ಮಹಾಕುಂಬ ಮೇಳದಲ್ಲಿ ವೈರಲ್ ಆದ ಬೆಕ್ಕಿನ ಕಣ್ಣಿನ ಹುಡುಗಿ; ನೆಟ್ಟಿಗರಿಗೆ 'ಮೊನಾಲಿಸಾ'ಳಂತೆ ಕಂಡಳು ರುದ್ರಾಕ್ಷಿ ರಾಣಿ

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಬ ಮೇಳ ನಡೆಯುತ್ತಿದೆ. ವಿಶ್ವದ ಮೂಲೆ ಮೂಲೆಯಿಂದ ಭಕ್ತರು ಇಲ್ಲಿಗೆ ಬಂದು ಮಹಾಕುಂಬ ಮೇಳದಲ್ಲಿ ಭಾಗಿಯಾಗುತ್ತಿದ್ದಾರೆ. 144 ವರ್ಷಕ್ಕೊಮ್ಮೆ ನಡೆಯುವ ಮಹಾಕುಂಬ ಮೇಳೆ ಈ ಬಾರಿ ನಡೆಯುತ್ತಿರುವುದರಿಂದ ಮತ್ತಷ್ಟು ವಿಶೇಷತೆಯನ್ನು ಪಡೆದುಕೊಂಡಿದೆ. ಸಹಸ್ರಾರು ಸಂಖ್ಯೆಯಲ್ಲಿ ಜನರು ಇಲ್ಲಿ ಭಾಗವಹಿಸುತ್ತಿದ್ದಾರೆ.

ಮಹಾಕುಂಬ ಮೇಳದಲ್ಲಿ ಸಾಧು ಸಂತರು, ನಾಗ ಸಾಧುಗಳು ಸೇರಿದಂತೆ ಭಕ್ತರು ರುದ್ರಾಕ್ಷಿ ಮಾಲೆಯನ್ನು ಹಿಡಿದು ಸುತ್ತಾಡುತ್ತಿರುತ್ತಾರೆ. ಗಂಗಾ ನದಿಯಲ್ಲಿ ಸ್ನಾನ, ವಿಶೇಷ ಪೂಜೆ ಪುನಸ್ಕಾರಗಳಲ್ಲಿ ಭಾಗಿಯಾಗುತ್ತಾರೆ. ಹೀಗಾಗಿ ಮಹಾಕುಂಬ ಮೇಳ ವಿಶ್ವದಾದ್ಯಂತ ಗಮನ ಸೆಳೆಯುತ್ತಿದೆ. ಇದರಲ್ಲಿ ಕೆಲವು ದಿನಗಳ ಹಿಂದಷ್ಟೇ ರುದ್ರಾಕ್ಷಿ ಮಾರುತ್ತಿದ್ದ ಹುಡುಗಿಯೊಬ್ಬರು ದಿಢೀರನೇ ವೈರಲ್ ಆಗಿದ್ದಳು.

Mahakumbha mela 2025 Viral Girl as monalisa

ಸೋಶಿಯಲ್ ಮೀಡಿಯಾದಲ್ಲಿ ಕಳೆದ ಕೆಲವು ದಿನಗಳಿಂದ ಹುಡುಗಿಯೊಬ್ಬಳು ವೈರಲ್ ಆಗಿದ್ದಾಳೆ. ಈಕೆಯ ಕಣ್ಣಿನ ನೋಟಕ್ಕೆ ನೆಟ್ಟಿಗರು ಕ್ಲೀನ್ ಬೋಲ್ಡ್ ಆಗಿದ್ದರು. ಜೊತೆ ಆಕೆಯ ವಿಡಿಯೋ ಹಾಗೂ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುವುದಕ್ಕೆ ಶುರು ಮಾಡಿದ್ದರು. ಆಕೆ ಫೋಟೊ ಹಾಗೂ ವಿಡಿಯೋಗಳು ಈಗ ಟ್ರೆಂಡಿಂಗ್‌ನಲ್ಲಿ ಇವೆ.

ಪ್ರಯಾಗ್‌ರಾಜ್‌ ನಡೆಯುತ್ತಿರುವ ಮಹಾಕುಂಬ ಮೇಳದಲ್ಲಿ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದರು. ಐಐಟಿಯ ಬಾಬಾನಿಂದ ಹಿಡಿದು ರುದ್ರಾಕ್ಷಿ ಮಾರುವ ಹುಡುಗಿವರೆಗೂ ಸದ್ದು ಮಾಡುತ್ತಿದ್ದಾರೆ. ಅಷ್ಟಕ್ಕೂ ರುದ್ರಾಕ್ಷಿ ಮಾರುವ ಈ ಹುಡುಗಿ ಯಾಕಿಷ್ಟು ಸದ್ದು ಮಾಡುತ್ತಿದ್ದಾಳೆ. ಮಹಾಕುಂಬದ ಮೊನಾಲಿಸಾ ಅಂತ ಯಾಕೆ ಟ್ರೆಂಡ್ ಆಗುತ್ತಾಳೆ ಅನ್ನೋದು ಇನ್ನು ಇಂಟ್ರೆಸ್ಟಿಂಗ್.

