ದೃಶ್ಯಕ್ಕಾಗಿ ಆಮಿರ್ ಖಾನ್‌ಗೆ 47 ಬಾರಿ ಲಿಪ್ ಕಿಸ್ ಮಾಡಿದ್ದ ಕರಿಷ್ಮಾ ಕಪೂರ್: ಏನದು ಸನ್ನಿವೇಶ?
ಕಪೂರ್ ಕುಟುಂಬದ ಕುಡಿ ಕರಿಷ್ಮಾ ಕಪೂರ್ ಬಾಲಿವುಡ್‌ನಲ್ಲಿ ಅತೀ ಹೆಚ್ಚು ಸಕ್ಸಸ್ ಕಂಡಿದ್ದ ನಟಿ. ಒಂದು ಕಾಲದಲ್ಲಿ ಕರಿಷ್ಮಾ ಕಪೂರ್ ಸಿನಿಮಾ ಇದ್ದಾರೆ ಅಂದ್ರೆ, ಆ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗೋದು ಪಕ್ಕಾ ಅನ್ನೋ ಮಾತಿತ್ತು. ನಿಜಕ್ಕೂ ಕರಿಷ್ಮಾ ಕಪೂರ್ ಆ ಕಾಲದಲ್ಲಿ ಲೇಡಿ ಸೂಪರ್‌ಸ್ಟಾರ್ ಆಗಿದ್ದರು.
ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದ ನಟಿಗೆ ಅಷ್ಟೇ ಬೇಗ ಸಕ್ಸಸ್ ಕೂಡ ಸಿಕ್ಕಿತ್ತು. 90ರ ದಶಕದಲ್ಲಿ ಕರಿಷ್ಮಾ ಕಪೂರ್ ಯಶಸ್ಸಿನ ಉತ್ತುಂಗದಲ್ಲಿದ್ದರು. ಒಂದರ ಹಿಂದೊಂದು ಹಿಟ್ ಸಿನಿಮಾಗಳನ್ನು ಕೊಟ್ಟು ಉಳಿದ ನಟಿಯರಿಗೆ ಪೈಪೋಟಿ ನೀಡಿದ್ದರು.

ಕರಿಷ್ಮಾ ಕಪೂರ್ ಜನಪ್ರಿಯತೆ ಹೇಗಿತ್ತು ಅಂದ್ರೆ, ಒಂದೇ ವರ್ಷದಲ್ಲಿ ಈ ನಟಿ ಬರೋಬ್ಬರಿ 12 ಸಿನಿಮಾಗಳಲ್ಲಿ ನಟಿಸಿದ್ದರು. 'ಜಿಗರ್', 'ರಾಜಾ ಬಾಬು', 'ಕೂಲಿ ನಂಬರ್ ಒನ್', 'ದಿಲ್ ತೋ ಪಾಗಲ್ ಹೈ', ' ರಾಜಾ ಹಿಂದೂಸ್ತಾನಿ'ಯಂತಹ ಮೆಗಾ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದರು. ಇದರಲ್ಲಿ 'ರಾಜಾ ಹಿಂದೂಸ್ತಾನಿ' ಚಿತ್ರೀಕರಣದ ವೇಳೆ ನಡೆದ ಒಂದು ಘಟನೆಯನ್ನು ಕರಿಷ್ಮಾ ಕಪೂರ್ ನೆನಪಿಸಿಕೊಂಡಿದ್ದಾರೆ.
'ರಾಜಾ ಹಿಂದೂಸ್ತಾನಿ' ಬ್ಲಾಕ್ ಬಸ್ಟರ್ ಸಿನಿಮಾ
ಕರಿಷ್ಮಾ ಕಪೂರ್ ಹಾಗೂ ಆಮಿರ್ ಖಾನ್ ಜೋಡಿ ಸೂಪರ್ ಹಿಟ್ ಸಿನಿಮಾ 'ರಾಜಾ ಹಿಂದೂಸ್ತಾನಿ'. ಈ ಸಿನಿಮಾದ 1996ರಲ್ಲಿ ತೆರೆಕಂಡಿತ್ತು. ಆ ವರ್ಷ ಬಾಕ್ಸಾಫೀಸ್ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಪಟ್ಟಿ ಸೇರಿತ್ತು. ಹಾಡುಗಳಂತೂ ಸೂಪರ್ ಸಕ್ಸಸ್ ಕಂಡಿದ್ದವು. ಈ ಸಿನಿಮಾ ಆಮಿರ್ ಖಾನ್ ಹಾಗೂ ಕರೀಷ್ಮ ಕಪೂರ್ ವೃತ್ತಿ ಬದುಕಿನ ಎವರ್‌ಗ್ರೀನ್ ಸಿನಿಮಾ.

