ಸ್ವತ: ರಾಜ್‌ಕುಮಾರ್ ಅವರೇ ಕೂತು ಬರೆಸಿದ್ದ ಆತ್ಮಚರಿತ್ರೆಯ ಯಾವುದು? ಈಗ ಅದು ಎಲ್ಲಿದೆ ಗೊತ್ತಾ?
ಕನ್ನಡ ಚಿತ್ರರಂಗ ಕಂಡ ಮೇರು ನಟ ಡಾ.ರಾಜ್‌ಕುಮಾರ್ ಅವರ ಬದುಕಿನ ಬಗ್ಗೆ ತಿಳಿಯ ವಿಷಯವೇನಿಲ್ಲ. ಅದೆಷ್ಟೋ ಲೇಖಕರು ಅವರ ಬಗ್ಗೆ ಸಾಕಷ್ಟು ವಿಷಯಗಳನ್ನು ತಮ್ಮ ಬರವಣಿಗೆಯಲ್ಲಿ ಇಳಿಸಿದ್ದಾರೆ. ಅದೆಷ್ಟೋ ಬಯೋಗ್ರಫಿಗಳು ಈಗಾಗಲೇ ಬಂದಿವೆ. ಅದೆಷ್ಟೋ ಮಂದಿ ಲೇಖಕರು ವರನಟನನ್ನು ವಿಭಿನ್ನವಾಗಿ ಬಿಂಬಿಸಿದ್ದಾರೆ. ಮತ್ತೆ ಕೆಲವು ಲೇಖಕರು ಅಣ್ಣಾವ್ರ ಜರ್ನಿ ವಿಭಿನ್ನ ದೃಷ್ಠಿಕೋನದಲ್ಲೂ ಕಂಡಿದ್ದಾರೆ.
ಆದರೆ, ಅಣ್ಣಾವ್ರೇ ಸ್ವತ: ಕೂತು ತಮ್ಮ ಆತ್ಮಕಥೆಯನ್ನು ಬರೆಸಿದ್ದಾರೆ ಅನ್ನೋದು ಬಹುತೇಕ ಮಂದಿಗೆ ಗೊತ್ತಿರಲಿಕ್ಕಿಲ್ಲ. ಹೌದು, ಇಂತಹದ್ದೊಂದು ಪ್ರಯತ್ನ 80ರ ದಶಕದಲ್ಲಿ ನಡೆದಿದೆ. ಅದು ಸೀರಿಸ್ ರೂಪದಲ್ಲಿ ಪ್ರಕಟವಾಗಿ ಕೂಡ. ಈ ವಿಷಯ ಬಹುತೇಖ ಮಂದಿಗೆ ಗೊತ್ತಿರಲಿಕ್ಕೆ ಸಾಧ್ಯವಿಲ್ಲ. ಹಾಗಾಗಿ ಈ ಅಣ್ಣಾವ್ರೇ ಕೂತು ಬರೆಸಿದ ಆತ್ಮಚರಿತ್ರೆಯನ್ನು ಮತ್ತೆ ಹೊರ ತರುವ ಪ್ರಯತ್ನ ನಡೆಯುತ್ತಿದೆ.

ಲೇಖಕ ಹಾಗೂ ಅಣ್ಣಾವ್ರ ಕುಟುಂಬಕ್ಕೆ ಆತ್ಮೀಯರಾಗಿರುವ ಪ್ರಕಾಶ್ ರಾಜ್ ಮೇಹು ಟ್ಯೂಟಲ್ ಕನ್ನಡ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದಾರೆ. ಈ ವೇಳೆ ಅಣ್ಣಾವ್ರ ಬರೆಸಿದ ಆತ್ಮಚರಿತ್ರೆ ಬಗ್ಗೆ ಸ್ವಾರಸ್ಯಕರ ಸಂಗತಿಯನ್ನು ಆ ಸಂದರ್ಶನದಲ್ಲಿ ತಿಳಿಸಿದ್ದಾರೆ. ಅಣ್ಣಾವ್ರು ಆತ್ಮಚರಿತ್ರೆಯನ್ನು ಯಾವಾಗ ಬರೆಸಿದ್ದರು? ಅದನ್ನು ಬರೆದಿದ್ದು ಯಾರು? ಅದೀಗ ಎಲ್ಲಿ ಇದೆ? ಇಂತಹ ಇಂಟ್ರೆಸ್ಟಿಂಗ್ ವಿಷಯವನ್ನು ಬಿಚ್ಚಿಟ್ಟಿದ್ದಾರೆ.
