Nagarjuna-Sridevi: ಶ್ರೀದೇವಿ ಜೊತೆ ನಟಿಸಲು ನಾಗಾರ್ಜುನ ಹೆದರಿದ್ದೇಕೆ? ಅಂದು ನಡೆದ ಘಟನೆ ಏನು?

ದಕ್ಷಿಣ ಭಾರತದ ಅತಿಲೋಕ ಸುಂದರಿ ಶ್ರೀದೇವಿ. ಈ ನಟಿ ಅಗಲಿ ಸುಮಾರು 5 ವರ್ಷಗಳೇ ಆಗಿವೆ. ದಕ್ಷಿಣ ಭಾರತೀಯ ಚಿತ್ರರಂಗ ಹಾಗೂ ಬಾಲಿವುಡ್ ಎರಡೂ ಚಿತ್ರರಂಗದಲ್ಲೂ ಸೂಪರ್‌ಸ್ಟಾರ್ ಆಗಿ ಮಿಂಚಿದ್ದ ನಟಿ ದಿಢೀರನೇ ಕಣ್ಮರೆಯಾಗಿದ್ದು ಅಭಿಮಾನಿಗಳಿಗೆ ನಂಬಲು ಸಾಧ್ಯವಾಗಿರಲಿಲ್ಲ.

ಸಂಬಂಧಿಯೊಬ್ಬರ ಮದುವೆ ಸಮಾರಂಭಕ್ಕೆ ದುಬೈಗೆ ತೆರಳಿದ್ದ ನಟಿ ಶ್ರೀದೇವಿ ಐಶಾರಾಮಿ ಹೋಟೆಲ್‌ನಲ್ಲಿ ಸಾವನ್ನಪ್ಪಿದ್ದರು. ಫೆಬ್ರವರಿ 24, 2018ರಂದು ಹೋಟೆಲ್‌ನಲ್ಲಿ ಬಾತ್‌ಟಬ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಇದು ಅವರ ಅಭಿಮಾನಿಗಳನ್ನು ದಿಗ್ಭ್ರಮೆಗೊಳಿಸಿತ್ತು.

sridevi-nagarjuna-movies

ತಮ್ಮ ನಾಲ್ಕನೇ ವಯಸ್ಸಿನಲ್ಲಿಯೇ ಸಿನಿಮಾಗಳಲ್ಲಿ ನಟಿಸುವುದಕ್ಕೆ ಆರಂಭಿಸಿದ್ದ ಶ್ರೀದೇವಿ ಭಾರತೀಯ ಚಿತ್ರರಂಗದ ಬಹುಮುಖ್ಯ ಅಂಗವಾಗಿಬಿಟ್ಟರು. ತಮಿಳು ಚಿತ್ರರಂಗದಲ್ಲಿ ಬಾಲನಟಿಯಾಗಿ ನಟಿಸಲು ಆರಂಭಿಸಿದ್ದರೂ, 1980ರ ದಶಕದಲ್ಲಿ ನಾಯಕಿಯಾಗಿ ಬಹುಭಾಷಾ ತಾರೆಯಾಗಿ ಹೊರಹೊಮ್ಮಿದ್ದರು.

ಶ್ರೀದೇವಿ ಹಿಂದಿ, ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸುಮಾರು 300 ಕ್ಕೂ ಹೆಚ್ಚು ಸಿನಿಮಾಗಳಿಗೆ ಬಣ್ಣ ಹಚ್ಚಿ ಸೈ ಎನಿಸಿಕೊಂಡಿದ್ದಾರೆ. ದಕ್ಷಿಣ ಭಾರತದಲ್ಲಿ ಸ್ಟಾರ್ ಪಟ್ಟಕ್ಕೇರಿದ್ದ ನಟಿ ಬಾಲಿವುಡ್‌ನಲ್ಲೂ ಲೇಡಿ ಸೂಪರ್‌ಸ್ಟಾರ್ ಆಗಿ ಹೊರಹೊಮ್ಮಿದ್ದರು.

ಜೀತೆಂದ್ರ ಜೊತೆ ನಟಿಸಿದ ಶ್ರೀದೇವಿ ಬಹುತೇಕ ಸಿನಿಮಾಗಳು ಸೂಪರ್‌ ಹಿಟ್ ಆಗಿದ್ದವು. ಬಹುತೇಕ ಅಂದಿನ ಎಲ್ಲಾ ಸೂಪರ್‌ಸ್ಟಾರ್‌ಗಳೊಂದಿಗೆ ಶ್ರೀದೇವಿ ನಟಿಸಿದ್ದರು. ಅಲ್ಲೇ ಮತ್ತೂ ಕೆಲವರು ಈ ನಟಿಯೊಂದಿಗೆ ನಟಿಸಬೇಕು ಅಂತ ಹಂಬಲಿಸುತ್ತಿದ್ದರು. ಆದರೆ, ತೆಲುಗು ಒಬ್ಬ ನಟ ಮಾತ್ರ ಶ್ರೀದೇವಿ ಜೊತೆ ಸಿನಿಮಾ ಮಾಡುವುದಕ್ಕೆ ಹಿಂಜರಿಯುತ್ತಿದ್ದರು. ಅವರೇ ಅಕ್ಕಿನೇನಿ ನಾಗಾರ್ಜುನ.

