ಉಚಿತವಾಗಿ ಸಿನಿಮಾ, ಟಿವಿ ಶೋಗಳನ್ನು ನೋಡಬೇಕಾ? ಈ ಟಾಪ್ 10 ಫ್ರೀ ಸ್ಟ್ರೀಮಿಂಗ್ ಸೈಟ್‌ಗಳಿಗೆ ಭೇಟಿ ಕೊಡಿ
ಒಂದು ವರ್ಷಕ್ಕೆ ಸಾವಿರಾರು ಸಿನಿಮಾ ರಿಲೀಸ್ ಆಗುತ್ತೆ. ಸಾವಿರಾರು ಸಿನಿಮಾಗಳು ಕೇವಲ ಓಟಿಟಿಯಲ್ಲಿ ರಿಲೀಸ್ ಆಗುತ್ತೆ. ಇವುಗಳ ಜೊತೆ ವೆಬ್ ಸೀರಿಸ್ ರಿಲೀಸ್ ಆಗುತ್ತೆ. ಗ್ಯಾಪ್‌ನಲ್ಲಿ ಟಿವಿ ಶೋಗಳು, ರಿಯಾಲಿಟಿ ಶೋಗಳು ಬಂದು ಹೋಗುತ್ತೆ. ಒಬ್ಬ ವ್ಯಕ್ತಿ ಇಷ್ಟನ್ನೂ ದುಡ್ಡು ಕೊಟ್ಟು ನೋಡಲು ಸಾಧ್ಯವೇ?
ಕೆಲವರಿಗೆ ಸಿನಿಮಾ ಬಗ್ಗೆ ಆಸಕ್ತಿ ಇದ್ದರೂ, ಇವನ್ನೆಲ್ಲಾ ದುಡ್ಡು ಕೊಟ್ಟು ನೋಡುವುದಕ್ಕೆ ಹಣವಿರಲ್ಲ. ಕೆಲವೊಮ್ಮೆ ಹಣವಿದ್ದರೂ, ಎಲ್ಲದಕ್ಕೂ ಖರ್ಚು ಮಾಡುವುದಕ್ಕೆ ತಯಾರಿರೋದಿಲ್ಲ. ಇಂತಹವರು ಉಚಿತವಾಗಿ ಸಿನಿಮಾ ನೋಡುವುದೇ ಉತ್ತಮ ಎಂದುಕೊಳ್ಳುತ್ತಾರೆ.\

ಇಂತಹವರಿಗಾಗಿಯೇ ಕೆಲವು ವೆಬ್‌ಸೈಟ್‌ಗಳು 2023ಯಲ್ಲಿ ಉಚಿತವಾಗಿ ಸಿನಿಮಾಗಳನ್ನು ಸ್ಟ್ರೀಮಿಂಗ್ ಮಾಡುವುದಕ್ಕೆ ಮುಂದಾಗಿದೆ. ಅದ್ಭುತ ಅಂದರೆ, ಈ ಸೈಟ್‌ಗಳಿಗೆ ಪ್ರವೇಶ ಮಾಡುವುದಕ್ಕೆ ಸೈನ್ ಅಪ್ ಆಗಬೇಕಿಲ್ಲ. ಕ್ವಿಕ್ ಆಗಿ ಸಿನಿಮಾಗಳನ್ನು ನೋಡಬಹುದು. ಅಚ್ಚುಮೆಚ್ಚಿನ ಟಿವಿ ಶೋಗಳನ್ನು ನೋಡಿ ಆನಂದಿಸಬಹುದು. ಇಂತಹ ಒಂದಿಷ್ಟು ಉಚಿತವಾಗಿ ಸಿನಿಮಾ ಟಿವಿ ಶೋಗಳನ್ನು ತೋರಿಸುವ ಸೈಟ್‌ಗಳು ಇಲ್ಲಿವೆ.
123 ಮೂವೀಸ್
'123 ಮೂವೀಸ್' ಸಿನಿಮಾಗಳನ್ನು ಒನ್‌ಲೈನ್‌ನಲ್ಲಿ ನೋಡುವವರಿಗೆ ಉತ್ತಮ ವೆಬ್ ಸೈಟ್ ಆಗಿದೆ. ಇದರಲ್ಲಿ ಅತ್ಯುತ್ತಮ ಸಿನಿಮಾಗಳು, ಕ್ಲಾಸಿಕ್‌ಗಳನ್ನು ನೋಡಬಹುದಾಗಿದೆ. ಅಲ್ಲದೆ ಇದರಲ್ಲಿ ಸಿನಿಮಾ ಹಾಗೂ ಟಿವಿ ಶೋಗಳನ್ನು ನೋಡಬಹುದಾಗಿದೆ. ಇದರಲ್ಲಿ ಲಾಗಿನ್ ಅಥವಾ ಹಣ ಕೊಟ್ಟು ಸಿನಿಮಾ ನೋಡಬೇಕಾಗಿಲ್ಲ. ಹೈ ಕ್ವಾಲಿಟಿಯಲ್ಲಿ ಸಿನಿಮಾವನ್ನು ನೋಡಬಹುದು.
