New Year 2025: 'ಕೆಡಿ'ಯಿಂದ 'ಪರಾಕ್‌'ವರೆಗೆ ಈ ವರ್ಷ ಬಾಕ್ಸಾಫೀಸ್ ದೋಚುವುದು ಗ್ಯಾರಂಟಿ!

2024 ಕನ್ನಡ ಚಿತ್ರರಂಗಕ್ಕೆ ಒಳ್ಳೆಯ ವರ್ಷ ಆಗಿರಲಿಲ್ಲ. 2023ರಂತೆ 24 ಕೂಡ ಗೆದ್ದ ಸಿನಿಮಾಗಳಿಗಿಂತ ಸೋತ ಸಿನಿಮಾಗಳೇ ಹೆಚ್ಚು. ಬಾಕ್ಸಾಫೀಸ್‌ನಲ್ಲಿ ಸೋತು ಸೋತು ಸುಣ್ಣವಾಗಿ ಸ್ಯಾಂಡಲ್‌ವುಡ್ ಕಥೆ ಮುಗೀತು ಅನ್ನುವಾಗಲೇ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ರಿಲೀಸ್ ಆಗಿದ್ದವು. ಅವುಗಳಲ್ಲಿ ಕೆಲವು ಸಿನಿಮಾಗಳಿಗೆ ಭರ್ಜರಿ ಕಲೆಕ್ಷನ್ ಆಗಿದೆ. ಅದರಲ್ಲಿ ಸೂಪರ್‌ಸ್ಟಾರ್ ಸಿನಿಮಾಗಳು ಕೂಡ ಸೇರಿದೆ.

ಹೊಸ ವರ್ಷ ಸ್ಯಾಂಡಲ್‌ವುಡ್‌ಗೆ ವರವಾಗುವ ಸಾಧ್ಯತೆನೇ ಹೆಚ್ಚಿದೆ. ಸಿನಿಮಾ ಮಂದಿ ಮನಸ್ಸು ಮಾಡಿದ್ದರೆ, ವರ್ಷಕ್ಕೆ ಒಂದೊಂದು ಸಿನಿಮಾವನ್ನು ರಿಲೀಸ್ ಮಾಡಬಹುದು. ಯಾಕಂದ್ರೆ, ಎರಡು ಮೂರು ವರ್ಷಗಳಿಂದ ಸೈಲೆಂಟ್ ಆಗಿದ್ದ ಸೂಪರ್‌ಸ್ಟಾರ್‌ ಸಿನಿಮಾಗಳು ರಿಲೀಸ್‌ ಆಗಲಿವೆ. ಮತ್ತೆ ಕೆಲವರು ವರ್ಷಕ್ಕೊಂದು ಸಿನಿಮಾ ರಿಲೀಸ್ ಮಾಡುವುದಕ್ಕೆ ಪಣತೊಟ್ಟು ನಿಂತಿದ್ದಾರೆ.

New Year 2025 KD to Kantara Chapter 1 to Toxic most expected Kannada films list

ಹೀಗಾಗಿ 2025 ಕನ್ನಡ ಚಿತ್ರರಂಗದ ಪಾಸಿಟಿವ್ ಆಗಬಹುದು. ಮತ್ತೆ ಬೇರೆ ಚಿತ್ರರಂಗಗಳು ಕನ್ನಡದತ್ತ ತಿರುಗಿ ನೋಡುವಂತೆ ಆಗಬಹುದು. ಯಾಕಂದ್ರೆ ಬಹುತೇಕ ಕನ್ನಡದ ಎಲ್ಲಾ ಸ್ಟಾರ್ ಸಿನಿಮಾಗಳು ರಿಲೀಸ್ ಆಗುತ್ತಿವೆ. ಹಾಗೂ ಸ್ಟಾರ್ ಡೈರೆಕ್ಟರ್‌ಗಳ ಚಿತ್ರಗಳು ಕ್ಯೂನಲ್ಲಿವೆ. 2025 ನಲ್ಲಿ ಶರಣ್ ನಟಿಸಿದ 'ಛೂಮಂತ್' ಸಿನಿಮಾದಿಂದ ಸ್ಟಾರ್‌ಗಳ ಥಿಯೇಟರ್ ಪರೇಡ್ ಆರಂಭ ಆಗುತ್ತಿದೆ.