Mahakumbha mela 2025 Viral Girl as monalisa

ಸೋಶಿಯಲ್ ಮೀಡಿಯಾದಲ್ಲಿ ಈ ವೈರಲ್ ಹುಡುಗಿತದ್ದೇ ಚರ್ಚೆ. ಟ್ವಿಟರ್‌ (ಎಕ್ಸ್)ನಲ್ಲಿ 'ಮೊನಾಲಿಸಾ' ಅಂತಾಲೇ ಟ್ರೆಂಡ್ ಆಗಿದ್ದಳು ಈ ಹುಡುಗಿ. ಈ ಹುಡುಗಿಯ ಕಣ್ಣುಗಳಿಗೆ ನೆಟ್ಟಿಗರು ಮನಸೋತಿದ್ದಾರೆ. ಆಕೆಯ ಕಣ್ಣುಗಳಲ್ಲಿ ಏನೋ ಜಾದು ಅಂತ ಹೇಳುವುದಕ್ಕೆ ಶುರು ಮಾಡಿದ್ದಾರೆ. ಆದರೂ ಮೊನಾಲಿಸಾ ಅಂತ ಯಾಕೆ ಟ್ರೆಂಡ್ ಮಾಡುತ್ತಿದ್ದಾರೆ. ಈಕೆಯ ಊರು ಯಾವುದು? ಹೆಸರೇನು ಅಂತ ನೋಡುವುದಾದರೇ..

ವೈರಲ್ ಹುಡುಗಿಯ ಫೋಟೊಗಳು ಟ್ರೆಂಡ್ ಆಗುತ್ತಿದ್ದಂತೆ ಆಕೆಯನ್ನು ಹುಡುಕಿಕೊಂಡು ಹೋದವರು ಕಮ್ಮಿಯೇನು ಇಲ್ಲ. ಅಂದ್ಹಾಗೆ ಈಕೆ ಮಧ್ಯ ಪ್ರದೇಶ ಮೂಲದವಳು. ಈಕೆ ಹಾಗೂ ಅವಳ ಕುಟುಂಬ ಪ್ರತಿ ಕುಂಬಮೇಳಕ್ಕೂ ಬಂದು ರುದ್ರಾಕ್ಷಿ ಮಾಲೆಯನ್ನು ಮಾರಾಟ ಮಾಡುತ್ತಾರೆ. ಆದರೆ, ಈ ಬಾರಿ ಈಕೆಯ ನಸೀಬು ಬದಲಾಗಿದ್ದು, ವೈರಲ್ ಆಗಿದ್ದಾರೆ. ಅಂದ್ಹಾಗೆ ಈ ಹುಡುಗಿ ತನ್ನ ಹೆಸರನ್ನು ಮೊನಾಲಿಸಾ ಎಂದು ಹೇಳಿಕೊಂಡಿದ್ದಾಳೆ. ಹೀಗಾಗಿ ನೆಟ್ಟಿಗರು ಮೊನಾಲಿಸಾ ಎಂದೇ ಟ್ರೆಂಡ್ ಮಾಡುತ್ತಿದ್ದಾರೆ.

ಮಧ್ಯ ಪ್ರದೇಶದ ಇಂದೋರ್‌ನ ಮೊನಾಲಿಸಾ ಈಗ ವ್ಯಾಪಾರ ಮಾಡುವುದಕ್ಕೆ ಆಗದಷ್ಟು ತೊಂದರೆ ಆಗಿದ್ದಾಗಿ ಹೇಳಿಕೊಂಡಿದ್ದಾಳೆ. ಎಲ್ಲರೂ ಬಂದು ಫೋಟೊ ಕ್ಲಿಕ್ ಮಾಡುತ್ತಲೇ ಇರುತ್ತಾರೆ. ವ್ಯಾಪಾರ ಮಾಡುವುದಕ್ಕೆ ಬಿಡುವುದಿಲ್ಲ ಎಂದಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಇಂದೋರ್‌ಗೆ ಹಿಂತಿರುಗಿದ್ದಾಳೆ ಎನ್ನಲಾಗಿದೆ.

More from Filmibeat

English summary
Mahakumbha mela 2025 Viral Girl who is selling rudrakshi mala comparing with monalisa.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X