Bengaluru Theaters: ಬೆಂಗಳೂರಿನಲ್ಲಿ ಈ ಸಿಂಗಲ್‌ ಸ್ಕ್ರೀನ್‌ಗಳೀಗ ನೆನಪು ಮಾತ್ರ; ಇಲ್ಲಿ ನೀವು ನೋಡಿದ ಬೆಸ್ಟ್ ಸಿನಿಮಾ ಯಾವುದು?

ಒಂದು ಕಾಲದಲ್ಲಿ ಬೆಂಗಳೂರಿನಲ್ಲಿ ಸಿನಿಮಾ ನೋಡಿದು ಅಂದರೆ ಅದೊಂದು ಹಬ್ಬದಂತಿತ್ತು. ಮಲ್ಟಿಪ್ಲೆಕ್ಸ್ ಇಲ್ಲದೆ ಇರುವ ಕಾಲದಲ್ಲಿ ಸಿಂಗಲ್ ಸ್ಕ್ರೀನ್‌ಗಳ ಆರ್ಭಟ ಜೋರಾಗಿತ್ತು. ಒಂದೇ ರಸ್ತೆಯಲ್ಲಿ ಐದಾರು ಚಿತ್ರಮಂದಿರಗಳು ತಲೆ ಎತ್ತಿ ನಿಂತಿದ್ದವು. ಪ್ರತಿಯೊಂದು ಥಿಯೇಟರ್‌ಗಳು ಹೌಸ್‌ಫುಲ್ ಪ್ರದರ್ಶನಗಳು ಕಾಣುತ್ತಿದ್ದವು. ಆದ್ರೀಗ ಆ ಪರಿಸ್ಥಿತಿ ಇಲ್ಲ. ಒಂದೊಂದು ಚಿತ್ರಮಂದಿರಗಳು ನೆನಪಾಗಿ ಉಳಿದಿವೆ ಅಷ್ಟೇ.

ಬೆಂಗಳೂರಿನ ಕೆಜಿ ರಸ್ತೆಯಲ್ಲಿ 8 ರಿಂದ 10 ಪ್ರಮುಖ ಚಿತ್ರಮಂದಿರಗಳಿದ್ದವು. ಕನ್ನಡದ ಯಾವುದೇ ಸಿನಿಮಾ ರಿಲೀಸ್ ಇಲ್ಲಿನ ಒಂದು ಚಿತ್ರಮಂದಿರವನ್ನು ಪ್ರಮುಖ ಚಿತ್ರಮಂದಿರವಾಗಿ ಸಿನಿಮಾ ಮಂದಿ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಅಭಿಮಾನಿಗಳು ಈ ಚಿತ್ರಮಂದಿರಗಳ ಮುಂದೆ ಕಟೌಟ್ ನಿಲ್ಲಿಸುತ್ತಿದ್ದರು. ಹೂವಿ ಹಾರಗಳನ್ನು ಹಾಕಿ ಸಂಭ್ರಮಿಸುತ್ತಿದ್ದರು. ಹಾಲಿನ ಅಭಿಷೇಕ ಮಾಡುತ್ತಿದ್ದರು. ಪಟಾಕಿಗಳನ್ನು ಸಿಡಿಸಿ ಖುಷಿಪಡುತ್ತಿದ್ದರು. ಡೊಳ್ಳು ಕುಣಿತಗಳಾಗುತ್ತಿತ್ತು. ರಿಲೀಸ್‌ ದಿನ ಚಿತ್ರಮಂದಿರದ ಮುಂದೆ ಜನ ಸಾಗರವೇ ಸೇರುತ್ತಿತ್ತು.

