ಅನಂತ್, ತೈಮೂರ್‌ಗೆ ದಾದಿಯಾಗಿದ್ದ ಲಲಿತಾ ಡಿಸಿಲ್ವಾ; ಈಗ ರಾಮ್ ಚರಣ್ ಪುತ್ರಿಗೂ ನರ್ಸ್, ಈ ಬಹು ಬೇಡಿಕೆಯ ದಾದಿ ಯಾರು?

ಲಲಿತಾ ಡಿಸಿಲ್ವಾ, ಈಗ ಮಾಧ್ಯಮಗಳಲ್ಲಿ ಈಕೆ ಬಗ್ಗೆನೇ ಚರ್ಚೆ. ಅದರಲ್ಲೂ ಮುಂಬೈನಲ್ಲಿ ಈಕೆಯನ್ನು 'ತೈಮೂರ್ ನಾನಿ' ಅಂತಲೇ ಜನಪ್ರಿಯರಾಗಿದ್ದಾರೆ. ಬಾಲಿವುಡ್‌ನ ಫೇಮಸ್ ಜೋಡಿ ಕರೀನಾ ಕಪೂರ್ ಹಾಗೂ ಸೈಫ್ ಅಲಿಖಾನ್ ಪುತ್ರನೇ ತೈಮೂರ್ ಅಲಿ ಖಾನ್. ಇವರ ಮಗುವನ್ನು ನೋಡಿಕೊಂಡಿದ್ದ ಈ ದಾದಿ ಟಾಕ್ ಆಫ್ ಟೌನ್ ಆಗಿದ್ದಾರೆ. ಅದಕ್ಕೆ ಕಾರಣ ರಾಮ್ ಚರಣ್ ದಂಪತಿ.

ಈ ಸೆಲೆಬ್ರಿಟಿ ಮಕ್ಕಳ ದಾದಿ ಲಿಲತಾ ಡಿಸಿಲ್ವಾ ಈಗ ರಾಮ್ ಚರಣ್ ಹಾಗೂ ಉಪಾಸನಾ ಪುತ್ರಿ ಕ್ಲಿನ್ ಕಾರಾಗೆ ದಾದಿಯಾಗಿದ್ದಾರೆ. ಇತ್ತೀಚೆಗೆ ಲಿಲಿತಾ ಡಿಸಿಲ್ವಾ, ಹಿಂದಿ ರಶ್ ಅನ್ನುವ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದರು. ಈ ವೇಳೆ ಲಲಿತಾ ಕರೀನಾ ಕಪೂರ್ ಹಾಗೂ ಸೈಫ್ ಅಲಿಖಾನ್ ಮನೆಯಲ್ಲಿನ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಹಾಗೇ ಮೆಗಾ ಕುಟುಂಬದ ಬಗ್ಗೆನೂ ಮಾತಾಡಿಕೊಂಡಿದ್ದಾರೆ.

celebrities kids nurse Lalita Dsilva

ಹೌದು, ಇಷ್ಟು ದಿನ ಕರೀನಾ ಹಾಗೂ ಸೈಫ್ ಮಕ್ಕಳು ತೈಮೂರ್ ಅಲಿ ಖಾನ್ ಹಾಗೂ ಜಹಂಗೀರ್ ಅಲಿ ಖಾನ್‌ಗೆ ಲಿಲಿತಾ ಡಿಸಿಲ್ವಾ ದಾದಿಯಾಗಿದ್ದರು. ಈಗ ಟಾಲಿವುಡ್‌ನ ಮೆಗಾ ಪವರ್ ಸ್ಟಾರ್ ರಾಮ್ ಚರಣ್‌ ಪುತ್ರಿಗೆ ದಾದಿಯಾಗಿದ್ದಾರೆ. ಇತ್ತೀಚೆಗೆ ಈ ಸೆಲೆಬ್ರಿಟಿ ಮಕ್ಕಳ ದಾದ ನೀಡಿದ ಸಂದರ್ಶನದ ಬಳಿಕ ಲಿಲಿತಾ ಡಿಸಿಲ್ವಾ ಬಗ್ಗೆ ಹುಡುಕಾಡುವವರ ಸಂಖ್ಯೆ ದೊಡ್ಡದಾಗಿದೆ.

