ಹೇಗಿದ್ದ ಹೇಗಾದ ಗೊತ್ತಾ? ಕರ್ನಾಟಕದ ಈ ಜನಪ್ರಿಯ ವ್ಯಕ್ತಿ ಯಾರು?
ಸೋಶಿಯಲ್ ಮೀಡಿಯಾ ಬಂದಾಗಿನಿಂದ ಸಿನಿಮಾ ತಾರೆಯರಷ್ಟೇ ಯೂಟ್ಯೂಬರ್ ಕೂಡ ಜನಪ್ರಿಯರಾಗಿದ್ದಾರೆ. ಯೂಟ್ಯೂಬ್‌ನಲ್ಲಿ ಇವರ ಹವಾ ಜೋರಾಗಿಯೇ ನಡೆಯುತ್ತಿದೆ. ತಮ್ಮ ವಿಭಿನ್ನ ಶೈಲಿಯಲ್ಲಿ ಯೂಟ್ಯೂಬ್ ಚಾನೆಲ್ ಅನ್ನು ತೆರೆದು ಜೀವನ ನಡೆಸುತ್ತಿರೋರಿಗೇನೂ ಕಮ್ಮಿಯಿಲ್ಲ. ಕರ್ನಾಟಕದಲ್ಲೂ ಇಂತಹ ಜನಪ್ರಿಯರ ಯೂಟ್ಯೂಬರ್‌ಗಳು ಇದ್ದಾರೆ.
ಕೆಲವರಂತೂ ಕನ್ನಡಿಗರ ನೆಚ್ಚಿನ ಯೂಟ್ಯೂಬರ್ ಆಗಿಬಿಟ್ಟಿದ್ದಾರೆ. ಅವರು ಹಾಕೋ ಒಂದೊಂದು ವಿಡಿಯೋವನ್ನು ತಪ್ಪದೇ ವೀಕ್ಷಿಸುತ್ತಾರೆ. ಇನ್ನೊಂದು ಕಡೆ ಅವರು ಹಾಕೋ ವಿಡಿಯೋನೂ ಕ್ಷಣಾರ್ಧದದಲ್ಲಿ ಲಕ್ಷಗಟ್ಟಲೆ ವೀವ್ಸ್ ಪಡೆದುಕೊಳ್ಳುತ್ತೆ. ಆ ಮಟ್ಟಿಗೆ ಜನರು ಯೂಟ್ಯೂಬರ್‌ಗಳ ವಿಡಿಯೋಗೆ ಫಿದಾ ಆಗಿದ್ದಾರೆ.

ಸದ್ಯಕ್ಕೆ ಇಂತಹದ್ದೇ ಒಬ್ಬ ಯೂಟ್ಯೂಬರ್‌ನ ಬಾಲ್ಯದ ಫೋಟೊ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಷ್ಟಕ್ಕೂ ಈ ಫೋಟೊದಲ್ಲಿರೋ ಜನಪ್ರಿಯರ ಯೂಟ್ಯೂಬರ್ ಯಾರು ಅಂತ ಗುರುತಿಸಬಲ್ಲಿರೇ? ಈ ಯೂಟ್ಯೂಬರ್ ಬಗ್ಗೆ ಗೊತ್ತಿರೋರು ಕಣ್ಮುಚ್ಚಿ ಕಣ್ಣು ಬಿಡುವುದರೊಳಗೆ ಗುರುತಿಸಿ ಬಿಡುತ್ತಾರೆ.
ಹೌದು, ನೀವು ಗೆಸ್ ಮಾಡಿದಂತೆ ಈ ಯೂಟ್ಯೂಬರ್ ಕರ್ನಾಟಕದ ಜನಪ್ರಿಯ ವ್ಯಕ್ತಿ ಡಾ.ಬ್ರೋ. ಹಣೆ ಮೇಲೆ ನಾಮವಿಟ್ಟುಕೊಂಡು ಕ್ಯಾಮರಾಗೆ ಪೋಸ್ ಕೊಟ್ಟಿರೋ ಈ ಫೋಟೊವನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗುತ್ತಿದೆ. ಇತ್ತೀಚೆಗೆ ಡಾ.ಬ್ರೋ ಸುತ್ತಮುತ್ತ ಕೆಲವು ವಿವಾದಗಳು ಸುತ್ತಿಕೊಂಡಿವೆ. ಇದೇ ವೇಳೆ ಡಾ.ಬ್ರೋ ಬಾಲ್ಯದ ಕೆಲವು ಫೋಟೊಗಳನ್ನು ಸೋಶಿಯಲ್ ವೀಡಿಯಾದಲ್ಲಿ ವೈರಲ್ ಮಾಡಲಾಗುತ್ತಿದೆ.
ಅಂದ್ಹಾಗೆ, ತಮ್ಮದೇ ಶೈಲಿಯಲ್ಲಿ 'ನಮಸ್ಕಾರ ದೇವ್ರು' ಅಂತಲೇ ಕನ್ನಡಿಗರನ್ನು ಸೆಳೆಯುತ್ತಿರುವ ಡಾ.ಬ್ರೋ ಅಸಲಿ ಹೆಸರು ಗಗನ್ ಶ್ರೀನಿವಾಸ್. 2018ರಲ್ಲಿ ಗಗನ್ ಶ್ರೀನಿವಾಸ್ ಯೂಟ್ಯೂಬ್ ಚಾನೆಲ್ ಅನ್ನು ಶುರು ಮಾಡಿದ್ದರು. ಆರಂಭದಲ್ಲಿ ಕರ್ನಾಟಕದ ಜನಪ್ರಿಯ ಸ್ಥಳಗಳಿಗೆ ಹೋಗಿ ವಿಡಿಯೋ ಮಾಡುತ್ತಿದ್ದರು. ಇಲ್ಲಿಂದ ದೇಶದ ಹಲವು ರಾಜ್ಯಗಳಿಗೆ ಭೇಟಿ ನೀಡುವುದಕ್ಕೆ ಶುರುವಿಟ್ಟುಕೊಂಡಿದ್ದರು.

