ರಷ್ಯಾದ ನಟೋರಿಯಸ್ ಕೆಜಿಬಿ ಕುರಿತ ಸಿನಿಮಾಗಳು: ಏನಿದು ಕೆಜಿಬಿ?

ವಿಶ್ವದ ಬಹುತೇಕ ಬಲಾಢ್ಯ ದೇಶಗಳಿಗೆ ಅದರದ್ದೇ ಆದ ಗುಪ್ತಚರ ಸಂಸ್ಥೆಗಳಿವೆ. ಭಾರತದ ಗುಪ್ತಚರ ಸಂಸ್ಥೆಯ ಹೆಸರು ರಾ (RAW). ಅಮೆರಿಕದ ಗುಪ್ತಚರ ಇಲಾಖೆ ಸಿಐಎ. ವಿಶ್ವದಲ್ಲಿಯೇ ಅತಿ ಹೆಚ್ಚು ನಟೋರಿಯಸ್ ಆದ ಗುಪ್ತಚರ ಇಲಾಖೆ ಎಂದು ಹೆಸರು ಮಾಡಿದ್ದವು, ಇಸ್ರೇಲ್‌ನ ಮೊಸಾದ್ ಹಾಗೂ ರಷ್ಯಾದ ಕೆಜಿಬಿ.

ಪ್ರಸ್ತುತ ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧ ಸ್ಥಿತಿ ನಿರ್ಮಾಣವಾಗಿದ್ದು, ಈ ಸ್ಥಿತಿಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ರ ಆಕ್ರಮಣಶೀಲತೆಯೇ ಕಾರಣ ಎನ್ನಲಾಗುತ್ತಿದೆ. ವ್ಲಾದಿಮಿರ್ ಪುತಿನ್ ಸ್ವಭಾವತಃ ಆಕ್ರಮಣಶೀಲ ನಾಯಕ. ಅವರ ಈ ಆಕ್ರಮಣಶೀಲತೆಗೆ ಅವರ ಕೆಜಿಬಿ (ಕಮಿಟೆಟ್ ಗೊಸುದರ್ಸ್ತೆವೆನ್ನೋಯ್ ಬೆಜೊಪಾನ್ಸ್ನೋತಿ) ತರಬೇತಿಯೇ ಕಾರಣ ಎನ್ನಲಾಗುತ್ತದೆ.

ಐಪಿಎಲ್ ನೋಡುತ್ತೀರಾ? ಸಿನಿಮಾ ನೋಡುತ್ತಿರಾ?: RRR, KGF 2, ಬೀಸ್ಟ್, ಆಚಾರ್ಯಗೆ ಟೆನ್ಷನ್ ಶುರು
ವ್ಲಾದಿಮಿರ್ ಪುಟಿನ್‌ ತಯಾರಾಗಿರುವುದು ವಿಶ್ವದ ನಟೋರಿಯಸ್ ಗುಪ್ತಚರ ಸಂಸ್ಥೆ ಕೆಜಿಬಿ ಗರಡಿಯಲ್ಲಿ. ರಷ್ಯಾದ ಗುಪ್ತಚರ ಸಂಸ್ಥೆ ಕೆಜಿಬಿ ಬಗ್ಗೆ ಹಲವು ದಂತಕತೆಗಳೇ ಇವೆ. ಈಗ ಅಧಿಕೃತವಾಗಿ ಕೆಜಿಬಿ ಇಲ್ಲವಾದರೂ ಗುಪ್ತವಾಗಿ ಅಥವಾ ಬೇರೆ ಹೆಸರಿನೊಂದಿಗೆ ಅದು ಈಗಲೂ ಕೆಲಸ ಮಾಡುತ್ತಿದೆ ಎಂದೇ ನಂಬಲಾಗಿದೆ. ಹಾಗಿದ್ದರೆ ಕೆಜಿಬಿ ಎಂದರೆ ಭಯ ಏಕೆ, ಕೆಜಿಬಿ ಕುರಿತಾಗಿ ತಿಳಿಯಲು ನೋಡಬೇಕಾದ ಸಿನಿಮಾಗಳಾವುವು? ಇಲ್ಲಿದೆ ಪಟ್ಟಿ.

