ಆ ವ್ಯಕ್ತಿಯ ಮುಂದೇನೆ ಬೆಂಕಿ ಹಚ್ಚಿಕೊಂಡಿದ್ದ ಮಂಜುಳಾ; ಕನ್ನಡದ ಲೆಜೆಂಡರಿ ನಟಿಯ ಬಾಳಲ್ಲಿ ನಡೆದಿದ್ದೇನು?

ಕನ್ನಡ ಚಿತ್ರರಂಗ ಕಂಡ ಅದ್ಭುತ ಪ್ರತಿಭೆ ಮಂಜುಳಾ. ಬದುಕಿದ್ದರೆ, ಕನ್ನಡ ಚಿತ್ರರಂಗಕ್ಕೆ ಇನ್ನೊಂದು ಒಳ್ಳೆಯ ಸಿನಿಮಾಗಳನ್ನು ನೀಡುತ್ತಿದ್ದರು. ಯಶಸ್ಸಿನ ಉತ್ತುಂಗಕ್ಕೆ ಏರಿದ್ದ ಮಂಜುಳಾ ಬಾಳಲ್ಲಿ ವಿಧಿ ಆಟ ಆಡಿತ್ತು. ಹೆಸರು, ಹಣ ಎಲ್ಲಾ ಇದ್ದರೂ ಮಂಜುಳಾ ಅದನ್ನು ಅನುಭವಿಸುವುದಕ್ಕೆ ಆಗಲಿಲ್ಲ. ಅವರ ವೈಯಕ್ತಿಕ ಬದುಕು ಅವರಿಗೆ ಸಾಥ್ ಕೊಡಲಿಲ್ಲ.

ಮಂಜುಳಾ ಅವರ ಸಾವಿನ ಬಗ್ಗೆ ನೂರೆಂಟು ಕಥೆಗಳು ಹುಟ್ಟಿಕೊಂಡಿವೆ. ಒಬ್ಬೊಬ್ಬರು ಒಂದೊಂದು ಕಾರಣಗಳನ್ನು ಕೊಟ್ಟಿದ್ದೂ ಇದೆ. ಚೀಟಿ ವ್ಯವಹಾರದಲ್ಲಿ ನಷ್ಟ ಆಗಿ ಆತ್ಮಹತ್ಯೆ ಮಾಡಿಕೊಂಡರು ಅನ್ನೋ ವದಂತಿ ಹಬ್ಬಿತ್ತು. ಇನ್ನು ಕೆಲವರು ಸಿಲಿಂಡರ್ ಸ್ಟೋಟಗೊಂಡು ಸಾವನ್ನಪ್ಪಿದರು ಎಂದಿದ್ದೂ ಇದೆ. ಆದರೆ, ಹಿರಿಯ ನಟ ದಿವಂಗತ ರಾಜೇಶ್ ಅವರು ನೆಲಮುಗಿಲು ಟಿವಿ ಅನ್ನೋ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಂಜುಳಾ ಅವರ ಸಾವಿಗೆ ಪ್ರೇಮ ವೈಫಲ್ಯವೇ ಕಾರಣ ಎಂದು ಹೇಳಿದ್ದರು. ಆ ಸಂದರ್ಶನದ ಒಂದು ಝಲಕ್ ಇಲ್ಲಿದೆ.

Late Senior Actor Rajesh once revealed that Manjula died because of love failure

ಮಂಜುಳಾ ಯಶಸ್ಸಿನ ಉತ್ತುಂಗದಲ್ಲಿ ಇದ್ದಾಗ ಅವರಿಗೆ ಅಮೃತಂ ಎಂಬ ತಮಿಳಿನ ಕ್ಯಾಮರಾಮ್ಯಾನ್ ಕಮ್ ನಿರ್ದೇಶನ ಮೇಲೆ ಪ್ರೀತಿ ಹುಟ್ಟಿತ್ತು. ಅದು ಹಾಗೇ ಬೆಳೆದು ಮುಂದಿನ ಹಂತಕ್ಕೂ ಹೋಯ್ತು. ಅಲ್ಲಿಂದ ಏನಾಯ್ತು ಅನ್ನೋದನ್ನು ಕಲಾತಪಸ್ವಿ ರಾಜೇಶ್ ವಿವರಿಸುತ್ತಾ ಹೋಗಿದ್ದಾರೆ. "ಅಮೃತಂ ಅಂತ.. ಅವನು ಕರುಣಾನಿಧಿಯವರ ಅಕ್ಕನ ಮಗ. ಅವನು ಒಳ್ಳೆಯ ನಿರ್ದೇಶಕ, ಕ್ಯಾಮರಾಮ್ಯಾನ್. ಅವನ ಸಂಪರ್ಕ ಹುಡುಗಾಟದ ಹುಡುಗಿ ಅನ್ನೋಸ ಸಿನಿಮಾದಲ್ಲಿ ಮಂಜುಳಾಗೆ ಆಗಿದೆ. ಅಲ್ಲೇ ಪ್ರೀತಿ-ಪ್ರೇಮ ಕೂಡ ಅರಳಿಬಿಟ್ಟಿದೆ. ಅದು ಮದುವೆ ಆಗುವ ಹಂತಕ್ಕೂ ಬಂದಿದೆ. ಇದು ನನ್ನ ಕಿವಿಗೂ ಬಿತ್ತು. ನೀವೊಂದು ಮಾತು ಹೇಳಿ ಸಾರ್ ಅಂದರು. ಇದು ಅವರ ವೈಯಕ್ತಿಕ ವಿಚಾರಗಳು ನಾವು ಹೇಗೆ ಹೇಳುವುದಕ್ಕೆ ಸಾಧ್ಯ? ಅದು ನನ್ನ ಇಷ್ಟ.. ನನ್ನ ಇಚ್ಛೆ ಅಂದರೆ ಏನು ಮಾಡೋದು." ಎಂದು ಹಿರಿಯ ನಟ ದಿವಂಗತ ರಾಜೇಶ್ ಸಂದರ್ಶನದಲ್ಲಿ ಹೇಳಿದ್ದಾರೆ.

ಹಾಗೇ ಮಂಜುಳಾ ಅವರ ಮಾರ್ಕೆಟ್ ತಗ್ಗಿದಾಗ ಏನಾಯ್ತು ಅನ್ನೋದನ್ನು ವಿವರಿಸಿದ್ದಾರೆ. "ಮಂಜುಳಾ ಮಾರ್ಕೆಟ್ ತಗ್ಗುತಾ ಬಂತು. ಇವನು ಮಂಜುಳಾ ಜೊತೆ ವಾಸ ಮಾಡುತ್ತಿದ್ದನು. ಯಾವಾಗ ಮಂಜುಳಾ ಮಾರ್ಕೆಟ್ ತಗ್ಗುತ್ತಾ ಬಂತೋ ಆಗ ಇವಳ ಸಹವಾಸ ಕಡಿಮೆ ಮಾಡಿಕೊಂಡು ಮದ್ರಾಸ್‌ನಲ್ಲಿಯೇ ಸೆಟಲ್ ಆಗುವಂತಹ ಸಂದರ್ಭ ಬಂತು. ಅದಾಗಲೇ ಮಂಜುಳಾಗೆ ಒಂದು ಮಗು ಆಗಿದೆ. ಇದೆಲ್ಲ ನನಗೆ ಹೇಗೆ ಗೊತ್ತಾಯ್ತು ಅಂದರೆ, ನನ್ನ ಮಗಳಿಗೂ ಮಂಜುಳಾಗೂ ಸೇತುವೆಯಾಗಿ ಇದ್ದಿದ್ದು ಡ್ಯಾನ್ಸ್ ಮಾಸ್ಟರ್. ಅವರಿಂದ ನನಗೆ ಗೊತ್ತಾಯ್ತು." ಎಂದಿದ್ದರು.