'ನಮಸ್ಕಾರ ದೇವ್ರು' ಅಂತಲೇ ದೇಶದ ಸುಪ್ರಸಿದ್ಧ ಸ್ಥಳಗಳಿಗೆ ಭೇಟಿ ನೀಡುತ್ತಿದ್ದ ಯೂಟ್ಯೂಬರ್ ಡಾ.ಬ್ರೋ ಕನ್ನಡದಲ್ಲಿಯೇ ಆ ಸ್ಥಳಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದರು. ಕರ್ನಾಟಕ ಬಿಟ್ಟು, ಕೇರಳ, ಹಿಮಾಚಲ ಪ್ರದೇಶ, ಅಸ್ಸಾಂ, ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳನ್ನು ಸುತ್ತಿ, ಅಲ್ಲಿನ ಜನಪ್ರಿಯ ಸ್ಥಳಗಳನ್ನು ಕನ್ನಡಿಗರಿಗೆ ಪರಿಚಯಿಸಿದ್ದರು. ಇಲ್ಲಿ ಯಶಸ್ಸು ಸಿಗುತ್ತಿದ್ದಂತೆ ವಿದೇಶಕ್ಕೆ ಪಯಣ ಆರಂಭಿಸಿದ್ದರು.
ಡಾ.ಬ್ರೋ ಪಿಯುಸಿಯಲ್ಲಿ ಸೈನ್ಸ್ ತೆಗೆದುಕೊಂಡಿದ್ದರು. ಆದರೆ, ಮೊದಲ ವರ್ಷದಲ್ಲಿಯೇ ಡಾ.ಬ್ರೋ ಫೇಲ್ ಆಗಿದ್ದರು. ಹೀಗಾಗಿ ವಾಣಿಜ್ಯ ವಿಭಾಗಕ್ಕೆ ವರ್ಗಾವಣೆಯಾಗಿ, ಪದವಿಯನ್ನೂ ಮುಗಿಸಿದ್ದಾರೆ. ಪದವಿ ಮಾಡುವಾಗಲೇ ಯೂಟ್ಯೂಬ್ ಆರಂಭಿಸಿದ್ದ ಗಗನ್ ಶ್ರೀನಿವಾಸ್ (ಡಾ.ಬ್ರೋ) 2021 ಡಿಗ್ರಿ ಕಂಪ್ಲೀಟ್ ಮಾಡಿದ್ದರು. ಸದ್ಯಕ್ಕೀಗ ಡಾ.ಬ್ರೋ ಯೂಟ್ಯೂಬ್ ಚಾನೆಲ್‌ಗೆ 2.28 ಮಿಲಿಯನ್ ಚಂದಾದಾರರು ಇದ್ದಾರೆ. ಹಾಗೇ ಡಾ.ಬ್ರೋ ಶಾರ್ಟ್ಸ್ ಅನ್ನೋ ಚಾನೆಲ್ ಅನ್ನೂ ಆರಂಭಿಸಿದ್ದು, ಅದರಲ್ಲಿ 9 ಲಕ್ಷದ 29 ಸಾವಿರದ ಮಂದಿ ಚಂದಾದಾರರಿದ್ದಾರೆ.
ಡಾ.ಬ್ರೋ ಎಷ್ಟು ಫೇಮಸ್ ಆದರೂ, ವಿವಾದಗಳು ಕೂಡ ಹಾಗೇ ಇವರನ್ನು ಸುತ್ತಿಕೊಂಡಿದೆ. 'ವೀಕೆಂಡ್ ವಿಥ್ ರಮೇಶ್'ಗೆ ಡಾ. ಬ್ರೋ ಅನ್ನು ಕರೆಸಬೇಕು ಅನ್ನೋ ಸುದ್ದಿ ಹಬ್ಬಿತ್ತು. ಆ ವೇಳೆ ಜೀ ವಾಹಿಯ ಮುಖ್ಯಸ್ಥರು ನೀಡಿದ ಹೇಳಿಕೆ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗಿತ್ತು. ಇತ್ತೀಚೆಗೆ ಚೀನಾ ಹೋಗಿ ಅಲ್ಲಿನ ಬೆಳವಣಿಗಳ ಬಗ್ಗೆ ಮಾತಾಡಿದ್ದರು. ಅದಕ್ಕೂ ಭಾರತದಲ್ಲಿ ವಿರೋಧ ವ್ಯಕ್ತವಾಗಿತ್ತು. ಈಗ ಅಯೋಧ್ಯೆ ಹೋಗಿ ಅಲ್ಲಿನ ವಿಡಿಯೋ ಮಾಡಿ ಅಪ್‌ಲೋಡ್ ಮಾಡುತ್ತಿದ್ದಾರೆ. ಇದಕ್ಕೂ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications











