24 ಗಂಟೆಯಲ್ಲಿ 'KGF 2' ದಾಖಲೆಯನ್ನು ಮುರಿಯುತ್ತಾ 'ಸಲಾರ್' ಟ್ರೈಲರ್? ಟಾಪ್ 5 ಸಿನಿಮಾ ಟ್ರೈಲರ್ ಇವೇನೆ!

ಪ್ಯಾನ್ ಇಂಡಿಯಾ ಸಿನಿಮಾ ಕ್ರೇಜ್ ಯಾವಾಗ ಶುರುವಾಯ್ತೋ ಅಲ್ಲಿಂದ ದಾಖಲೆಗಳನ್ನು ಮಾಡೋದು ಪ್ರತಿಷ್ಠೆಯಾಗಿಬಿಟ್ಟಿದೆ. ಸೂಪರ್‌ಸ್ಟಾರ್ ಸಿನಿಮಾಗಳ ಟೀಸರ್‌ನಿಂದ ಹಿಡಿದು ಟ್ರೈಲರ್, ಅಡ್ವಾನ್ಸ್ ಬುಕಿಂಗ್, ಬಾಕ್ಸಾಫೀಸ್ ಕಲೆಕ್ಷನ್ ಎಲ್ಲವೂ ದಾಖಲೆ ಮಾಡಲೇಬೇಕು.

ಅಸಲಿಗೆ ಯಶ್-ಪ್ರಶಾಂತ್ ನೀಲ್ ಕಾಂಬಿನೇಷನ್ ಸಿನಿಮಾ 'ಕೆಜಿಎಫ್ ಚಾಪ್ಟರ್ 2' ನಿಂದ ಈ ಟ್ರೆಂಡ್ ಶುರುವಾಗಿತ್ತು. ಅಲ್ಲಿಂದ ಯಾವುದೇ ಭಾಷೆಯ ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್‌ಗೆ ರೆಡಿಯಾದರೂ ಇಂತಹದ್ದೊಂದು ದಾಖಲೆ ಮೇಲೆ ಸಿನಿಮಾ ಕಣ್ಣಿಟ್ಟಿರುತ್ತೆ. ಸದ್ಯ ಡಿಸೆಂಬರ್ 1 ರಂದು 'ಸಲಾರ್' ಸಿನಿಮಾದ ಟ್ರೈಲರ್ ರಿಲೀಸ್ ಆಗುತ್ತಿದೆ. ಇದು 24 ಗಂಟೆಗಳಲ್ಲಿ ಹೊಸ ದಾಖಲೆಯನ್ನು ಬರೆಯುತ್ತಾ? ಅನ್ನೋ ಕುತೂಹಲ ಎಲ್ಲರಲ್ಲೂ ಇದೆ.

kgf-2-salaar-prashanth-neel-trailer-record

ಯಾಕೆ ಈ ಕುತೂಹಲ ಅಂದರೆ, ಇದೂವರೆಗೂ 'ಕೆಜಿಎಫ್ 2' ಸಿನಿಮಾದ ಟ್ರೈಲರ್ ಬರೀ 24 ಗಂಟೆಗಳಲ್ಲಿ ಹೊಸ ದಾಖಲೆಯನ್ನು ಬರೆದಿತ್ತು. ಎಲ್ಲಾ ಭಾಷೆಯ ಟ್ರೈಲರ್‌ಗಳ ವೀವ್ಸ್ ಸೇರಿಸಿದರೆ, ಇಂದಿಗೂ ಆ ದಾಖಲೆಯನ್ನು ಮುರಿಯೋದಕ್ಕೆ ಸಾಧ್ಯವೇ ಆಗಿಲ್ಲ. ಈಗ ಪ್ರಶಾಂತ್ ನೀಲ್ ತಮ್ಮದೇ ಸಿನಿಮಾ ದಾಖಲೆಯನ್ನು 'ಸಲಾರ್' ಮೂಲಕ ಮುರಿಯುತ್ತಾರಾ? ಅನ್ನೋದನ್ನು ಇಡೀ ಭಾರತೀಯ ಚಿತ್ರರಂಗವೇ ಎದುರು ನೋಡುತ್ತಿದೆ. ಅಷ್ಟಕ್ಕೂ 24 ಗಂಟೆಗಳಲ್ಲಿ ಅತೀ ಹೆಚ್ಚು ವೀವ್ಸ್ ಪಡೆದ ಭಾರತದ ಟಾಪ್ 5 ಸಿನಿಮಾ ಟ್ರೈಲರ್ ಲಿಸ್ಟ್ ಇಲ್ಲಿದೆ.

ಟಾಪ್ 5- 'RRR'

ರಾಜಮೌಳಿ ನಿರ್ದೇಶಿಸಿದ 'RRR' ಸಿನಿಮಾದ ಟ್ರೈಲರ್ ಗ್ರ್ಯಾಂಡ್ ಆಗಿ ರಿಲೀಸ್ ಆಗಿತ್ತು. ಟಾಲಿವುಡ್‌ನ ಇಬ್ಬರು ಸೂಪರ್‌ಸ್ಟಾರ್‌ಗಳು ಜೂ.ಎನ್‌ಟಿಆರ್, ರಾಮ್ ಚರಣ್ ಕಾಂಬಿನೇಷನ್‌ನಲ್ಲಿ ಬಂದಿತ್ತು. ಈ ಸಿನಿಮಾ ಟ್ರೈಲರ್ 24 ಗಂಟೆಗಳಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಿಂದ 51 ಮಿಲಿಯನ್ ವೀವ್ಸ್ ದಾಖಲು ಮಾಡಿತ್ತು.

