ಅಮಿತಾಭ್ ಬಚ್ಚನ್ ಅಂತ ವ್ಯಕ್ತಿ ನನ್ನ ಎದುರಿಗೆ ನಿಂತ್ತಿದ್ದಾಗ.. : ಮತ್ತೆ ಬಿಗ್‌ ಬಿ ನೆನಪಿಸಿಕೊಂಡ ಎವರ್‌ಗ್ರೀನ್ ರೇಖಾ

ಬಾಲಿವುಡ್‌ನ ಎವರ್‌ಗ್ರೀನ್ ಬ್ಯೂಟಿ ರೇಖಾ ಇಂದಿಗೂ ತಮ್ಮ ಸೌಂದರ್ಯದಿಂದ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸುತ್ತಲೇ ಇದ್ದಾರೆ. ಅದಕ್ಕೆ ಸಿನಿಮಾ ಪ್ರೇಮಿಗಳು ಈ ನಟಿಗೆ ಎವರ್‌ಗ್ರೀನ್ ಬ್ಯೂಟಿ ಅಂತ ಬಾಯಿ ತುಂಬಾ ಹೊಗಳುತ್ತಾರೆ. ಹಿರಿಯ ನಟಿ ರೇಖಾ ಮೂಲಕ ದಕ್ಷಿಣ ಭಾರತ ಆಗಿದ್ದರೂ, ನೆಲೆ ಅಂತ ಕಂಡು ಕೊಂಡಿದ್ದು ಬಾಲಿವುಡ್‌ನಲ್ಲಿ. ಹಿಂದಿ ಸಿನಿಮಾಗಳು ರೇಖಾಗೆ ಹಿಂತಿರುಗಿ ನೋಡಲಾರದಷ್ಟು ಯಶಸ್ಸು ತಂದುಕೊಟ್ಟಿತ್ತು.

ರೇಖಾ ಹಾಗೂ ಅಮಿತಾಭ್ ಬಚ್ಚನ್ ಜೋಡಿಗೆ ಬಾಲಿವುಡ್‌ನ ಮೋಸ್ಟ್ ಸಕ್ಸಸ್‌ಪುಲ್ ಜೋಡಿಗಳಲ್ಲಿ ಒಂದು. ಇವರಿಬ್ಬರನ್ನು ತೆರೆಮೇಲೆ ನೋಡುವುದಕ್ಕೆ ಅಭಿಮಾನಿಗಳು ತುದಿಗಾಲಲ್ಲಿ ನಿಲ್ಲುತ್ತಿದ್ದರು. ಅಮಿತಾಭ್‌ಗೆ ಆಂಗ್ರಿ ಎಂಗ್‌ಮ್ಯಾನ್ ಇಮೇಜ್ ಇದ್ದರೂ, ರೇಖಾ ಜೊತೆ ರೊಮ್ಯಾಂಟಿಕ್ ಟ್ರ್ಯಾಕ್‌ಗಳು ಇರಲೇಬೇಕಿತ್ತು. ಆ ಮಟ್ಟಿಗೆ ಈ ಜೋಡಿ ಫೇಮಸ್ ಆಗಿತ್ತು.

Rekha performed Dandiya infront of Amitabh Bachchan

ಇತ್ತೀಚೆಗೆ ಹಿರಿಯ ನಟಿ ರೇಖಾ ಕಪಿಲ್ ಶರ್ಮಾ ನಡೆಸಿಕೊಡುವ 'ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ'ನಲ್ಲಿ ಭಾಗವಹಿಸಿದ್ದರು. ಈ ವೇಳೆ ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಜೊತೆ ನಟಿಸಿದ ಕ್ಷಣವೊಂದನ್ನು ಹಂಚಿಕೊಂಡಿದ್ದಾರೆ. 1979ರಲ್ಲಿ ರೇಖಾ ಹಾಗೂ ಅಮಿತಾಭ್ ಒಟ್ಟಿಗೆ 'ಸುಹಾಗ್' ಎನ್ನುವ ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾದ ವೇಳೆ ಒಂದು ಘಟನೆಯನ್ನು ನೆನಪಿಸಿಕೊಂಡಿದ್ದರು.

