"ಹೆಣ್ಣು ಅಂದರೆ ಏನು?" ಅಂತ ಪ್ರಶ್ನೆ ಮಾಡಿದ್ದ ಕಿಚ್ಚ; ಆಗ ಕ್ರೇಜಿಸ್ಟಾರ್ ರವಿಚಂದ್ರನ್ ಕೊಟ್ಟಿದ್ದ ಉತ್ತರವೇನು ಗೊತ್ತೇ?

ಸ್ಯಾಂಡಲ್‌ವುಡ್‌ನ ಕೇಜಿಸ್ಟಾರ್ ರವಿಚಂದ್ರನ್ ಇಂದು (ಮೇ 30) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 63ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರು ರವಿಚಂದ್ರನ್ ಹೊಸ ಹೊಸ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ 'ದ ಜಡ್ಜ್‌ಮೆಂಟ್' ಸಿನಿಮಾ ರಿಲೀಸ್ ಆಗಿದ್ದು, ಸಿನಿಮಾ ನೋಡಿದವರಿಗೆ ಇಷ್ಟ ಆಗಿದೆ. ಈಗ ತನ್ನ ವಯಸ್ಸಿಗೆ ತಕ್ಕಂತಹ ಸಿನಿಮಾಗಳನ್ನು ಮಾಡುತ್ತಿರುವ ಕ್ರೇಜಿಸ್ಟಾರ್‌ಗೆ ಅಭಿಮಾನಿಗಳೇನು ಕಮ್ಮಿಯಾಗಿಲ್ಲ.

ಕನ್ನಡ ಸಿನಿ ರಸಿಕರು ರವಿಚಂದ್ರನ್ ಅನ್ನು ಸುಮ್ಸುಮ್ಮನೆ ಕ್ರೇಜಿಸ್ಟಾರ್ ಕರೆದಿಲ್ಲ. ಅವರ ಸಿನಿಮಾಗಳು ಹಾಗೇ ಇರುತ್ತಿತ್ತು. ಕ್ರೇಜಿ ಐಡಿಯಾಗಳನ್ನು ಇಟ್ಟುಕೊಂಡು ಸಿನಿಮಾ ಮಾಡುತ್ತಿದ್ದ ರವಿಮಾಮನಿಗೆ ಇಂದಿಗೂ ಅಭಿಮಾನಿಗಳು ಆರಾಧಿಸುವುದಕ್ಕೆ ಅವರ ಸಿನಿಮಾಗಳು ಹಾಗೂ ಅದರ ಹಾಡುಗಳೇ ಕಾರಣ. ಇವರು ತಮ್ಮ ಸಿನಿಮಾಗಳಲ್ಲಿ ನಾಯಕಿಯರನ್ನು ತೋರಿಸಿದ ಹಾಗೆ ಮತ್ಯಾರೂ ತೋರಿಸಿಲ್ಲ ಅನ್ನೋದು ಅವಿರೋಧವಾಗಿ ಸಿನಿಮಾ ಮಂದಿ ಒಪ್ಪಿಕೊಂಡಿದ್ದಾರೆ.

Kichcha Sudeep once asked Who is a woman This is what Ravichandran gave as an answer

ರವಿಚಂದ್ರನ್ ಕಣ್ಣುಗಳಲ್ಲಿ ನಾಯಕಿಯರು ಕಂಡಷ್ಟು ಅಂದವಾಗಿ ಬೇರೆ ಯಾರೂ ಕಾಣಿಸುವುದಿಲ್ಲ ಅನ್ನೋದನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ. ಈ ಹಿಂದೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ರವಿಚಂದ್ರನ್ ಅತಿಥಿಯಾಗಿ ಬಂದಿದ್ದಾಗ, ಈ ಪ್ರಶ್ನೆಗಳನ್ನು ಕೇಳಲಾಗಿತ್ತು. ಅದಕ್ಕೆ ಕಿಚ್ಚ ಸುದೀಪ್ ಕೇಳಿದ್ದ ಪ್ರಶ್ನೆಗನ್ನು ಇಟ್ಟಿಕೊಂಡು ಕ್ರೇಜಿಸ್ಟಾರ್ ಉತ್ತರ ಕೊಟ್ಟಿದ್ದರು. ಇಷ್ಟೇ ಅಲ್ಲದೆ, ರವಿಚಂದ್ರನ್ ಜೊತೆ ಕೆಲಸ ಮಾಡಿದ ನಾಯಕಿಯರು ರವಿಚಂದ್ರನ್ ಬಗ್ಗೆ ಓಪನ್ ಆಗಿ ಮಾತಾಡಿದ್ದರು.