ಧ್ರುವ ಸರ್ಜಾ- 'ಕೆಡಿ'

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ 'ಕೆಡಿ' 2025ರ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳಲ್ಲಿ ಒಂದು. ಇದು ಧ್ರುವ ಹಾಗೂ ಜೋಗಿ ಪ್ರೇಮ್ ಜೋಡಿಯ ಮೊದಲನೇ ಸಿನಿಮಾ. ಕೆವಿಎನ್ ಅಂತ ಸಂಸ್ಥೆ ನಿರ್ಮಾಣ ಮಾಡಿದೆ. ಬಾಲಿವುಡ್‌ ದಿಗ್ಗಜರು ಕೂಡ ಈ ಸಿನಿಮಾದಲ್ಲಿ ನಟಿಸಿದ್ದು, ಪ್ಯಾನ್ ಇಂಡಿಯಾ ರಿಲೀಸ್ ಆಗಲಿದೆ. ಜೋಗಿ ಪ್ರೇಮ್ ಹೊಸ ವರ್ಷದಲ್ಲಿ ಬಾಕ್ಸಾಫೀಸ್ ಸದ್ದು ಮಾಡುತ್ತಾರಾ? ಅನ್ನುವ ಕುತೂಹಲವಿದೆ.

ರಿಷಬ್ ಶೆಟ್ಟಿ- 'ಕಾಂತಾರ' ಚಾಪ್ಟರ್ 1

'ಕಾಂತಾರ'ದಂತಹ ಮೆಗಾ ಬ್ಲಾಕ್‌ಬಸ್ಟರ್ ಸಿನಿಮಾ ಕೊಟ್ಟಿದ್ದ ರಿಷಬ್ ಶೆಟ್ಟಿ ಪ್ರೀಕ್ವೆಲ್‌ನಲ್ಲಿ ನಟಿಸಿ, ನಿರ್ದೇಶಿಸುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಮತ್ತೊಂದು ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸೌಂಡು ಮಾಡುತ್ತಾರಾ? 'ಕಾಂತಾರ ಚಾಪ್ಟರ್ 1' ರಿಂದ ಮತ್ತೆ ಸ್ಯಾಂಡಲ್‌ವುಡ್‌ ಕಡೆಗೆ ಬೇರೆ ಚಿತ್ರರಂಗ ತಿರುಗಿ ನೋಡುವಂತೆ ಆಗುತ್ತಾ? ಪ್ರಶ್ನೆ ಅಂತೂ ಇದೆ.

ಯಶ್ -'ಟಾಕ್ಸಿಕ್'

'ಕೆಜಿಎಫ್ 2' ಅಂತಹ ಮೆಗಾ ಬ್ಲಾಕ್ ಬಸ್ಟರ್ ಸಿನಿಮಾ ಕೊಟ್ಟಿರುವ ಯಶ್ 'ಟಾಕ್ಸಿಕ್'ನಲ್ಲಿಸ ಬ್ಯುಸಿಯಾಗಿದ್ದಾರೆ. ವೇಗವಾಗಿ ಸಿನಿಮಾ ಶೂಟಿಂಗ್ ಮುಗಿಸುತ್ತಿರುವ ರಾಕಿಂಗ್ ಸ್ಟಾರ್, ತಮ್ಮ ಸಿನಿಮಾವನನ್ನು ಇದೇ ವರ್ಷ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಈ ಸಿನಿಮಾ 'ಪುಷ್ಪ 2' ದಾಖಲೆಗಳನ್ನು ಉಡೀಸ್ ಮಾಡುತ್ತೆ ಅನ್ನೋ ನಿರೀಕ್ಷೆಯನ್ನು ಕನ್ನಡ ಸಿನಿಪ್ರಿಯರು ಇಟ್ಟುಕೊಂಡಿದ್ದಾರೆ.

New Year 2025 KD to Kantara Chapter 1 to Toxic most expected Kannada films list

ಶಿವಣ್ಣ- ಉಪ್ಪಿ- ರಾಜ್ ಬಿ ಶೆಟ್ಟಿ- '45'

2025ರಲ್ಲಿ ರಿಲೀಸ್ ಆಗಲಿರುವ ಸಿನಿಮಾಗಳ ಪೈಕಿ '45' ಕೂಡ ಒಂದು. ಅರ್ಜುನ್ ಜರ್ನಿ ಇದೇ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿರುವ ಸಿನಿಮಾದಲ್ಲಿ ಶಿವಣ್ಣ, ಉಪೇಂದ್ರ ಹಾಗೂ ರಾಜ್‌ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಸುದೀಪ್ - ಕೆಆರ್‌ಜಿ ಸಿನಿಮಾ

