'ಮುಂಗಾರು ಮಳೆ' ಯಿಂದ 'ಸು ಫ್ರಮ್ ಸೋ' ಸ್ಯಾಂಡಲ್‌ವುಡ್ ಗತಿಯನ್ನೇ ಬದಲಿಸಿದ ಸಿನಿಮಾಗಳಿವು!

ಕನ್ನಡ ಚಿತ್ರರಂಗದ ಕಥೆ ಮುಗೀತು. ಈ ಚಿತ್ರರಂಗ ಇನ್ನು ಬೆಳೆಯುವುದಕ್ಕೆ ಸಾಧ್ಯವೇ ಇಲ್ಲ. ಇಂತಹ ಅಭಿಪ್ರಾಯಗಳು ಸಾಕಷ್ಟು ಬಾರಿ ಬಂದು ಹೋಗಿವೆ. ದಶಕಗಳ ಕಾಲ ಕನ್ನಡ ಸಿನಿಮಾಗಳು ಪ್ರೇಕ್ಷಕರನ್ನು ಸೆಳೆಯುವುದಕ್ಕೆ ವಿಫಲವಾಗಿದ್ದವು. ಚಿತ್ರರಂಗವನ್ನು ಉಳಿಸುವಂತಹ ಒಂದೇ ಒಂದು ಸಿನಿಮಾ ಕೂಡ ಬಂದಿರಲಿಲ್ಲ. ಒಂದೇ ವರ್ಷ 500 ಕೋಟಿ ರೂಪಾಯಿಗೂ ಅಧಿಕ ನಷ್ಟವನ್ನು ಕಂಡ ಉದಾಹರಣೆಗಳು ಸಾಕಷ್ಟು ಇವೆ. ಇಂತಹ ಸಂಕಷ್ಟದ ಸಂದರ್ಭಗಳಲ್ಲಿ ಫಿನಿಕ್ಸ್‌ನಂತೆ ಎದ್ದು ನಿದರ್ಶನಗಳೂ ಕೂಡ ಇವೆ.

ಇಂತಹ ಹಲವು ಸಂದರ್ಭಗಳಲ್ಲಿ ಕೆಲವು ಸಿನಿಮಾಗಳು ಟ್ರೇಂಡ್ ಸೆಟ್ ಮಾಡಿವೆ. ಒಂದೇ ಒಂದು ಸಿನಿಮಾ ಸ್ಯಾಂಡಲ್‌ವುಡ್‌ ಅನ್ನು ಇನ್ನೊಂದು ದಶಕ ಜೀವಂತವಾಗಿ ಇರಿಸಿವೆ. ಕೆಲವೊಮ್ಮೆ ಹೊಸಬರು ಟ್ರೆಂಡ್ ಸೆಟ್ ಮಾಡಿದ್ದಾರೆ. ಇನ್ನು ಕೆಲವೊಮ್ಮೆ ಸ್ಟಾರ್‌ಗಳು ಚಿತ್ರರಂಗದ ದಿಕ್ಕನ್ನು ಬದಲಾಯಿಸಿದ್ದಾರೆ. ಇಡೀ ಭಾರತವೇ ತಿರುಗಿ ನೋಡುವಂತಹ ಸಿನಿಮಾಗಳನ್ನು ಕೊಟ್ಟಿದ್ದಾರೆ. ಹೀಗೆ ಕಷ್ಟದಲ್ಲಿದ್ದಾಗ ಚಿತ್ರರಂಗಕ್ಕೆ ಜೀವ ಕೊಟ್ಟ ಸಿನಿಮಾಗಳು ಯಾವುವು? ಯಾವ ರೀತಿ ಟ್ರೆಂಡ್ ಅನ್ನು ಹುಟ್ಟಾಕಿದ್ವು? ಈ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಬರೆದ ದಾಖಲೆಗಳೇನು? ಮುಂದೆ ತಿಳಿಯೋಣ.

