Venkatesh-Soundarya: ಮನಸಾರೆ ಪ್ರೀತಿಸುತ್ತಿದ್ದ ಸೌಂದರ್ಯಾ ಕೈಯಲ್ಲಿ ವೆಂಕಟೇಶ್ ರಾಖಿ ಕಟ್ಟಿಸಿಕೊಂಡಿದ್ದೇಕೆ? ಏನದು ಘಟನೆ?

ಒಂದು ಕಾಲದಲ್ಲಿ ತೆಲುಗು ಹೀರೊಗಳು ಆಕ್ಷನ್ ಸಿನಿಮಾಗಳಲ್ಲೇ ಹೆಚ್ಚು ನಟಿಸುತ್ತಿದ್ದ ಕಾಲವಿತ್ತು. ಆಕ್ಷನ್ ಸೀನ್ ಇಲ್ಲದ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಲೇ ಇರಲಿಲ್ಲ. ಇಂತಹ ಸಂದರ್ಭದಲ್ಲಿ ಕೌಟುಂಬಿಕ ಸಿನಿಮಾಗಳನ್ನು ಮಾಡಿಯೂ ಸ್ಟಾರ್ ಹೀರೊ ಆಗಬಹುದು ಅಂತ ಸಾಬೀತು ಮಾಡಿದ್ದು ದಗ್ಗುಬಾಟಿ ವೆಂಕಟೇಶ್.

ತೆಲುಗಿನ ಜನಪ್ರಿಯ ನಿರ್ಮಾಪಕ ರಾಮ ನಾಯ್ಡುಗೆ ಇಬ್ಬರು ಪುತ್ರರು. ಮೊದಲನೆಯವರು ದಗ್ಗುಬಾಟಿ ಸುರೇಶ್. ಎರಡನೇ ಪುತ್ರ ದಗ್ಗುಬಾಟಿ ವೆಂಕಟೇಶ್. ಇವರಿಬ್ಬರನ್ನೂ ಹೀರೊ ಮಾಡಬೇಕು ಅಂತ ರಾಮ ನಾಯ್ಡು ಆಸೆ ಪಟ್ಟಿದ್ದರು. ಆದರೆ, ದಗ್ಗುಬಾಟಿ ಸುರೇಶ್ ನಟನೆ ಕಡೆ ಮನಸ್ಸು ಮಾಡಲಿಲ್ಲ. ಹೀಗಾಗಿ ಎರಡನೇ ಪುತ್ರ ವೆಂಕಟೇಶ್‌ರನ್ನು ಸ್ಟಾರ್ ಮಾಡುವಲ್ಲಿ ಯಶಸ್ವಿಯಾದರು.

Late Actress Soundarya tied Rakhi to Venkatesh do you know why

ಈ ವೇಳೆ ವಿಕ್ಟರಿ ವೆಂಕಟೇಶ್ ಹಾಗೂ ನಟಿ ಸೌಂದರ್ಯಾ ಜೊತೆಯಾಗಿ ನಟಿಸಿದ ಸಿನಿಮಾಗಳು ಹಿಟ್ ಆದವು. ಇಬ್ಬರ ಕಾಂಬಿನೇಷನ್‌ನಲ್ಲಿ ಸಿನಿಮಾಗಳು ಗೆಲ್ಲುವುದಕ್ಕೆ ಶುರುವಾಗಿದ್ದವು. ಈ ವೇಳೆನೇ ಸೌಂದರ್ಯಾ ಹಾಗೂ ವೆಂಕಟೇಶ್ ಪ್ರೀತಿಯಲ್ಲಿ ಬಿದ್ದಿದ್ದಾರೆ ಅನ್ನೋ ಸುದ್ದಿ ಹರಿದಾಡಿದ್ದವು. ಈ ಸುದ್ದಿ ಹಬ್ಬುತ್ತಿದ್ದಂತೆ ಸೌಂದರ್ಯಾ ಸೀದಾ ವಿಕ್ಟರಿ ವೆಂಕಟೇಶ್‌ಗೆ ರಾಖಿ ಕಟ್ಟಿ ಬೇರೆಯಾದರು ಅನ್ನೋ ಸುದ್ದಿನೂ ಅಷ್ಟೇ ಸದ್ದು ಮಾಡಿತ್ತು.

ವೆಂಕಟೇಶ್-ಸೌಂದರ್ಯಾ ಹಿಟ್ ಜೋಡಿ!