ಅಪಹರಣ, ಕೊಲೆಗಳಲ್ಲಿ ಭಾಗಿ

ಅಪಹರಣ, ಕೊಲೆಗಳಲ್ಲಿ ಭಾಗಿ

1953 ರಲ್ಲಿ ಆರಂಭವಾದ ಕೆಜಿಬಿ, ದೇಶದಲ್ಲಿಯೇ ರಾಜಕೀಯ ಅಪಹರಣ, ಕೊಲೆಗಳಲ್ಲಿ ಭಾಗಿಯಾಗಿತ್ತು. ರಾಜಕೀಯ ನಾಯಕರು ತರಬೇತಿ ಪಡೆದ ಕೆಜಿಬಿಯ 'ಹಂತಕರನ್ನು' ತಮ್ಮ ಅನುಕೂಲಕ್ಕೆ ಬಳಸಿಕೊಂಡರು. ಕಮ್ಯೂನಿಸ್ಟ್‌ ಪಕ್ಷದ ವಿರುದ್ಧ ಧ್ವನಿ ಎತ್ತುವವರನ್ನು, ಕಮ್ಯೂನಿಸ್ಟ್ ಸರ್ಕಾರದ ವಿರೋಧಿಗಳನ್ನು ಹೇಳ ಹೆಸರಿಲ್ಲದೆ ಮಾಡುವುದೇ ಕೆಜಿಬಿಯ ಕಾಯಕವಾಗಿತ್ತು. ಬಳಿಕ ಅಮೆರಿಕ ಹಾಗೂ ರಷ್ಯಾ ನಡುವಿನ ಶೀತಲ ಸಮರ ಉತ್ತುಂಗಕ್ಕೆ ಹೋಗುವ ವೇಳೆಗೆ ಕೆಜಿಬಿಯನ್ನು ಅಂತಾರಾಷ್ಟ್ರೀಯ ಕಾರಣಗಳಿಗಾಗಿ ಬಳಸಿಕೊಳ್ಳಲು ಆರಂಭಿಸಲಾಯಿತು.

ಗೂಢಚಾರರಾಗಿದ್ದ ವ್ಲಾದಿಮಿರ್ ಪುಟಿನ್

ಗೂಢಚಾರರಾಗಿದ್ದ ವ್ಲಾದಿಮಿರ್ ಪುಟಿನ್

ಹಲವು ರಾಜಕೀಯ ಹತ್ಯೆಗಳಲ್ಲಿ, ಜನಾಭಿಪ್ರಾಯ ಬದಲಾವಣೆಯಲ್ಲಿ ಕೆಜಿಬಿ ಮಹತ್ವದ ಪಾತ್ರವಹಿಸಿದೆ. ಪ್ರತ್ಯೇಕವಾದಿಗಳಿಗೆ ಶಸ್ತ್ರಾಸ್ತ್ರ ಸರಬರಾಜು, ತರಬೇತಿ ನೀಡುವ ಕಾರ್ಯವನ್ನೂ ಕೆಜಿಬಿ ಮಾಡಿದೆ. ಬರ್ಲಿನ್ ಕ್ರಾಂತಿಯ ಸಮಯದಲ್ಲಿ ವ್ಲಾದಿಮಿರ್ ಪುಟಿನ್ ಜರ್ಮನಿಯಲ್ಲಿಯೇ ಗುಪ್ತಚರನಾಗಿ ಕೆಲಸ ಮಾಡುತ್ತಿದ್ದರು! ಅಲ್ಲಿ ಅವರು ಟ್ರಾನ್ಸ್‌ಲೇಟರ್‌ ಆಗಿ ಕೆಲಸ ಮಾಡುತ್ತಾ ತಮ್ಮ ದೇಶಕ್ಕೆ ಜರ್ಮನಿಯ ಮಹತ್ವದ ಮಾಹಿತಿಗಳನ್ನು ಕದ್ದು ಒದಗಿಸುತ್ತಿದ್ದರು. ಅವರೇ ತಮ್ಮ ಆತ್ಮಕಥನದಲ್ಲಿ ಹೇಳಿಕೊಂಡಿರುವಂತೆ ಬರ್ಲಿನ್ ಗೋಡೆ ಬೀಳಿಸಿದ ದಿನ ತಮ್ಮ ಕಚೇರಿಯಲ್ಲಿ ದೊಡ್ಡ ಸಂಖ್ಯೆಯ ಗುಪ್ತ ದಾಖಲೆಗಳನ್ನು ಸುಟ್ಟುಹಾಕಿದ್ದರಂತೆ. ಅದೆಷ್ಟು ದಾಖಲೆಗಳಿದ್ದುವೆಂದರೆ ಬೆಂಕಿಗೆ ಅವರ ಮನೆಯ ಪೀಠೋಪಕರಣಗಳೆಲ್ಲ ಸುಟ್ಟುಹೋಗಿದ್ದವಂತೆ. ಆದರೆ ಜರ್ಮನಿಯ ಆಂತರಕ ಭದ್ರತೆ ಸಂಸ್ಥೆ ಸ್ಟಾಸಿಗೆ ಸಂಬಂಧಪಟ್ಟ ಕೆಲವು ದಾಖಲೆಗಳನ್ನು ಅವರು ಮಾಸ್ಕೊಗೆ ತಲುಪಿಸಿದ್ದರಂತೆ. ಅಷ್ಟೇ ಅಲ್ಲದೆ ಪೂರ್ವ ಜರ್ಮನಿಯಲ್ಲಿ ಸಕ್ರಿಯವಾಗಿದ್ದ ಭಯೋತ್ಪಾದಕ ಸಂಘಟನೆ ರೆಡ್ ಆರ್ಮಿ ಫ್ಯಾಕ್ಷನ್‌ಗೆ ಜೊತೆ ಸಂಪರ್ಕ ಹೊಂದಿದ್ದ ವ್ಲಾದಿಮಿರ್ ಸಂಘಟನೆಯ ಸದಸ್ಯರಿಗಾಗಿ ಶಸ್ತ್ರಾಸ್ತ್ರ ಒದಗಿಸುವ ಕಾರ್ಯ ಮಾಡಿದ್ದರು ಎನ್ನಲಾಗುತ್ತದೆ. ಈ ಬಗ್ಗೆ ರೆಡ್ ಆರ್ಮಿ ಫ್ಯಾಕ್ಷನ್‌ನ ಮಾಜಿ ಸದಸ್ಯರೊಬ್ಬರು ಈ ಹಿಂದೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು.