1991ರಲ್ಲಿ ಶುರುವಾಗಿರುವ ಹಂಪಿ ವಿಶ್ವವಿದ್ಯಾನಿಲಯದಲ್ಲಿ ರಾಜ್‌ಕುಮಾರ್ ಅಧ್ಯಯನ ಪೀಠ ಸ್ಥಾಪಿಸಲಾಗಿದೆ. ಇದು 2006 ರಿಂದ ಚಾಲನೆಯಲ್ಲಿದೆ. ಇದಕ್ಕೆ ಲೇಖಕ ಪ್ರಕಾಶ್ ರಾಜ್ ಮೇಹು ಅವರು ಕಳೆದ ಒಂದು ವರ್ಷದಿಂದ ಸಲಹಾ ಸಮಿತಿ ಸದಸ್ಯನಾಗಿದ್ದಾರೆ. ಇಲ್ಲಿ ಯೂನಿವರ್ಸಿಟಿ ಲೆವೆಲ್‌ನಲ್ಲಿ ರಾಜ್‌ಕುಮಾರ್ ಅವರ ಬಗ್ಗೆ ಪುಸ್ತಕ ತರಬೇಕು ಅನ್ನೋ ಪ್ರಯತ್ನ ನಡೆಯುತ್ತಿದ್ದು ಅದಕ್ಕಾಗಿ ಕಾರ್ಯೋನ್ಮುಖರಾಗಿದ್ದಾರೆ.

"ರಾಜ್‌ಕುಮಾರ್ ಅವರ ಬಗ್ಗೆ ನೂರಾರು ಪುಸ್ತಕಗಳು ಬಂದಿವೆ. ಆದರೆ ಯೂನಿವರ್ಸಿಟಿ ಲೆವೆಲ್‌ನಲ್ಲಿ ತಂದಾಗ ಅದರ ಪರಿಧಿನೇ ಬೇರೆಯಾಗುತ್ತೆ. ಆ ಕಾರಣಕ್ಕೆ ರಾಜ್‌ಕುಮಾರ್ ಅವರ ವೈಯಕ್ತಿಕ ಬದುಕು, ಮತ್ತೆ ರಾಜ್‌ಕುಮಾರ್ ಅವರ ಸಿನಿಮಾ ಜೀವನ, ಎರಡು ಪುಸ್ತಕಗಳನ್ನು ತರಬೇಕು ಅಂತ ಚರ್ಚೆ ನಡೀತು. ನನಗೆ ಮೀಟಿಂಗ್‌ನಲ್ಲಿ ರಾಜ್‌ಕುಮಾರ್ ಅವರ ವೈಯಕ್ತಿಕ ಬದುಕನ್ನು ನೀವು ಬರೆಯಿರಿ ಅಂತ ನನಗೆ ಹೇಳಿದರು. ನಾನು ಆ ಹೇಳಿದೆ ನಾನೇ ಬರೀಲಿ, ಇನ್ಯಾರೇ ಬರೀಲಿ. ಮತ್ತೆ ಅದದೇ ವಿಚಾರಗಳನ್ನು ಬರೆಯಬೇಕಾಗುತ್ತೆ. ಅದರ ಬದಲು ಅಣ್ಣಾವ್ರೇ ಕೂತು ಬರೆಸಿದ ಆತ್ಮಚರಿತ್ರೆಯಿದೆ" ಎಂದು ಪ್ರಕಾಶ್ ರಾಜ್ ಮೇಹು ಸಲಹೆ ನೀಡಿದ್ದರು.