Mungaru Male to Su From So these are the movies saved Kannada Film Industry

ಮುಂಗಾರು ಮಳೆ-ದುನಿಯಾ

ಒಂದೇ ತರಹದ ಸಿನಿಮಾಗಳನ್ನು ನೋಡಿ ನೋಡಿ ಜನರು ಬೇಸತ್ತಿದ್ದರು. ಅದೇ ಮಾಸ್ ಸಿನಿಮಾಗಳು, ಲಾಂಗು-ಮಚ್ಚುಗಳು, ಲವ್ ಸ್ಟೋರಿಗಳು, ಮಾಸ್ ಡೈಲಾಗ್‌ಗಳು ಸಾಕಾಗಿತ್ತು. ಆದರೆ, ಅದರನ್ನು ಅರ್ಥ ಮಾಡಿಕೊಳ್ಳುವಲ್ಲಿ 2000 ದಿಂದ 2006ರವರೆಗೂ ಸಾಧ್ಯವಾಗಿರಲಿಲ್ವೇನೋ. ಹೀಗಾಗಿ ಪ್ರತಿ ವರ್ಷ 70 ರಿಂದ 80 ಸಿನಿಮಾಗಳು ರಿಲೀಸ್ ಆದರೆ, ಅದರಲ್ಲಿ ಗೆಲ್ಲುತ್ತಿದ್ದ ಸರಾಸರಿ ಸಿನಿಮಾಗಳು 6 ರಿಂದ 7 ಸಿನಿಮಾಗಳು. ವಿಶೇಷ ಅಂದರೆ, ಈ ಸಮಯದಲ್ಲಿ ಗೆದ್ದ ಕೆಲವೇ ಕೆಲವು ಸಿನಿಮಾಗಳು ವಿಶಿಷ್ಟ ಪ್ರಯತ್ನಕ್ಕೆ ಕೈ ಹಾಕಿದ್ದವು. ಅದರಲ್ಲಿ ಇಡೀ ದೇಶವನ್ನೇ ತಿರುಗಿ ನೋಡುವಂತೆ ಮಾಡಿದ ಸಿನಿಮಾ 'ಮುಂಗಾರು ಮಳೆ' ಮತ್ತು 'ದುನಿಯಾ'. ಈ ಸಿನಿಮಾಗಳಿಗಿಂತ ಮುಂಚಿನ ವರ್ಷ ಎಷ್ಟು ಸಿನಿಮಾಗಳು ರಿಲೀಸ್ ಆಗಿದ್ದವು? ಎಷ್ಟು ಗೆದ್ದಿವೆ? ಟ್ರೆಂಡ್ ಬದಲಿಸಿದ ಸಿನಿಮಾಗಳ್ಯಾವುವು? ತಿಳಿಯುವುದಕ್ಕೆ ಮುಂದೆ ನೋಡಿ.

2004-2006ರ ಚಿತ್ರರಂಗದ ಭವಿಷ್ಯ

2004 80+ ಸಿನಿಮಾಗಳು 4 ಗೆಲುವು (ಆಪ್ತಮಿತ್ರ)
2005 80+ ಸಿನಿಮಾಗಳು 8 ಗೆಲುವು (ಜೋಗಿ)
2006 70+ ಸಿನಿಮಾಗಳು 5 ಗೆಲುವು (ಸೈನೈಡ್, ಮುಂಗಾರು ಮಳೆ)

ಹೌದು, 2006ರ ಡಿಸೆಂಬರ್‌ನಲ್ಲಿ 'ಮುಂಗಾರು ಮಳೆ' ಸಿನಿಮಾ ಬರುವವರೆಗೂ ಸ್ಯಾಂಡಲ್‌ವುಡ್ ಪರಿಸ್ಥಿತಿ ಗಂಭೀರವಾಗಿತ್ತು. ಸಿನಿಮಾ ನಿರ್ಮಾಣ ಆಗುವ ಶೇ.1ರಷ್ಟು ಗೆಲುವು ಕೂಡ ಸಿಗುತ್ತಿರಲಿಲ್ಲ. ಆದರೆ, ಯೋಗರಾಜ್ ಭಟ್ ಹಾಗೂ ಗಣೇಶ್ ಕನ್ನಡ ಚಿತ್ರರಂಗಕ್ಕೆ ಮತ್ತೆ ಜೀವ ತುಂಬಿದ್ದರು. ಇಬ್ಬರ ಕಾಂಬಿನೇಷನ್‌ನಲ್ಲಿ ಬಂದ 'ಮುಂಗಾರು ಮಳೆ' ಹೊಸ ಇತಿಹಾಸವನ್ನು ಸೃಷ್ಟಿಸಿತ್ತು. ಸುಮಾರು ಒಂದು ವರ್ಷ ಈ ಸಿನಿಮಾ ಚಿತ್ರಮಂದಿರದಿಂದ ಕದಲಿರಲಿಲ್ಲ. ಅಲ್ಲಿವರೆಗೂ ಬಾಕ್ಸಾಫೀಸ್‌ನಲ್ಲಿ ಇದ್ದ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡಿತ್ತು. ಆಗಿನ ಕಾಲಕ್ಕೆ ಸುಮಾರು ₹65 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಇಲ್ಲಿಂದ ಈ ಟ್ರೆಂಡ್ ಅನ್ನೇ ಹಲವು ಫಿಲ್ಮ್‌ ಮೇಕರ್‌ಗಳು ಫಾಲೋ ಮಾಡಿದರು. ಇದರ ಹಿಂದೆನೇ ತೆರೆಕಂಡ ಸಿನಿಮಾ 'ದುನಿಯಾ'. ಇದು ಮಾಸ್ ಪ್ರಿಯರಿಗೆ ಕಿಕ್ ಕೊಟ್ಟಿತ್ತು.