ಮಂಜುಳಾ ಅವರ ಮಾರ್ಕೆಟ್ ಕಡಿಮೆ ಆಗಿತ್ತು. ಆತ ಬರುವುದು ಕಮ್ಮಿ ಆಯ್ತು. ಪತಿ ಅಮೃತಂ ಮದ್ರಾಸ್‌ನಲ್ಲಿ ಸೆಟಲ್ ಆಗಿಬಿಟ್ಟರು. ಆಗ ಮಂಜುಳಾ ಪೋನ್‌ ಮಾಡಿ ದು:ಖ ತೋಡಿಕೊಳ್ಳುತ್ತಿದ್ದರು. ಆ ಕಡೆಯಿಂದ ಪತಿ ಅಮೃತಂ ಕೂಡ ಸಮಾಧಾನ ಮಾಡಿ ಆಗೊಮ್ಮೆ ಈಗೊಮ್ಮೆ ಬಂದು ಹೋಗಿತ್ತಿದ್ದರು. ಕ್ರಮೇಣ ಮಂಜುಳಾ ಅವರನ್ನು ನೋಡುವುದಕ್ಕೆ ಬರುವುದನ್ನೇ ನಿಲ್ಲಿಸಿಬಿಟ್ಟರು.

Late Senior Actor Rajesh once revealed that Manjula died because of love failure

"ನನ್ನ ಮಾರ್ಕೆಟ್ ಇದ್ದಾಗ ಜೊತೆಯಲ್ಲೇ ಇದ್ರಿ. ಈಗ ನನ್ನ ಮಾರ್ಕೆಟ್ ಕಮ್ಮಿ ಆಗುತ್ತಿದೆ. ನನ್ನನ್ನ ಬಿಟ್ಟು ದೂರ ಆಗುತ್ತಿದ್ದೀರಾ? ಹಾಗೇನೂ ಇಲ್ಲ ಪ್ರಿಯಾ. ಹಾಗೇನು ಅಂದುಕೊಳ್ಳಬೇಡ. ನಾನು ಬರುತ್ತೇನೆ. ಸೋದರ ಮಾವನ ಕೆಲಸದ ಒತ್ತಡಗಳು ಜಾಸ್ತಿಯಿದೆ ಬಂದು ಹೋಗುತ್ತೇನೆ ಎಂದು ಹೇಳಿದ. ಈಕೆ ಮಗುವನ್ನು ನೋಡಿಕೊಂಡು ಹೋಗುವಂತಹ ಸೌಜನ್ಯವೂ ಬೇಡ ನಿಮಗೆ ಎಂದಾಗ ಬಂದು ಮೂರು-ನಾಲ್ಕು ದಿನ ಇದ್ದು ಮತ್ತೆ ಹೋಗುತ್ತಿದ್ದ. ಇದು ಮಂಜುಳಾ ಅವರಿಗೆ ತುಂಬಾ ದು:ಖ ಆಗಿತ್ತು" ಎಂದು ಹಿರಿಯ ನಟ ದಿವಂಗತ ರಾಜೇಶ್ ಹೇಳಿದ್ದರು.