List of Main Single Screen Theatres and Iconic Cinema Halls Closed in Bengaluru

ಆದ್ರೀಗ ಇವೆಲ್ಲವೂ ಒಂದೊಂದಾಗಿಯೇ ಕಣ್ಮರೆಯಾಗುತ್ತಿದೆ. ಸಿಂಗಲ್ ಸ್ಕ್ರೀನ್‌ಗಳು ಒಂದೊಂದೆ ನೆಲ ಸಮವಾಗುತ್ತಿವೆ. ಇದರಕ್ಕೆ ಕಾರಣಗಳು ನೂರೆಂಟಿವೆ. ಅವುಗಳನ್ನು ಚರ್ಚೆ ಮಾಡುವುದಕ್ಕಿಂತ ಸುಮಾರು ನಾಲ್ಕೂವರೆ ದಶಕಗಳಿಂದ ಬೆಂಗಳೂರಿನಲ್ಲಿ ಯಾವೆಲ್ಲ ಪ್ರಮುಖ ಚಿತ್ರಮಂದಿರಗಳು ಕ್ಲೋಸ್ ಆಗಿವೆ? ಆ ಚಿತ್ರಮಂದಿರಗಳು ಎಲ್ಲೆಲ್ಲಿ ಇದ್ದವು? ಎಂಬುವುದನ್ನು ತಿಳಿಯುವುದಕ್ಕೆ ಮುಂದೆ ಓದಿ.

ಮುಂದೆ ಓದಿ

ಬೆಂಗಳೂರಿನ ಕೆಜಿ ರಸ್ತೆಯಲ್ಲಿ ಉಳಿದ ಥಿಯೇಟರ್‌ಗಳೆಷ್ಟು?
45 ವರ್ಷಗಳಲ್ಲಿ ನೆಲಸಮವಾದ ಚಿತ್ರಮಂದಿರಗಳ್ಯಾವುವು?
ಐಕಾನಿಕ್ ಚಿತ್ರಮಂದಿರಗಳು ಕ್ಲೋಸ್ ಆಗಿದ್ದೇಕೆ?
ಮಲ್ಟಿಪ್ಲೆಕ್ಸ್ ಸ್ಕ್ರೀನ್‌ಗಳ ದಾಳಿಯೋ.. ಸಿನಿಮಾಗಳ ಕೊರತೆಯೋ?

ಬೆಂಗಳೂರಿನ ಕೆಜಿ ರಸ್ತೆ 'ಸಿನಿಮಾ ಮಂದಿಗಲ್ಲ'

ಒಂದು ಕಾಲದಲ್ಲಿ ಕೆಜಿ ರಸ್ತೆಯಲ್ಲಿ ಸಿನಿ ಪ್ರೇಮಿಗಳ ದೊಡ್ಡ ಗುಂಪೇ ಸೇರುತ್ತಿತ್ತು. ಬೆಂಗಳೂರಿನ ಅವೆನ್ಯೂ ರಸ್ತೆಯಿಂದ ಥಿಯೇಟರ್‌ಗಳು ಆರಂಭ ಆದರೆ, ಆನಂದ್‌ರಾವ್ ವೃತ್ತದವರೆಗೂ ಸಾಲು ಸಾಲಾಗಿ ಸಿಂಗಲ್ ಸ್ಕ್ರೀನ್‌ಗಳನ್ನು ನೋಡಬಹುದಿತ್ತು. ಇದೇ ನಾಲ್ಕು ದಶಕಗಳ ಹಿಂದೆ ಇದ್ದ ಸಿಂಗಲ್‌ ಸ್ಕ್ರೀನ್‌ಗಳು ಇಂದು ಕಾಣುವುದಕ್ಕೆ ಸಿಗುವುದಿಲ್ಲ. ಐದಾರು ಚಿತ್ರಮಂದಿರಗಳು ಉಳಿದುಕೊಂಡಿವೆಯಷ್ಟೇ. ಸಂತೋಷ್, ನರ್ತಕಿ, ತ್ರಿವೇಣಿ, ಅನುಪಮಾ, ಸ್ವಪ್ನ ಈ ನಾಲ್ಕು ಚಿತ್ರಮಂದಿರಗಳು ಬಿಟ್ಟರೆ, ಇನ್ನು ಎಲ್ಲವೂ ಸಿಂಗಲ್ ಸ್ಕ್ರೀನ್‌ಗಳು ಬಂದ್ ಆಗಿವೆ.

ಕೆಜಿ ರಸ್ತೆಯಲ್ಲಿ ಸುಮಾರು 10 ಸಿಂಗಲ್‌ ಸ್ಕ್ರೀನ್‌ಗಳು ಕ್ಲೋಸ್ ಆಗಿವೆ. ಆ ಎಲ್ಲಾ ಚಿತ್ರಮಂದಿರಗಳು ಸಿನಿಮಾ ಪ್ರದರ್ಶನದ ವಿಚಾರದಲ್ಲಿ ತಮ್ಮದೇ ಆದ ಇತಿಹಾಸವನ್ನು ಹೊಂದಿವೆ. ಈ ನಾಲ್ಕುವರೆಗೂ ದಶಕಗಳಲ್ಲಿ ನೆಲಸಮವಾಗಿರುವ ಸಿಂಗಲ್ ಸ್ಕ್ರೀನ್‌ಗಳ ಲಿಸ್ಟ್ ಹೀಗಿದೆ.

