ಕತ್ರಿನಾ ಕೈಫ್ ಒಟ್ಟು ಅಂದಾಜು ಆಸ್ತಿ 225 ಕೋಟಿ: ವಿಕ್ಕಿ ಕೌಶಲ್ ಆಸ್ತಿ ಎಷ್ಟು?
ಕತ್ರಿನಾ ಕೈಫ್ ಬಾಲಿವುಡ್‌ಗೆ ಕಾಲಿಟ್ಟ ದಿನಗಳಿಂದ ತನ್ನದೇ ಒಂದು ಸಾಮ್ರಾಜ್ಯ ಕಟ್ಟಲು ಪರದಾಡಿದ ದಿನಗಳಿವೆ. ಕಷ್ಟದ ದಿನಗಳಲ್ಲಿ ಕತ್ರಿನಾ ನಡೆದ ಹಾದಿಯನ್ನು ಆಕೆ ಇಂದಿಗೂ ಮರೆತಿಲ್ಲ. ಈಕೆ ನಟನೆ ಬಗ್ಗೆ ಪ್ರಶ್ನೆ ಮಾಡುವ ದಿನಗಳಿಂದ ಉತ್ತಮ ನಟಿಯಾಗಿ ಬೆಳೆದು ಬಂದ ಹಾದಿ. ನಟಿಯಿಂದ ಉದ್ಯಮಿಯಾದ ಹಾದಿ ಎಲ್ಲವೂ ನಿನ್ನೆ ಮೊನ್ನೆ ಸಿಕ್ಕಿದ್ದಲ್ಲ. ಕತ್ರಿನಾಳ 18 ವರ್ಷಗಳ ಸಿನಿ ಜರ್ನಿಯಲ್ಲಿ ಸಾಕಷ್ಟು ಸೋಲು ಗೆಲುವು ದಾಖಲಾಗಿವೆ. ಆದ್ರೀಗ ಯಶಸ್ಸಿನ ಉತ್ತುಂಗದಲ್ಲಿರುವ ಕತ್ರಿನಾ ತನ್ನ ಬದುಕಿನ ಮತ್ತೊಂದು ಹಾದಿಯನ್ನು ತುಳಿಯುತ್ತಿದ್ದಾಳೆ.
ಕತ್ರಿನಾ ಕೈಫ್ ಡಿಸೆಂಬರ್ 9 ರಂದು ತನ್ನ ಗೆಳೆಯ ಬಾಲಿವುಡ್ ನಟ ವಿಕ್ಕಿ ಕೌಶಲ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಕತ್ರಿನಾ ಹಾಗೂ ವಿಕ್ಕಿ ವಯಸ್ಸಿನ ಅಂತರ, ಇಬ್ಬರ ಗಳಿಸಿದ ಆಸ್ತಿ ವಿಚಾರಕ್ಕೆ ಈ ಜೋಡಿ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿವೆ. ಕತ್ರಿನಾ ವಿಕ್ಕಿ ಇಬ್ಬರೂ ತಮ್ಮ ವೃತ್ತಿ ಜೀವನದಲ್ಲಿ ಗಳಿಸಿದ್ದೆಷ್ಟು? ಇಬ್ಬರ ವಯಸ್ಸಿನ ಅಂತರವೆಷ್ಟು ಅನ್ನುವುದನ್ನು ತಿಳಿಯಲು ಮುಂದೆ ಓದಿ.