ಇದೇ ವೇಳೆ ಮಂಜುನಾ ನಿರ್ಧಾರ ಮಾಡಿದ್ದರು. ಇನ್ನೊಬ್ಬನನ್ನು ಮದುವೆ ಆಗಬೇಕು. ಅವರಿಗೆ ಒಬ್ಬ ಹುಡುಗನೂ ಸಿಕ್ಕಿದ್ದ. " ಅವನು ಚಾಮರಾಜ ನಗರದ ಹುಡುಗ. ಒಳ್ಳೆಯ ವ್ಯಾಪಾರಸ್ಥರ ಮಗ. ವ್ಯಾಪಾರ ಚೆನ್ನಾಗಿದೆ. ಆ ಹುಡುಗನನ್ನು ಪ್ರೇಮಿಸಿದಳು. ಪ್ರೇಮ್ ನಿಕಟವಾಗುತ್ತಾ ಮದುವೆ ಪ್ರಸ್ತಾಪ ಬಂತು. ಮದುವೆ ಆಗಿ ಬಿಡೋಣ ಅಂದಳು. ಅವನೂ ಆಗುತ್ತೇನೆ ಅಂತನೇ ಮುಂದೂಡಿಕೊಂಡು ಬಂದ. ಹೀಗಂದರೆ ಆಗೋದಿಲ್ಲ ಮದುವೆ ಆಗಬೇಕು. ಒಂದು ಕೆಲಸ ಮಾಡೋಣ ದೇವಸ್ಥಾನದಲ್ಲಿ ಮದುವೆ ಆಗೋಣ ಅಂದಳು. ಇಬ್ಬರು ಸೇರಿ ಹೊರಟರು." ಎಂದು ಆ ದಿನದ ಘಟನೆಯನ್ನು ವಿವರಿಸಿದ್ದರು.

ಆದರೆ, ದಾರಿ ಮಧ್ಯೆನೇ ಆ ಹುಡುಗ ಕಾರು ನಿಲ್ಲಿಸಿ, ಅಪ್ಪ-ಅಮ್ಮನ ಆಶೀರ್ವಾದ ತೆಗೆದುಕೊಂಡು ಬರುತ್ತೇನೆ. ಇದೂವರೆಗೂ ಅವರಿಗೆ ಹೇಳಿಲ್ಲ. ಅವರ ಅಶೀರ್ವಾದ ಪಡೆದುಕೊಂಡೇ ಮದುವೆ ಆಗು ಅಂತ ಮನಸ್ಸು ಹೇಳುತ್ತಿದೆ ಅಂದಾಗ, ಮಂಜುಳಾ ಮನಸ್ಸಿಗೆ ತುಂಬಾನೇ ನೋವಾಯ್ತು. ಮನೆಯವರು ಕೇಳಿದಾಗ, ಅವರು ಮನಸ್ಸು ಬದಲಾಯಿಸಿದ್ದಾರೆಂತೆ ಅಂತ ಹೇಳಿದರು.

"ಮಂಜುಳಾ ಮನಸ್ಸು ಕೇಳಲಿಲ್ಲ. ಸುಮ್ಮನೆ ಹೀಗೆ ಬಿಡೋಕೆ ಆಗೋದಿಲ್ಲ ಅಂತ ಅಂದುಕೊಂಡಳು. ಒಳಗಡೆ ಹೋದಳು ಸೀಮೆ ಎಣ್ಣೆ ತೆಗೆದುಕೊಂಡು ಬಂದಳು. ಮೈಮೇಲೆ ಹಾಕಿಕೊಂಡಲು. ನಿಜಾ ಹೇಳು.. ಆಗ್ತೀಯಾ ಈಗಲೇ ಮದುವೆ ಆಗಬೇಕು. ಇಲ್ಲಾ ನಾನು ಉರಿದು ಹೋಗುತ್ತೇನೆ ಎಂದಳು. ಆ ವೇಳೆ ಆಕೆಗೆ ಪಕ್ಕ ಆಗಿ ಹೋಯ್ತು. ಬೆಂಕಿ ಹಚ್ಚಿಕೊಂಡಳು. ಇಡೀ ದೇಹವನ್ನು ಆವರಿಸಿಕೊಂಡಿತ್ತು. ಅಸ್ಪತ್ರೆಗೆ ಹಾಕಿದರು. ಅವಳು ಸತ್ತು ಹೋಗಿದ್ದಳು" ಎಂದು ಹಿರಿಯ ನಟ ರಾಜೇಶ್ ಇಡೀ ಘಟನೆಯನ್ನು ವಿವರಿದ್ದರು.

English summary
Late Senior Actor Rajesh once revealed that Manjula died because of love failure.
Read more about: manjula rajesh actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X