ಅತ್ಯುತ್ತಮ ಸ್ಪೈ ರುಡಾಲ್ಫ್ ಅಬೆಲ್

ಅತ್ಯುತ್ತಮ ಸ್ಪೈ ರುಡಾಲ್ಫ್ ಅಬೆಲ್

ಕೆಜಿಬಿ ಅದೆಷ್ಟು ಭಯಾನಕ ಎಂಬುದಕ್ಕೆ 'ಸ್ಪೈ ಬ್ರಿಡ್ಜ್' ಪ್ರಕರಣ ಸಾಕ್ಷಿ. ಕೆಜಿಬಿಯ ಅತ್ಯುತ್ತಮ ಗೂಢಚಾರ ರುಡಾಲ್ಫ್ ಅಬೆಲ್ ಅನ್ನು ಅಮೆರಿಕದ ಎಫ್‌ಬಿಐ, 1957 ಜೂನ್ 21 ರಂದು ಬಂಧಿಸಿತು. ನಾಲ್ಕು ವರ್ಷ ರುಡಾಲ್ಫ್‌ ಜೈಲಿನಲ್ಲಿರಬೇಕಾಯಿತು. 1960 ರಲ್ಲಿ ಸೋವಿಯತ್ ರಷ್ಯಾ ಮೇಲೆ ಹಾರಾಡುತ್ತಿದ್ದ ಸಿಐಎಯ ಗೂಢಾಚಾರ ವಿಮಾನವನ್ನು ಹೊಡೆದುರುಳಿಸಿ ಅದರಲ್ಲಿನ ಪೈಲೆಟ್‌ ಅನ್ನು ಹಿಡಿದು ಆತನನ್ನು ತಿಂಗಳು ಗಟ್ಟಲೆ ವಿಚಾರಣೆ ನಡೆಸಿದ ಕೆಜಿಬಿ ಕೊನೆಗೆ 1962 ರಲ್ಲಿ ರುಡಾಲ್ಫ್ ಅಬೆಲ್‌ನ ಬದಲಾಗಿ ತಾವು ಹಿಡಿದಿಟ್ಟಿದ್ದ ಸಿಐಎಯ ಮಿಷನ್ ಪೈಲೆಟ್ ಫ್ರಾನ್ಸಿಸ್ ಗ್ರೇ ಪವರ್ಸ್ ಅನ್ನು ಬಿಡಗುಡೆಗೆ ಒಪ್ಪಂದ ಮಾಡಿಕೊಂಡಿತು. 1962 ರ ಫೆಬ್ರವರಿ 10 ರಂದು ರುಡಾಲ್ಫ್‌ ಅಬೆಲ್ ಹಾಗೂ ಫ್ರಾನ್ಸಿಸ್ ಗ್ರೇ ಪವರ್ಸ್ ಅವರನ್ನು ಅವರವರ ದೇಶಗಳಿಗೆ ಹಸ್ತಾಂತರಿಸಲಾಯತು. ಈ ಹಸ್ತಾಂತರಣೆ ಬರ್ಲಿನ್‌ನ ಗ್ಲಿನಿಕ್ ಸೇತುವೆ ಮೇಲೆ ನಡೆಯಿತು. ಇವರಿಬ್ಬರ ಕುರಿತ ಕತೆಯನ್ನು 'ಬ್ರಿಡ್ಜ್ ಆಫ್ ಸ್ಪೈಸ್' ಹೆಸರಿನಲ್ಲಿ ಸಿನಿಮಾ ಮಾಡಲಾಗಿದೆ.

