ದರ್ಶನ್‌ರಂತೆ ಕೊಲೆ ಕೇಸ್‌ನಲ್ಲಿ ಜೈಲು ಸೇರಿದ್ದ ದಕ್ಷಿಣ ಭಾರತದ ಮೊದಲ ಸೂಪರ್‌ಸ್ಟಾರ್ ಯಾರು ಗೊತ್ತೇ?
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಕೊಲೆ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿರುವ ದರ್ಶನ್ ಮುಂದಿನ ಭವಿಷ್ಯ ಪೊಲೀಸರು ಸಲ್ಲಿಸುವ ಚಾರ್ಜ್‌ಶೀಟ್ ಮೇಲೆ ನಿಂತಿದೆ. ಚಾರ್ಜ್‌ಶೀಟ್ ಮೇಲೆ ವಾದ ವಿವಾದಗಳು ನಡೆದು ದರ್ಶನ್‌ಗೆ ಜಾಮೀನು ಕೊಡಬೇಕೋ ಬೇಡವೋ ಅನ್ನೋದನ್ನು ನ್ಯಾಯಾಧೀಶರು ನಿರ್ಧರಿಸುತ್ತಾರೆ.
ಅಲ್ಲಿವರೆಗೂ ಸ್ಯಾಂಡಲ್‌ವುಡ್‌ನ ಈ ಸೂಪರ್‌ಸ್ಟಾರ್‌ಗೆ ಜೈಲೇ ಗತಿ ಅಂತ ವಕೀಲಯರ ವಲಯದಲ್ಲಿ ಚರ್ಚೆಯಾಗುತ್ತಿದೆ. ಅಲ್ಲಿವರೆಗೂ ರೇಣುಕಾಸ್ವಾಮಿಯನ್ನು ದರ್ಶನ್ ಕೊಲೆ ಮಾಡಿದ್ದಾರೋ ಇಲ್ಲವೋ ಅನ್ನು ನಿಗೂಢವಾಗಿಯೇ ಇರುತ್ತೆ. ಆದರೆ, ಇದಕ್ಕಿಂತ ಇಂಟ್ರೆಸ್ಟಿಂಗ್ ಸ್ಟೋರಿಯೊಂದಿದೆ. ಹೀಗೆ ಮರ್ಡರ್ ಕೇಸ್‌ನಲ್ಲಿ ದಕ್ಷಿಣ ಭಾರತದ ಮೊದಲ ಸೂಪರ್‌ಸ್ಟಾರ್ ಜೈಲು ಸೇರಿದ್ದರು. ಆ ನಟನ ಕಥೆ ಇನ್ನೂ ರೋಚಕವಾಗಿದೆ.

ದಕ್ಷಿಣ ಭಾರತದ ಮೊದಲ ಸೂಪರ್‌ಸ್ಟಾರ್ ಹಾಗೂ ಸ್ಯಾಂಡಲ್‌ವುಡ್ ಸೂಪರ್‌ಸ್ಟಾರ್ ದರ್ಶನ್ ಮರ್ಡರ್ ಕೇಸ್‌ನಲ್ಲಿ ಹೆಚ್ಚೇನು ವ್ಯತ್ಯಾಸವಿಲ್ಲ. ಅಲ್‌ಮೋಸ್ಟ್ ಸೇಮ್ ಟು ಸೇಮ್. ಹಾಗಿದ್ದರೆ, ದಕ್ಷಿಣ ಭಾರತದ ಆ ಸೂಪರ್‌ಸ್ಟಾರ್ ಯಾರು? ಮರ್ಡರ್ ಕೇಸ್‌ನಲ್ಲಿ ಸೂಪರ್‌ಸ್ಟಾರ್ ಹೆಸರು ಹೇಳಿ ಬಂದಿದ್ದು ಹೇಗೆ? ಎಷ್ಟು ವರ್ಷ ಜೈಲು ಶಿಕ್ಷೆಯಾಗಿತ್ತು? ಜೈಲಿನಿಂದ ಹೊರಬಂದ್ಮೇಲೆ ಸೂಪರ್‌ಸ್ಟಾರ್ ಭವಿಷ್ಯ ಏನಾಯ್ತು? ತಿಳಿಯಲು ಮುಂದೆ ಓದಿ.