ಟಾಪ್ 4- 'ಜವಾನ್'

ಅಟ್ಲೀ ನಿರ್ದೇಶಿಸಿದ ಶಾರುಖ್ ಖಾನ್ 'ಜವಾನ್' ಸಿನಿಮಾ ಟ್ರೈಲರ್‌ಗೆ ಫ್ಯಾನ್ಸ್ ಕಾದು ಕೂತಿದ್ದರು. ಇದೂ ಕೂಡ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ಆಗಿತ್ತು. ನಯನತಾರಾ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. 'ಜವಾನ್' ಟ್ರೈಲರ್ 24 ಗಂಟೆಗಳಲ್ಲಿ ಸುಮಾರು 55 ಮಿಲಿಯನ್ ವೀವ್ಸ್ ಗಿಟ್ಟಿಸಿಕೊಂಡಿತ್ತು.

kgf-2-salaar-prashanth-neel-trailer-record

ಟಾಪ್ 3- 'ರಾಧೆ ಶ್ಯಾಮ್'

'ಬಾಹುಬಲಿ 2' ಬಳಿಕ ಪ್ರಭಾಸ್ ನಟಿಸಿದ 'ಸಾಹೋ' ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿತ್ತು. ಹೀಗಾಗಿ ಆಕ್ಷನ್‌ನಿಂದ ರೊಮ್ಯಾಂಟಿಕ್ ಸಿನಿಮಾ ಕಡೆ ಆಸಕ್ತಿ ತೋರಿದ್ದರು. ಸಿನಿಮಾದ ಕಾನ್ಸೆಪ್ಟ್ ಕುತೂಹಲ ಕೆರಳಿಸಿತ್ತು. ಹೀಗಾಗಿ 24 ಗಂಟೆಗಳಲ್ಲಿ ರಾಧೆ ಶ್ಯಾಮ್ ಟ್ರೈಲರ್ 57 ಮಿಲಿಯನ್ ವೀವ್ಸ್ ಪಡೆದುಕೊಂಡಿತ್ತು.

ಟಾಪ್ 2- 'ಆದಿಪುರುಷ್'

ಪ್ರಭಾಸ್ ನಟಿಸಿದ ಸಿನಿಮಾಗಳಲ್ಲೇ ಅತೀ ಹೆಚ್ಚು ನೆಗೆಟಿವ್ ಕಮೆಂಟ್ ಬಂದ ಸಿನಿಮಾ 'ಆದಿಪುರುಷ್'. ಈ ಸಿನಿಮಾ ಟೀಸರ್ ರಿಲೀಸ್ ಆಗುತ್ತಿದ್ದಂತೆ ಟ್ರೋಲ್ ಆಗಿತ್ತು. ನಿರ್ದೇಶಕರ ವಿರುದ್ಧ ಪ್ರಭಾಸ್ ಫ್ಯಾನ್ಸ್ ವಿರೋಧ ವ್ಯಕ್ತಪಡಿಸಿದ್ದರು. ಹೀಗಿದ್ದರೂ ಟ್ರೈಲರ್ ರಿಲೀಸ್ ಆದಾಗ 24 ಗಂಟೆಗಳಲ್ಲಿ 74 ಮಿಲಿಯನ್ (ಎಲ್ಲಾ ಭಾಷೆ) ವೀವ್ಸ್ ಬಂದಿತ್ತು.

ಟಾಪ್ 1 'ಕೆಜಿಎಫ್ 2'

ಯಶ್, ಪ್ರಶಾಂತ್ ನೀಲ್ ಕಾಂಬಿನೇಷನ್‌ನಲ್ಲಿ ಬಂದಿದ್ದ 'ಕೆಜಿಎಫ್ ಚಾಪ್ಟರ್ 2' 24 ಗಂಟೆಗಳಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಈ ಐದೂ ಭಾಷೆಯಿಂದ 109 ಮಿಲಿಯನ್ ವೀವ್ಸ್ ಬಂದಿತ್ತು. ಈ ದಾಖಲೆಯನ್ನು ಯಾರೂ ಮುರಿಯೋಕೆ ಆಗಿಲ್ಲ. ಈಗ ಪ್ರಶಾಂತ್ ನೀಲ್ ತಮ್ಮದೇ 'ಕೆಜಿಎಫ್ 2' ದಾಖಲೆಯನ್ನು ಮುರಿಯುತ್ತಾರಾ? ಅನ್ನೋ ಪ್ರಶ್ನೆ ಎದ್ದಿದೆ. ಅದಕ್ಕೆ 'ಸಲಾರ್' ಟ್ರೈಲರ್ 24 ಗಂಟೆಗಳಲ್ಲಿ 109 ಮಿಲಿಯನ್ ವೀವ್ಸ್ ದಾಟಬೇಕು.

More from Filmibeat

English summary
KGF 2, Adipurush, Radhe Shyam, Jawan, RRR top 5 most-viewed movie trailers. Will Salaar break this records?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X