'R' ಅಕ್ಷರ ನಟಿಯರಿಗಷ್ಟೇ ಅಲ್ಲ.. ಕನ್ನಡದ ನಟರಿಗೂ ಲಕ್ಕಿನೇ? ಅದು ಹೇಗೆ?

ಸ್ಯಾಂಡಲ್‌ವುಡ್‌ ಮಂದಿಯಲ್ಲಿ ಹಲವು ನಂಬಿಕೆಗಳಿವೆ. ಅದರಲ್ಲೊಂದು 'ಆರ್' ಅಕ್ಷರ. ಚಿತ್ರರಂಗಕ್ಕೆ ಬರುವ ನಟಿಯರ ಹೆಸರು 'ಆರ್‌' ಅಕ್ಷರದಿಂದ ಶುರುವಾದರೇ ಅವರಿಗೂ ಲಕ್ಕಿ. ಆ ಹೆಸರು ಸಿನಿಮಾ ಲಕ್ಕಿ. ಇದು ಕಳೆದ ಹಲವು ದಶಕಗಳಿಂದ ಬೆಳೆದುಕೊಂಡು ಬಂದಿದೆ. ಕಾಕತಾಳೀಯವೋ ಏನೋ ಅದೆಲ್ಲವೂ ನಿಜ ಆಗಿದೆ. 'ಆರ್' ಅಕ್ಷರದಿಂದ ಪ್ರಾರಂಭ ಆಗುವ ಹೆಸರು ಇಟ್ಟುಕೊಂಡು ಬಂದವರು ಚಿತ್ರರಂಗದಲ್ಲಿ ಗೆದ್ದಿದ್ದಾರೆ.

ಇದು ಇಂದು ನಿನ್ನೆಯ ನಂಬಿಕೆ ಅಲ್ಲ. ಹಲವು ವರ್ಷಗಳಿಂದ ಈ ಬಗ್ಗೆ ಸ್ಯಾಂಡಲ್‌ವುಡ್‌ನಲ್ಲಿ ಚರ್ಚೆ ಆಗುತ್ತಲೇ ಇದೆ. ಅದು ಎಲ್ಲರಿಗೂ ಗೊತ್ತಿದೆ. ರಮ್ಯಾ, ರಕ್ಷಿತಾ, ರಚಿತಾ ರಾಮ್, ರಾಧಿಕಾ ಕುಮಾರಸ್ವಾಮಿ, ರಾಧಿಕಾ ಪಂಡಿತ್ ಹೀಗೆ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಪಟ್ಟಿನೇ ಇದೆ. ಇವರೆಲ್ಲರೂ ಕನ್ನಡ ಚಿತ್ರರಂಗದಲ್ಲಿ ಸಕ್ಸಸ್‌ಫುಲ್ ನಟಿಯರಾಗಿ ಮೆರೆದಿದ್ದಾರೆ.

Names starting with the letter R are lucky not only for heroines but also for Kannada heroes

ಹಾಗಂತ 'ಆರ್' ಅಕ್ಷರ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುವ ನಟಿಯರಿಗಷ್ಟೇ ಲಕ್ಕಿನಾ? ಅಂತ ನೋಡುವುದಾದರೇ ಕಂಡಿತಾ ಇಲ್ಲ. ಕನ್ನಡದ ನಟರಿಗೂ ಆರ್ ಅಕ್ಷರ ಅದೃಷ್ಟವೇ. ಅಷ್ಟಕ್ಕೂ ಈ ನಂಬಿಕೆ ಬಹಳ ಹಿಂದಿನ ಇತಿಹಾಸವಿದೆ. ನಾಯಕಿಯರಿಗೆ ಲಕ್ಕಿ ಅಂತ ಹೇಳುವುದಕ್ಕೂ ಮುನ್ನವೇ ನಮ್ಮ ಕನ್ನಡದ ಸೂಪರ್‌ಸ್ಟಾರ್‌ಗಳಿಗೆ 'ಆರ್' ಅಕ್ಷರ ಲಕ್ಕಿ ಅನ್ನೋದು ಸಾಬೀತಾಗಿದೆ. 'ಆರ್' ಅಕ್ಷರದ ಹೀರೋಗಳ ಹೆಸರಿನ ಹಿನ್ನೆಲೆಯೇನು? ತಿಳಿಯಲು ಮುಂದೆ ಓದಿ.

