ಈ ಸೀನ್‌ನಲ್ಲಿ ನಟಿಸಲ್ಲ ಅಂತ ಕಣ್ಣೀರಿಟ್ಟಿದ್ದ ಮಾಧುರಿ; ಆ ಘಟನೆ ಬಗ್ಗೆ ಖಳನಟ ರಂಜಿತ್ ಹೇಳಿದ್ದೇನು?

ಬಾಲಿವುಡ್‌ನಲ್ಲಿ ತನ್ನ ಪರ್ಫಾಮೆನ್ಸ್‌ನಿಂದ ಹೃದಯ ಬಡಿತ ಹೆಚ್ಚಿಸಿದ ನಟಿ ಮಾಧುರಿ ದೀಕ್ಷಿತ್. ಸುಮಾರು 40 ವರ್ಷಗಳ ಸಿನಿ ಬದುಕಿನಲ್ಲಿ ಮಾಧುರಿ ದೀಕ್ಷಿತ್ ಒಳ್ಳೊಳ್ಳೆಯ ಪಾತ್ರಗಳಲ್ಲಿ ನಟಿಸಿದ್ದಾರೆ. ಹಿಂದಿ ಚಿತ್ರರಂಗದ ಏಳಿಗೆಗೆ ಈ ನಟಿಯ ಪಾತ್ರ ಬಹಳ ದೊಡ್ಡದೇ ಇದೆ. ಇಂತಹ ಮೇರು ನಟಿ ಒಮ್ಮೆ ಒಂದು ಸಿನಿಮಾದಲ್ಲಿ ನಟಿಸುವಾಗ ಕಣ್ಣೀರು ಹಾಕಿದ್ದರು.

80 ಹಾಗೂ 90ರ ದಶಕದಲ್ಲಿ ಮಾಧುರಿ ದೀಕ್ಷಿತ್ ಬಾಲಿವುಡ್‌ನ ಟಾಪ್‌ ಹೀರೋಯಿನ್ ಆಗಿದ್ದರು. ಅಂದಿನ ಎಲ್ಲಾ ಸೂಪರ್‌ಸ್ಟಾರ್‌ಗಳೂ ಈ ನಟಿಯ ಕಾಲ್‌ಶೀಟ್‌ಗಾಗಿ ಕಾದು ಕೂರುವಂತಹ ಸ್ಥಿತಿ ಇತ್ತು. ಇಂತಹ ನಟಿ 1989ರಲ್ಲಿ ತೆರೆಕಂಡಿದ್ದ ಸಿನಿಮಾದ ಒಂದು ಬೋಲ್ಡ್ ಸೀನ್‌ನಲ್ಲಿ ನಟಿಸುವುದಿಲ್ಲ ಅಂತ ಸೆಟ್ಟಿನಲ್ಲಿಯೇ ಕಣ್ಣೀರು ಹಾಕಿದ್ದರು.

Madhuri Dixit cried not to do a bold scene in the Prem Pratigya film

ಹೌದು, 1989ರಲ್ಲಿ 'ಪ್ರೇಮ್ ಪ್ರತಿಜ್ಞಾ' ಎನ್ನುವ ಸಿನಿಮಾದಲ್ಲಿ ಮಾಧುರಿ ದೀಕ್ಷಿತ್ ನಾಯಕಿಯಾಗಿ ನಟಿಸುತ್ತಿದ್ದರು. ಇದೇ ಸಿನಿಮಾದಲ್ಲಿ ಮಿಥುನ್ ಚಕ್ರವರ್ತಿ, ಬಾಲಿವುಡ್‌ನ ಜನಪ್ರಿಯ ಖಳನಟ ರಂಜಿತ್, ವಿನೋದ್ ಮೆಹ್ರಾ ಹಾಗೂ ಸತೀಶ್ ಕೌಶಿಕ್ ನಟಿಸಿದ್ದಾರೆ. ಈ ಸಿನಿಮಾದ ಒಂದು ಸೀನ್ ಶೂಟ್ ಮಾಡುವುದಕ್ಕೆ ಚಿತ್ರತಂಡ ರೆಡಿಯಾಗುತ್ತಿರುವಾಗಲೇ ಮಾಧುರಿ ದೀಕ್ಷಿತ್ ಆ ಸೀನ್‌ನಲ್ಲಿ ನಟಿಸುದಿಲ್ಲ ಅಂತ ಹಠ ಹಿಡಿದಿದ್ದರು. ಅಷ್ಟಕ್ಕೂ ಆ ಸೀನ್ ಯಾವುದು? ಮಾಧುರಿ ದೀಕ್ಷಿತ್ ಕಣ್ಣೀರು ಹಾಕಿದ್ದು ಯಾಕೆ? ತಿಳಿಯಲು ಮುಂದೆ ಓದಿ..

