್ಕೆ ಆಗುತ್ತಾ ಅಂತ ಕೇಳಿದರು. ನಾನು ಮಾಡಿ ಕೊಡುತ್ತೇನೆ ಎಂದು ಹೇಳಿದೆ. ತಮಿಳಿನಲ್ಲಿ ಮಾತ್ರ ಬದಲಾವಣೆ ಮಾಡಿದ್ದೇನೆ. ಕನ್ನಡದಲ್ಲಿ ಹಾಗೆಯೇ ಉಳಿದಿದೆ. ನಾನು ಆ ಸೀನ್ ಅನ್ನು ಬದಲಾವಣೆ ಮಾಡಿಕೊಂಡ ಬಳಿಕ ಮತ್ತೇನು ಮಾಡಬೇಕು ಅಂತ ಇದ್ದೀರಾ ಅಂತ ಕೇಳಿದರು. ಆಗ ನಾನು ಹೇಳಿದೆ. ನೀವು ಪರ್ಮಿಷನ್ ಕೊಟ್ಟರೆ, ನನಗೆ ಒಂದು ಸಿನಿಮಾ ತುಂಬಾನೇ ಇಷ್ಟ. ಆತರ ಸಿನಿಮಾವನ್ನು ನಿಮಗೆ ಮಾಡಿಕೊಡುತ್ತೇನೆ. ನಿಮ್ಮ ಪ್ರಭಾಕರನ್ ಬಗ್ಗೆ ಸಿನಿಮಾ ಮಾಡಿಕೊಡುತ್ತೇನೆ ಅಂತ ಹೇಳಿದೆ. ಆವಾಗ ನೀವು ಇಲ್ಲಿಗೆ ಬರಬೇಕಾಗುತ್ತೆ ಅಂತ ಹೇಳಿದರು. ಈ ಮಾತುಕತೆ ಆರು ತಿಂಗಳು ನಡೀತು." ಎನ್ನುತ್ತಾರೆ ನಿರ್ದೇಶಕ ಎಎಂಆರ್ ರಮೇಶ್.

ಸಿನಿಮಾ ಮಾಡಲು ಅಭ್ಯಂತರವಿಲ್ಲ
ಎಎಂಆರ್ ರಮೇಶ್ ಎಲ್‌ಟಿಟಿಇ ಮುಖಂಡರೊಂದಿಗೆ ಮಾತುಕತೆ ನಡೆಸುತ್ತಿದ್ದರು. ಆಗ ಇವರ ಫೋನ್ ಅನ್ನು 'ರಾ' ಟ್ಯಾಪ್ ಮಾಡುತ್ತಿದೆ ಅಂತ ಅನಿಸಿತ್ತು. ಈ ವಿಷಯವನ್ನು ಅವರಿಗೂ ತಿಳಿಸಿದ್ದರು. "ಈ ಫೋನ್ ಟ್ಯಾಪ್ ಆಗುತ್ತಿರುತ್ತೆ. ರಾ ನವರು ನನ್ನ ಫೋನ್ ಅನ್ನು ಟ್ಯಾಪ್ ಮಾಡುತ್ತಿದ್ದಾರೆ. 9 ನಿಮಿಷಕ್ಕೆ ಇದು ಕಟ್ ಆಗುತ್ತೆ. ನಾನು ನಂಬರ್ ಬದಲಾಯಿಸುವುದಿಲ್ಲ. ನಾನು ಇದೇ ನಂಬರ್‌ನಲ್ಲಿ ಇರುತ್ತೇನೆ. ನಾನು ಯಾವಾಗ ಬೇಕಾದರೂ ಮಾತಾಡುತ್ತೇನೆ. ನೀವು ಏನು ಹೇಳಿದರೂ ಕೇಳುತ್ತೇನೆ ಎಂದು ಹೇಳಿದೆ." ಎನ್ನುತ್ತಾರೆ ರಮೇಶ್.