ಇದೇ ಸಿನಿಮಾದ ಒಂದು ದೃಶ್ಯದ ಬಗ್ಗೆ ಕರಿಷ್ಮಾ ಕಪೂರ್ ಮನಬಿಚ್ಚಿ ಮಾತಾಡಿದ್ದರು. ಒಂದು ಚುಂಬನದ ದೃಶ್ಯದ ಬಗ್ಗೆ ಸಂದರ್ಶನವೊಂದರಲ್ಲಿ ವಿವರಿಸಿದ್ದರು. ಆಮಿರ್ ಖಾನ್ ಜೊತೆ ಚುಂಬನದ ದೃಶ್ಯದಲ್ಲಿ ನಟಿಸುವಾಗ 47 ಟೇಕ್ ತೆಗೆದುಕೊಂಡಿದ್ದಾಗಿ ಹೇಳಿದ್ದರು. ಅಷ್ಟೊಂದು ಟೇಕ್ ಯಾಕೆ ತೆಗೆದುಕೊಂಡರು? ಅನ್ನೋದೇ ಇಂಟ್ರೆಸ್ಟಿಂಗ್ ಸಂಗತಿ.
ಚುಂಬನದ ದೃಶ್ಯಕ್ಕೆ 47 ಟೇಕ್
'ರಾಜಾ ಹಿಂದೂಸ್ತಾನಿ' ಸಿನಿಮಾದಲ್ಲಿ ಕರಿಷ್ಮಾ ಕಪೂರ್ ಹಾಗೂ ಆಮಿರ್ ಖಾನ್ ಇಬ್ಬರೂ ಚುಂಬಿಸಿಕೊಳ್ಳುವ ದೃಶ್ಯವಿದೆ. ಆ ದೃಶ್ಯದ ಚಿತ್ರೀಕರಣದ ವೇಳೆ ಸುಮಾರು 47 ಟೇಕ್ ತೆಗೆದುಕೊಂಡಿದ್ದಾಗಿ ಕರಿಷ್ಮಾ ಕಪೂರ್ ಸಂದರ್ಶನದಲ್ಲಿ ಹೇಳಿದ್ದರು. ಅಷ್ಟೇ ಅಲ್ಲ ಅಷ್ಟೊಂದು ಟೇಕ್ ತೆಗೆದುಕೊಂಡಿದ್ದೇಕೆ? ಅನ್ನೋದನ್ನೂ ಹೇಳಿದ್ದರು.
ಈ ದೃಶ್ಯವನ್ನು ಊಟಿಯಲ್ಲಿ ಚಿತ್ರೀಕರಣ ಮಾಡುತ್ತಿದ್ದರು. ಆ ವೇಳೆ ಚಳಿಗಾಲವಿತ್ತು. ಹೀಗಾಗಿ ಚುಂಬನದ ದೃಶ್ಯಗಳು ಸರಿಯಾಗಿ ಬರುತ್ತಿರಲಿಲ್ಲ. ಈ ಕಾರಣದಿಂದಲೇ ಬರೋಬ್ಬರಿ 47 ಟೇಕ್‌ಗಳನ್ನು ತೆಗೆದುಕೊಳ್ಳಬೇಕಾಯ್ತು. ಆ ದೃಶ್ಯ ಮಾಡುವಾಗ ಸಾಕಷ್ಟು ತೊಂದರೆಗಳನ್ನು ಎದುರಿಸಿದ್ದೇನೆ ಎಂದು ಕರಿಷ್ಮಾ ಕಪೂರ್ ಸಂದರ್ಶನದಲ್ಲಿ ಬಹಿರಂಗ ಪಡಿಸಿದ್ದರು.
78 ಕೋಟಿ ರೂ. ಬಾಕ್ಸಾಫೀಸ್ ಕಲೆಕ್ಷನ್
ಈ ಚುಂಬನದ ದೃಶ್ಯವನ್ನು ಚಿತ್ರೀಕರಣ ಮಾಡುವಾಗ ಕರಿಷ್ಮಾ ಕಪೂರ್ ಹಾಗೂ ಆಮಿರ್ ಖಾನ್ ಇಬ್ಬರು ನಡುಗುತ್ತಿದ್ದರು ಎಂದು ಹೇಳಿದ್ದಾರೆ. ಹಾಗಾಗಿ ಈ ಕಿಸ್ಸಿಂಗ್ ಸೀನ್ ಅನ್ನು ಚಿತ್ರೀಕರಣ ಮಾಡುವುದಕ್ಕೆ ಬರೋಬ್ಬರಿ ಮೂರು ದಿನಗಳನ್ನು ತೆಗೆದುಕೊಂಡಿದ್ದರು. ಬೆಳಗ್ಗೆ 7 ಗಂಟೆಗೆ ಆರಂಭ ಆದರೆ ಸಂಜೆ 6 ಗಂಟೆವರೆಗೂ ಚಿತ್ರೀಕರಣ ಮಾಡುತ್ತಲೇ ಇದ್ದರು.
'ರಾಜಾ ಹಿಂದೂಸ್ತಾನಿ' ಸಿನಿಮಾ 6 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣ ಆಗಿತ್ತು. ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾ ಮೆಗಾ ಹಿಟ್ ಆಯ್ತು. ಈ ಸಿನಿಮಾ ಬರೋಬ್ಬರಿ 78 ಕೋಟಿ ರೂ. ಕಲೆಕ್ಷನ್ ಮಾಡಿತ್ತು. 1996ರಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎಂದು ಸಾಬೀತಾಗಿತ್ತು.


Click it and Unblock the Notifications











