ಎಲ್ಲಾ ಆಂಗಲ್‌ನಲ್ಲೂ ಸುಂದರವಾಗಿ ಕಾಣುವ ನಟ ಯಾರು? ಕೊಡಾಕ್ ಫಿಲ್ಮ್ಸ್ ಸರ್ವೆಯಲ್ಲಿ ಗೆದ್ದಿದ್ದು ವಿಷ್ಣುದಾದ
ಕನ್ನಡ ಚಿತ್ರರಂಗ ಕಂಡ ಮೇರು ನಟರಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ಕೂಡ ಒಬ್ಬರು. ವಿಷ್ಣುದಾದ ನಟನೆಯಿಂದಷ್ಟೇ ಅಭಿಮಾನಿಗಳನ್ನು ಹೊಂದಿರಲಿಲ್ಲ. ಅವರು ಕನ್ನಡ ಚಿತ್ರರಂಗದ ಅತೀ ಸುಂದರ ನಟ. ಹೀಗಾಗಿ ಸಾಹಸ ಸಿಂಹನಿಗೆ ವಿಶ್ವದ ಮೂಲೆ ಮೂಲೆಯಲ್ಲಿರುವ ಕನ್ನಡಿಗರು ಫ್ಯಾನ್ ಆಗಿದ್ದರು. ಈ ನಟನ ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಮಹಿಳೆಯರು ಮೊದಲು ಚಿತ್ರರಂಗಕ್ಕೆ ನುಗ್ಗುತ್ತಿದ್ದರು.
'ನಾಗರಹಾವು' ಸಿನಿಮಾ ವಿಷ್ಣುವರ್ಧನ್ ವೃತ್ತಿ ಬದುಕನ್ನೇ ಬದಲಿಸಿತ್ತು. ಪುಟ್ಟನ್ಣ ಕಣಗಾಲ್ ನಿರ್ದೇಶಿಸಿದ್ದ ಈ ಸಿನಿಮಾ ಕನ್ನಡ ಚಿತ್ರರಂಗಕ್ಕೆ ಒಬ್ಬ ಹೊಸ ಹೀರೋನಾ ಕೊಟ್ಟಿತ್ತು. ಅಲ್ಲಿಂದ ಮತ್ತೆ ಸಾಹಸ ಸಿಂಹ ತಿರುಗು ನೋಡಲೇ ಇಲ್ಲ. 70ರ ದಶಕದಲ್ಲಿ ಕನ್ನಡ ಚಿತ್ರರಂಗಕ್ಕೆ ಸುಂದರ ನಟನೊಬ್ಬ ಬೇಕಿತ್ತು. ಆಗ ಸಿನಿಮಾವನ್ನೇ ಸಂಪತ್ ಕುಮಾರ್ ಅಲಿಯಾಸ್ ವಿಷ್ಣುವರ್ಧನ್.

ಹಳೆ ನಟರೇ ಇರಲಿ.. ಹೊಸ ನಟರೇ ಬರಲಿ ಎಲ್ಲರೂ ವಿಷ್ಣುವರ್ಧನ್ ಅಂತ್ಯ ಸುಂದರ ನಟ ಅನ್ನೋದನ್ನು ಒಮ್ಮನಸಿನಿಂದ ಒಪ್ಪಿಕೊಂಡಿದ್ದಾರೆ. ವಿಷ್ಣುವರ್ಧನ್ ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದಾಗ ಕೊಡಾಕ್ ಫಿಲ್ಮ್ಸ್ ಕಂಪನಿ ಒಂದು ಸರ್ವೆ ಮಾಡಿತ್ತು. ಎಲ್ಲಾ ಆಂಗಲ್‌ನಿಂದ ನೋಡಿದರೂ ಸುಂದರವಾಗಿ ಕಾಣುವ ಭಾರತೀಯ ಚಿತ್ರರಂಗದ ಹೀರೋ ಯಾರು? ಎಂದು ಕೇಳಿತ್ತು. ಆಗ ಒಕ್ಕೊರಲಿನಿಂದ ಸಿಕ್ಕಿದ ಉತ್ತರವೇ ವಿಷ್ಣುವರ್ಧನ್. ಹಾಗಿದ್ದರೆ, ಏನಿ ಕೊಡಾಕ್ ಸರ್ವೆ? ಇದನ್ನು ಹೇಳಿದ್ದರು ಯಾರು ತಿಳಿಯುವುದಕ್ಕೆ ಮುಂದೆ ಓದಿ.
ವಿಷ್ಣುವರ್ಧನ್ ರಂಗಭೂಮಿಯಿಂದ ಬಂದವರು. ನಟನೆ ಮಾಡುವುದು ಅವರ ಬಹು ದಿನಗಳ ಕನಸಾಗಿತ್ತು. ಇದೇ ಸಮುಯದಲ್ಲಿ ಪುಟ್ಟಣ್ಣ ಕಣಗಾಲ್ 'ನಾಗರಹಾವು' ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದರು. ಆಗ ಅವರ ಕಣ್ಣೀಗೆ ಬಿದ್ದಿದ್ದ ನಟ ಮುಂದೆ ಕರ್ನಾಟಕದ ಅದೆಷ್ಟೋ ಹೆಂಗಳೆಯರ ಡ್ರೀಮ್ ಭಾಯ್ ಆಗಿದ್ದರು. ಆಮಟ್ಟಿಗೆ ವಿಷ್ಣುವರ್ಧನ್ ಸೌಂದರ್ಯ ಹುಡುಗಿಯರನ್ನು ಸೆಳೆದಿತ್ತು.
ಸಾಹಸ ಸಿಂಹನ ಕಾಲದಲ್ಲಿ ಸಿನಿಮಾವನ್ನು ಶೂಟಿಂಗ್ ಮಾಡುವುದಕ್ಕೆ ನೆಗೆಟಿವ್‌ಗಳನ್ನು ಬಳಸುತ್ತಿದ್ದರು. ಆ ನೆಗೆಟಿವ್‌ಗಳನ್ನು ಚಿತ್ರರಂಗಕ್ಕೆ ಸಪ್ಲೆ ಮಾಡುತ್ತಿದ್ದಿದ್ದು ಕೊಡಾಕ್ ಸಂಸ್ಥೆ.ಇನ್ನೊಂದು ಕಡೆ ಸಾಮಾನ್ಯ ಜನರು ಬಳಸಿತ್ತಿದ್ದ ಕ್ಯಾಮರಾದಲ್ಲೂ ಕೂಡ ಇದೇ ಕೊಡಾಕ್ ಫಿಲ್ಮ್ ಅನ್ನೇ ಬಳಸುತ್ತಿದ್ದರು. ಆಗ ಫೀಕ್‌ನಲ್ಲಿದ್ದ ಕೊಡಾಕ್ ಸಂಸ್ಥೆ ಒಂದು ಸರ್ವೆ ಮಾಡುವುದಕ್ಕೆ ಮುಂದಾಗಿತ್ತು. ಭಾರತದಲ್ಲಿ ಯಾವುದೇ ಕಡೆಯಿಂದ ನೋಡಿದರೂ ಸುಂದರವಾಗಿ ಕಾಣುವ ನಟ ಯಾರು? ಎಂದು ಸರ್ವೆ ಮಾಡುವುದಕ್ಕೆ ಮುಂದಾಗಿತ್ತು. ಆಗ ವಿಷ್ಣುವರ್ಧನ್ ಅಗ್ರಸ್ಥಾನದಲ್ಲಿ ನಿಂತಿದ್ದರು.

