2023 Roundup: 2023ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕನ್ನಡದ ತಾರೆಯರು ಇವರೇ!

2023 ಕೆಲವು ಕನ್ನಡದ ತಾರೆಯರ ಪಾಲಿಗೆ ಲಕ್ಕಿ. ವೃತ್ತಿ ಬದುಕಿನಲ್ಲಿ ಕೆಲವರಿಗೆ ಯಶಸ್ಸು ಸಿಕ್ಕಿರೆ, ಮತ್ತೆ ಕೆಲವರು ತಮ್ಮ ಮೆಚ್ಚಿನ ಸಂಗಾತಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಾಕ್ಸಾಫೀಸ್‌ನಲ್ಲಿ ಕನ್ನಡ ಸಿನಿಮಾಗಳು ಹೆಚ್ಚು ಜಾದು ಮಾಡದೇ ಹೋದರೆ, ತಾರೆಯರ ವೈಯಕ್ತಿಕ ಬದುಕಿನಲ್ಲಿ ಬದಲಾವಣೆಗಳಾಗಿವೆ.

ಒಂದ್ಕಡೆ ಕನ್ನಡ ಚಿತ್ರರಂಗ ತಾರೆಯರು ತಮ್ಮ ಬಹುದಿನದ ಗೆಳಯ ಹಾಗೂ ಗೆಳತಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರೆ, ಕಿರುತೆರೆಯಿಂದಲೂ ಹಲವು ಕಲಾವಿದರು ಕೌಟುಂಬಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ವರ್ಷ ಸಪ್ತಪದಿ ತುಳಿದ ತಾರೆಯರ ಪಟ್ಟಿ ಇಲ್ಲಿದೆ.

Kannada movie and serial celebrities who got married in 2023

ಅಭಿಷೇಕ್ ಅಂಬರೀಶ್-ಅವಿವಾ

ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಹಾಗೂ ಫ್ಯಾಷನ್ ಐಕಾನ್ ಪ್ರಸಾದ್ ಬಿದಪ್ಪ ಪುತ್ರ ಅವಿವಾ ಈ ವರ್ಷ ಸಪ್ತಪದಿ ತುಳಿದಿದ್ದಾರೆ. ಜೂನ್ 5ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆತ್ಮೀಯರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

ಹರಿಪ್ರಿಯಾ-ವಸಿಷ್ಠ ಸಿಂಹ

2023ರ ಆರಂಭದಲ್ಲಿ ಕನ್ನಡ ಚಿತ್ರರಂಗದ ಬ್ಯೂಟಿಫುಲ್ ಜೋಡಿ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಜನವರಿ 26, 2023ರಂದು ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಮದುವೆ ನಡೆದಿತ್ತು. ಈ ಮದುವೆಗೆ ವಸಿಷ್ಠ ಹಾಗೂ ಹರಿಪ್ರಿಯಾ ಆಪ್ತರು ಹಾಗೂ ಕುಟುಂಬದವರು ಮಾತ್ರ ಭಾಗವಹಿಸಿದ್ದರು. ಡಾಲಿ ಧನಂಜಯ್, ಪ್ರಮೋದ್ ಶೆಟ್ಟಿ, ರಿಷಬ್ ಶೆಟ್ಟಿ, ಸತೀಶ್ ನೀನಾಸಂ ಸೇರಿದಂತೆ ಹಲವರು ಈ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದರು.

ಹರ್ಷಿಕಾ ಪೂಣಚ್ಚ-ಭುವನ್

ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಈ ವರ್ಷ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕನ್ನಡದ ತಾರೆಯರು. ಕಳೆದ ಕೆಲವು ವರ್ಷಗಳಿಂದ ಹರ್ಷಿಕಾ ಹಾಗೂ ಭುವನ್ ಇಬ್ಬರೂ ಡೇಟಿಂಗ್ ಮಾಡುತ್ತಿರುವ ಸುದ್ದಿ ಓಡಾಡುತ್ತಲೇ ಇತ್ತು. ಈ ಸುದ್ದಿ ಎದುರಾದಾಗಲೆಲ್ಲ ಇಬ್ಬರು ತಳ್ಳಿ ಹಾಕುತ್ತಲೇ ಬರುತ್ತಿದ್ದರು. ಆದರೆ, ಈ ವರ್ಷ ಆಗಸ್ಟ್ ತಿಂಗಳಲ್ಲಿ ಕೊಡವ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

