ಫಸ್ಟ್ ರ್‍ಯಾಂಕ್‌ ಬರುತ್ತಿದ್ದ ಅನಂತ್ ನಾಗ್ 9ನೇ ಕ್ಲಾಸ್‌ನಲ್ಲಿ ಫೇಲ್; ಆ ವಯಸ್ಸಲ್ಲಿ ಅಂತಹದ್ದೇನಾಯ್ತು?

ಕನ್ನಡ ಚಿತ್ರರಂಗ ಕಂಡ ಹ್ಯಾಂಡ್‌ಸಮ್ ಹೀರೋಗಳಲ್ಲಿ ಅನಂತ್‌ ನಾಗ್ ಕೂಡ ಒಬ್ಬರು. ಅಭಿಮಾನಿ ಸಂಘ ಕಟ್ಟಿಕೊಳ್ಳದೆ, ತನ್ನ ಪ್ರತಿಭೆಯಿಂದಲೇ ಫ್ಯಾನ್ಸ್ ಅನ್ನು ಸಂಪಾಧಿಸಿದ ನಟ ಅನಂತ್‌ ನಾಗ್. ಅಷ್ಟೇ ಕನ್ನಡ ಚಿತ್ರರಂಗದ ಕಂಡಿರುವ ಅತ್ಯಂತ ಪ್ರಬುದ್ಧ ನಟರಿವರು. ಅನಂತ್ ಅವರನ್ನು ಹ್ಯಾಂಡಲ್‌ ಮಾಡುವುದು ಕಷ್ಟ ನಿಜ. ಆದರೆ, ಅವರ ಸಿನಿಮಾಗಳು ಇಂದಿಗೂ ಪ್ರಸ್ತುತ.

ಅನಂತ್‌ ನಾಗ್ ಎಲ್ಲಾ ನಟರಂತೆ ಅಲ್ಲ. ಅವರ ದಾರಿನೇ ಬೇರೆ. ಡ್ಯಾನ್ಸ್ ಮಾಡೋದು, ಫೈಟ್ ಮಾಡೋದು ಅಂದರೆ ದೂರ. ಅದೆಷ್ಟೇ ಸಂಭಾವನೆ ಕೊಡಲು ನಿರ್ಮಾಪಕರು ಮುಂದಾದರೂ ಆ ಸಿನಿಮಾವನ್ನೇ ಕೈ ಬಿಡಲು ಹಿಂದೇಟು ಹಾಕುತ್ತಿರಲಿಲ್ಲ. ಸಿನಿಮಾಗಳ ಆಯ್ಕೆಯಲ್ಲಿ ಅನಂತ್‌ ನಾಗ್ ಆ ಮಟ್ಟಿಗೆ ಕಟ್ಟು ನಿಟ್ಟು.

Kannada legendary actor Ananth Nag failed in class 9th due to this reason

ಅನಂತ್‌ನಾಗ್ ಸಿನಿಮಾ ಬಗ್ಗೆ ಈಗಾಗಲೇ ಸಾಕಷ್ಟು ವಿಷಯಗಳು ಗೊತ್ತು. ಆದರೆ, ಅವರ ಬಾಲ್ಯ ಹೇಗಿತ್ತು? ಶಿಕ್ಷಣ ಪಡೆದಿದ್ದು ಎಲ್ಲಿ? ಅನ್ನೋ ವಿಷಯಗಳು ಸಿಗುವುದು ವಿರಳ. ಅನಂತ್‌ ನಾಗ್‌ರನ್ನು ತೀರಾ ಹತ್ತಿರದಿಂದ ಬಲ್ಲ ಹಿರಿಯ ಪತ್ರಕರ್ತ ಎನ್‌ ಎಸ್‌ ಶ್ರೀಧರಮೂರ್ತಿಗಳು ಅನಂತ್‌ ನಾಗ್‌ ಬಾಲ್ಯದ ಬಗ್ಗೆ ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