ಕೊಡಾಕ್ ಫಿಲ್ಮ್ಸ್ ಕಂಪನಿ ಇಂತಹದ್ದೊಂದು ಸರ್ವೆ ಮಾಡಿತ್ತು ಅನ್ನೋದು ಬಹುದೇ ಮಂದಿಗೆ ಗೊತ್ತಿಲ್ಲ. ಇಂತಹದ್ದೊಂದು ಇಂಟ್ರೆಸ್ಟಿಂಗ್ ವಿಷಯವನ್ನು ವಿಷ್ಣುದಾದ ಜೊತೆ ನಟಿಸಿದ ಅಂದಿನ ಕಾಲದ ನಾಯಕ ನಟಿ ವಿನಯ ಪ್ರಸಾದ್ ಅವರೇ ಹೇಳಿದ್ದರು. ಸೃಜನ್ ಲೋಕೇಶ್ ನಡೆಸಿಕೊಡುತ್ತಿದ್ದ 'ಮಜಾ ಟಾಕೀಸ್'ಗೆ ಅತಿಥಿಯಾಗಿ ಬಂದಿದ್ದ ವಿನಯ ಪ್ರಸಾದ್ ಈ ವಿಷಯವನ್ನು ರಿವೀಲ್ ಮಾಡಿದ್ದರು.
"ಕೊಡಾಕ್ ಫಿಲ್ಮ್ಸ್ ಅವರು ಒಂದು ಸರ್ವೆ ಮಾಡಿದ್ದರು. ಯಾವ ಆಂಗಲ್‌ನಿಂದ ನೋಡಿದರೂ ಕೂಡ ತುಂಬಾ ಸುಂದರವಾಗಿ ಕಾಣುವಂತಹ ಹೀರೋ ಯಾರು ಅಂತ. ಆ ಹೀರೋ ವಿಷ್ಣುವರ್ಧನ್ ಅವರು." ಎಂದು ಸೃಜನ್ ಲೋಕೇಶ್ ಕೇಳಿದ ಪ್ರಶ್ನೆಗೆ ಕನ್ನಡ ಚಿತ್ರರಂಗದ ಹಿರಿಯ ನಟಿ ವಿನಯ ಪ್ರಸಾದ್ ಹೇಳಿದ್ದರು. ಇದೇ ಸಂಚಿಕೆಯಲ್ಲಿ ಗಿರಿಜಾ ಲೋಕೇಶ್ ಅವರೂ ಭಾಗವಹಿಸಿದ್ದರು. ಅವರೂ ಕೂಡ "ನಮ್ಮ ಕಾಲದಲ್ಲಿ ಅವರನ್ನು ರೊಮ್ಯಾಂಟಿಕ್ ಹೀರೋ ಅಂತ ಕರೆಯುತ್ತಿದ್ವಿ." ಎಂದು ವಿಷ್ಣುದಾದನ ಗುಣಗಾನ ಮಾಡಿದ್ದಾರೆ.


Click it and Unblock the Notifications