Mungaru Male to Su From So these are the movies saved Kannada Film Industry

'ಮುಂಗಾರು ಮಳೆ' ದಾಖಲೆ ಮುರಿದ 'ರಾಜಕುಮಾರ'

2006ರಲ್ಲಿ ಬಂದ 'ಮುಂಗಾರು ಮಳೆ' ಸಿನಿಮಾದ ದಾಖಲೆಯನ್ನು ಮುರಿದಿದ್ದು ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಟಿಸಿದ 'ರಾಜಕುಮಾರ'. ಕನ್ನಡ ಚಿತ್ರರಂಗಕ್ಕೆ ಜೀವಕೊಟ್ಟಿದ್ದ 'ಮುಂಗಾರು ಮಳೆ'ಯ ದಾಖಲೆಯನ್ನು ಮುರಿಯುವುದಕ್ಕೆ ಮತ್ತೆ 10 ವರ್ಷಗಳೇ ಬೇಕಾಯ್ತು. ಮತ್ತೆ ಸೆಪ್ಪೆಯಾಗಿದ್ದ ಚಿತ್ರರಂಗವನ್ನು 'ರಾಜಕುಮಾರ' ಮೇಲಕ್ಕೆತ್ತಿತ್ತು. ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾ ಕಲೆ ಹಾಕಿದ್ದು ಬರೋಬ್ಬರಿ ₹75 ಕೋಟಿ. ಈ ಮೂಲಕ 'ಮುಂಗಾರು ಮಳೆ' ದಾಖಲೆಯನ್ನು ಸರಿಗಟ್ಟಿತ್ತು.

ದಿಕ್ಕು ಬದಲಿಸಿದ್ದು 'ಕೆಜಿಎಫ್ 2'-'ಕಾಂತಾರ'

'ರಾಜಕುಮಾರ' ಸಿನಿಮಾ ಬಳಿಕ ಮತ್ತೆ ಕನ್ನಡ ಚಿತ್ರರಂಗದಲ್ಲಿ ಟ್ರೆಂಡ್ ಬದಲಿಸಿದ್ದು 'ಕೆಜಿಎಫ್ 2'. ಕನ್ನಡ ಸಿನಿಮಾಗಳು ಕೂಡ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಬಹುದು ಎಂದು ತೋರಿಸಿಕೊಟ್ಟ ಸಿನಿಮಾವಿದು. ಯಶ್-ಪ್ರಶಾಂತ್ ನೀಲ್ ಸೃಷ್ಟಿಸಿದ ಈ ಸಿನಿಮಾ ಇದೇ ದೇಶವನ್ನು ಕಂಗಾಲು ಮಾಡಿತ್ತು. ಕನ್ನಡ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ₹100 ಕೋಟಿ ದಾಟುವುದಕ್ಕೆ ಪರದಾಡುತ್ತಿದ್ದವು. ಇಂತಹದ್ರಲ್ಲಿ 'ಕೆಜಿಎಫ್ 2' ₹1250 ಕೋಟಿ ಗಳಿಕೆ ಮಾಡಿ ಎಲ್ಲಾ ದಾಖಲೆಗಳನ್ನು ಮುರಿದು ಹಾಕಿತ್ತು. ಇಂತಹ ಟ್ರೆಂಡ್ ಸೆಟ್ ಮಾಡಿದ ಸಿನಿಮಾಗಳ ಬಾಕ್ಸಾಫೀಸ್ ಕೆಲಕ್ಷನ್ ಹೀಗಿದೆ.