ರಾಜ್‌ಕುಮಾರ್

'ಆರ್' ಅಕ್ಷರ ಲಕ್ಕಿ ಅನ್ನೋದು ಬಹುಶ: ಡಾ.ರಾಜ್‌ಕುಮಾರ್ ಕಾಲದಿಂದಲೇ ಶುರುವಾಗಿತ್ತು. ಅಣ್ಣಾವ್ರ ಮೂಲ ಹೆಸರು ಮುತ್ತುರಾಜ್ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯವೇ. ಮೊದಲ ಸಿನಿಮಾ 'ಬೇಡರ ಕಣ್ಣಪ್ಪ' ಸಮಯದಲ್ಲಿ ಎಚ್‌ಎಲ್‌ಎನ್ ಸಿಂಹ ಹೆಸರು ಬದಲಿಸಿದರು. ಮುತ್ತುರಾಜ್ ಅಂತ ಇದ್ದ ಹೆಸರನ್ನು ರಾಜ್‌ಕುಮಾರ್ ಎಂದು ಬದಲಾಯಿಸಿದ್ದರು. ಅಲ್ಲಿದ್ದ ರಾಜ್‌ಕುಮಾರ್ ಸ್ಟಾರ್‌ಡಮ್ ಹೇಗೆ ಬೆಳೆಯಿತು ಅನ್ನೋದು ವಿಶೇಷವಾಗಿ ಹೇಳಬೇಕಿಲ್ಲ.

ರಾಜೇಶ್

ಕನ್ನಡದ ಮತ್ತೊಂದು ದಿಗ್ಗಜ ನಟ ರಾಜೇಶ್. ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿ ಸ್ಟಾರ್ ಪಟ್ಟಕ್ಕೆ ಏರಿದ ನಟ. ಇವರ ಮೊದಲ ಹೆಸರು ಮುನಿಚೌಡಪ್ಪ. ಬಳಿಕ ಸಿನಿಮಾಗಳಿಗೆ ಪರಿಚಯ ಆದ್ಮೇಲೆ ಇವರ ಹೆಸರನ್ನು ವಿದ್ಯಾಸಾಗರ್ ಎಂದು ಬದಲಾಯಿಸಿಕೊಂಡರು. ಆನಂತರ ಯಾವುದೋ ಕಾರಣಕ್ಕೆ ಸಿನಿಮಾರಂಗದಿಂದ ದೂರವೇ ಉಳಿಸಿದ್ದರು. ಎರಡು ವರ್ಷಗಳಾದ್ಮೇಲೆ 'ನಮ್ಮ ಊರು' ಸಿನಿಮಾ ಮೂಲಕ ಎಂಟ್ರಿ ಕೊಟ್ಟಿದ್ದರು. ಆ ಸಿನಿಮಾದ ನಿರ್ಮಾಪಕರು ರಾಜೇಶ್ ಅಂತ ಮರುನಾಮಕರಣ ಮಾಡಿದರು. ಅಲ್ಲಿಂದ ಮತ್ತೆ ಹಿಂದೆ ತಿರುಗಿ ನೋಡಲಿಲ್ಲ.

Names starting with the letter R are lucky not only for heroines but also for Kannada heroes

ರಜನಿಕಾಂತ್

ಸೂಪರ್‌ಸ್ಟಾರ್ ರಜನಿಕಾಂತ್ ಹೆಸರು ಕೂಡ ಚಿತ್ರರಂಗಕ್ಕೆ ಬಂದ ಮೇಲೆ ಬದಲಾಯಿತು. ಶಿವಾಜಿ ರಾವ್ ಆಗಿದ್ದವರು ಸಿನಿಮಾಗೆ ಎಂಟ್ರಿ ಕೊಡುತ್ತಿದ್ದಂತೆ ರಜನಿಕಾಂತ್ ಆಗಿ ಬದಲಾದರು. ಈಗ ಭಾರತದ ಬಹುಬೇಡಿಕೆಯ ಹಾಗೂ ದುಬಾರಿ ನಟರಾಗಿದ್ದಾರೆ.