ಸ್ವತ: ರಾಜ್‌ಕುಮಾರ್ ಅವರೇ ಕೂತು ತಮ್ಮ ಆತ್ಮಕಥೆಯನ್ನು ಬರೆಸಿದ್ದರು. ಅದು ಪತ್ರಿಕೆಯಲ್ಲೂ ಪ್ರಕಟ ಆಗಿತ್ತು. ಅದನ್ನೆಲ್ಲ ಸಂಗ್ರಹಿಸಿ ಆತ್ಮಚರಿತ್ರೆಯನ್ನು ಮಾಡಬಹುದು ಎಂದು ಪ್ರಕಾಶ್ ರಾಜ್ ಮೇಹು ಅವರು ಸಲಹೆಯನ್ನು ನೀಡಿದ್ದರು. ಅದಕ್ಕೆ ಒಪ್ಪಿದ ಕಮಿಟಿಯೀಗ ಆ ಲೇಖನಗಳನ್ನು ಸಂಗ್ರಹಿಸುವುದಕ್ಕೆ ಮುಂದಾಗಿದೆ. ಆ ಆತ್ಮಚರಿತ್ರೆಯ ಹೆಸರು 'ಕಥನಾಯಕ ಕಥೆ'.
"ಕಥನಾಯಕನ ಕಥೆ ಅಂತ ರಾಜ್‌ಕುಮಾರ್ ಸ್ವತ: ಕುಳಿತು ಬರೆಸಿರುವಂತಹ ಒಂದು ಜೀವನ ಚರಿತ್ರೆಯಿದೆ. ಅದು 'ವಿಜಯ ಚಿತ್ರ'ದಲ್ಲಿ 80ನೇ ದಶಕದಲ್ಲಿ ಬಂದಿತ್ತು. ಅದು ಎಲ್ಲೂ ಪುಸ್ತಕ ರೂಪದಲ್ಲಿ ಇಲ್ಲ. ಹಾಗಾಗಿ ಆಗಿನ ಹಳೇ ಕಾಲದಲ್ಲಿ ಸಂಗ್ರಹಿಸಿಕೊಂಡಿರುವುದನ್ನು ಬಿಟ್ಟರೆ, ನನಗೆ ಈಗ ಓದಬೇಕು ಅಂತ ಬಯಸಿದರೆ ಸಿಗುವುದಿಲ್ಲ. ಹಾಗಾಗಿ ಅದನ್ನೇ ಪ್ರಕಟಿಸಿದರೆ ಅದೇ ಉತ್ತಮ. ಅಂತ ಹೇಳಿದ್ದೇನೆ" ಎಂದಿದ್ದಾರೆ.
ಆದರೆ, ಆ ಸಂಚಿಕೆಗಳು ಎಲ್ಲರ ಬಳಿಯೂ ಇಲ್ಲ. ಅದನ್ನು ಹುಡುಕುವುದೇ ದೊಡ್ಡ ಸವಾಲಿನ ಕೆಲಸ ಆಗಿದೆ. "ಎಲ್ಲಾ ಸಂಚಿಕೆಗಳು ಇನ್ನೂ ನಮಗೆ ಸಿಕ್ಕಿಲ್ಲ. ನಾವು ಎಲ್ಲೆಲ್ಲೋ ಸಂಗ್ರಹ ಮಾಡುತ್ತಿದ್ದೇವೆ. ಒಂದಷ್ಟು ಸಿಕ್ಕಿದೆ. ಇನ್ನೊಂದಿಷ್ಟು ಸಿಗಬೇಕಾಗಿದೆ. ಒಟ್ನಲ್ಲಿ ಅದರ ಪ್ರಯತ್ನವಂತೂ ನಡೆಯುತ್ತಿದೆ. ಇತ್ತೀಚೆಗೆ ತೀರಿಕೊಂಡ ಚಿ.ಉದಯ ಶಂಕರ್ ಅವರ ಸಹೋದರ ಚಿ.ದತ್ತುರಾಜ್ ಅವರು ಬರೆದಿದ್ದಾರೆ. ಹಾಗಾಗಿ ಇದು ಒಂಥರಾ ಆಟೋ ಬಯೋಗ್ರಫಿ ಅಂತಲೇ ಲೆಕ್ಕ" ಎಂದು ಪ್ರಕಾಶ್ ರಾಜ್ ಮೇಹು ಹೇಳುತ್ತಾರೆ. ಇದು ಪುಸ್ತಕ ರೂಪಕ್ಕೆ ಬಂದರೆ, ಡಾ.ರಾಜ್‌ಕುಮಾರ್ ಅವರೇ ಹೇಳಿದ ಜೀವನ ಚರಿತ್ರೆ ಸಿಗುತ್ತೆ.


Click it and Unblock the Notifications











