ಒಂದೇ ಸಿನಿಮಾದಲ್ಲಿ ನಟಿಸ್ಬೇಕಿತ್ತು ಮಹೇಶ್ ಬಾಬು, ದಳಪತಿ ವಿಜಯ್: ಆ ಸಿನಿಮಾ ತಿರಸ್ಕರಿಸಿದ್ದೇಕೆ ಗೊತ್ತೆ?

ಮಹೇಶ್ ಬಾಬು, ದಳಪತಿ ವಿಜಯ್ ಇಬ್ಬರೂ ದಕ್ಷಿಣ ಭಾರತ ಸ್ಟಾರ್ ನಟರು. ಇಬ್ಬರಿಗೂ ವಿಶ್ವದ ಮೂಲೆ ಮೂಲೆಯಲ್ಲಿ ಅವರದ್ದೇ ಆದ ಅಭಿಮಾನಿ ಬಳಗವಿದೆ. ಇಷ್ಟು ದೊಡ್ಡ ಫ್ಯಾನ್ ಫಾಲೋಯಿಂಗ್ ಇರುವ ನಟರು ಒಂದು ವೇಳೆ ಒಂದೇ ಸಿನಿಮಾದಲ್ಲಿ ನಟಿಸಿದರೆ, ಸಿನಿಪ್ರಿಯರಿಗೆ ಹಬ್ಬವೇ ಸರಿ.

ಇಷ್ಟು ದೊಡ್ಡ ನಟರು ಸಾಮಾನ್ಯವಾಗಿ ಒಂದೇ ಸಿನಿಮಾದಲ್ಲಿ ನಟಿಸುವುಕ್ಕೆ ಒಪ್ಪುವುದು ತೀರಾ ವಿರಳ. ಹಾಗಾಗಿ ಅಭಿಮಾನಿಗಳು ಕೂಡ ಇಂತಹದ್ದೊಂದು ಕನಸನ್ನು ಕಾಣುವುದಕ್ಕೆ ಹೋಗುವುದಿಲ್ಲ. ಆದರೆ, ಇವರಿಬ್ಬರನ್ನೂ ಒಟ್ಟುಕೊಂಡು ಒಂದು ಸಿನಿಮಾ ಮಾಡ್ಬೇಕು ಅಂತ ಮಣಿರತ್ನಂ ಪ್ರಯತ್ನ ಪಟ್ಟಿದ್ದರು. ಈ ವಿಷಯವನ್ನು ತಮಿಳು ನಾಡಿನ ಜನಪ್ರಿಯ ಲೇಖಕರೊಬ್ಬರು ರಿವೀಲ್ ಮಾಡಿದ್ದಾರೆ.

mahesh-babu-and-thalapathy-vijay-in-one-movie- Maniratnam

ಮಹೇಶ್ ಬಾಬು ಹಾಗೂ ದಳಪತಿ ವಿಜಯ್ ಇಬ್ಬರು ಒಂದೇ ಸಿನಿಮಾದಲ್ಲಿ ನಟಿಸುವಂತೆ ಕೇಳಿ ಕೊಂಡಿದ್ದರು. ಆದರೆ, ಇಬ್ಬರೂ ನಟರು ಒಪ್ಪಿರಲಿಲ್ಲ. ಅದಕ್ಕೆ ಕಾರಣ ಏನು? ಆ ಸಿನಿಮಾ ಯಾವುದು? ಇಬ್ಬರು ನಿರ್ವಹಿಸಬೇಕಿದ್ದ ಪಾತ್ರಗಳು ಯಾವುವು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಈ ಇಬ್ಬರು ದಿಗ್ಗಜರನ್ನು ಇಟ್ಟುಕೊಂಡು ಸಿನಿಮಾ ಮಾಡುವುದಕ್ಕೆ ಮಣಿರತ್ನಂ ಮುಂದಾಗಿದ್ದರು. ಮಣಿರತ್ನಂ ಕಲ್ಪಿಸಿಕೊಂಡಂತೆ ಇಬ್ಬರೂ ಆಯಾ ಪಾತ್ರಗಳಿಗೆ ಸೂಕ್ತರಾಗಿದ್ದರು. ಅಷ್ಟಕ್ಕೂ ಆ ಸಿನಿಮಾನೇ 'ಪೊನ್ನಿಯಿನ್ ಸೆಲ್ವನ್'. ಈ ಸಿನಿಮಾ ಎರಡು ಭಾಗಗಳಾಗಿ ತೆರೆಕಂಡು ಯಶಸ್ವಿ ಗಳಿಸಿದೆ. ಆದರೆ, ಈ ಮೆಗಾ ಬಜೆಟ್ ಸಿನಿಮಾದಲ್ಲಿ ಮಹೇಶ್ ಬಾಬು ಹಾಗೂ ದಳಪತಿ ವಿಜಯ್‌ ಇಬ್ಬರಿಗೂ ನಟಿಸುವಂತೆ ಕೇಳಿಕೊಳ್ಳಲಾಗಿತ್ತು ಎಂದು ಸ್ಕ್ರಿಪ್ಟ್ ರೈಟರ್ ಜಯಮೋಹನ್ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ.

