'ಒಲವಿನ ಉಡುಗೊರೆ' ಸಿನಿಮಾದ ನಟಿ ಮಂಜುಳಾ ಶರ್ಮಾ ಈಗ ಹೇಗಿದ್ದಾರೆ? ಎಲ್ಲಿದ್ದಾರೆ ಗೊತ್ತೇ?

1980 ರಿಂದ 1990ರವರೆಗೆ ದಕ್ಷಿಣ ಭಾರತದಲ್ಲಿ ನಾಲ್ಕು ಭಾಷೆಗಳಲ್ಲಿ ನಾಯಕಿಯಾಗಿ ಮೆರೆದವರು ಮಂಜುಳಾ ಶರ್ಮಾ. ಅಂದ್ಹಾಗೆ ಇವರಿಗೆ ಒಂದೊಂದು ಚಿತ್ರರಂಗದಲ್ಲಿ ಒಂದೊಂದು ಹೆಸರು ಇದೆ. ಕನ್ನಡಿಗರು ಈ ನಟಿ ಮಂಜುಳಾ ಶರ್ಮಾ. ಅದೇ ತಮಿಳು ಮಂದಿಗೆ ಇವರು ಇಳವರಸಿ. ತೆಲುಗು ಮಂದಿಗೆ ಕಲ್ಪನಾ. ಹೀಗೆ ಒಬ್ಬರೇ ನಟಿ ಮೂರು ಹೆಸರುಗಳನ್ನು ಇಟ್ಕೊಂಡು ಮಿಂಚಿದವರು. ಕನ್ನಡದಲ್ಲೂ ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

1987ರಲ್ಲಿ ತೆರೆಕಂಡಿದ್ದ 'ಒಲವಿನ ಉಡುಗೊರೆ' ಸಿನಿಮಾದಲ್ಲಿ ಅಂಬರೀಶ್ ಜೊತೆ ದ್ವಿಪಾತ್ರದಲ್ಲಿ ನಟಿಸಿದ್ದರು. ಆ ಸಿನಿಮಾವನ್ನಾಗಲಿ, ಆ ಸಿನಿಮಾದ ಹಾಡುಗಳನ್ನಾಗಲಿ ಇಂದಿಗೂ ಮರೆತಿಲ್ಲ. ಆದರೆ, 2008ರಿಂದ ಮಂಜುಳಾ ಶರ್ಮಾ ಸಿನಿಮಾರಂಗದಿಂದ ಸಂಪೂರ್ಣ ತೆರೆಮರೆಗೆ ಸರಿದಿದ್ದಾರೆ. ಸುಂದರವಾದ ಕಣ್ಣುಗಳು, ದುಂಡು ಬೊಟ್ಟು, ಪಕ್ಕಾ ದೇಸಿ ಹುಡುಗಿಯಾಗಿ ತೆರೆಮೇಲೆ ರಂಜಿಸಿದ್ದ ಈ ನಟಿ ಬೆಳೆದು ಬಂದ ಹಾದಿ ಸಖತ್ ಇಂಟ್ರೆಸ್ಟಿಂಗ್ ಆಗಿದೆ.

Olavina Udugore Actress Manjula Sharma aka Ilavarasi Latest Look Husband amp amp Daughter Details

ಮಂಜುಳಾ ಶರ್ಮಾ ಉರ್ಫ್ ಇಳವರಸಿ ಉರ್ಫ್ ಕಲ್ಪನಾಗೆ ಸಿನಿಮಾ ನಂಟಿತ್ತು. 1967ರಲ್ಲಿ ಜಂಬು ಶರ್ಮಾ ಹಾಗೂ ಭುವನೇಶ್ವರಿ ಎಂಬ ತಮಿಳು ದಂಪತಿಗಳಿಗೆ ಜನಿಸಿದ ಮಂಜುಳಾ ಶರ್ಮಾ ತನ್ನ 14ನೇ ವಯಸ್ಸಿನಲ್ಲಿಯೇ ಚಿತ್ರರಂಗಕ್ಕೆ ಬಾಲನಟಿಯಾಗಿ ಪ್ರವೇಶ ಮಾಡಿದರು. ಇವರ ತಂದೆ ಜಂಬು ಶರ್ಮಾ ತಮಿಳು ಚಿತ್ರರಂಗದಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಇವರಿಗೆ ಚಿತ್ರರಂಗಕ್ಕೆ ಬರೋದು ಅಷ್ಟೊಂದು ಕಷ್ಟವಾಗಲಿಲ್ಲ.

1982ರಲ್ಲಿ ತೆರೆಕಂಡ ಕಮಲ್ ಹಾಸನ್ ಹಾಗೂ ಶ್ರೀದೇವಿ ನಟಿಸಿದ್ದ 'ವಾಳ್ವೈ ಮಾಯಂ' ಸಿನಿಮಾದಲ್ಲಿ ಮಂಜುಳಾ ಶರ್ಮಾ ಬಾಲ ನಟಿಯಾಗಿ ನಟಿಸಿದ್ದರು. ಆಗ ಇವರಿಗೆ 14 ರಿಂದ 15 ವರ್ಷ. ಮುಂದಿನ ವರ್ಷ ಟೈಗರ್ ಪ್ರಭಾಕರ್, ಆರತಿ ನಟಿಸಿದ 'ಮುತ್ತೈದೆ ಭಾಗ್ಯ' ಸಿನಿಮಾದಲ್ಲಿ ಚಿಕ್ಕದೊಂದು ಪಾತ್ರದಲ್ಲಿ ನಟಿಸಿದ್ದರು. ಇದೇ ವರ್ಷ ನಾಯಕಿಯಾಗಿ ನಟಿಸಿದ್ದ ಚೊಚ್ಚಲ ಸಿನಿಮಾ 'ಕೊಕ್ಕರಕ್ಕೊ' ರಿಲೀಸ್ ಆಗಿತ್ತು. ಈ ಸಿನಿಮಾ ಮೂಲಕ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ನಟಿ ಮತ್ತೆ ತಿರುಗಿ ನೋಡಲಿಲ್ಲ.