ಎಸ್ ಮೂವೀಸ್
ಸಿನಿ ಪ್ರಿಯರಿಗೆ 'ಎಸ್ ಮೂವೀಸ್' ಕೂಡ ಅತ್ಯುತ್ತಮ ವೆಬ್ ಸೈಟ್ ಆಗಿದೆ. ಇದರಲ್ಲಿ ಅತ್ಯುತ್ತಮ ಸಿನಿಮಾಗಳ ಲೈಬ್ರರಿ ಇದೆ. ಇಂಗ್ಲಿಷ್ ಸಿನಿಮಾಗಳಷ್ಟೇ ಅಲ್ಲ. ಇದರೊಂದಿಗೆ ಬೇರೆ ದೇಶದ ಸಿನಿಮಾಗಳು ಕೂಡ ಇವೆ. ಇಷ್ಟೇ ಅಲ್ಲದೆ ಇನ್ನೂ ರಿಲೀಸ್ ಆಗಬೇಕಿರುವ ಟ್ರೈಲರ್, ಸ್ನೀಕ್ ಪೀಕ್ ಹಾಗೂ ಟಿವಿ ಶೋಗಳನ್ನು ಇಲ್ಲಿ ನೋಡಬಹುದಾಗಿದೆ.

ಮೂವಿ ಸ್ಟಾರ್ಸ್
ಸಿನಿಮಾ ಪ್ರಿಯರಿಗೆ ಇನ್ನೊಂದು ಅತ್ಯುತ್ತಮ ವೆಬ್ ಸೈಟ್ ಅಂದ್ರೆ, ಅದು 'ಮೂವಿ ಸ್ಟಾರ್ಸ್'. ಇದರಲ್ಲಿ ಇಡೀ ಸಿನಿಮಾಗಳನ್ನು ನೋಡಬಹುದು. ಆದರೆ, ಈ ವೆಬ್ ಸೈಟ್‌ಗೆ ಸೈನ್ ಅಪ್ ಆಗಬೇಕಾಗುತ್ತೆ. ಇದರಲ್ಲಿ ಅದ್ಭುತ ಸಿನಿಮಾಗಳಿಲ್ಲ. ಅಲ್ಲದೆ ವಿಡಿಯೋ ಕ್ವಾಲಿಟಿ ಕೂಡ ಅಷ್ಟು ಚೆನ್ನಾಗಿ ಇಲ್ಲ. ಹೊಸ ಫ್ರೆಂಚ್ ಸಿನಿಮಾಗಳು ಹಾಗೂ ಡಾಕ್ಯೂಮೆಂಟರಿಗಳನ್ನು ಇಲ್ಲಿ ನೋಡಬಹುದು.
ಲಾಸ್ ಮೂವೀಸ್
ಸಿನಿಮಾ ಪ್ರಿಯರಿಗೆ ಲಾಸ್ ಮೂವೀಸ್ ಕೂಡ ಉತ್ತಮ ಆಯ್ಕೆ. ಇದರಲ್ಲಿ ಜಾನರ್, ನಿರ್ದೆಶಕರು, ನಟರು, ರೇಟಿಂಗ್‌ಗಳ ಆಧಾರದ ಮೇಲೆ ಸಿನಿಮಾವನ್ನು ವಿಂಗಡನೆ ಮಾಡಲಾಗಿದೆ. ಇದು ಯುವಕರಿಗೆ ಹಾಗೂ ಮಕ್ಕಳಿಗೆ ಅತ್ಯುತ್ತಮ ವೆಬ್ ಸೈಟ್ ಎಂದು ವರದಿಯಾಗಿದೆ. ಅಲ್ಲದೆ 2023ಯ ಬೆಸ್ಟ್ ಟಿವಿ ಶೋಗಳನ್ನೂ ಇಲ್ಲಿ ನೋಡಬಹುದಾಗಿದೆ.
ಸೋಪ್2ಡೇ
ಈ ವೆಬ್ ಸೈಟ್ ಟಿವಿ ಶೋಗಳಿಗೆ ಹೆಚ್ಚು ಜನಪ್ರಿಯ. ಅಲ್ಲದೆ ಇದರಲ್ಲಿ ಕ್ವಾಲಿಟಿ ಸಿನಿಮಾಗಳ ದೊಡ್ಡ ಕಲೆಕ್ಷನ್ ಇದೆ. ಅತ್ಯುತ್ತಮ ಬಾಕ್ಸಾಫೀಸ್ ಕಲೆಕ್ಷನ್ ಹೊಂದಿರೋ ಸಿನಿಮಾಗಳು ಕೂಡ ಇವೆ. ಇಲ್ಲಿ ನೀವು ಸಿನಿಮಾಗಳು, ಟಿವಿ ಸೀರಿಸ್ ಅನ್ನು ನೋಡಬಹುದಾಗಿದೆ. ಇದರಲ್ಲಿ ಆಗಾಗ ಜಾಹೀರಾತುಗಳು ಕೂಡ ಪ್ರಸಾರ ಆಗುತ್ತವೆ. ಅಲ್ಲದೆ ಈ ವೆಬ್ ಸೈಟ್ ಸೈನ್‌ಅಪ್ ಆಗಿ ಅಂತ ಕೇಳುವುದಿಲ್ಲ.