ಕಲ್ಕಿ ಕೃಷ್ಣಮೂರ್ತಿ ಬರೆದ 'ಪೊನ್ನಿಯಿನ್ ಸೆಲ್ವನ್' ತಮಿಳರ ಪಾಲಿಗೆ ಪವಿತ್ರ ಗ್ರಂಥವಿದ್ದಂತೆ. ಈ ಕಥೆ ತಮಿಳುನಾಡಿನ ಬಹುತೇಕ ಮಂದಿಗೆ ಗೊತ್ತಿದೆ. ಇದನ್ನೇ ಮಣಿರತ್ನಂ ಸಿನಿಮಾ ಮಾಡಬೇಕು ಅಂತ ನಿರ್ಧರಿಸಿದ್ದಾಗ, ವಲ್ಲವರಾಯನ್ ವಂದಿಯತೇವನ್ ಹಾಗೂ ಪೊನ್ನಿಯಿನ್ ಸೆಲ್ವನ್ ಪಾತ್ರಗಳಿಗೆ ಮಹೇಶ್ ಬಾಬು ಹಾಗೂ ದಳಪತಿ ವಿಜಯ್‌ಗೆ ಆಫರ್ ಮಾಡಲಾಗಿತ್ತು. ಆದರೆ, ಈ ಪಾತ್ರಗಳಲ್ಲಿ ನಟಿಸುವುದಕ್ಕೆ ಇಬ್ಬರೂ ಒಪ್ಪಲಿಲ್ಲ.

mahesh-babu-and-thalapathy-vijay-in-one-movie- Maniratnam

ಬಳಿಕ ವಲ್ಲವರಾಯನ್ ವಂದಿಯತೇವನ್ ಪಾತ್ರದಲ್ಲಿ ನಟಿಸುವುದಕ್ಕೆ ಕಾರ್ತಿ ಒಪ್ಪಿಗೆ ಸೂಚಿಸಿದ್ದರು. ಇತ್ತ ಪೊನ್ನಿಯಿನ್ ಸೆಲ್ವನ್ ಪಾತ್ರದಲ್ಲಿ ಜಯಂ ರವಿ ನಟಿಸಿದ್ದರು. ಇವರೊಂದಿಗೆ ಐಶ್ವರ್ಯಾ ರೈ, ತ್ರಿಶಾ, ವಿಕ್ರಂ ಸೇರಿದಂತೆ ತಮಿಳಿನ ಸ್ಟಾರ್‌ ನಟಿಸಿದ್ದರು. ಈ ಸಿನಿಮಾ ತಮಿಳು ನಾಡಿನ ಬಾಕ್ಸಾಫೀಸ್‌ನಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು.

'ಪೊನ್ನಿಯಿನ್ ಸೆಲ್ವನ್' ಕಥೆಯನ್ನು ತೆರೆಮೇಲೆ ತರಬೇಕು ಅಂತ ಮಣಿರತ್ನಂ ಮೂರು ದಶಕಗಳಿಂದ ಪ್ರಯತ್ನ ಪಟ್ಟಿದ್ದರು. ಹಿಂದೊಮ್ಮೆ ಈ ಸಿನಿಮಾಗಾಗಿ ರಜನಿಕಾಂತ್, ಎಂಜಿಆರ್ ಹಾಗೂ ಕಮಲ್ ಹಾಸನ್ ಒಟ್ಟಿಗೆ ಸೇರಿಸುವ ಪ್ರಯತ್ನ ಮಾಡಿದ್ದರು. ಆದರೆ, ಅದೂ ಕೂಡ ಸಾಧ್ಯವಾಗಿರಲಿಲ್ಲ. ಕೊನೆಗೂ ಬಹಳ ವರ್ಷಗಳ ಬಳಿಕ 2022ರಲ್ಲಿ 'ಪೊನ್ನಿಯಿನ್ ಸೆಲ್ವನ್' ಕೊನೆಗೂ ತೆರೆಗೆ ಬಂದಿತ್ತು.

ದಕ್ಷಿಣ ಭಾರತದಲ್ಲಿ ಇಬ್ಬರು ಸೂಪರ್‌ಸ್ಟಾರ್‌ಗಳು ಒಟ್ಟಿಗೆ ಒಂದೇ ಸಿನಿಮಾಗಾಗಿ ಸೇರುವುದು ವಿರಳ. ನಿರ್ದೇಶಕರು ಇಬ್ಬರಿಗೂ ಸಮನಾದ ಪಾತ್ರಗಳನ್ನು ನೀಡಬೇಕು. ಒಂದು ವೇಳೆ ಒಬ್ಬರಿಗೆ ಹೆಚ್ಚು, ಇನ್ನೊಬ್ಬರಿಗೆ ಕಮ್ಮಿ ಆದರೆ, ಎಲ್ಲಿ ಫ್ಯಾನ್ಸ್ ವಾರ್ ಹೆಚ್ಚಾಗುತ್ತೋ ಅನ್ನು ಕಾರಣಕ್ಕೆ ಡೈರೆಕ್ಟರ್ ಕೂಡ ತಲೆ ಕೆಡಿಸಿಕೊಳ್ಳುವುದಕ್ಕೆ ಹೋಗುವುದಿಲ್ಲ.

More from Filmibeat

English summary
Mahesh Babu and Thalapathy Vijay rejected Mani Ratnam movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X