ಮುಚ್ಚಲ್ಪಟ್ಟ ಕೆಜಿ ರಸ್ತೆಯ ಸಿಂಗಲ್ ಸ್ಕ್ರೀನ್‌ಗಳು ಹೀಗಿವೆ

ಕೆಂಪೇಗೌಡ
ಮೆಜೆಸ್ಟಿಕ್
ತ್ರಿಭುವನ್
ಸಾಗರ್
ಹಿಮಾಲಯ
ಮೂವಿಲ್ಯಾಂಡ್
ಸಂಗಮ್
ಮೇನಕಾ
ಕಲ್ಪನಾ
ಅಲಂಕಾರ್

List of Main Single Screen Theatres and Iconic Cinema Halls Closed in Bengaluru
ಬೆಂಗಳೂರಿನಲ್ಲಿ ಕ್ಲೋಸ್ ಆಗಿರುವ ಥಿಯೇಟರ್‌ಗಳೆಷ್ಟು?

ಇದು ಮೆಜೆಸ್ಟಿಕ್ ಸಮೀಪವಿರುವ ಕೆಜಿ ರಸ್ತೆಯ ಕಥೆಯಷ್ಟೇ. ಇನ್ನು ಬೆಂಗಳೂರಿನಾದ್ಯಂತ ಕ್ಲೋಸ್ ಆದ ಸಿಂಗಲ್‌ ಸ್ಕ್ರೀನ್‌ಗಳ ಲಿಸ್ಟ್ ನೋಡಿ ಬೆಚ್ಚಿ ಬೀಳುತ್ತೀರ. ಇಲ್ಲಿವರೆಗೂ ಸುಮಾರು 70ಕ್ಕೂ ಅಧಿಕ ಚಿತ್ರಮಂದಿರಗಳು ಬಂದ್ ಆಗಿವೆ. ಅವು ಯಾವುವು ಅಂತ ನೋಡುವುದಾರೇ, ಅಲಂಕಾರ್, ಪ್ರಭಾತ್, ಗೀತಾ, ಶಿವಾಜಿ, ಭಾರತ್, ಸ್ವಸ್ತಿಕ್, ಎಂಪೈರ್, ಮಿನರ್ವಾ, ಬ್ಲೂಮೂನ್, ಬ್ಲೂ ಡೈಮಂಡ್, ನಾಜ್, ಪೂನಮ್, ಓಪೆರಾ, ಇಂಪೀರಿಯಲ್, ಸೆಂಟ್ರಲ್, ಬಿ ಆರ್ ವಿ, ಸಂಜಯ, ಡ್ರೈವ್ ಇನ್,ನಾಗ, ಗ್ಯಾಲಕ್ಸಿ, ಹಿಮಾಲಯ, ಕೆಂಪೇಗೌಡ, ಕಿನೋ, ಶಾಂತಿ, ನಂದ, ಸ್ವಾಗತ್, ಕಲ್ಪನಾ, ಮಹೇಶ್ವರಿ, ಗೀತಾಂಜಲಿ, ಪ್ಲಾಜಾ, ಗೋಪಾಲ್, ಗಜಾನನ, ಸಂಗಮ್, ಸುಜಾತಾ, ಲಿಡೋ, ಶಿವಾನಂದ, ತ್ರಿಭುವನ್, ಕೈಲಾಶ್, ಕಪಾಲಿ, ರೆಕ್ಸ್, ಸಾಗರ್, ಆದರ್ಶ,ಅಜಂತಾ, ಎವರೆಸ್ಟ್, ಅಭಿಮಾನ್, ಅಶೋಕ, ಅಪ್ಸರಾ, ಪರಿಮಳ, ಪ್ರದೀಪ್, ವಿಜಯಲಕ್ಷ್ಮಿ, ರೇಣುಕಾ, ಪ್ರಮೊದ್, ಲಾವಣ್ಯಾ, ನಂದಿನಿ, ಪಲ್ಲವಿ, ಶಿವ, ಮಜೆಸ್ಟಿಕ್, ಮನರಂಜನ್, ಮೂವಿಲ್ಯಾಂಡ್, ಉಮಾ, ನಳಂದಾ, ಮೆನಕಾ,

ಈಗ ಏನಾಗಿವೆ?