'ಪ್ರೇಮ್ ಪ್ರತಿಜ್ಞಾ' ಸಿನಿಮಾದಲ್ಲಿ ಖಳನಾಯಕನಾಗಿ ನಟಿಸಿರುವ ರಂಜಿತ್ ಇತ್ತೀಚೆಗೆ ಎಎನ್‌ಐಗೆ ಸಂದರ್ಶನ ನೀಡಿದ್ದರು. ಈ ವೇಳೆ ಮಾಧುರಿ ದೀಕ್ಷಿತ್ ತಮ್ಮ ಜೊತೆ ದೃಶ್ಯವೊಂದರಲ್ಲಿ ನಟಿಸಲು ಹಿಂದೇಟು ಹಾಕಿದ್ದ ಸ್ವಾರಸ್ಯಕರ ಸಂಗತಿಯನ್ನು ರಿವೀಲ್ ಮಾಡಿದ್ದಾರೆ. 'ಪ್ರೇಮ್ ಪ್ರತಿಜ್ಞಾ' ಸಿನಿಮಾದಲ್ಲಿ ಖಳನಟ ರಂಜಿತ್ ನಾಯಕಿ ಮಾಧುರಿ ದೀಕ್ಷಿತ್‌ಗೆ ಕಿರುಕುಳ ನೀಡುವ ದೃಶ್ಯವಿತ್ತು. ಆ ದೃಶ್ಯದಲ್ಲಿ ನಟಿಸುವುದಿಲ್ಲ ಎಂದು ಮಾಧುರಿ ದೀಕ್ಷಿತ್ ಕಣ್ಣೀರು ಹಾಕಿದ್ದರಂತೆ.

Madhuri Dixit cried not to do a bold scene in the Prem Pratigya film

ಆ ದೃಶ್ಯವನ್ನು ಚಿತ್ರೀಕರಣ ಮಾಡುವುದಕ್ಕೆ ಮುನ್ನ ಖಳನಟ ರಂಜಿತ್ ಚಿತ್ರತಂಡ ಜೊತೆ ಜಾಲಿ ಮಾಡಿಕೊಂಡಿದ್ದರು. ಆದರೆ, ಮಾಧುರಿ ದೀಕ್ಷಿತ್ ಈ ಸೀನ್ ಮಾಡುವುದಿಲ್ಲ ಅಂತ ಕಣ್ಣೀರು ಹಾಕುತ್ತಿದ್ದ ವಿಷಯ ಖಳ ನಟನಾಗಿದ್ದ ರಂಜಿತ್‌ಗೆ ಗೊತ್ತಿರಲಿಲ್ಲ. ಈ ವಿಷಯವನ್ನು ಸಂದರ್ಶನದ ವೇಳೆ ರಿವೀಲ್ ಮಾಡಿದ್ದಾರೆ.

" ಮಾಧುರಿ ದೀಕ್ಷಿತ್ ಕಣ್ಣೀರು ಹಾಕುವುದಕ್ಕೆ ಶುರು ಮಾಡಿದ್ದರು. ಈ ಸೀನ್‌ನಲ್ಲಿ ನಟಿಸಲು ಹಿಂದೇಟು ಹಾಕಿದ್ದರು. ಅದು ನನಗೆ ಗೊತ್ತಿರಲಿಲ್ಲ. ಯಾರೋ ಒಬ್ಬ ಕಲಾ ನಿರ್ದೇಶಕ ನನಗೆ ಹೇಳಿದ್ರು. ಅವನು ಬೆಂಗಾಲಿ ಕಲಾ ನಿರ್ದೇಶಕನಾಗಿದ್ದನು. ಆ ಸಿನಿಮಾದಲ್ಲಿ ಮಾಧುರಿ ತಂದೆ ಕಡುಬಡವ. ಆತನದ್ದು ಒಂದು ಕೈಗಾಡಿ ಇತ್ತು. ಆ ಕೈಗಾಡಿಯಲ್ಲಿಯೇ ಕಿರುಕುಳ ನೀಡುವ ದೃಶ್ಯ ನಡೆಯಬೇಕಿತ್ತು. ಕೊನೆ ಮಾಧುರಿ ದೀಕ್ಷಿತ್ ಆ ಸೀನ್‌ನಲ್ಲಿ ನಟಿಸಲು ಒಪ್ಪದರು" ಎಂದು ಹಿರಿಯ ನಟ ರಂಜಿತ್ ರಿವೀಲ್ ಮಾಡಿದ್ದಾರೆ.

ಇದೇ ವೇಳೆ ರಂಜಿತ್ ನಿರ್ದೇಶಕರು ಇಂತಹ ಕಿರುಕುಳ ದೃಶ್ಯಗಳ ಬಗ್ಗೆ ಹೇಳುತ್ತಿದ್ದ ಮಾತನ್ನು ನೆನಪಿಸಿಕೊಂಡಿದ್ದಾರೆ. ಸಿನಿಮಾಗಳಲ್ಲಿ ಇಂತಹ ಕಿರುಕುಳ ನೀಡುವ ದೃಶ್ಯಗಳು ಇದ್ದೇ ಇರುತ್ತವೆ ಎಂದು ಹೇಳುತ್ತವೆ. ಈ ದೃಶ್ಯಗಳಲ್ಲಿ ನಟಿಸುವುದು ನಿಮ್ಮ ಕೆಲಸವೆಂದು ಹೇಳುತ್ತಿದ್ದರಂತೆ. ಹಾಗೇ ಫೈಟ್ ಮಾಸ್ಟರ್ ಆಗಿದ್ದ ಅಜಯ್ ದೇವಗನ್ ತಂದೆ ಕೂಡ ಇಂತಹ ಬೋಲ್ಡ್ ದೃಶ್ಯಗಳನ್ನು ಚಿತ್ರಿಸುವಾಗ ಕ್ಯಾಮರಾಗೆ ಕಟ್ ಅಂತ ಹೇಳುತ್ತಿರಲಿಲ್ಲ ಎಂದು ನೆನಪಿಸಿಕೊಂಡಿದ್ದಾರೆ.

More from Filmibeat

English summary
Madhuri Dixit refused to do bold scene in Prem Pratigya Movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X