Olavina Udugore Actress Manjula Sharma aka Ilavarasi Latest Look Husband amp amp Daughter Details

ಮಂಜುಳಾ ಶರ್ಮಾ ನಾಯಕಿಯಾಗಿ ನಟಿಸಿದ ಚೊಚ್ಚಲ ಸಿನಿಮಾ 'ಕೊಕ್ಕರಕ್ಕೊ' ಯಶಸ್ಸು ಗಳಿಸಲಿಲ್ಲ. ಆದರೆ, ಇವರು ಮಾತ್ರ ಪ್ರೇಕ್ಷಕರ ಗಮನ ಸೆಳೆಯವಲ್ಲಿ ಯಶಸ್ವಿಯಾದರು. ನಟನೆ ಜೊತೆಗೆ ಭರತನಾಟ್ಯಂ ಡ್ಯಾನ್ಸರ್ ಕೂಡ ಆಗಿರುವ ನಟಿಯನ್ನು ತಮಿಳು ಪ್ರೇಕ್ಷಕರು ಮೆಚ್ಚಿದ್ದರು. 'ಹೊಸ ಇತಿಹಾಸ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೆ ನಾಯಕಿಯಾಗಿ ಎಂಟ್ರಿ ಕೊಟ್ಟರು. ಆದರೆ, 'ಒಲವಿನ ಉಡುಗೊರೆ' ಮಂಜುಳಾ ಪೂರ್ಣ ಪ್ರಮಾಣದಲ್ಲಿ ನಾಯಕಿಯಾಗಿ ನಟಿಸಿದ ಚೊಚ್ಚಲ ಕನ್ನಡ ಸಿನಿಮಾ.

90 ದಶಕದ ಹೊತ್ತಿಗೆ ಮಂಜುಳಾ ಶರ್ಮಾ ಅವರಿಗೆ ಬೇಡಿಕೆ ಕಡಿಮೆಯಾಗುತ್ತಾ ಹೋಯ್ತು. ನಾಯಕಿಯಾಗಿ ಮೆರೆಯುತ್ತಿದ್ದ ನಟಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದಕ್ಕೆ ಶುರು ಮಾಡಿದ್ದರು. ನಾಯಕಿಯಾಗಿ ಕಾಣಿಸಿಕೊಳ್ಳುವುದಕ್ಕೆ ಕಡಿಮೆಯಾದರೂ, ಪೋಷಕ ಪಾತ್ರಗಳಲ್ಲಿ ನಟಿಸಿದರು. 99ರ ಬಳಿಕ ಆಗೊಂದು-ಈಗೊಂದು ಎಂಬಂತೆ ಸಿನಿಮಾಗಳಲ್ಲಿ ಕಾಣಿಸಿಕೊಂಡರು. 2008 ರಿಂದ ಸಂಪೂರ್ಣವಾಗಿ ಚಿತ್ರರಂಗದಿಂದ ಮರೆಯಾಗಿದ್ದಾರೆ.

Olavina Udugore Actress Manjula Sharma aka Ilavarasi Latest Look Husband amp amp Daughter Details

ಬ್ಯಾಂಕ್ ಉದ್ಯೋಗಿ ಗೋಪಾಲ್ ಎಂಬುವವರೊಂದಿಗೆ ಮಂಜುಳಾ ಶರ್ಮಾ ವಿವಾಹವಾಗಿದ್ದಾರೆ. ಅವರಿಗೆ ಶ್ರೀಲಕ್ಷಣ ಎಂಬ ಪುತ್ರಿ ಇದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಇದ್ದರೂ, ಹೆಚ್ಚು ಆಕ್ಟಿವ್ ಆಗಿಲ್ಲ. ಆಗಾಗ ಕುಟುಂಬದ ಜೊತೆ ಫೋಟೊಗಳನ್ನು ಹಂಚಿಕೊಳ್ಳುತ್ತಾರೆ. ಹೆಚ್ಚಾಗಿ ಇವರು ಕುಟುಂಬದ ಜೊತೆ ದೇವಸ್ಥಾನಗಳಿಗೆ ತೆರಳಿದ್ದ, ಪತಿ ಹಾಗೂ ಮಗಳೊಂದಿಗಿನ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಕೊನೆಯದಾಗಿ ತಮಿಳಿನ ಹೊಸ ವರ್ಷಕ್ಕೆ ವಿಶ್ ಮಾಡಿದ್ದಾರೆ.

ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾಗಿನ ಮಂಜುಳಾ ಶರ್ಮಾರನ್ನು ಈಗ ಗುರುತಿಸುವುದು ಸ್ವಲ್ಪ ಕಷ್ಟ ಆಗಬಹುದು. ಒಮ್ಮೆ ನೋಡಿದವರೆ ಗುರುತಿಸಲು ಕಷ್ಟ. ಸದ್ಯಕ್ಕೆ ಮಂಜುಳಾ ಶರ್ಮಾ ಉಫ್ ಇಳವರಸಿಗೆ ಈಗ 58 ವರ್ಷ. ಸಿನಿಮಾಗಳಿಂದ ನಿವೃತ್ತಿ ಪಡೆದು ಪತಿ, ಮಗಳೊಂದಿಗೆ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.

More from Filmibeat

English summary
Olavina Udugore fame actress Manjula Sharma, popularly known as Ilavarasi details. Here’s a look at her latest photos, family life, husband, and daughter.
Read more about: actress kannada movie tamil movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X