ದಗ್ಗುಬಾಟಿ ವೆಂಕಟೇಶ್ ಹಾಗೂ ಸೌಂದರ್ಯಾ ಕೆಮಿಸ್ಟ್ರಿನೇ ಹಾಗಿತ್ತು. ಸಿನಿಮಾ ಹೇಗೆ ಇರಲಿ, ಇಬ್ಬರು ಸ್ಕ್ರೀನ್ ಮೇಲೆ ಬಂದರೆ ಸಾಕು. ಆ ಸಿನಿಮಾ ಬ್ಲಾಕ್ ಬಸ್ಟರ್ ಲಿಸ್ಟ್ ಸೇರಿಬಿಡುತ್ತಿತ್ತು. ಮಹಿಳಾ ಪ್ರೇಕ್ಷಕರನ್ನು ಥಿಯೇಟರ್‌ಗೆ ಕರೆದುಕೊಂಡು ಬಂದ ಕ್ರೆಡಿಟ್ ಇವರಿಬ್ಬರಿಗೂ ಸಲ್ಲುತ್ತೆ. ತೆರೆಮೇಲೆ ಇಬ್ಬರ ಕೆಮಿಸ್ಟ್ರಿ ನೋಡಿದವರು ವೆಂಕಟೇಶ್ ಹಾಗೂ ಸೌಂದರ್ಯಾ ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದಾರೆ ಅನ್ನೋ ಹರಿದಾಡುವುದಕ್ಕೆ ಶುರುವಾಗಿತ್ತು.

ವೆಂಕಟೇಶ್ ಮನೆಯಲ್ಲಿ ಗದ್ದಲ್ಲ

1985ರಲ್ಲೇ ನೀರಜ ಎಂಬುವವರ ಜೊತೆ ವೆಂಕಟೇಶ್ ಮದುವೆ ಆಗಿದ್ದರು. ಇವರಿಗೆ ನಾಲ್ಕು ಮಂದಿ ಮಕ್ಕಳಿದ್ದರು. ಹೀಗಿದ್ದರೂ, ವೆಂಕಟೇಶ್‌ಗೆ ನಟಿ ಸೌಂದರ್ಯಾ ಮೇಲೆ ಮನಸಾಗಿತ್ತು. ಇದು ಮನೆಯಲ್ಲಿ ತಿಳಿಯುತ್ತಿದ್ದಂತೆ ಗದ್ದಲವೇ ಶುರುವಾಗಿತ್ತು. ಈ ವಿಷಯ ವೆಂಕಟೇಶ್ ತಂದೆ ರಾಮ ನಾಯ್ಡು ಕಿವಿಗೆ ಬಿದ್ದಿತ್ತು. ಎಷ್ಟೇ ತಿಳಿಸಿ ಹೇಳಿದರೂ ವೆಂಕಟೇಶ್ ಒಪ್ಪಿಕೊಳ್ಳುವ ಮನಸ್ಥಿತಿಯಲ್ಲೇ ಇರಲಿಲ್ಲ ಎಂದು ಅಂದು ವರದಿಯಾಗಿದ್ದವು.

Late Actress Soundarya tied Rakhi to Venkatesh do you know why

ರಾಖಿ ಕಟ್ಟಿಸಿದ ರಾಮ ನಾಯ್ಡು

ವೆಂಕಟೇಶ್ ಮಾತು ಕೇಳದ ಸ್ಥಿತಿಯಲ್ಲಿ ಇದ್ದಿದ್ದರಿಂದ ರಾಮ ನಾಯ್ಡು ಅಖಾಡಕ್ಕೆ ಇಳಿದಿದ್ದರು. ಸೀದಾ ಸೌಂದರ್ಯಾ ಬಳಿ ಬಂದು ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟಿದ್ದರು. ಆ ವೇಳೆ ಸೌಂದರ್ಯ ಕೂಡ ನನ್ನ ಅಂತಹ ಭಾವನೆಯೇ ಇಲ್ಲ ಎಂದು ಹೇಳಿದ್ದರು. ತಕ್ಷಣವೇ ವೆಂಕಟೇಶ್‌ಗೆ ನಟಿ ಸೌಂದರ್ಯಾ ರಾಖಿ ಕಟ್ಟಿ ಇಬ್ಬರನ್ನೂ ಅಣ್ಣಾ ತಂಗಿಯ ಸಂಬಂಧ ಬೆಸೆದಿದ್ದರು ಎಂದು ತೆಲುಗು ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಆ ಬಳಿಕ ಸಿನಿಮಾವನ್ನೇ ಮಾಡಿಲ್ಲ

ಸೌಂದರ್ಯಾ ಅದ್ಯಾವಾಗ ವೆಂಕಟೇಶ್‌ಗೆ ರಾಖಿಯನ್ನು ಕಟ್ಟಿದರೋ ಅಲ್ಲಿಂದ ಇಬ್ಬರು ಮತ್ತೆ ಒಟ್ಟಿಗೆ ಸಿನಿಮಾವನ್ನೇ ಮಾಡಿಲ್ಲ. ಟಾಲಿವುಡ್‌ನ ಬೆಸ್ಟ್ ಪೇರ್ ಇದೊಂದು ಘಟನೆಯಿಂದ ಬೇರೆ ಆಯ್ತು. ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಬಹುದಾಗಿದ್ದ ಜೋಡಿ ರಾಖಿ ಪ್ರಸಂಗದಿಂದ ಮತ್ತೆ ಸಿನಿಮಾವನ್ನು ಮಾಡದೇ ಸಿನಿಪ್ರಿಯರಿಗೆ ನಿರಾಸೆ ಮಾಡಿದ್ದರು ಎಂಬ ಸುದ್ದಿಯಂತೂ ಹರಿದಾಡಿತ್ತು.

More from Filmibeat

English summary
Late Actress Soundarya tied Rakhi to Venkatesh:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X