ರವಿಚಂದ್ರನ್

ರಾಜ್‌ಕುಮಾರ್ ಹಾಗೂ ರಾಜೇಶ್ ಅವರ ಹೆಸರು ಬದಲಾವಣೆ ಆದ್ಮೇಲೆ ಸಕ್ಸಸ್ ಸಿಕ್ಕಿತ್ತು. ಆದರೆ, ಕ್ರೇಜಿಸ್ಟಾರ್ ರವಿಚಂದ್ರನ್ ಹುಟ್ಟಿದ ಹೆಸರೇ 'ಆರ್' ಅಕ್ಷರದಿಂದ ಆರಂಭ ಆಗಿದೆ. ಒರಿಜಿನಲ್ ಹೆಸರನ್ನು ಇಟ್ಟುಕೊಂಡೇ ಚಿತ್ರರಂಗಕ್ಕೆ ಕಾಲಿಟ್ಟಿದ್ದ ರವಿಚಂದ್ರನ್ ಅವರನ್ನು ಕ್ರೇಜಿಸ್ಟಾರ್ ಆಗಿದ್ದು ಹೇಗೆ ಎಂದು ವಿಶೇಷವಾಗಿ ಹೇಳಬೇಕಿಲ್ಲ.

ರಮೇಶ್ ಅರವಿಂದ್

ಕನ್ನಡದ ಸ್ಟಾರ್‌ಗಳಲ್ಲಿ ಪಟ್ಟಿರುವ ಮತ್ತೊಬ್ಬ ನಟ ರಮೇಶ್ ಅರವಿಂದ್. 'ಆರ್‌' ಅಕ್ಷರದಿಂದ ಆರಂಭ ಆಗುವ ಹೀರೊಗಳಲ್ಲಿ ಇವರು ಕೂಡ ಒಬ್ಬರು. ಇವರ ಮೂಲ ಹೆಸರು ರಮೇಶ್ ಅರವಿಂದ್. ಚಿತ್ರರಂಗಕ್ಕೆ ಎಂಟ್ರಿ ಕೊಡುವುದಕ್ಕಾಗಿ ಇವರ ಹೆಸರೇನು ಬದಲಾಗಲಿಲ್ಲ. 'ಆರ್' ಅಕ್ಷರದಿಂದ ಆರಂಭ ನಟರಿಗೆ ಸಿಕ್ಕ ಯಶಸ್ಸು ಇವರಿಗೂ ಸಿಕ್ಕಿತ್ತು. ಕನ್ನಡ ಚಿತ್ರರಂಗ ಅಷ್ಟೇ ಪರ ಭಾಷೆಯಲ್ಲೂ ಮಿಂಚಿದ್ದಾರೆ.

ಮತ್ತೆ ಇನ್ಯಾರು?

ಇನ್ನು ಆರ್ ಅಕ್ಷರದಿಂದ ಶುರುವಾಗುವ ದೊಡ್ಡ ನಟರ ಪಟ್ಟಿನೇ ಇದೆ. ರಾಘವೇಂದ್ರ ರಾಜ್‌ಕುಮಾರ್, ರಾಮ್‌ಕುಮಾರ್ ಹೀಗೆ ಹಲವು ಮಂದಿ ಇದ್ದಾರೆ. ಹಾಗೇ ಹಿರಿಯ ನಟರಲ್ಲಿ ರಮೇಶ್ ಭಟ್, ರಂಗಾಯಣ ರಘು, ರಘುವೀರ್, ರಾಮಕೃಷ್ಣ ಸೇರಿದಂತೆ ಕನ್ನಡದ ಹಲವು ನಟರಿಗೆ ಯಶಸ್ಸು ಸಿಕ್ಕಿದೆ. ಹಾಗಂತ ಹೆಸರಷ್ಟೇ ಅದೃಷ್ಟ ಅನ್ನೋದಲ್ಲ. ಅವರ ಪ್ರತಿಭೆ ಎಲ್ಲಕ್ಕಿಂತ ದೊಡ್ಡದು. ನಾಯಕಿಯರ ಹೆಸರು ಆರ್ ಅಕ್ಷರದಿಂದ ಶುರುವಾದ ಸಕ್ಸಸ್‌ಫುಲ್ ನಟಿಯಾಗುತ್ತಾರೆ ಅನ್ನೋ ನಂಬಿಕೆಗೆ ನಟರ ಹೆಸರು ಕೂಡ ತಳುಕು ಹಾಕಿಕೊಂಡಿದೆ ಅಷ್ಟೇ.

More from Filmibeat

English summary
Names starting with the letter R are lucky not only for heroines but also for Kannada heroes;
Read more about: sandalwood actors
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X