ಮಾವರಂ ಕೃಷ್ಣಸ್ವಾಮಿ ತ್ಯಾಗರಾಜ ಭಾಗವತರ್ ದಕ್ಷಿಣ ಭಾರತದ ಮೊದಲ ಸೂಪರ್‌ಸ್ಟಾರ್ ಇವರೇ. ಈ ತಮಿಳು ನಟ ಬದುಕಿದ್ದು ಕೇವಲ 49 ವರ್ಷ. ಅಷ್ಟರೊಳಗೆ ಸೂಪರ್‌ಸ್ಟಾರ್ ಪಟ್ಟಕ್ಕೇರಿದ್ದರು. ಒಂದು ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದರು. ಜೈಲಿನಿಂದ ಹೊರ ಬರುತ್ತಿದ್ದಂತೆ ಸೂಪರ್‌ಸ್ಟಾರ್ ಪಟ್ಟದಿಂದ ಕೆಳಗೂ ಇಳಿದಿದ್ದರು. ಒಂದು ತಪ್ಪು ಕೊನೆಗೆ ಬದುಕನ್ನೇ ತೆಗೆದುಕೊಂಡಿತ್ತು. ಅರ್ಥಾತ್ ದಕ್ಷಿಣ ಭಾರತದ ಮೊದಲ ಸೂಪರ್‌ಸ್ಟಾರ್ ಬದುಕು ದುರಂತ ಅಂತ್ಯ ಕಂಡಿತ್ತು.

1910, ಮಾರ್ಚ್ 7ರಂದು ಇಂದಿನ ತಂಜಾಪೂರಿನಲ್ಲಿ ಜನಿಸಿದ್ದ ತ್ಯಾಗರಾಜ ಭಾಗವತರ್ ಕ್ಲಾಸಿಕಲ್ ಸಿಂಗರ್ ಆಗಿದ್ದರು. 1934ರಲ್ಲಿ ಇವರು ನಟಿಸಿದ ಮೊದಲ ಸಿನಿಮಾ 'ಪಾವಲ್ಲಕ್ಕೊಡಿ' ಸಿನಿಮಾ ತೆರೆಕಂಡಿತ್ತು. ಇಲ್ಲಿಂದ ಕ್ಲಾಸಿಕಲ್ ಸಿಂಗರ್ ಒಬ್ಬರ ನಟನಾಗಿ ಬದಲಾಗಿದ್ದ. 1934ರಿಂದ 1959ರಲ್ಲಿ ತ್ಯಾಗರಾಜ ಭಾಗವತರ್ 14 ಸಿನಿಮಾಗಳಲ್ಲಿ ನಟಿಸಿದ್ದರು. ಅದರಲ್ಲಿ 10 ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. 1944ರಲ್ಲಿ ನಟಿಸಿದ 'ಹರಿದಾಸ್' ಸಿನಿಮಾ ಬರೋಬ್ಬರಿ ಮೂರು ವರ್ಷಗಳ ಕಾಲ ಪ್ರದರ್ಶನ ಕಂಡು ದಾಖಲೆ ಬರೆದಿತ್ತು.