"ನೀವು ಒಬ್ಬ ಫಿಲ್ಮ್ ಮೇಕರ್ ಸಿನಿಮಾ ಮಾಡಿ. ನಮಗೆ ಏನೂ ಅಭ್ಯಂತರವಿಲ್ಲ. ಆದರೆ, ನಮ್ಮ ಬಗ್ಗೆ ತಿಳಿದುಕೊಂಡು ಸಿನಿಮಾ ಮಾಡಿ ಅಂತ ಹೇಳಿದ್ದರು. ಅದಕ್ಕೆ ನನಗೆ ಅವರು ಆಹ್ವಾನ ಕೊಟ್ಟಿದ್ದರು. 2006 ಕೊನೆಯಲ್ಲಿ ಅಲ್ಲಿ ಯುದ್ಧ ಶುರುವಾಗಿತ್ತು. 2009 ಮೇನಲ್ಲಿ ಅವರೆಲ್ಲರೂ ಸತ್ತು ಹೋಗುತ್ತಾರೆ. ದೊಡ್ಡ ವಾರ್ ಅದು. ಆಗ ಹೋಗುವುದಕ್ಕೆ ಆಗಲಿಲ್ಲ." ಎಂದು ಎಎಂಆರ್ ರಮೇಶ್ ನಿರಾಸೆ ವ್ಯಕ್ತಪಡಿಸಿದ್ದಾರೆ.
ಪ್ರಭಾಕರನ್‌ಗೆ 'ಒಮರ್ ಮುಖ್ತರ್' ಸಿನಿಮಾ ಇಷ್ಟ
ಎಎಂಆರ್ ರಮೇಶ್ ಅವರಿಗೆ ಇಷ್ಟವಾದ ಸಿನಿಮಾ ಒಮರ್ ಮುಖ್ತರ್. ಅಂತಹ ಒಂದು ಸಿನಿಮಾವನ್ನು ಪ್ರಭಾಕರನ್‌ಗೆ ಮಾಡಬೇಕು ಅಂತ ಆಸೆ ಪಟ್ಟಿದ್ದರು. ಅದನ್ನು ಎಲ್‌ಟಿಟಿಇ ಸದಸ್ಯರಿಗೆ ಹೇಳಿದ್ದರು. ಆಗಲೇ ರಮೇಶ್‌ಗೆ ಈ ಸಿನಿಮಾ ಪ್ರಭಾಕರನ್‌ಗೂ ಇಷ್ಟ ಇತ್ತು ಅಂತ ಗೊತ್ತಾಯ್ತು. ಪ್ರಭಾಕರನ್ ನೂರು ಬಾರಿ ಆ ಸಿನಿಮಾವನ್ನು ನೋಡಿದ್ದಾರೆಂದು ಹೇಳಿದ್ದರಂತೆ. ಹೀಗಾಗಿ ಎಎಂಆರ್ ರಮೇಶ್‌ಗೆ ಆಹ್ವಾನ ಕೊಟ್ಟಿದ್ದರು.
"ನನ್ನ ಬಗ್ಗೆ ಪ್ರಭಾಕರ್ ತಂಡವರಿಗೆ ಈಗ ಬದುಕಿರುವ ಎಲ್ಲರಿಗೂ ಗೊತ್ತಿತ್ತು. ನನ್ನ ಕರೆದಿದ್ದು, ನನ್ನನ್ನು ಮಾತಾಡಿಸಿದ್ದು ಪ್ರತಿಯೊಂದೂ ಗೊತ್ತಿದೆ. 