'ಸುಹಾಗ್' ರೇಖಾ ಹಾಗೂ ಅಮಿತಾಭ್ ಬಚ್ಚನ್ ಜೋಡಿ ನಟಿಸಿದ ಬೆಸ್ಟ್ ಸಿನಿಮಾಗಳಲ್ಲಿ ಒಂದು. ಹಿಂದಿ ಚಿತ್ರರಂಗದ ಇತಿಹಾಸದಲ್ಲಿ ಇದೊಂದು ಐಕಾನಿಕ್ ಸಿನಿಮಾ ಅಂತ ಅನಿಸಿಕೊಂಡಿತ್ತು. ಹಿಂದಿ ಚಿತ್ರರಂಗ ಮೋಸ್ಟ್ ಸಕ್ಸಸ್‌ಪುಲ್ ಡೈರೆಕ್ಟರ್ ಮನಮೋಹನ್ ದೇಸಾಯಿ ಈ ಸಿನಿಮಾವನ್ನು ನಿರ್ದೇಶಿಸಿದ್ದರು. ಆಗಿನ ಕಾಲದಲ್ಲಿಯೇ 'ಸುಹಾಗ್' ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ರೇಖಾಗೆ ಈ ಸಿನಿಮಾದ ಹಲವು ನೆನಪುಗಳು ಇವೆ.

'ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ'ನಲ್ಲಿ ಭಾಗವಹಿಸಿದ್ದ ರೇಖಾಗೆ ಅಭಿಮಾನಿಯೊಬ್ಬರು ಪ್ರಶಂಸೆ ಮಾಡಿದ್ದರು. ದಕ್ಷಿಣ ಭಾರತದವರಾಗಿದ್ದರೂ 'ಸುಹಾಗ್' ಸಿನಿಮಾದಲ್ಲಿ ಗುಜರಾತಿ ಡ್ಯಾನ್ಸರ್ ಆಗಿ ಪ್ರೇಕ್ಷಕರ ಮನಸ್ಸು ಗೆದ್ದ ಬಗ್ಗೆ ಹೊಗಳಿದ್ದರು. ಆ ವೇಳೆ ರೇಖಾ ದಾಂಡಿಯಾ ಡ್ಯಾನ್ಸ್ ಮಾಡುವ ವೇಳೆ ಎದುರಿಗೆ ಅಮಿತಾಭ್ ಬಚ್ಚನ್ ನಿಂತಿದ್ದಾಗಿನ ಅನುಭವನ್ನು ತನ್ನ ಅಭಿಮಾನಿಯೊಂದಿಗೆ ಹಂಚಿಕೊಂಡಿದ್ದರು.

Rekha performed Dandiya infront of Amitabh Bachchan

"ನಾನು ದಾಂಡಿಯಾವನ್ನು ಯಾರೊಂದಿಗೆ ಪರ್ಫಾಮ್ ಮಾಡುತ್ತಿದ್ದೆ ಅನ್ನೋದನ್ನು ಯೋಚನೆ ಮಾಡಿ. ನಾನು ನಿಜವಾಗಿಯೂ ಒಳ್ಳೆಯ ಕೆಲಸವನ್ನು ಮಾಡಬೇಕಿತ್ತು. ನನಗೆ ದಾಂಡಿಯಾ ಡ್ಯಾನ್ಸ್ ಮಾಡುವುದು ಗೊತ್ತಿರಲಿಲ್ಲ. ಆದರೆ, ಯಾವಾಗ ಅಮಿತಾಭ್ ಬಚ್ಚನ್ ನನ್ನ ಮುಂದೆ ನಿಂತರೋ ಆಗ ನಾನು ಡ್ಯಾನ್ಸ್ ಮಾಡುವುದಕ್ಕೆ ಶುರು ಮಾಡಿದೆ" ಎಂದು 'ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ'ನಲ್ಲಿ ಎಂದೂ ಮರೆಯಲಾಗದ ಕ್ಷಣಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಅಮಿತಾಭ್ ಬಚ್ಚನ್ ಹಾಗೂ ರೇಖಾ ನಟನೆಯ 'ಸುಹಾಗ್' ಸಿನಿಮಾ 1979ರಲ್ಲಿ ರಿಲೀಸ್ ಆಗಿತ್ತು. ಮನಮೋಹನ್ ದೇಸಾಯಿ ನಿರ್ದೇಶಿಸಿದ ಈ ಸಿನಿಮಾದಲ್ಲಿ ರೇಖಾ, ಅಮಿತಾಭ್ ಜೊತೆಗೆ ಶಶಿಕಪೂರ್, ಪರ್ವೀನ್ ಬಾಬಿ, ಅಮ್ಜದ್ ಖಾನ್, ನಿರೂಪ ರಾಯ್ ಅಂತ ಖ್ಯಾತ ನಟರು ನಟಿಸಿದ್ದರು. ಆದರೆ, ಅಮಿತಾಭ್ ಬಚ್ಚನ್ ಹಾಗೂ ರೇಖಾ ಜೋಡಿ ಪ್ರೇಕ್ಷಕರ ಗಮನ ಸೆಳೆದಿತ್ತು.

More from Filmibeat

English summary
Legendary Rekha performed Dandiya after Amitabh Bachchan stood in front of her in the movie Suhaag.
Read more about: amitabh bachchan rekha bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X