ಅಂದು ಶಿವಣ್ಣನ ಜೊತೆ ಚಿಕ್ಕ ಪಾತ್ರ ಮಾಡಿದ್ದ ನಟ ಇಂದು ಸ್ಟಾರ್: ಯಾರಿವರು? ಆ ಸಿನಿಮಾ ಯಾವುದು?

ಈ ನಟ ಸೂಪರ್‌ಸ್ಟಾರ್ ಅಲ್ಲ. ಆದರೆ, ಯಾವ ಸೂಪರ್‌ಸ್ಟಾರ್‌ಗೂ ಕಮ್ಮಿಯಿಲ್ಲ. ಬಾಲಿವುಡ್ ಸಿನಿಮಾಗಳನ್ನು ಇಷ್ಟು ಪಟ್ಟು ನೋಡುವವರಿಗೆ ಈ ನಟನ ಪರಿಚಯ ಇದ್ದೇ ಇರುತ್ತೆ. ಇದೂವರೆಗೂ ಬಾಲಿವುಡ್ ಕಂಡ ಅತ್ಯದ್ಬುತ ಕಲಾವಿದರ ಸಾಲಿನಲ್ಲಿ ಈ ನಟ ಕೂಡ ನಿಲ್ಲುತ್ತಾರೆ. ಅವರೇ ಪಂಕಜ್ ತ್ರಿಪಾಠಿ.

ಸಿನಿಮಾ ಅಂದ್ರೆ ಸಿನಿಮಾ. ವೆಬ್ ಸೀರಿಸ್ ಅಂದ್ರೆ ವೆಬ್ ಸೀರಿಸ್. ಹಾಗೇ ವಿಲನ್ ಅಂದ್ರೆ ವಿಲನ್, ಕಾಮಿಡಿ ಅಂದ್ರೆ ಕಾಮಿಡಿ, ಕಣ್ಣೀರು ಹಾಕಿಸಬೇಕು ಅಂದರೆ ಅದಕ್ಕೂ ಸೈ. ಪಾತ್ರ ಯಾವುದೇ ಇರಲಿ ಪಂಕಜ್ ತ್ರಿಪಾಠಿ ನಟಿಸುತ್ತಿದ್ದಾರೆ ಅಂದ್ರೆ, ಸಿನಿ ಪ್ರಿಯರಿಗೆ ಸಿಗೋ ಮಜಾನೇ ಬೇರೆ.

Pankaj Tripathi-Shivarajkumar-Chigurida Kansu

ಹಿಂದಿ, ತೆಲುಗು, ತಮಿಳು, ಇಂಗ್ಲಿಷ್ ಸಿನಿಮಾಗಳಲ್ಲೂ ನಟಿಸಿದ್ದಾರೆ. ಬಹುತೇಕ ಎಲ್ಲಾ ಭಾಷೆಯ ಸಿನಿಪ್ರಿಯರಿಗೂ ಪಂಕಜ್ ತ್ರಿಪಾಠಿ ಯಾರು ಅಂತ ವಿಶೇಷವಾಗಿ ಪರಿಚಯ ಮಾಡಿಕೊಡಬೇಕಿಲ್ಲ. ಈ ಅದ್ಭುತ ನಟ ಕನ್ನಡ ಸಿನಿಮಾದಲ್ಲೂ ನಟಿಸಿದ್ದಾರೆ. ಅದೇ ಇವರ ಮೊದಲ ಸಿನಿಮಾ ಅಂದ್ರೆ ನಂಬ್ತೀರಾ? ಕೆಲವರಿಗೆ ಈ ವಿಷಯ ಗೊತ್ತಿಲ್ಲ. ಪಂಕಜ್ ತ್ರಿಪಾಠಿ ಸೆಂಚುರಿ ಸ್ಟಾರ್ ಶಿವಣ್ಣನ ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾ ಯಾವುದು? ಯಾವಾಗ? ಎಲ್ಲಾ ಡಿಟೈಲ್ಸ್ ಇಲ್ಲಿದೆ.