2007ನಲ್ಲಿ ನನ್ನನ್ನು ಕರೆದುಕೊಂಡು ಹೋಗುವುದಕ್ಕೆ ಸ್ವಿಡ್ಜರ್‌ಲ್ಯಾಂಡ್‌ನಿಂದ ಇನ್ನೊಬ್ಬರು ಪ್ರಭಾಕರನ್ ಅಂತ ಬರುತ್ತಾರೆ. ನಾನು ಆಗ ಚೆನ್ನೈನಲ್ಲಿ ಇದ್ದೆ. ರಾಜೀವ್ ಗಾಂಧಿ ಹತ್ಯೆ ಕೇಸ್‌ನಲ್ಲಿದ್ದ ಸುಶೀಂದ್ರನ್ ನನ್ನ ಜೊತೆಯಲ್ಲಿ ಇದ್ದರು. ಆವಾಗ ಅಲ್ಲಿ ನನ್ನನ್ನು ಕರೆದುಕೊಂಡು ಹೋಗುವುದಕ್ಕೆ ಪ್ರಭಾಕರನ್ ಅಂತ ಬರುತ್ತಾರೆ. ಆಗ ನನ್ನ ಬಳಿ ಪಾಸ್‌ಪೋರ್ಟ್ ಇರುವುದಿಲ್ಲ. ಆಗ ನಾನು ಚೆನ್ನೈನಲ್ಲಿ ಇರುತ್ತೇನೆ. ಪಾಸ್ ಪೋರ್ಟ್ ಇದೆಯಾ ಟಿಕೆಟ್ ಬುಕ್ ಮಾಡುತ್ತೇನೆ ಎಂದರು. ಇಲ್ಲ ನನ್ನ ಪಾಸ್‌ಪೋರ್ಟ್ ಬೆಂಗಳೂರಿನಲ್ಲಿ ಇದೆ ಎಂದು ಹೇಳಿದೆ. ಕೂಡಲೇ ನನ್ನ ಪತ್ನಿಗೆ ಫೋನ್ ಮಾಡಿ, ರಾತ್ರೋ ರಾತ್ರಿ ಒಂದು ಬಸ್‌ನಲ್ಲಿ ಪಾಸ್‌ಪೋರ್ಟ್ ತರಿಸಿಕೊಳ್ಳುತ್ತೇನೆ. ಆಮೇಲೆ ಟಿಕೆಟ್ ಹಾಕುತ್ತಾರೆ." ಎಂದು ಆ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ಏರ್‌ಪೋರ್ಟ್‌ನಲ್ಲಿ ಅರೆಸ್ಟ್ ಆಗಿದ್ದೇಗೆ?
ರಮೇಶ್ ಟಿಕೆಟ್ ಬುಕ್ ಆದ್ಮೇಲೆ ಪ್ರಭಾಕರನ್ ನೋಡುವುದಕ್ಕೆ ರೆಡಿಯಾಗಿ ಏರ್‌ಪೋರ್ಟ್‌ಗೆ ಹೋಗುತ್ತಾರೆ. ಏರ್‌ಪೋರ್ಟ್‌ನಲ್ಲಿ ಜೊತೆಗೆ ಇದ್ದವರನ್ನು ಅರೆಸ್ಟ್ ಮಾಡುತ್ತಾರೆ. ಎಎಂಆರ್ ರಮೇಶ್ ಅವರನ್ನು ಅರೆಸ್ಟ್ ಮಾಡುವುದಿಲ್ಲ. ಆ ವ್ಯಕ್ತಿಯ ಪಕ್ಕದಲ್ಲೇ ಇದ್ದರೂ ಅರೆಸ್ಟ್ ಮಾಡುವುದಿಲ್ಲ. ಹೀಗಾಗಿ ಟಿಕೆಟ್ ಅವರೊಂದಿಗೆ ಉಳಿದುಕೊಂಡಿತ್ತು. ರಮೇಶ್ ಒಬ್ಬರೇ ಹೋಗುವುದಕ್ಕೆ ಆಗಲಿಲ್ಲ. ಎರಡು ದಿನ ಆದ್ಮೇಲೆ ರಮೇಶ್ ಜೊತೆಗೆ ಇದ್ದ ಎಲ್‌ಟಿಟಿಇ ಸದಸ್ಯನನ್ನು ಶ್ರೀಲಂಕಾಗೆ ಕಳಿಸದೆ, ಸ್ವಿಡ್ಜರ್‌ಲ್ಯಾಂಡ್‌ಗೆ ಕಳಿಸಿದ್ದರು ಎನ್ನುತ್ತಾರೆ ರಮೇಶ್.