Kannada movie and serial celebrities who got married in 2023

ಒಳ್ಳೆ ಹುಡುಗ ಪ್ರಥಮ್ ಮದುವೆ

ಮಾಜಿ ಬಿಗ್ ಬಾಸ್ ಸ್ಪರ್ಧಿ ಒಳ್ಳೆ ಹುಡುಗ ಪ್ರಥಮ್ ಜೂನ್ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮಂಡ್ಯದ ಭಾನುಶ್ರಿ ಎಂಬುವವರೊಂದಿಗೆ ಎಂಗೇಜ್ ಆಗಿರೋ ವಿಷಯವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಕಳೆದ ತಿಂಗಳು (ನವೆಂಬರ್) ಪ್ರಥಮ್ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆತ್ಮೀಯರು ಹಾಗೂ ಕುಟುಂಬದ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ.

ವಾಸುಕಿ ವೈಭವ್ ವಿವಾಹ

ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕ ವಾಸುಕಿ ವೈಭವ್ ತಮ್ಮ ಮದುವೆ ವಿಷಯವನ್ನು ಮಾಧ್ಯಮಗಳ ಮುಂದೆ ಗುಟ್ಟಾಗಿ ಇಟ್ಟಿದ್ದರು. ಇದೇ ವರ್ಷ ನವೆಂಬರ್ 16ರಂದು ಸಂಗೀತ ನಿರ್ದೇಶಕ ವಾಸುಕಿ ವೈಭವ್ ತಮ್ಮ ಬಹುದಿನದ ಗೆಳೆತಿ ಬೃಂದಾ ವಿಕ್ರಂ ಅವರೊಂದಿಗೆ ಸಪ್ತಪದಿ ತುಳಿದಿದ್ದಾರೆ. ಕೇವಲ ಎರಡೂ ಕಡೆಯ ಕುಟುಂಬಸ್ಥರು ಹಾಗೂ ಆತ್ಮೀಯರು ಭಾಗವಹಿಸಿದ್ದರು.

ವಿಕ್ರಾಂತ್ ರೋಣ ನಟಿ ಮದುವೆ

ಕನ್ನಡ ಚಿತ್ರರಂಗದ ಮತ್ತೊಬ್ಬ ನಟಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ವಿಕ್ರಾಂತ್ ರೋಣ ಸಿನಿಮಾದಲ್ಲಿ ನಿರೂಪ್ ಭಂಡಾರಿಗೆ ಜೋಡಿಯಾಗಿದ್ದ ನಿತಾ ಅಶೋಕ್ ಜುಲೈ 10ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಗೆಳೆಯ ಸತೀಶ್ ಅವರೊಂದಿಗೆ ಸಪ್ತಪದಿ ತುಳಿದಿದ್ದರು.

ಕಿರುತೆರೆಯಲ್ಲೂ ವಿವಾಹ ಪರ್ವ

ಸಿನಿಮಾರಂಗದಂತೆ ಕಿರುತೆರೆಯಲ್ಲೂ ವಿವಾಹ ಪರ್ವ ಜೋರಾಗಿದೆ. ಧಾರಾವಾಹಿಗಳಲ್ಲಿ ಜನಪ್ರಿಯತೆ ಗಳಿಸಿರುವ ಚೇತನ್-ಯಶಸ್ವಿನಿ, ರಿಯಾಲಿಟಿ ಶೋ ಜೋಡಿ ಸಂಜು ಬಸಯ್ಯ ಹಾಗೂ ಪಲ್ಲವಿ, ಕಿರುತೆರೆಯಲ್ಲಿ ಖಳನಾಯಕಿ ಪಾತ್ರದಲ್ಲಿ ನಟಿಸುತ್ತಿರುವ ಶೋಭಿತಾ ಹಾಗೇ ಸೌರಭ್ ಹಾಗೂ ನಮ್ರತಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

More from Filmibeat

English summary
Kannada celebrities who got married in 2023:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X