'ಲೂಸಿಯಾ' ಸಿನಿಮಾದಲ್ಲೂ ರಿಷಭ್ ಶೆಟ್ಟಿ ಇದ್ದಾರೆ.. ಆ ಪಾತ್ರ ಯಾವುದು ಅಂತ ನಿಮಗೆ ಗೊತ್ತಾ?

ಪವನ್ ಕುಮಾರ್ ನಿರ್ದೇಶನದ 'ಲೂಸಿಯಾ' ಸಿನಿಮಾ ಇತ್ತೀಚೆಗಷ್ಟೇ ಮತ್ತೆ ಥಿಯೇಟರ್‌ನಲ್ಲಿ ಬಿಡುಗಡೆಯಾಗಿದ್ದು ಗೊತ್ತೇ ಇದೆ. ಈ ಮೊದಲು ಅಂದ್ರೆ 10 ವರ್ಷಗಳ ಹಿಂದೆ ಈ ಸಿನಿಮಾ ಬಿಡುಗಡೆಯಾದಾಗ ನೋಡಿದವರೂ ಕೂಡಾ ಈಗ ಮತ್ತೊಮ್ಮೆ ಸಿನಿಮಾ ನೊಡಿಕೊಂಡು ಬಂದಿದ್ದಾರೆ. ಆದರೆ, ಈ ಸಲ ಮಾತ್ರ ಲೂಸಿಯಾ ನೋಡಿದವ್ರೆಲ್ಲಾ ಒಂದು ಕ್ಷಣ ಶಾಕ್ ಆಗಿದ್ದಾರೆ. ಅರೇ...! ನಾವು ಇದನ್ನು ಗಮನಿಸೇ ಇರ್ಲಿಲ್ವಲಾ ಅಂದುಕೊಂಡಿದ್ದಾರೆ. ಅದಕ್ಕೆ ಕಾರಣ ಸಿನಿಮಾದಲ್ಲಿ ಕಂಡ ರಿಷಭ್ ಶೆಟ್ಟಿ.

ರಿಷಭ್ ಶೆಟ್ಟಿ 'ಕಾಂತಾರ' ಸಿನಿಮಾ ನಂತರ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಆದರೆ, 'ಕಾಂತಾರ' ಯಶಸ್ಸಿನ ಮುಂಚೆ ಕೂಡಾ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ', 'ಕಿರಿಕ್ ಪಾರ್ಟಿ', 'ಗರುಡ ಗಮನ ವೃಷಭ ವಾಹನ' ಮುಂತಾದ ಸಿನಿಮಾಗಳ ಮೂಲಕ ನಿಧಾನಕ್ಕೆ ಸ್ಯಾಂಡಲ್‌ವುಡ್‌ನಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುತ್ತಾ ಇದ್ದರು.

rishab-shetty-in-lucia-movie

ಆದರೆ, ಅವರ ಕೆರಿಯರ್‌ನ ಹೋರಾಟದ ದಿನಗಳಲ್ಲಿ ರಿಷಭ್ ಎಷ್ಟೆಲ್ಲಾ ಸರ್ಕಸ್ ಮಾಡಿದ್ರು? ಆಗ ಒಂದು ಸಣ್ಣ ಪಾತ್ರಕ್ಕೂ ಎಷ್ಟೆಲ್ಲಾ ಪ್ರಯತ್ನ ಪಡ್ತಿದ್ರು ಅನ್ನೋ ವಿಚಾರವನ್ನು ಪವನ್ ಕುಮಾರ್ ಹಂಚಿಕೊಂಡಿದ್ದಾರೆ.

'ಲೂಸಿಯಾ' ಸಿನಿಮಾ ದಶಕ ಪೂರೈಸಿದ ಸಂದರ್ಭದಲ್ಲಿ ಮೆಟ್ರೊ ಸಾಗಾ ಎನ್ನುವ ಯೂಟ್ಯೂಬ್ ಚಾನೆಲ್‌ಗೆ ನಿರ್ದೇಶಕ ಪವನ್ ಕುಮಾರ್ ಒಂದು ಸಂದರ್ಶನ ನೀಡಿದ್ದಾರೆ. ಈ ಸಂದರ್ಭದಲ್ಲಿ 'ಲೂಸಿಯಾ' ಸಿನಿಮಾದಲ್ಲಿ ಪೊಲೀಸ್ ಕಾನ್ಸಟೇಬಲ್ ಪಾತ್ರ ಮಾಡಿದ್ದ ರಿಷಭ್ ಶೆಟ್ಟಿ ಕುರಿತು ಕೆಲವು ನೆನೆಪುಗಳನ್ನು ಮೆಲುಕು ಹಾಕಿದ್ದಾರೆ.