ಒಂದು ಕಾಲದಲ್ಲಿ ಈ ಥಿಯೇಟರ್‌ಗಳ ಮುಂದೆ ಜನಜಂಗುಳಿ ತುಂಬಿರುತ್ತಿತ್ತು. ಬೆಂಗಳೂರಿನ ಈ ಸಿಂಗಲ್‌ ಸ್ಕ್ರೀನ್‌ಗಳಲ್ಲಿ ಫಸ್ಟ್ ಡೇ ಫಸ್ಟ್ ಶೋ ಹಬ್ಬದ ವಾತಾವರಣವಿರುತ್ತಿತ್ತು. ಆದ್ರೀಗ ಇವುಗಳು ಇತಿಹಾಸದ ಭಾಗವಾಗಿವೆ. ಈ ಚಿತ್ರಮಂದಿರಗಳಿದ್ದ ಜಾಗಗಳಲ್ಲಿ ಕಾಮರ್ಷಿಯಲ್ ಕಾಂಪ್ಲೆಕ್ಸ್‌ಗಳು, ಇಲ್ಲವೇ ಐಟಿ ಪಾರ್ಕ್‌ಗಳಾಗಿ ಬದಲಾಗಿವೆ. ಆದರೂ, ಈ ಚಿತ್ರಮಂದಿರಗಳು ಕನ್ನಡ ಹಾಗೂ ಭಾರತೀಯ ಸಿನೆಮಾರಂಗದಲ್ಲಿ ಮರೆಯಲಾಗದ ನೆನಪುಗಳನ್ನು ಬಿಟ್ಟಿವೆ.

ಕಾರಣವೇನು?

ಸಿಂಗಲ್‌ ಸ್ಕ್ರೀನ್‌ಗಳು ಒಂದು ಕಾಲದಲ್ಲಿ ಕನ್ನಡ ಹಾಗೂ ಪರಭಾಷೆ ಸಿನಿಮಾಗಳಿಗೆ ಹಣ ಗಳಿಸುವ ತಾಣಗಳಾಗಿದ್ದವು. ಕಡಿಮೆ ಸಿನಿಮಾಗಳು ನಿರ್ಮಾಣ ಆಗುತ್ತಿದ್ದ ಕಾಲದಲ್ಲಿ ಹೆಚ್ಚು ಚಿತ್ರಮಂದಿರಗಳು ಇದ್ದವು. ಹೆಚ್ಚು ಸಿನಿಮಾಗಳು ನಿರ್ಮಾಣ ಆಗುವ ಸಮಯದಲ್ಲಿ ಕಡಿಮೆ ಸಿಂಗಲ್ ಸ್ಕ್ರೀನ್‌ಗಳು ಇವೆ. ಬೆಂಗಳೂರಿನ ಈ ಐಕಾನಿಕ್ ಥಿಯೇಟರ್‌ಗಳು ನೆಲಸಮವಾಗುವುದಕ್ಕೆ ಕಾರಣ ಮಲ್ಟಿಪ್ಲೆಕ್ಸ್‌ ಒಂದಾದರೆ, ಇನ್ನೊಂದು ಜನರನ್ನು ಚಿತ್ರಮಂದಿರಕ್ಕೆ ಸೆಳೆಯುವಂತಹ ಸಿನಿಮಾಗಳು ಬರುತ್ತಿಲ್ಲ. ಚಿತ್ರಮಂದಿಗಳನ್ನು ನಿರ್ವಹಣೆ ಮಾಡುವುದು ಮಾಲೀಕರಿಗೆ ಕಷ್ಟವಾಗಿವೆ. ಈ ಎಲ್ಲಾ ಕಾರಣಗಳಿಂದ ಇಷ್ಟು ಚಿತ್ರಮಂದಿರಗಳು ಇಂದು ನೆನಪಾಗಿ ಉಳಿದಿವೆ ಅಷ್ಟೇ.

More from Filmibeat

English summary
Iconic single-screen theatres in Bengaluru have closed permanently. Check the full list of main single-screen cinema halls that have shut down in the city.
Read more about: theaters kannada movie bengaluru
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X