ಎಲ್ಲವೂ ಸರಿಯಾಗಿಯೇ ಇತ್ತು. ಯಶಸ್ಸು ಇವರ ಹಿಂಬಾಲಿಸಿಕೊಂಡು ಬರುತ್ತಿತ್ತು. 1944ರಲ್ಲಿ ಯಶಸ್ಸಿನ ತುತ್ತತುದಿಯಲ್ಲಿದ್ದ ತ್ಯಾಗರಾಜ ಭಾಗವತರ್ ಹೆಸರು ಮರ್ಡರ್ ಕೇಸ್‌ನಲ್ಲಿ ಕೇಳಿ ಬಂದಿತ್ತು. ಅಂದು ಲಕ್ಷ್ಮಿಕಾಂತನ್ ಅನ್ನುವ ಪತ್ರಕರ್ತನ ಕೊಲೆ ನಡೆದಿತ್ತು. ಕೆಲ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು. ಪೊಲೀಸರು ದೂರನ್ನು ದಾಖಲಿಸಿಕೊಂಡು ಈ ಕೊಲೆ ಕೇಸ್‌ನಲ್ಲಿ ಕೇಳಿಬಂದ ಒಬ್ಬರನ್ನೇ ಬಂಧಿಸುತ್ತಾ ಹೋದರು (ಥೇಟ್ ದರ್ಶನ್ ಕೇಸ್‌ನಂತೆ). ಇವರಲ್ಲಿ ತಮಿಳಿನ ಈ ಸೂಪರ್‌ಸ್ಟಾರ್
ತ್ಯಾಗರಾಜ ಭಾಗವತರ್ ಹೆಸರು ಕೂಡ ಕೇಳಿ ಬಂದಿತ್ತು. ಇವರೊಂದಿಗೆ ಮತ್ತೊಬ್ಬ ನಟ ಎನ್ ಎಸ್ ಕೃಷ್ಣನ್, ಎಸ್ ಎಂ ಶ್ರೀರಾಮುಲು ನಾಯ್ಡು ಅವರನ್ನು ಬಂಧಿಸಿದ್ದರು.
ಪತ್ರಕರ್ತ ಲಕ್ಷ್ಮಿಕಾಂತನ್ (ರೇಣುಕಾಸ್ವಾಮಿಯಂತೆ) ಸಿನಿಮಾ ತಾರೆಯನ್ನು ಬೆದರಿಸುತ್ತಿದ್ದರು. ಅವರ ಕೆಲವು ರಹಸ್ಯಗಳನ್ನು ತನ್ನ ಪತ್ರಿಕೆಗಳಲ್ಲಿ ಬಿತ್ತರಿಸುತ್ತಿದ್ದರು ಅನ್ನೋ ಆರೋಪ ಕೇಳಿ ಬಂದಿತ್ತು. ಇದನ್ನು ಹೈ ಪ್ರೊಫೈಲ್ ಕೇಸ್ ಅಂತ ಪರಿಗಣನೆಗೆ ತೆಗೆದುಕೊಳ್ಳಲಾಗಿತ್ತು. 1944ರಲ್ಲಿ ಬಂಧಿಸಿದ್ದ ತ್ಯಾಗರಾಜ ಭಾಗವತರ್ ಅನ್ನು 1947ರಲ್ಲಿ ಬಿಡುಗಡೆ ಮಾಡಲಾಗಿತ್ತು. ಅಷ್ಟರೊಳಗೆ ತಾನು ದುಡಿದಿದ್ದ ಹಣವನ್ನೆಲ್ಲ ಈ ಕೇಸ್‌ಗಾಗಿ ಖರ್ಚು ಮಾಡಿದ್ದರು. ಮತ್ತೆ ಸಿನಿಮಾ ಕಡೆಗೆ ಆಸಕ್ತಿ ಬೆಳೆಸಿಕೊಳ್ಳಲಿಲ್ಲ. ನಟಿಸಿದ ಕೆಲವೇ ಸಿನಿಮಾಗಳು ಸೋತು ಸುಣ್ಣವಾದವು. ಮತ್ತೆ ಹಾಡುವುದಕ್ಕೆ ಶುರು ಮಾಡಿದ್ದರು. ಅಷ್ಟೊತ್ತಿಗಾಗಲೇ ಮಧುಮೇಹ ಅವರನ್ನು ಕಾಡುವುದಕ್ಕೆ ಶುರುವಾಗಿತ್ತು. 1959ರಲ್ಲಿ ಕೊನೆಯುಸಿರೆಳೆದರು.


Click it and Unblock the Notifications