sridevi-nagarjuna-movies

ಶ್ರೀದೇವಿ ನಾಗಾರ್ಜುನ ತಂದೆ ಲೆಜೆಂಡರಿ ಅಕ್ಕಿನೇನಿ ನಾಗೇಶ್ವರ ರಾವ್ ಅವರೊಂದಿಗೆ ಅದಾಗಲೇ ನಟಿಸಿದ್ದರು. ಮಗಳನಾಗಿ, ನಾಯಕಿಯಾಗಿ ಬಣ್ಣ ಹಚ್ಚಿದ್ದರು. ಹಾಗೇ ನಾಗಾರ್ಜುನ ಜೊತೆನೂ ಶ್ರೀದೇವಿ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ಮೊದಲ ಸಿನಿಮಾಗೂ ಮುನ್ನ ಶ್ರೀದೇವಿ ಜೊತೆ ಸಿನಿಮಾ ಮಾಡಲು ನಾಗಾರ್ಜುನ ಹಿಂದೇಟು ಹಾಕಿದ್ದರು ಅನ್ನೋ ಸುದ್ದಿ ಆ ಕಾಲದಲ್ಲಿ ಓಡಾಡಿತ್ತು.

ಶ್ರೀದೇವಿ ಹಾಗೂ ನಾಗಾರ್ಜುನ ಇಬ್ಬರು ಐದಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ಮೊದಲ ಸಿನಿಮಾದಲ್ಲಿ ಒಟ್ಟಿಗೆ ನಟಿಸುವಾಗ ಎಲ್ಲಿ ಶ್ರೀದೇವಿ ಮುಂದೆ ತನಗೆ ಎಲ್ಲಿ ಹಿನ್ನಡೆಯಾಗುತ್ತೋ ಅಂತ ನಾಗಾರ್ಜುನ ಹೆದರಿದ್ದರು. ಅದಕ್ಕೆ ಶ್ರೀದೇವಿ ಜೊತೆ ನಟಿಸಲು ಒಪ್ಪಿರಲಿಲ್ಲ ಎಂದು ವರದಿಗಳಾಗಿದ್ದವು. ಎರಡನೇ ಸಿನಿಮಾದ ಹೊತ್ತಿಗೆ ನಾಗಾರ್ಜುನಗೆ ಇದ್ದ ಭಯವೆಲ್ಲ ಮಾಯವಾಗಿತ್ತು. ಈ ಬಗ್ಗೆ ಟಾಲಿವುಡ್‌ನಲ್ಲಿ ಗುಸುಗುಸು ಹಬ್ಬಿತ್ತು.

ಶ್ರೀದೇವಿ ದಿಢೀರನೇ ನಿಧನ ಹೊಂದಿದಾಗ ನಾಗಾರ್ಜುನ ಭಾವುಕರಾಗಿ ಹೇಳಿಕೆ ಕೊಟ್ಟಿದ್ದರು. " ನಿಮಗೆ ಈ ಸಂಗತಿಯನ್ನು ನಂಬಲು ಸಾಧ್ಯವೇ. ನನ್ನ ತಂದೆಯೊಂದಿಗೆ ಶ್ರೀದೇವಿ ಮಗಳಾಗಿ ಹಾಗೂ ನಾಯಕಿಯಾಗಿ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಬಳಿಕ ನನಗೆ ನಾಯಕಿಯಾದರು. ಅವ್ರಿಗೆ ಯಾರೊಂದಿಗೆ ನಟಿಸುತ್ತಿದ್ದೇನೆ ಅನ್ನೋದು ಮುಖ್ಯವಲ್ಲ. ಅವರೊಂದಿಗೆ ನಟಿಸೋ ನಾಯಕ ನನ್ನ ತಂದೆಯೋ ಅಥವಾ ನಾನೋ ಅನ್ನೋದು ಮುಖ್ಯ ಆಗಿರಲಿಲ್ಲ." ಎಂದು ನಾಗಾರ್ಜುನ ಹೇಳಿದ್ದರು.

More from Filmibeat

English summary
When Akkineni Nagarjuna hesitate to work with late actress Sridevi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X