ಕತ್ರಿನಾ ವಿಕ್ಕಿಯ ಆಸ್ತಿ ಮೌಲ್ಯ 250 ಕೋಟಿ?
ಕಳೆದೊಂದು ವಾರದಿಂದ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಮದುವೆ ಬಗ್ಗೆನೇ ಮಾತು. ಕತ್ರಿನಾ-ವಿಕ್ಕಿ ಲವ್ ಸ್ಟೋರಿ, ಇಬ್ಬರ ಮದುವೆ ತಯಾರಿ, ರಾಜಸ್ಥಾನದಲ್ಲಿ ನಡೆಯುತ್ತಿರುವ ಸಂಭ್ರಮ. ಇವೆಲ್ಲವೂಗಳ ಬಗ್ಗೆನೇ ಚರ್ಚೆಯಾಗುತ್ತಿದೆ. ಇದೇ ವೇಳೆ ಇನ್ನೊಂದೆಡೆ ಕತ್ರಿನಾ ಹಾಗೂ ವಿಕ್ಕಿ ಕೌಶಲ್ ಆಸ್ತಿ ಮೌಲ್ಯ 250 ಕೋಟಿ ಎಂದು ಹೇಳಲಾಗಿದೆ. ಇಷ್ಟು ದೊಡ್ಡ ಮೊತ್ತದಲ್ಲಿ ಕತ್ರಿನಾ ಸಂಪಾಧಿಸಿದ್ದು 225 ಕೋಟಿ ಎಂದು ಅಂದಾಜಿಸಲಾಗಿದೆ. ಇತ್ತ ವಿಕ್ಕಿ ಕೌಶಲ್ 25 ಕೋಟಿ ಸಂಪಾಧನೆ ಮಾಡಿದ್ದಾರೆ ಎನ್ನುತ್ತಿವೆ ಬಾಲಿವುಡ್ ಮೂಲಗಳು.

ಕತ್ರಿನಾ ಒಂದು ಸಿನಿಮಾ ಸಂಭಾವನೆ ಎಷ್ಟು?
ಬಾಲಿವುಡ್ ಮೂಲಗಳ ಪ್ರಕಾರ, ಕತ್ರಿನಾ ಕೈಫ್ ಈಗ ಯಶಸ್ಸಿನ ತುತ್ತತುದಿಯಲ್ಲಿದ್ದಾರೆ. ಈಗ ಕತ್ರಿನಾ ಒಂದು ಸಿನಿಮಾಗೆ ಬರೋಬ್ಬರಿ 11 ಕೋಟಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ. ಸಿನಿಮಾದ ಜೊತೆ ಜಾಹೀರಾತುಗಳಲ್ಲೂ ನಟಿಸಿದ್ದು, ಕೆಲವು ಬ್ರ್ಯಾಂಡ್‌ಗಳಿಗೆ ರಾಯಬಾರಿಯಾಗಿದ್ದಾರೆ. ಇವುಗಳಿಂದ ಕತ್ರಿನಾ ಕೈಫ್ ಖಜಾನೆ ತುಂಬುತ್ತಿದೆ. ಇಷ್ಟೇ ಅಲ್ಲ, ಕೆಲವು ಉದ್ಯಮಗಳಲ್ಲಿ ಕತ್ರಿನಾ ಕೈಫ್ ಹಣ ಹೂಡಿಕೆ ಮಾಡಿದ್ದಾರೆ. ಇತ್ತೀಚೆಗೆ ನೈಕಾದಲ್ಲಿ ಹೂಡಿಕೆ ಮಾಡಿದ್ದ ನಟಿ ದೊಡ್ಡ ಮೊತ್ತವನ್ನೇ ತನ್ನ ಜೇಬಿಗೆ ಇಳಿಸಿಕೊಂಡಿದ್ದರು. ಇವೆಲ್ಲವೂ ಸೇರಿದರೆ, 224 ರಿಂದ 225 ಕೋಟಿ ಸಂಪಾಧಿಸಿದ್ದಾರೆ ಎಂದು ವೆಬ್ ಸೈಟ್ ಒಂದು ವರದಿ ಮಾಡಿದೆ.