ಎಫ್ ಮೂವೀಸ್
ವಿಶ್ವದ ಅತ್ಯುತ್ತಮ ಸಿನಿಮಾಗಳನ್ನು ಎಫ್ ಮೂವೀಸ್‌ನಲ್ಲಿ ನೋಡಬಹುದು. ಎಲ್ಲ ತರಹದ ಸಿನಿಮಾಗಳನ್ನು ಇಲ್ಲಿ ನೋಡಬಹುದಾಗಿದೆ. ಅತಿ ಜನಪ್ರಿಯರ ಸಿನಿಮಾಗಳು, IMDBಯ ಅತ್ಯುತ್ತಮ ಸಿನಿಮಾಗಳನ್ನು ಇಲ್ಲಿ ನೋಡಬಹುದಾಗಿದೆ.
ವುಮೋ
ಹೊಸದಾಗಿ ತೆರೆಕಂಡ ಸಿನಿಮಾಗಳನ್ನು ಇಲ್ಲಿ ನೋಡಬಹುದಾಗಿದೆ. ಟಿವಿ ಸೀರಿಸ್‌ಗಳನ್ನೂ ಫ್ರಿಯಾಗಿ ನೋಡಬಹುದಾಗಿದೆ. ವಿಶೇಷ ಅಂದ್ರೆ, ಸಿನಿಮಾ ಮಾಹಿತಿಯೊಂದಿಗೆ ನಿರ್ದೇಶಕರು, ರನ್ ಟೈಮ್ ಅಂತ ಮಾಹಿತಿಯನ್ನು ನೀಡುತ್ತದೆ.
ಸೋಲಾರ್ ಮೂವಿ
ಸೋಲಾರ್ ಮೂವಿ ಕೂಡ ಉಚಿತವಾಗಿ ಸಿನಿಮಾಗಳನ್ನು ನೋಡುವುದಕ್ಕೆ ಅವಕಾಶ ಮಾಡಿಕೊಟ್ಟಿದೆ. ಅತೀ ದೊಡ್ಡ ಮೀಡಿಯಾ ಡಾಟಾ ಬೇಸ್ ಇದ್ದು, ಇಲ್ಲಿ ಕೇವಲ ಹೊಸ ಸಿನಿಮಾಗಳಷ್ಟೇ ಅಲ್ಲ, ವಿಶ್ವದ ಮೂಲೆ ಮೂಲೆಯಲ್ಲಿರುವ ಸಿನಿಮಾಗಳ ಕಲೆಕ್ಷನ್ ಹೊಂದಿದೆ ಎನ್ನಲಾಗುತ್ತಿದೆ.
ಪುಟ್ ಲಾಕರ್ಸ್
ಪುಟ್ ಲಾಕರ್ಸ್ ಕ್ವಾಲಿಟಿ ವಿಚಾರದಲ್ಲಿ ಅತ್ಯುತ್ತಮ ವೆಬ್ ಸೈಟ್. ಇದರಲ್ಲಿ ಒಳ್ಳೆಯ ಕಂಟೆಂಟ್ ಲೈಬ್ರರಿ ಇದೆ. ಇದು ಅತೀ ಹೆಚ್ಚು ಕಾಲ ರನ್ ಆಗುವ ಸ್ಟ್ರೀಮಿಂಗ್ ವೆಬ್ ಸೈಟ್ ಎನ್ನಲಾಗಿದೆ.
ವಾಚ್ ಫ್ರೀ
ಆರಂಭದಲ್ಲಿ ವಾಚ್ ಫ್ರೀಯನ್ನು ನೋಡುವುದಕ್ಕೆ ಇಂಟ್ರೆಸ್ಟಿಂಗ್ ಅಂತ ಅನಿಸುವುದಿಲ್ಲ. ಆದರೆ, ವೆಬ್ ಸೈಟ್ ಒಳಗೆ ಹೋದಾಗ, ಅತ್ಯುತ್ತಮ ಸಿನಿಮಾಗಳು ನೋಡುವುದಕ್ಕೆ ಸಿಗುತ್ತವೆ. ಹೊಸತು ಹಾಗೂ ಹಳೆ ಸಿನಿಮಾಗಳನ್ನು ಒರಿಜಿನಲ್ ಕ್ವಾಲಿಟಿಯಲ್ಲಿ ನೋಡುವುದಕ್ಕೆ ಸಿಗಲಿದೆ.


Click it and Unblock the Notifications











