KGF To Kabzaa: ಕನ್ನಡದ ಟಾಪ್ 5 ಬಿಗ್ ಬಜೆಟ್ ಸಿನಿಮಾಗಳ್ಯಾವುವು? ಅವುಗಳ ಬಜೆಟ್ ಎಷ್ಟು?
ಕನ್ನಡದ ಸಿನಿಮಾಗಳು ಬೌಂಡರಿಯನ್ನು ದಾಟಿ ಮುನ್ನುಗ್ಗುತ್ತಿವೆ. ಕರ್ನಾಟಕದ ಗಡಿಯನ್ನು ಈಗಾಗಲೇ ದಾಟಿ ಪ್ಯಾನ್ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದು ಆಗಿದೆ. ಪ್ಯಾನ್ ಇಂಡಿಯಾ ಸಿನಿಮಾಗಳೇ ಈಗ ಸ್ಯಾಂಡಲ್‌ವುಡ್‌ನ ಫೇಸ್ ಆಗಿ ಬದಲಾಗಿದೆ.
'ಕೆಜಿಎಫ್', 'ಕಾಂತಾರಾ', '777 ಚಾರ್ಲಿ', 'ವಿಕ್ರಾಂತ್ ರೋಣ' ಸೇರಿದಂತೆ 'ಕಬ್ಜ' ಸಿನಿಮಾಗಳು ಬಿಗ್ ಬಜೆಟ್‌ನಲ್ಲಿ ನಿರ್ಮಾಣಗೊಂಡಿದ್ದವು. ಇವುಗಳಿಗೆ ಸಿಕ್ಕ ಯಶಸ್ಸಿನ ಬೆನ್ನಲ್ಲೇ ಸ್ಯಾಂಡಲ್‌ವುಡ್ ಈಗ ಪ್ಯಾನ್ ಇಂಡಿಯಾ ಸಿನಿಮಾಗಳನ್ನೇ ನಿರ್ಮಾಣ ಮಾಡುತ್ತಿದೆ.

ಇನ್ನೊಂದು ಅಚ್ಚರಿ ವಿಷಯವೆಂದರೆ, ಕನ್ನಡ ಬಿಗ್ ಬಜೆಟ್ ಸಿನಿಮಾಗಳಿಗೆ ಹಾಗೂ ಸ್ಮಾಲ್ ಬಜೆಟ್ ಸಿನಿಮಾಗಳಿಗೆ ಹೇಗೆ ಒಂದೇ ರೀತಿಯ ರೆಸ್ಪಾನ್ಸ್ ಸಿಕ್ಕಿದೆ. ಕರ್ನಾಟಕ ಹಾಗೂ ಬೇರೆ ರಾಜ್ಯಗಳಲ್ಲಿ ಒಂದೇ ತರಹದ ಪ್ರತಿಕ್ರಿಯೆ ಸಿಕ್ಕಿದೆ. ಆದರೂ, ಬಿಗ್ ಬಜೆಟ್ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸಕ್ಸಸ್ ಫುಲ್ ಅಂತ ಸಾಬೀತಾಗಿವೆ. ಇದೂವರೆಗೂ ಕನ್ನಡದ ನಿರ್ಮಾಣಗೊಂಡಿರುವ ಟಾಪ್ 5 ಬಿಗ್ ಬಜೆಟ್ ಸಿನಿಮಾಗಳ ಪಟ್ಟಿ ಇಲ್ಲಿದೆ.
5 'ಕುರುಕ್ಷೇತ್ರ'.. ಬಜೆಟ್ ಎಷ್ಟು?
ಚಾಲೆಂಜಿಂಗ್ ಸ್ಟಾರ್ ದರ್ಶನ್ ದುರ್ಯೋಧನನಾಗಿ ಕಾಣಿಸಿಕೊಂಡಿರುವ ಸಿನಿಮಾ ಕುರುಕ್ಷೇತ್ರ. ಮುನಿರತ್ನ ನಿರ್ಮಾಣದ ಈ ಸಿನಿಮಾ ಮಹಾಭಾರತದ ಯುದ್ಧವನ್ನು ದುರ್ಯೋಧನನ ದೃಷ್ಟಿಕೋನದಲ್ಲಿ ಹೇಳಲಾಗಿತ್ತು. ಬಹಳ ದಿನಗಳ ಬಳಿಕ ನಿರ್ಮಾಣಗೊಂಡಿದ್ದ ಈ ಐತಿಹಾಸಿಕ ಸಿನಿಮಾದ ಬಜೆಟ್ ಬರೋಬ್ಬರಿ 75 ಕೋಟಿ ರೂ. ಎಂದು ಅಂದಾಜಿಸಲಾಗಿತ್ತು.
4 'ಕೆಜಿಎಫ್ ಚಾಪ್ಟರ್ 1'.. ಬಜೆಟ್ ಎಷ್ಟು?
ಕನ್ನಡ ಚಿತ್ರರಂಗದಲ್ಲಿ ಒಂದು ಸಂಚಲನ ಸೃಷ್ಟಿಸಿದ ಸಿನಿಮಾವಿದು. ಸ್ಯಾಂಡಲ್‌ವುಡ್ ಮಾರುಕಟ್ಟೆಯನ್ನು ವಿಸ್ತರಿಸಿದ ಸಿನಿಮಾ 'ಕೆಜಿಎಫ್'. ಇತ್ತೀಚೆಗೆ ನಿರ್ಮಾಣಗೊಳ್ಳುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾಗಳಿಗೆ 'ಕೆಜಿಎಫ್ ಚಾಪ್ಟರ್ 1' ಸ್ಪೂರ್ತಿ. ಯಶ್, ಪ್ರಶಾಂತ್ ನೀಲ್ ಕಾಂಬಿನೇಷನ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ 200 ರಿಂದ 250 ಕೋಟಿ ರೂ. ಗಳಿಸಿತ್ತು. ಈ ಸಿನಿಮಾದ ಬಜೆಟ್ 90 ಕೋಟಿ ರೂ.