"ಅನಂತ್‌ನಾಗ್ ಅವರ ವ್ಯಕ್ತಿತ್ವದ ಮೇಲೆ ಶಿರಾಲಿ ಮಠದಲ್ಲಿ ಬಾಲ್ಯದ ಕಳೆದಿದ್ದರು. ಅಲ್ಲಿ ಹೋಮ-ಹವನ, ಭಗವದ್ಗೀತೆಯ ಗಾಯನ ಎಲ್ಲವೂ ಪ್ರಭಾವವನ್ನು ಬೀರುತ್ತೆ. ಅನಂತ್‌ನಾಗ್ ಅಸ್ಖಲಿತವಾಗಿ ರುಧ್ರವನ್ನು ಹೇಳಬಲ್ಲರು. ಇದೆಲ್ಲವೂ ಅವರಿಗೆ ಬಾಲ್ಯದಲ್ಲಿಯೇ ಸಿಕ್ಕಿರುವಂತಹ ತರಬೇತಿಯಿಂದಲೇ ಕಾರಣ." ಎಂದು ಹಿರಿಯ ಪತ್ರಕರ್ತ ಎನ್‌.ಎಸ್ ಶ್ರೀಧರ ಮೂರ್ತಿ ಮಾಹಿತಿ ನೀಡಿದ್ದಾರೆ.

ಅನಂತ್ ನಾಗ್ ತಂದೆ ಶಿರಾಲಿ ಮಠದ ಮ್ಯಾನೇಜರ್ ಆಗಿದ್ದರು. ಹೀಗಾಗಿ ಅಲ್ಲಿಯೇ ಅನಂತ್ ನಾಗ್ ಅವರ ಪ್ರಾಥಮಿಕ ಶಿಕ್ಷಣ ಸಾಗಿತ್ತು. "ಶಿರಾಲಿಯಲ್ಲಿ 7ನೇ ತರಗತಿವರೆಗೆ ಅನಂತ್‌ನಾಗ್ ಅವರು ಓದಿದರು. ಅಲ್ಲಿಂದ ಮುಂದಕ್ಕೆ ಶಿರಾಲಿಯಲ್ಲಿ ಓದುವುದಕ್ಕೆ ಅವಕಾಶವಿರಲಿಲ್ಲ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅವರ ತಂದೆ ಹೊನ್ನಾವರದಲ್ಲಿ ಮನೆ ಮಾಡಿದರು. ಅವರ ಅಕ್ಕ ಅನಂತ್‌ನಾಗ್ ಅವರಿಗಿಂತ ನಾಲ್ಕು ವರ್ಷ ದೊಡ್ಡವರು. ತಮ್ಮ ಶಂಕರ್‌ನಾಗ್ 6 ವರ್ಷ ಚಿಕ್ಕವನು. ಹೀಗಾಗಿ ಈ ಮೂವರ ಶಿಕ್ಷಣಕ್ಕೆ ಅನುಕೂಲ ಆಗುವಂತೆ ಹೊನ್ನಾವರದ ಶಾಲೆಗೆ ಸೇರಿಸಿದರು." ಎನ್ನುತ್ತಾರೆ.

Kannada legendary actor Ananth Nag failed in class 9th due to this reason

ಅಲ್ಲಿ ಅನಂತ್‌ನಾಗ್‌ ಅವರಿಗೆ ಕಿರಿಕಿರಿ ಆಗುತ್ತೆ. ಯಾಕಂದ್ರೆ ಅಲ್ಲಿನ ಶಾಲೆಗೆ ಖಡ್ಡಾಯವಾಗಿ ಟೋಪಿ ಹಾಕಿಕೊಂಡು ಹೋಗಬೇಕಿತ್ತು. ಅನಂತ್‌ನಾಗ್ ಟೋಪಿ ಹಾಕಿಕೊಳ್ಳುವುದು ಬಹಳ ಕಿರಿ ಕಿರಿ ಅಂತ ಅನಿಸುತ್ತಿತ್ತು. ಅಲ್ಲಿ ಅನಂತ್ ನಾಗ್ ರ್‍ಯಾಂಕ್‌ ಬರುತ್ತಿದ್ದರು. ಆದರೂ 9ನೇ ತರಗತಿಗೆ ಬರುವ ಹೊತ್ತಿಗೆ ಫೇಲ್ ಆಗಿಬಿಟ್ಟರು ಅದ್ಯಾಕೆ ಅನ್ನೋದನ್ನು ಶ್ರೀಧರ್ ಅವರು ಹೇಳುತ್ತಾರೆ.