ಪಂಕಜ್ ತ್ರಿಪಾಠಿ ಬಿಹಾರಿ ಬಾಬು

ಬಾಲಿವುಡ್‌ ನಟ ಪಂಕಜ್ ತ್ರಿಪಾಠಿ ಇಂದು ಬಹುಬೇಡಿಕೆಯ ನಟ. ಕಳೆದ ವಾರವಷ್ಟೇ ಅಕ್ಷಯ್ ಕುಮಾರ್ ಜೊತೆ ನಟಿಸಿದ 'OMG 2' ಬಿಡುಗಡೆಯಾಗಿದೆ. ಈ ಸಿನಿಮಾಗೆ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸುತ್ತಿದೆ. ಸುಮಾರು 60ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರೋ ಈ ನಟ ಬಿಹಾರದ ಚಿಕ್ಕ ಪಟ್ಟಣದವರು. ನಟನಾಗಲೇ ಬೇಕು ಅಂತ ಬಂದ ಪಂಕಜ್ ತ್ರಿಪಾಠಿ ಆರಂಭದ ದಿನಗಳಲ್ಲಿ ತುಂಬಾನೇ ಕಷ್ಟ ಪಟ್ಟಿದ್ದರು. ಸಿನಿಮಾಗೂ ಮುನ್ನ ಅಡುಗೆ ಭಟ್ಟನಾಗಿದ್ದರು. ಚಿಕ್ಕಪುಟ್ಟ ಕೆಲಸ ಮಾಡಿದ್ದರು. ಕೊನೆಗೂ ತಾನಂದುಕೊಂಡಿದ್ದನ್ನು ಸಾಧಿಸಿ ಬಿಟ್ಟಿದ್ದಾರೆ.

Pankaj Tripathi-Shivarajkumar-Chigurida Kansu

ಶಿವಣ್ಣನ ಸಿನಿಮಾವೇ ಮೊದಲ ಚಿತ್ರ

ಪಂಜಕ್ ತ್ರಿಪಾಠಿ ಆಗಿನ್ನೂ ಸಿನಿಮಾಗಳಿಗಾಗಿ ಹುಡುಕುತ್ತಿದ್ದ ಕಾಲವದು. ನಟನಾಗಲೇ ಬೇಕು ಅಂತ ದೆಹಲಿ ಬಂದಿದ್ದರು. ಅಲ್ಲಿನ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಗೆ ಸೇರಿಕೊಂಡಿದ್ದರು. ಈ ವೇಳೆ ಪಂಕಜ್ ತ್ರಿಪಾಠಿ ಟಾಟಾ ಟೀ ಜಾಹೀರಾತಿನಲ್ಲಿ ರಾಜಕಾರಣಿಯಾಗಿ ನಟಿಸಿದ್ದರು. ಈ ಬೆನ್ನಲ್ಲೇ 2003ರಲ್ಲಿ ಬಿಡುಗಡೆಯಾಗಿದ್ದ ಶಿವಣ್ಣ ಸಿನಿಮಾ 'ಚಿಗುರಿದ ಕನಸು'ನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಈ ಸಿನಿಮಾದಲ್ಲಿ ತುಂಬಾನೇ ಸಣ್ಣ ಪಾತ್ರ. ಶಿವಣ್ಣನ ಹಾಸ್ಟೆಲ್ ಮೇಟ್ ಆಗಿ ಪಂಕಜ್ ತ್ರಿಪಾಠಿ ನಟಿಸಿದ್ದರು. ಆದರೆ, ಆ ಪಾತ್ರಕ್ಕೆ ಅವ್ರಿಗೆ ಕ್ರೆಡಿಟ್ ಸಿಕ್ಕಿರಲಿಲ್ಲ.