ಲಲಿತಾ ಡಿಸಿಲ್ವಾ ಕೇವಲ ಬಾಲಿವುಡ್ ಸೆಲೆಬ್ರಿಟಿಗಳಿಗೆ ಅಷ್ಟೇ ಅಲ್ಲ. ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿಗೂ ದಾದಿಯಾಗಿದ್ದರು. ಈ ಕಾರಣಕ್ಕೆ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವಿವಾಹ ಸಮಾರಂಭಕ್ಕೆ ಲಲಿತಾ ಡಿಸಿಲ್ವಾಗೆ ವಿಶೇಷ ಆಹ್ವಾನವಿತ್ತು. ಮುಕೇಶ್ ಅಂಬಾನಿ ಖುದ್ದಾಗಿ "ನಿನ್ನ ಬಾಬಾ ಮದುವೆ ಆಗುತ್ತಿದ್ದಾನೆ" ಎಂದು ಆಹ್ವಾನ ನೀಡಿದ್ದನ್ನು ಇತ್ತೀಚೆಗೆ ನೆನಪಿಸಿಕೊಂಡಿದ್ದಾರೆ.

ಇತ್ತೀಚೆಗೆ ಲಲಿಯಾ ಡಿಸಿಲ್ವಾ ಸಂಭಾವನೆ ಬಗ್ಗೆನೂ ದೊಡ್ಡ ಚರ್ಚೆಯಾಗಿತ್ತು. ಸೆಲೆಬ್ರಿಟಿಗಳ ಮಕ್ಕಳಿಗೆ ದಾದಿಯಾಗಿರುವ ಮುಂಬೈನ ಲಲಿತಾ ಡಿಸಿಲ್ವಾ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಶ್ರೀಮಂತ ಉದ್ಯಮಿ ಹಾಗೂ ತಾರೆಯರ ಮಕ್ಕಳ ಲಾಲನೆ ಪಾಲನೆಗೆ ಲಲಿತಾ ಡಿಸಿಲ್ವಾ ತಿಂಗಳಿಗೆ ಎರಡೂವರೆ ಲಕ್ಷ ರೂಪಾಯಿ ಸಂಬಳ ಪಡೆಯುತ್ತಾರೆ ಅನ್ನೋ ಸುದ್ದಿ ಕೆಲವು ದಿನಗಳ ಕಾಲ ಹರಿದಾಡಿತ್ತು. ಈ ವೇಳೆ ದುಬಾರಿ ಮಕ್ಕಳ ದಾದಿ ಅಂತಲೂ ಜನಪ್ರಿಯರಾಗಿದ್ದರು.

celebrities kids nurse Lalita Dsilva

ಇದೇ ವಿಚಾರವಾಗಿ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಲಲಿತಾ ಡಿಸಿಲ್ವಾ ತಮ್ಮ ಸಂಬಳದ ಬಗ್ಗೆ ಪ್ರತಿಕ್ರಿಯೆಯನ್ನೂ ನೀಡಿದ್ದಾರೆಂದು ಎಬಿಪಿ ನ್ಯೂಸ್ ವರದಿ ಮಾಡಿತ್ತು. "ತಿಂಗಳಿಗೆ 2.5 ಲಕ್ಷ ರೂಪಾಯಿ ಸಂಬಳವಿಲ್ಲ. ಬರಬೇಕು ಅಂತ ಬಯಸುತ್ತೇನೆ. ಒಂದು ವೇಳೆ ಬಂದರೆ, ನಿಮ್ಮ ಬಾಯಿ ಸಕ್ಕರೆ ಹಾಕುತ್ತೇನೆ. ಇದೆಲ್ಲ ಕೇವಲ ಗಾಳಿ ಸುದ್ದಿಯಷ್ಟೇ" ಎಂದು ಪ್ರತಿಕ್ರಿಯೆಯನ್ನು ನೀಡಿದ್ದರು.

ಇದೇ ವೇಳೆ ಮೆಗಾ ಕುಟುಂಬದ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ವಿಷಯಗಳನ್ನು ಹೇಳಿಕೊಂಡಿದ್ದಾರೆ. ಒಂದು ವೇಳೆ ತನಗೆ ಆಯಾಸ ಆದರೆ, ರಾಮ್ ಚರಣ್ ಹಾಗೂ ಉಪಾಸನಾ ಮಗಳನ್ನು ನೋಡಿಕೊಳ್ಳುತ್ತಾರೆ. ಅವರು ಸದ್ಯ ಲಂಡನ್‌ಗೆ ಹೋಗಿದ್ದಾರೆ. ಮೆಗಾ ಕುಟುಂಬದ ಸದಸ್ಯರೆಲ್ಲರೂ ತುಂಬಾನೇ ಒಳ್ಳೆಯವರು ಎಂದು ಹೇಳಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X