ರವಿಚಂದ್ರನ್‌ಗೆ ಹೆಣ್ಣಿನ ಬಗ್ಗೆ ತುಂಬಾನೇ ಗೌರವ ಇಟ್ಟಿಕೊಂಡಿದ್ದಾರೆ. ಈ ಮಾತನ್ನು ಅವರು ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. 'ವೀಕೆಂಡ್ ವಿತ್ ರಮೇಶ್'ಗೆ ಅತಿಥಿಯಾಗಿ ಬಂದಿದ್ದಾಗಲೂ ಈ ಮಾತನ್ನು ಹೇಳಿದ್ದರು. ಆದರೆ, ಅವರು ಈ ಕಾರ್ಯಕ್ರಮಕ್ಕೆ ಬರುವುದಕ್ಕೂ ಮುನ್ನ ಕಿಚ್ಚ ಸುದೀಪ್ "ಹೆಣ್ಣು ಅಂದರೆ ಏನು?" ಎಂದು ರವಿಚಂದ್ರನ್ ಅವರನ್ನು ಕೇಳಿದ್ದರು. ಅದಕ್ಕೆ ಕ್ರೇಜಿ ಉತ್ತರ ಹೀಗಿತ್ತು.

Kichcha Sudeep once asked Who is a woman This is what Ravichandran gave as an answer

"ಸುದೀಪ್ ಹೆಣ್ಣು ಅಂದರೆ ಏನು ಅಂತ ಸುದೀಪ್ ಕೇಳಿದ್ದ. ನನಗೆ ಹೆಣ್ಣು ಅಂದರೆ ಸ್ಪೂರ್ತಿ. ಅವಳು ಇಲ್ಲದೆ ಇದ್ದರೆ ಏನೂ ಪೂರ್ತಿ ಆಗುವುದಿಲ್ಲ ಅಂತ ಹೇಳಿದೆ. ಮಹಿಳೆ ಅನ್ನೋ ಪದ ಇದೆಯಲ್ಲ. ಅದು ತುಂಬಾನೇ ದೊಡ್ಡ ಪದ. ಎಲ್ಲಾ ಪ್ರಕಾರಗಳಲ್ಲೂ ಮಹಿಳೆಯರನ್ನು ಇಷ್ಟ ಪಡುತ್ತೇನೆ. ಅವರನ್ನು ಚೆನ್ನಾಗಿ ತೋರಿಸಬೇಕು ಅನ್ನೋದು ನನ್ನ ಮನಸ್ಸಿನಲ್ಲಿ ಇದೆ. ಇಷ್ಟು ಆದರೂ, ನಾಯಕಿಯರು ಯಾವ ಡ್ರೆಸ್ ಹಾಕಿಕೊಳ್ಳಬೇಕು ಅಂತ ನನ್ನನ್ನೇ ಕೇಳಿಕೊಂಡು ಸುಮ್ಮನೆ ನಿಂತುಕೊಳ್ಳುತ್ತಾರೆ. ಯಾರೂ ಮಾತಾಡಲ್ಲ" ಎಂದು ಕ್ರೇಜಿಸ್ಟಾರ್ ರವಿಚಂದ್ರನ್ ಹೇಳಿಕೊಂಡಿದ್ದರು.

ಹೀಗೊಮ್ಮೆ ಪ್ರೀತ್ಸೋದ್ ತಪ್ಪ ಸಿನಿಮಾಗಾಗಿ ಕನ್ನಡಕ್ಕೆ ಬಂದಿದ್ದ ಶಿಲ್ಪಾ ಶೆಟ್ಟಿ ಪ್ಯಾಂಟ್ ಹಾಕೊಂಡು ಬಂದಿದ್ದರು. ಅದು ರವಿಚಂದ್ರನ್ ಇಷ್ಟ ಆಗಿರಲಿಲ್ಲ. ಅದ್ಯಾಕೆ ಅನ್ನೋದನ್ನು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು. "ಇದೇ ಶಿಲ್ಪ ಶೆಟ್ಟಿ ಬಾಂಬೆ ಹೀರೊಯಿನ್ ತರ ಬಂದಳು. ಅವಳು ಹಾಕೊಂಡು ಬಂದಿದ್ದ ಡ್ರೆಸ್ ಹಾಕೊಂಡು ಬಂದಿದ್ದಳು. ನನಗೆ ಈ ಡ್ರೆಸ್ ಎಲ್ಲಾ ಇಷ್ಟ ಅಂತ ಹೇಳಿದೆ. ನನಗೆ ಹುಡುಗಿಯರು ಪ್ಯಾಂಟ್ ಹಾಕೊಂಡು ಬಂದರೆ ಇಷ್ಟ ಆಗಲ್ಲ. ಪಕ್ಕದಲ್ಲಿ ಹೀರೊ ಇದ್ದಾಗ ಹೀರೊಯಿನ್ ಪ್ಯಾಂಟ್ ಹಾಕಿಕೊಂಡರೆ ಸೂಟ್ ಆಗಲ್ಲ. ಅವಳು ಕೇಳುತ್ತಿರಲಿಲ್ಲ. ಇದೇ ಫ್ಯಾಷನ್ ಅಂತ ಹೇಳೋಳು. ಆರಂಭದಲ್ಲೇ ಜಗಳ ಮಾಡೋಕೆ ಆಗುವುದಿಲ್ಲ. ಎರಡು ಮೂರು ದಿನ ನಾವು ತೆಗೆಯುತ್ತಿರುವ ರೀತಿ ನೋಡುತ್ತಿದ್ದಂತೆ ಶಿಲ್ಪಾ ಶೆಟ್ಟಿ ಸರೆಂಡರ್ ಆಗಿದ್ದರು. ಅವಳ ಡ್ರೆಸ್ ಎಲ್ಲಾ ತೆಗೆದು ನೀನು ಯಾವ ಡ್ರೆಸ್ ಕೊಡುತ್ತಿರೋ ರೆಡಿ ಮಾಡಿಕೋ ಅಂದಳು. ಹಾಗೇ ನಾನು ಮಹಿಳೆಗೆ ಗೌರವ ಕೊಡುತ್ತೇನೆ. ಅದೆಲ್ಲ ಸ್ಕ್ರೀನ್ ಮೇಲೆ ಕಾಣುತ್ತೆ ಅಷ್ಟೇ." ಎಂದು ರವಿಚಂದ್ರನ್ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು.