"ಸ್ವಿಡ್ಜರ್‌ಲ್ಯಾಂಡ್‌ಗೆ ಹೋದ್ಮೇಲೆ ಅವರು ಫೋನ್ ಮಾಡಿದ್ದರು. ಆಗ ಅವರು ಇಲ್ಲ ನಾನು ಒಂದು ತಪ್ಪು ಮಾಡಿದೆ. ಕರುಣಾನಿಧಿ ಮನೆಯ ಹತ್ತಿರ ಹೋಗಿದ್ದೆ. ಆಗ ಅವರು ಮುಖ್ಯಮುಂತ್ರಿಯಾಗಿದ್ದರು. ಆಗ ಎಲ್‌ಟಿಟಿಇಯವರಿಗೆ ಒಂದು ಕೋಡ್ ಮೆಸೇಜ್ ಕಳಿಸಿದ್ದಾರೆ. ಪೇಷೆಂಟ್ ರೆಡಿಯಾಗಿದ್ದಾರೆ. ನೀವು ಆಂಬುಲೆನ್ಸ್ ರೆಡಿ ಮಾಡಿಕೊಳ್ಳಿ ಅಂತ ಹೇಳಿದ್ದಾರೆ. ಈ ಮೆಸೇಜ್‌ನಲ್ಲಿ ನಾನು ಪೇಷೆಂಟ್. ಆಂಬುಲೆನ್ಸ್ ರೆಡಿ ಮಾಡಿಕೊಳ್ಳಿ ಅಂದರೆ, ವಾಹನ ರೆಡಿ ಮಾಡಿಟ್ಟುಕೊಳ್ಳಿ ಅಂತ ಅರ್ಥ. ಆದರೆ, ಅದು ಬೇರೆ ರೀತಿ ಅರ್ಥ ಮಾಡಿಕೊಳ್ಳಲಾಯ್ತು. ಹೀಗಾಗಿ ಅವರು ಬಂಧನ ಆಗಿದ್ದರಿಂದ ನನಗೆ ಹೋಗುವುದಕ್ಕೆ ಆಗಲಿಲ್ಲ." ಎಂದು ನಿರ್ದೇಶಕ ರಮೇಶ್ ಹೇಳುತ್ತಾರೆ.
ಇಷ್ಟೆಲ್ಲ ಆದ್ಮೇಲೂ ಇಬ್ಬರ ನಡುವೆ ಮಾತುಕತೆ ಮುಂದುವರೆದಿತ್ತು. "ನನ್ನ ಮತ್ತು ಅವರ ನಡುವೆ ಕಮ್ಯೂನಿಕೇಷನ್ ನಡೆಯುತ್ತಲೇ ಇತ್ತು. ಆದರೆ, ಅಷ್ಟೊತ್ತಿಗಾಗಲೇ ವಾರ್ ಶುರುವಾಗಿತ್ತು. 2009ನಲ್ಲಿ ಪ್ರಭಾಕರನ್ ತೀರಿ ಹೋಗುತ್ತಾರೆ. ಅದಾದ್ಮೇಲೆ ಹಲವು ಬಾರಿ ಹೋಗಿದ್ದೀನಿ. ಸಾಕಷ್ಟು ಮೆಟಿರಿಯಲ್ ಕೊಡುತ್ತಾರೆ. ಅಷ್ಟೊತ್ತಿಗಾಗಲೇ ಸೈನೈಡ್ ರೆಡಿಯಾಗಿ ಒಳ್ಳೆಯ ಹೆಸರು ಬರುತ್ತೆ. ಅದಾದ್ಮೇಲೆ ಪ್ರೀಕ್ವೆಲ್ ಮಾಡುವುದಕ್ಕೆ ರೆಡಿಯಾಗುತ್ತೇನೆ. ರಾ ನಲ್ಲಿ ಇದ್ದವರು, ಸಿಬಿಐ ಎಲ್ಲರನ್ನೂ ಮಾತಾಡಿಸಿ ಇಟ್ಟುಕೊಂಡಿದ್ದೇವೆ. ಈಗ ಸೈನೈಡ್ ಪ್ರೀಕ್ವೆಲ್ ಮಾಡುವುದಕ್ಕೆ ರೆಡಿಯಾಗಿದ್ದೇವೆ." ಎನ್ನುತ್ತಾರೆ ಎಎಂಆರ್ ರಮೇಶ್.


Click it and Unblock the Notifications