3 'ವಿಕ್ರಾಂತ್ ರೋಣ'.. ಬಜೆಟ್?
ಕಿಚ್ಚ ಸುದೀಪ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ 'ವಿಕ್ರಾಂತ್ ರೋಣ'. ಇದು ಕನ್ನಡದ ಮೊದಲ ಪ್ಯಾನ್ ಇಂಡಿಯಾ 3ಡಿ ಸಿನಿಮಾ. ಸುದೀಪ್, ನಿರೂಪ್ ಭಂಡಾರಿ, ನೀತಾ ಅಶೋಕ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಹಾಗೇ ಜಾಕ್ವೆಲಿನ್ ಫರ್ನಾಂಡೀಸ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡ ಸಿನಿಮಾವಿದು. ಅನುಪ್ ಭಂಡಾರಿ ಅಭಿನಯದ ಈ ಸಿನಿಮಾದ ಬಜೆಟ್ ಬರೋಬ್ಬರಿ 95 ಕೋಟಿ ರೂ. ಎಂದು ವರದಿಯಾಗಿತ್ತು. ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ, ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ 250 ಕೋಟಿ ರೂ. ಬ್ಯುಸಿನೆಸ್ ಮಾಡಿತ್ತು.
2 'ಕಬ್ಜ'.. ಬಜೆಟ್?
ಇತ್ತೀಚೆಗಷ್ಟೇ ತೆರೆಕಂಡಿರೋ ಸಿನಿಮಾ 'ಕಬ್ಜ'. ಆರ್ ಚಂದ್ರು ನಿರ್ದೇಶಿಸಿ, ನಿರ್ಮಿಸಿರೋ 'ಕಬ್ಜ'ದಲ್ಲಿ ಉಪೇಂದ್ರ, ಶ್ರಿಯಾ ಶರಣ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಹಾಗೇ ಕಿಚ್ಚ ಸುದೀಪ್, ಶಿವರಾಜ್‌ಕುಮಾರ್ ಅತಿಥಿ ಪಾತ್ರಗಳಲ್ಲಿ ನಟಿಸಿದ್ದರು. ಮೂಲಗಳ ಪ್ರಕಾರ, ಈ ಸಿನಿಮಾದ ಬಜೆಟ್ ಬರೋಬ್ಬರಿ 120 ಕೋಟಿ ರೂ. ಎನ್ನಲಾಗಿದೆ. ಸದ್ಯದ ಮಟ್ಟಿಗೆ ಇದು ಕನ್ನಡದ ಎರಡನೇ ಅತೀ ದೊಡ್ಡ ಬಿಗ್ ಬಜೆಟ್ ಸಿನಿಮಾ.
1 ಕೆಜಿಎಫ್ ಚಾಪ್ಟರ್ 2
'ಕೆಜಿಎಫ್ ಚಾಪ್ಟರ್ 1' ಸೂಪರ್ ಸಕ್ಸಸ್ ಕಂಡ ಬಳಿಕ 'ಕೆಜಿಎಫ್ ಚಾಪ್ಟರ್ 2' ಅನ್ನು ಬಿಗ್ ಬಜೆಟ್‌ನಲ್ಲಿ ನಿರ್ಮಿಸಲಾಗಿತ್ತು. ಸುಮಾರು 200 ಕೋಟಿ ರೂ. ಬಜೆಟ್‌ನಲ್ಲಿ 'ಕೆಜಿಎಫ್ 2' ರೆಡಿಯಾಗಿತ್ತು. ಇದು ಬಾಕ್ಸಾಫೀಸ್‌ನಲ್ಲಿ ಸುಮಾರು 1250 ಕೋಟಿ ರೂ. ಕಲೆಕ್ಷನ್ ಮಾಡಿ ಭಾರತೀಯ ಚಿತ್ರರಂಗದ ಆಲ್ ಟೈಮ್ ಹಿಟ್ ಸಿನಿಮಾಗಳಲ್ಲೊಂದು ಎಂದು ಸಾಬೀತಾಗಿತ್ತು. ಕನ್ನಡ ಸೇರಿದಂತೆ, ಹಿಂದಿ,ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲೂ ಸಖತ್ ರೆಸ್ಪಾನ್ಸ್ ಸಿಕ್ಕಿತ್ತು.


Click it and Unblock the Notifications