"ಏಳನೇ ತರಗತಿವರೆಗೂ ಅನಂತ್‌ನಾಗ್ ಒಂದು ಅಥವಾ ಎರಡನೇ ರ್‍ಯಾಂಕ್‌ ಬರುತ್ತಿದ್ದರು. ಬಹಳ ಬುದ್ದಿವಂತ ಹುಡುಗ ಅಂತ ಅನಿಸಿಕೊಂಡವರು. ಅವರ ತಂದೆಯ ಸ್ನೇಹಿತರು ಬಂದವರು ಇಷ್ಟು ಬುದ್ಧಿವಂತ ಇದ್ದಾನೆ ಹುಡುಗ. ರ್‍ಯಾಂಕ್‌ ತೆಗೆದುಕೊಳ್ಳುತ್ತಿದ್ದಾನೆ. ಈ ಹಳ್ಳಿ ಶಾಲೆಯಲ್ಲಿ ಓದಿದರೆ ಹಾಳಾಗಿ ಹೋಗುತ್ತಾನೆ. ಬಾಂಬೆಗೆ ನಾನು ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಅವನನ್ನು ನಾನು ಓದಿಸುತ್ತೇನೆ ಎಂದು ಹೇಳಿ ಕರೆದುಕೊಂಡು ಹೋಗುತ್ತಾರೆ" ಎನ್ನುವ ಸ್ವಾರಸ್ಯಕರ ಸಂಗತಿಯನ್ನು ಹೇಳಿಕೊಂಡಿದ್ದಾರೆ.

ಮುಂಬೈಗೆ ಬಂದಾಗ ಅನಂತ್‌ ನಾಗ್‌ಗೆ ಇಂಗ್ಲಿಷ್ ಬಹಳ ದೊಡ್ಡ ಸಮಸ್ಯೆ ಆಗಿ ಹೋಯ್ತು. "ಅದರಲ್ಲೂ ವಿಜ್ಞಾನ, ಗಣಿತ ಕೆಲವು ಕಡೆ ಇತಿಹಾಸ. ಹೀಗಾಗಿ ಒಂದೂ ಎರಡು ರ್‍ಯಾಂಕ್‌ ಬರುತ್ತಿದ್ದವರು. ಕೊನೆಯಿಂದ ಒಂದು ಎರಡು ರ್‍ಯಾಂಕ್‌ ಬರುವುದಕ್ಕೆ ಶುರುವಾದರು. 9ನೇ ತರಗತಿಯಲ್ಲಿ ಫೇಲ್ ಆಗಿಬಿಟ್ಟರು. ಆದರೆ, ಮೇಷ್ಟ್ರು ಬೇರೆ ಊರಿಂದ ಬಂದಿದ್ದಾನೆ ಅಂತ ಗ್ರೇಸ್ ಮಾರ್ಕ್ಸ್ ಕೊಟ್ಟು ಪಾಸ್ ಮಾಡಿದರು" ಎಂದು ಹಿರಿಯ ಪತ್ರಕರ್ತ ಶ್ರೀಧರ್ ಮೂರ್ತಿಗಳು ಹೇಳಿದ್ದಾರೆ.

More from Filmibeat

English summary
Kannada legendary actor Ananth Nag failed in class 9th due to this reason:
Read more about: ananth nag actor filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X