'ಮ್ಯಾಕ್' ಸಕ್ಸಸ್ ಖುಷಿಯಲ್ಲಿ ಇರುವ ಕಿಚ್ಚ ಸುದೀಪ್ ಹೊಸ ಸಿನಿಮಾ ಅನೌನ್ಸ್ ಮಾಡುತ್ತಿದ್ದಾರೆ. ಕೆಆರ್‌ಜಿ ಸ್ಟುಡಿಯೋ ಜೊತೆ ಸಿನಿಮಾ ಸೆಟ್ಟೇರಲಿದ್ದು, ಈ ವರ್ಷ ರಿಲೀಸ್ ಆಗುವ ನಿರೀಕ್ಷೆಯಿದೆ. ಇದಕ್ಕೂ ಮುನ್ನ ಸೆಟ್ಟೇರಬೇಕಿದ್ದ 'ಬಿಲ್ಲ ರಂಗ ಭಾಷಾ'ಗೆ ಕೆಲಸ ಹೆಚ್ಚಿರುವುದರಿಂದ ರಿಲೀಸ್ ತಡವಾಗಬಹುದೆಂದು ನಿರೀಕ್ಷೆ ಮಾಡಲಾಗಿದೆ.

New Year 2025 KD to Kantara Chapter 1 to Toxic most expected Kannada films list

ಗಣೇಶ್-ರಮೇಶ್ ಅರವಿಂದ್ ಸಿನಿಮಾ

ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ರಮೇಶ್ ಅರವಿಂದ್ ಕಾಂಬಿನೇಷನ್ ಸಿನಿಮಾ 'ಯುವರ್ಸ್ ಸಿನ್ಸಿಯರ್ಲಿ ರಾಮ್' ಶೂಟಿಂಗ್ ನಡೆಯುತ್ತಿದೆ. ಈ ಸಿನಿಮಾ ಈಗಾಗಲೇ ಟೈಟಲ್ ಹಾಗೂ ಪೋಸ್ಟರ್‌ನಿಂದ ಸದ್ದು ಮಾಡುತ್ತಿದೆ. 2025ಕ್ಕೆ ಇದು ಕೂಡ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ.

ದುನಿಯಾ ವಿಜಯ್ ಸಿನಿಮಾ

'ಭೀಮ' ಸಿನಿಮಾದ ಯಶಸ್ಸಿನಲ್ಲಿರುವ ದುನಿಯಾ ವಿಜಯ್ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಪುತ್ರಿಯನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿರುವ ವಿಜಯ್ ಅವರೇ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾ ವಿನಯ್ ರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಶ್ರೀಮರಳಿ 'ಪರಾಕ್'

ರೋರಿಂಗ್ ಸ್ಟಾರ್ ಶ್ರೀಮುರಳಿ ನಟಿಸಿದ 'ಬಘೀರ' ಸಿನಿಪ್ರಿಯರ ಮನಸ್ಸು ಗೆದ್ದಿದೆ. ಮೂರು ವರ್ಷ ತೆಗೆದುಕೊಂಡು ಸಿನಿಮಾ ಮಾಡಿದ್ದರಿಂದ ಮುಂದಿನ ದಿನಗಳಲ್ಲಿ ವರ್ಷಕ್ಕೊಂದು ಸಿನಿಮಾ ಕೊಡುವುದಕ್ಕೆ ನಿರ್ಧರಿಸಿದ್ದಾರೆ. ಹೀಗಾಗಿ 2025 ಡಿಸೆಂಬರ್‌ಗೆ 'ಪರಾಕ್' ಸಿನಿಮಾ ರಿಲೀಸ್ ಆಗಲಿದೆ.

ದರ್ಶನ್ - 'ಡೆವಿಲ್'

ಎಲ್ಲಾ ಸರಿ ಇದ್ದಿದ್ದರೆ ದರ್ಶನ್ ಸಿನಿಮಾ 'ಡೆವಿಲ್' 2024 ಡಿಸೆಂಬರ್‌ಗೆ ರಿಲೀಸ್ ಆಗಬೇಕಿತ್ತು. ಆದರೆ, ರೇಣುಕಾಸ್ವಾಮಿ ಕೇಸ್‌ನಿಂದಾಗಿ 'ಡೆವಿಲ್' ಸಿನಿಮಾ ಸ್ಥಗಿತಗೊಂಡಿತ್ತು. ಒಂದು ವೇಳೆ ಮತ್ತೆ ಶುರುವಾದರೆ, ಡೆವಿಲ್ ಈ ವರ್ಷ ರಿಲೀಸ್ ಆಗುವುದು ಗ್ಯಾರಂಟಿ.

More from Filmibeat

English summary
New Year 2025: KD to Kantara Chapter 1 to Toxic most expected Kannada films list
Read more about: new year 2025 sandalwood movies
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X