ಪವನ್ ಕುಮಾರ್ ನಿರ್ದೇಶನದ ಮೊದಲ ಸಿನಿಮಾ 'ಲೈಫು ಇಷ್ಟೇನೆ'. ನಿರ್ಮಾಪಕ ಜಾಕ್ ಮಂಜು ಈ ಸಿನಿಮಾದ ನಿರ್ಮಾಪಕರಲ್ಲೊಬ್ಬರು. ಅವರು ಆ ಸಂದರ್ಭದಲ್ಲಿ ಪವನ್‌ಗೆ ಹೇಳಿದ್ರಂತೆ, "ರಿಷಭ್ ಅಂತ ಒಬ್ಬ ಹುಡುಗ ಇದ್ದಾನೆ ನೋಡಿ. ನಿಮ್ಮ ಸಿನಿಮಾದಲ್ಲಿ ಯಾವ್ದಾದ್ರೂ ಪಾತ್ರ ಇದ್ರೆ, ಯಾವ್ದಿದ್ರೂ ಸರಿ ಒಂದು ಅವಕಾಶ ಕೊಡ್ಬಹುದಾ ಅಂತ ಪವನ್ ಅವ್ರತ್ರ ಕೇಳಿ ಅಂದಿದ್ದಾನೆ. ನೋಡಿ ಒಂದ್ಸಲ ಭೇಟಿಯಾಗಿ ಬೇಕಿದ್ರೆ" ಆ ಸಂದರ್ಭದಲ್ಲಿ ರಿಷಭ್ 'ನಮ್ ಏರಿಯಾಲಿ ಒಂದಿನ' ಎನ್ನುವ ಸಿನಿಮಾದಲ್ಲಿ ಕೆಲಸ ಮಾಡ್ತಿದ್ರು. ರಿಷಭ್‌ಗೆ ನಂತರ 'ಲೂಸಿಯಾ' ಸಿನಿಮಾದಲ್ಲಿ ಪೊಲೀಸ್ ಕಾನ್ಸಟೇಬಲ್ ಪಾತ್ರ ಕೊಡಲಾಯ್ತು. ಆ ಪಾತ್ರವನ್ನು ರಿಷಭ್ ಅಚ್ಚುಕಟ್ಟಾಗಿ ನಿರ್ವಹಿಸಿದ್ದಕ್ಕೆ ತೆರೆ ಮೇಲೇ ಪ್ರೂಫ್ ಇದೆ.

rishab-shetty-in-lucia-movie

ಆಗಲೂ ರಿಷಭ್ ಬಹಳ ಉತ್ಸಾಹಿ ಯುವಕ ಎಂದು ನೆನಪಿಸಿಕೊಳ್ತಾರೆ ಪವನ್ ಕುಮಾರ್. ಇಂಥಾ ಪಾತ್ರ ಎಂದಾಗ ಬಹಳ ಆಸಕ್ತಿಯಿಂದಲೇ ಪಾಲ್ಗೊಂಡಿದ್ರು. ಕಾನ್ಸಟೇಬಲ್ ಪಾತ್ರವನ್ನು ಅನೇಕರು ಗುರುತಿಸಿ ಮಾತನಾಡಿದ್ರು, ಅದು ರಿಷಭ್ ಟ್ಯಾಲೆಂಟ್‌ಗೆ ಸಾಕ್ಷಿ ಎಂದು ನೆನಪಿಸಿಕೊಳ್ತಾರೆ.

'ಲೂಸಿಯಾ' ಚಿತ್ರದ ನಂತರ ದೊಡ್ಡ ಮಟ್ಟಿಗೆ ಪವನ್ ಕುಮಾರ್‌ಗೆ ಬ್ರೇಕ್ ಕೊಟ್ಟ ಸಿನಿಮಾ 'ಯೂ ಟರ್ನ್'. ಇದು ತೆಲುಗಿನಲ್ಲಿ ಕೂಡಾ ರೀಮೇಕ್ ಆಯ್ತು. ಅದನ್ನೂ ಪವನ್ ನಿರ್ದೇಶಿಸಿದ್ರು. ಸ್ಟಾರ್ ನಟಿ ಸಮಂತಾ ಮುಖ್ಯ ಪಾತ್ರದಲ್ಲಿ ನಟಿಸಿದ್ದರು.

ಆ ಬಳಿಕ ಇತ್ತೀಚೆಗೆ ಪವನ್ ಕುಮಾರ್ ನಿರ್ದೇಶಿಸಿದ್ದ ಬಿಗ್ ಬಜೆಟ್ ಸಿನಿಮಾ 'ಧೂಮಂ' ಬಿಡುಗಡೆಯಾಗಿತ್ತು. ಮಲಯಾಳಂ ನಟ ಫಾಹದ್ ಫಾಸಿಲ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಸಿನಿಮಾ ನಿರೀಕ್ಷಿತ ಮಟ್ಟದ ಯಶಸ್ಸು ಕಾಣಲಿಲ್ಲ. ಇನ್ನು ರಿಷಭ್ ಸದ್ಯ 'ಕಾಂತಾರ 2' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ತಮ್ಮದೇ ಪ್ರೊಡಕ್ಷನ್ ಹೌಸ್ ಕೆರಾಡಿ ಫಿಲ್ಮ್ಸ್ ಅಡಿಯಲ್ಲೂ ಸದಭಿರುಚಿಯ ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ.

More from Filmibeat

English summary
flashback story: Rishab Shetty Acted in Lucia movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X