ಇನ್ನು ರವಿಚಂದ್ರನ್ ಜೊತೆ ಕೆಲಸ ಮಾಡಿದ್ದ ಮಾಲಾಶ್ರೀ ಕೂಡ 'ರಾಮಾಚಾರಿ' ಸಿನಿಮಾದ ಅನುಭವಗಳನ್ನು ಹೇಳಿಕೊಂಡಿದ್ದರು. "ರಾಮಾಚಾರಿ ಕ್ಲೈಮ್ಯಾಕ್ಸ್ ಸಾಂಗ್ ಶೂಟ್ ಮಾಡುವಾಗ ನನಗೆ ನಿದ್ದೇನೆ ಇಲ್ಲ. ನೀನು ಮಲ್ಕೋ ಅಂತ ನನಗೆ ನಿದ್ದೆ ಮಾಡುವುದಕ್ಕೆ ಬಿಟ್ಟಿದ್ರಿ. ನಿದ್ದೆಯಲ್ಲಿ ಇರುವಾಗಲೇ ಎಷ್ಟು ಶಾಟ್ ತೆಗೆದಿದ್ರಿ. ಅದು ನನಗೆ ಗೊತ್ತಿರಲಿಲ್ಲ. ಸಿನಿಮಾ ನೋಡಿದ್ಮೇಲೆ ಎಲ್ಲಿಂದ ತೆಗೆದರು ಅಂತ ನನಗೆ ಸರ್ಪ್ರೈಸ್ ಆಯ್ತು. ನಾನು ಈ ಸಿನಿಮಾಗೆ ಕೆಲಸ ಮಾಡಿದ್ದೇ 10 ರಾತ್ರಿ, 2 ಡೇ ಶೂಟ್. ಅದರಲ್ಲೇ ಎಷ್ಟು ಚೆನ್ನಾಗಿ ಪ್ಲಾನ್ ಮಾಡಿದ್ರಿ. ನನ್ನನ್ನು ಎಷ್ಟು ಚೆನ್ನಾಗಿ ತೋರಿಸಿದ್ರಿ." ಎಂದು ಮಾಲಾಶ್ರೀ ವೀಕೆಂಡ್ ವಿತ್ ರಮೇಶ್‌ನಲ್ಲಿ ಹೇಳಿದ್ದರು.

ಇನ್ನು ರವಿಚಂದ್ರನ್‌ಗೆ ಮತ್ತೆ ಗೆಲವು ಕೊಟ್ಟ 'ಮಲ್ಲ' ಸಿನಿಮಾದ ನಾಯಕಿ ಪ್ರಿಯಾಂಕಾ ಉಪೇಂದ್ರ ಕೂಡ ತನ್ನ ಕರಿಯರ್‌ನ ಬೆಸ್ಟ್ ಸಿನಿಮಾ ಎಂದಿದ್ದರು. "ನನ್ನ ಕರಿಯರ್‌ನಲ್ಲಿ ಎರಡು ಬೆಸ್ಟ್ ಸಿನಿಮಾ ಅಂದರೆ, ಮಲ್ಲ ಮತ್ತು ಕ್ರೇಜಿಸ್ಟಾರ್. ಮಲ್ಲ ತುಂಬಾನೇ ಕಷ್ಟದ ಸಿನಿಮಾ ಆಗಿತ್ತು. ನನ್ನ ಹೃದಯಕ್ಕೆ ತುಂಬಾನೇ ಹತ್ತಿರವಾದ ಸಿನಿಮಾ. ನನ್ನ ಕರಿಯರ್‌ನಲ್ಲಿ ಅದ್ಭುತವಾದ ಪಾತ್ರ ಮಾಡಿದ್ದೇನೆ ಅಂದರೆ ಅದು ಮಲ್ಲದಲ್ಲಿ. ರವಿ ಸರ್ ಇಲ್ಲದೆ ಆ ರೋಲ್ ಮಾಡುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ." ಎಂದು ಪ್ರಿಯಾಂಕಾ ಉಪೇಂದ್ರ ಹೇಳಿದ್ದರು.

More from Filmibeat

English summary
V. Ravichandran revealed why he shows beautiful actresses in his movies.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X