2006 ಮುಂಗಾರು ಮಳೆ ₹65 ಕೋಟಿ
2017 ರಾಜಕುಮಾರ ₹75 ಕೋಟಿ
2018 ಕೆಜಿಎಫ್ 1 ₹250 ಕೋಟಿ
2022 ಕೆಜಿಎಫ್ 2 ₹1250 ಕೋಟಿ
2022 ಕಾಂತಾರ ₹450 ಕೋಟಿ
2025 ಸು ಫ್ರಮ್ ಸೋ ₹115 ಕೋಟಿ

Mungaru Male to Su From So these are the movies saved Kannada Film Industry

'ಕೆಜಿಎಫ್ 2' ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಾವಿರ ಕೋಟಿಗೂ ಅಧಿಕ ಕಲೆ ಹಾಕಿತ್ತು. ಈ ಸಿನಿಮಾದ ಹಿಂದೆ ರಿಷನ್ ಶೆಟ್ಟಿ ನಟಿಸಿದ 'ಕಾಂತಾರ' ₹450 ಕೋಟಿ ಗಳಿಕೆ ಕಂಡು ಇಡೀ ದೇಶದ ಹುಬ್ಬೇರಿಸಿತ್ತು. ಈ ಎರಡು ಸಿನಿಮಾಗಳ ಬಳಿಕ 'ವಿಕ್ರಾಂತ್ ರೋಣ', 'ಚಾರ್ಲಿ 777', 'ಜೇಮ್ಸ್' ಸಿನಿಮಾಗಳು ಪ್ಯಾನ್ ಇಂಡಿಯಾ ರಿಲೀಸ್ ಆಗಿ ಯಶಸ್ಸು ಗಳಿಸಿದ್ದವು. ಆದರೆ, ಇವುಗಳ ಬಳಿಕ ಮತ್ತೆ ಕನ್ನಡ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಪರದಾಡುವುದಕ್ಕೆ ಶುರು ಮಾಡಿದ್ದವು. ಸುಮಾರು ಎರಡೂವರೆ ವರ್ಷಗಳ ಕಾಲ ಚಿತ್ರರಂಗ ಅಕ್ಷರಶ: ಪರದಾಡಿದೆ. ಇಂತಹ ಸಂದರ್ಭದಲ್ಲಿ ಮತ್ತೆ ಕನ್ನಡ ಚಿತ್ರರಂಗವನ್ನು ಬದುಕಿಸಿದ್ದು 'ಸು ಫ್ರಮ್ ಸೋ'.

Take a Poll

'ಸು ಫ್ರಮ್ ಸೋ' ಚಮತ್ಕಾರ

ಕಳೆದ ಎರಡೂವರೆ ವರ್ಷಗಳಲ್ಲಿ 280ಕ್ಕೂ ಅಧಿಕ ಸಿನಿಮಾಗಳು ರಿಲೀಸ್ ಆಗಿದ್ದವು. 2023ರಲ್ಲಿ ಸುಮಾರು 143 ಸಿನಿಮಾಗಳು ರಿಲೀಸ್ ಆಗಿದ್ದವು. 'ಕಾಟೇರ' ಹಾಗೂ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾಗಳು ಬಿಟ್ಟರೆ ಉಳಿದವೆಲ್ಲವೂ ಸೋತು ಸುಣ್ಣವಾಗಿದ್ದವು. 2024ರಲ್ಲಿ ಪರಿಸ್ಥಿತಿ ಏನೂ ವಿಭಿನ್ನವಾಗಿರಲಿಲ್ಲ. 'ಭೀಮ', 'ಕೃಷ್ಣಂ ಪ್ರಣಯ ಸಖಿ','ಬಘೀರ', 'ಭೈರತಿ ರಣಗಲ್', 'ಮ್ಯಾಕ್ಸ್' ಸಿನಿಮಾ ಬಿಟ್ಟರೆ ಮತ್ಯಾವುದೂ ಸದ್ದು ಮಾಡಲಿಲ್ಲ. ಇದರ ಹಿಂದೆನೇ 2025ರಲ್ಲೂ ಯಾವ ಸಿನಿಮಾಗಳು ಗೆಲ್ಲಲಿಲ್ಲ. ಆಗಲೇ ಬಾಕ್ಸಾಫೀಸ್‌ನಲ್ಲಿ ಚಮತ್ಕಾರ ಮಾಡಿದ್ದು 'ಸು ಫ್ರಮ್ ಸೋ'. ಈಗ ಈ ಸಿನಿಮಾದ ಟ್ರೆಂಡ್ ಮುಂದುವರೆದಿದೆ.

More from Filmibeat

English summary
Mungaru Male to Su From So these are the movies saved Kannada Film Industry.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X