ಅಧಿಕೃತವಾಗಿ 'ರನ್' ಮೊದಲ ಸಿನಿಮಾ

'ಚಿಗುರಿದ ಕನಸು' ಸಿನಿಮಾ ಮೊದಲ ಸಿನಿಮಾ ಆದರೂ, ಹಿಂಗೆ ಬಂದು ಹಾಗೇ ಹೋಗುವ ಪಾತ್ರವಾಗಿತ್ತು. ಬಳಿಕ ಪಂಕಜ್ ತ್ರಿಪಾಠಿ 'ರನ್' ಅನ್ನುವ ಬಾಲಿವುಡ್ ಸಿನಿಮಾದಲ್ಲಿ ನಟಿಸಿದ್ದರು. ಅದರಲ್ಲೂ ಇವರ ಪಾತ್ರಕ್ಕೆ ಹೆಸರೇ ಇರಲಿಲ್ಲ. 2004ರಲ್ಲಿ ಅಭಿಷೇಕ್ ಬಚ್ಚನ್ ಹಾಗೂ ಭೂಮಿಕಾ ಚಾವ್ಲಾ ನಟಿಸಿದ ಈ ಸಿನಿಮಾ ರಿಲೀಸ್ ಆಗಿತ್ತು. ಇಲ್ಲಿಂದ ಕುಂಟುತ್ತಲೇ ಸಾಗಿದ್ದ ವೃತ್ತಿ ಬದುಕು ಈಗ ಸ್ಟಾರ್ ಪಟ್ಟ ತಂದು ಕೊಟ್ಟಿದೆ.

ಪಂಕಜ್ ತ್ರಿಪಾಠಿ ಅದ್ಭುತ ಸಿನಿಮಾಗಳು

2005ರಿಂದ ಒಂದೊಂದೇ ಸಿನಿಮಾಗಳು ಸಿಗುವುದಕ್ಕೆ ಆರಂಭ ಆಗಿದ್ದವು. 'ಅಪಹರಣ್', 'ಓಂಕಾರ'ದಂತಹ ಸಿನಿಮಾಗಳಲ್ಲಿ ನಟಿಸಿದ ಬಳಿಕ 'ಗ್ಯಾಂಗ್ಸ್ ಆಫ್ ವಾಸ್ಸೆಪುರ್' ಅಂತ ಗ್ಯಾಂಗ್‌ಸ್ಟರ್ ಸಿನಿಮಾದಿಂದ ದೊಡ್ಡ ಬ್ರೇಕ್ ಅಂತ ಸಿಕ್ಕಿತ್ತು. ಇಲ್ಲಿಂದ ಪಂಕಜ್ ತ್ರಿಪಾಠ ಮತ್ತೆಂದೂ ತಿರುಗಿ ನೋಡಲೇ ಇಲ್ಲ. ಕಾಲ ತಕ್ಕಂತೆ ಅಪ್‌ಡೇಟ್ ಆದರು, ವೆಬ್‌ ಸೀರಿಸ್‌ನಲ್ಲಿ ನಟಿಸಿದರು. 'ಸ್ಕೇರ್ಡ್ ಗೇಮ್ಸ್', 'ಮಿರ್ಜಾಪುರ್', 'ಕ್ರಿಮಿನಲ್ ಜಸ್ಟೀಸ್' ಅಂತಹ ವೆಬ್ ಸೀರಿಸ್ ತುಂಬಾ ದೊಡ್ಡ ಹೆಸರು ತಂದುಕೊಟ್ಟಿದೆ. ಇಂತಹ ನಟ ಶಿವಣ್ಣನೊಂದಿಗೆ ಚಿಗುರಿದ ಕನಸು ಸಿನಿಮಾದಲ್ಲಿ ನಟಿಸಿದ್ದರು ಅನ್ನೋದು ಅನೇಕ ಮಂದಿಗೆ ಗೊತ್ತೇ ಇಲ್ಲ.

More from Filmibeat

English summary
OMG 2 actor Pankaj Tripathi's debut movie is Shivarajkumar starrer Chigurida Kanasu
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X