ವಿಕ್ಕಿ ಕೌಶಲ್ ಆದಾಯದ ಮೂಲವೇನು?
ವಿಕ್ಕಿ ಕೌಶಲ್ ಕೂಡ ಕತ್ರಿನಾಳಂತೆ ಬಾಲಿವುಡ್‌ನಲ್ಲಿ ಸಾಕಷ್ಟು ಕಷ್ಟ ಪಟ್ಟಿದ್ದಾರೆ. 'ಉರಿ: ದಿ ಸರ್ಜಿಕಲ್ ಸ್ಟ್ರೈಕ್' ಅಂತಹ ಸೂಪರ್ ಹಿಟ್ ಸಿನಿಮಾ ಸಿಗುವವರೆಗೂ ವಿಕ್ಕಿ ಕೌಶಲ್ ಕಷ್ಟ ಪಟ್ಟಿದ್ದಾರೆ. ಸದ್ಯ ವಿಕ್ಕಿ ಒಂದು ಸಿನಿಮಾಗೆ 3 ರಿಂದ 4 ಕೋಟಿ ಸಂಭಾವನೆ ಪಡೆಯುತ್ತಾರೆ. ಈಗ ವಿಕ್ಕಿ ಕೈಯಲ್ಲಿ ದೊಡ್ಡ ದೊಡ್ಡ ಸಿನಿಮಾಗಳಿವೆ. 'ಗೋವಿಂದ ನಾಮ್ ಮೇರಾ', 'ಇಮ್ಮೋರ್ಟಲ್ ಅಶ್ವಥಾಮ' ಮತ್ತು 'ತಖ್ತ್' ಅಂತಹ ಸಿನಿಮಾಗಳು ಕೈಯಲ್ಲಿವೆ. ವಿಕ್ಕಿ ಹೆಸರು ಕತ್ರಿನಾ ಜೊತೆ ಕೇಳುವುದಕ್ಕೆ ಶುರು ಮಾಡಿದ ಮೇಲೆ ಜಾಹೀರಾತುಗಳಲ್ಲಿ ನಟಿಸುತ್ತಿದ್ದಾರೆ. ಇದೂ ಕೂಡ ವಿಕ್ಕಿಯ ಆದಾಯದ ಒಂದು ಮೂಲ ಎನ್ನಲಾಗಿದೆ. ಸದ್ಯ ವಿಕ್ಕಿ 24 ರಿಂದ 25 ಕೋಟಿ ಆಸ್ತಿ ಹೊಂದಿದ್ದಾರೆ ಎನ್ನಲಾಗಿದೆ.

ಇಬ್ಬರ ವಯಸ್ಸಿನ ಅಂತರ ಬರೋಬ್ಬರಿ 5 ವರ್ಷ
ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ನಡುವೆ 5 ವರ್ಷ ವಯಸ್ಸಿನ ಅಂತರವಿದೆ. ವಿಕ್ಕಿಗೆ ಈಗ 33 ವರ್ಷ ಆಗಿದ್ದರೆ, ಕತ್ರಿನಾ ಕೈಫ್‌ಗೆ 38 ವರ್ಷ. ಕತ್ರಿನಾ ವಿಕ್ಕಿಗಿಂತ 5 ವರ್ಷ ದೊಡ್ಡವಳು. ಅಲ್ಲದೆ ವೃತ್ತಿಯಲ್ಲೂ ಸೀನಿಯರ್, ವಿಕ್ಕಿಗಿಂತಲೂ ಶ್ರೀಮಂತೆ. ಇದೇ ಕಾರಣಕ್ಕೆ ಕಂಗನಾ ರಣಾವತ್ ಇಬ್ಬರ ಮದುವೆ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾಳೆ. " ಶ್ರೀಮಂತ ಮಹಿಳೆಯರು ತಮಗಿಂತ ಹಿರಿಯರನ್ನು ವಿವಾಹವಾಗುತ್ತಿರುವುದು ಖುಷಿ ವಿಚಾರ" ಎಂದು ಕತ್ರಿನಾ ಬಗ್ಗೆ ಕಂಗನಾ ಮೆಚ್ಚುಗೆ ಸೂಚಿಸಿದ್ದಾಳೆ.


Click it and Unblock the Notifications