ಹಲವು ಸಿನಿಮಾಗಳು ಬಂದಿವೆ

ಹಲವು ಸಿನಿಮಾಗಳು ಬಂದಿವೆ

ಕೆಜಿಬಿ ಬಗ್ಗೆ ಈಗಾಗಲೇ ಹಲವು ಸಿನಿಮಾಗಳು ಬಂದಿವೆ. ಹಾಲಿವುಡ್‌ ತಮ್ಮ ಹಲವು ಸಿನಿಮಾಗಳಲ್ಲಿ ಕೆಜಿಬಿ ಸದಸ್ಯರನ್ನು ವಿಲನ್‌ಗಳಂತೆ ಚಿತ್ರಿಸಿವೆ. ರಷ್ಯನ್ ಸಿನಿಮಾಗಳಲ್ಲಿ ಕೆಜಿಬಿ ಸದಸ್ಯರನ್ನು ಹೀರೋಗಳಂತೆ ಚಿತ್ರಿಸಲಾಗಿದೆ. '23', 'ಅನ್ನಾ', 'ದಿ ಕೊರಿಯರ್', 'ಡೆಡ್ ಸಿಸನ್', 'ಎನಿಗ್ಮಾ', 'ದಿ ಫೋರ್ತ್ ಪ್ಯಾಟ್ರೋಲ್', 'ದಿ ಜಿಗ್‌ಸಾ ಮ್ಯಾನ್', 'ಕೆಜಿಬಿ: ದಿ ಸೀಕ್ರೆಟ್ ವಾರ್', ದಿ ಲುಕಿಂಗ್ ಗ್ಲಾಸ್ ವಾರ್', 'ದಿ ಮ್ಯಾನ್ ಫ್ರಮ್ ಅಂಕಲ್', 'ನೈಟ್ ಫ್ಲೈಟ್ ಫ್ರಮ್ ಮಾಸ್ಕೊ', 'ಆಪರೇಷನ್ ಮ್ಯಾನ್‌ ಹಂಟ್', 'ದಿ ಪ್ರೆಸಿಡೆಂಟ್ಸ್ ಅನಾಲಿಸ್ಟ್', 'ರೆಡ್ ಕಿಂಗ್, ವೈಟ್ ಕಿಂಗ್', 'ದಿ ಸೀಕ್ರೆಟ್ ಏಜೆಂಟ್ಸ್ ಬ್ಲಂಡರ್', 'ಟೊಪಾಜ್' ಇನ್ನೂ ಕೆಲವು ಸಿನಿಮಾಗಳು ಕೆಜಿಬಿಯ ಆಪರೇಷನ್‌ಗಳ ಕತೆಯನ್ನು ಹೊಂದಿವೆ. ಕೆಜಿಬಿಯನ್ನು 1991ರಲ್ಲಿ ನಿಷ್ಕ್ರಿಯಗೊಳಿಸಲಾಯಿತು. ಅದರ ಬದಲಿಗೆ ಫೆಡೆರಲ್ ಕೌಂಟರ್‌ಇಂಟಿಲಿಜೆನ್ಸ್‌ (ಎಫ್‌ಕೆಎಸ್) ಅನ್ನು ಸ್ಥಾಪಿಸಲಾಯಿತು. ನಂತರ ಅದರ ಸ್ಥಾನಕ್ಕೆ ಫೆಡೆರಲ್ ಸೆಕ್ಯುರಿಟಿ ಸರ್ವೀಸ್ ಅನ್ನು ಸ್ಥಾಪಿಸಲಾಯಿತು.

More from Filmibeat

English summary
Movies about Russia's secret service agency KGB. Russia's present president Vladimir Putin was worked as spy for KGB.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X