ಮಾಧುರಿ ಬ್ಯೂಟಿಗೆ ಹುಚ್ಚನಾಗಿದ್ದ ಅಜಯ್ ದೇವಗನ್ ಸಿಗರೇಟ್‌ನಿಂದ ಮುಖ ಸುಟ್ಟುಕೊಂಡಿದ್ದ? ಇನ್ನೂ ಇದೆ ಆ ಗುರುತು!
ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಬ್ಯೂಟಿಗೆ ಮನಸೋಲದವರೇ ಇರಲಿಲ್ಲ. 90ರ ದಶಕದಲ್ಲಿ ಮಾಧುರಿ ದೀಕ್ಷಿತ್ ಆ ಮಟ್ಟಿಗೆ ಕ್ರೇಜ್ ಇತ್ತು. ಬಾಲಿವುಡ್‌ನ ಎಲ್ಲಾ ಸೂಪರ್‌ಸ್ಟಾರ್‌ಗಳಿಗೂ ಈಕೆನೇ ನಾಯಕಿಯಾಗಬೇಕಿತ್ತು. ಆ ಮಟ್ಟಿಗೆ ಬ್ಯುಸಿಯಾಗಿದ್ದ ನಟಿಯೀಕೆ. ತೆರೆಮೇಲೆ ಮಾಧುರಿ ದೀಕ್ಷಿತ್ ಬಂದು ಹೆಜ್ಜೆ ಹಾಕಿ ಹೋದರೆ ಸಾಕು ಆ ಸಿನಿಮಾ ಗೆದ್ದು ಬಿಡುತ್ತಿತ್ತು.
ಮಾಧುರಿ ದೀಕ್ಷಿತ್ ಅಂದಿನ ಕಾಲದಲ್ಲಿ ಹುಡುಗರ ನಿದ್ದೆಗಷ್ಟೇ ಕನ್ನ ಹಾಕಿರಲಿಲ್ಲ. ಹಿಂದಿ ಚಿತ್ರರಂಗದಲ್ಲಿ ಸೂಪರ್‌ಸ್ಟಾರ್‌ಗಳ ನಿದ್ದೆಯನ್ನ ಕದ್ದಿದ್ದರು. ಅಂತವರಲ್ಲಿ ಬಾಲಿವುಡ್ ನಟ ಅಜಯ್ ದೇವಗನ್ ಕೂಡ ಒಬ್ಬರು. ಈ ನಟನೊಂದಿಗೆ ಅಂದಿನ ಕಾಲದ ಬಾಲಿವುಡ್ ನಟಿಯ ಹೆಸರು ಕೂಡ ತಳುಕು ಹಾಕಿಕೊಂಡಿದ್ದವು. ಆದರೆ, ಅಜಯ್ ದೇವಗನ್ ಮಾತ್ರ ಮಾಧುರಿ ದೀಕ್ಷಿತ್ ಬ್ಯೂಟಿಗೆ ಮರುಳಾಗಿದ್ದರು.

'ಸಿಂಗಂ 3' ಯಶಸ್ಸಿನ ಖುಷಿಯಲ್ಲಿ ಅಲೆದಾಡುತ್ತಿರುವ ಅಜಯ್ ದೇವಗನ್ ಮತ್ತೆ ಬಾಕ್ಸಾಫೀಸ್‌ನಲ್ಲಿ ಗೆದ್ದು ಬೀಗಿದ್ದಾರೆ. ಈ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ಮಾಧುರಿ ದೀಕ್ಷಿತ್ ಬ್ಯೂಟಿಗೆ ಹುಚ್ಚನಂತಾಗಿ ಅಜಯ್ ದೇವಗನ್ ಸಿಗರೇಟ್‌ನಿಂದ ಮುಖ ಸುಟ್ಟುಕೊಂಡಿದ್ದ ಘಟನೆ ಕೂಡ ಸದ್ದು ಮಾಡುತ್ತಿದೆ. ಅಜಯ್ ದೇವಗನ್ ಹಾಗೂ ಮಾಧುರಿ ದೀಕ್ಷಿತ್ ನಡುವಿನ ಸಂಬಂಧವೇನು? ಮಾಧುರಿಗಾಗಿ ಸಿಗರೇಟ್‌ನಿಂದ ಮುಖ ಸುಟ್ಟುಕೊಂಡಿದ್ದೇಗೆ? ತಿಳಿಯಲು ಮುಂದೆ ಓದಿ.
ಅಜಯ್ ದೇವಗನ್ ಹಿಂದಿ ಚಿತ್ರರಂಗದ ಅದ್ಭುತ ನಟ ಅನ್ನೋದರಲ್ಲಿ ಎರಡು ಮಾತಿಲ್ಲ. ಇನ್ನೂ ಜಾಲ್ತಿಯಲ್ಲಿರುವ ಸೂಪರ್‌ಸ್ಟಾರ್‌ಗಳಿಗಿಂತ ಅಜಯ್ ದೇವಗನ್ ನಟನೆಗೆ ಪ್ರೇಕ್ಷಕರು ಫುಲ್ ಮಾರ್ಕ್ಸ್ ಕೊಡುತ್ತಾರೆ. ಹೆಚ್ಚಾಗಿ ಆಕ್ಷನ್ ಸಿನಿಮಾಗಳಲ್ಲಿ ನಟಿಸಿದರೂ, ಎಲ್ಲಾ ಪ್ರಕಾರದ ಪಾತ್ರಗಳಲ್ಲಿಯೂ ನಟಿಸಿ ಗೆದ್ದಿದ್ದಾರೆ. 90ರ ದಶಕದಲ್ಲಿ ಅಜಯ್ ದೇವಗನ್ ತೆರೆಮೇಲೆ ಜಾದು ಮಾಡಿದ್ದರು.

ಈಗ 'ಸಿಂಗಂ' ಸರಣಿಯ ಮೂರನೇ ಸೀರಿಸ್ ರಿಲೀಸ್ ಆಗಿ ಯಶಸ್ವಿಯಾಗಿದೆ. ಈ ವೇಳೆ ಅವರ ಅಭಿಮಾನಿಗಳು ಒಂದು ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಮಾಧುರಿ ದೀಕ್ಷಿತ್ ಸಮ್ಮುಖದ್ಲಿ ಅಜಯ್ ದೇವಗನ್ ಆಕಯೆ ಬ್ಯೂಟಿಗೆ ಮರುಳಾಗಿದ್ದನ್ನು ಹೇಳಿಕೊಂಡಿದ್ದಾರೆ. ಅಲ್ಲದೆ ಸಿಗರೇಟ್‌ನಿಂದ ಮುಖ ಸುಟ್ಟುಕೊಂಡಿದ್ದ ಸಂಗತಿಯನ್ನು ಹೇಳಿಕೊಂಡಿದ್ದಾರೆ. ಆ ವಿಡಿಯೋ ಈಗ ಟ್ರೆಂಡಿಂಗ್‌ನಲ್ಲಿದೆ.
ಅಜಯ್ ದೇವಗನ್ ಹಾಗೂ ಮಾಧುರಿ ದೀಕ್ಷಿತ್ 2001ರಲ್ಲಿ ತೆರೆಕಂಡ 'ಯೇ ರಾಸ್ತೆ ಹೇ ಪ್ಯಾರ್ ಕೆ' ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಆ ಸಿನಿಮಾ ವೇಳೆ ಮಾಧುರಿ ದೀಕ್ಷಿತ್ ಬ್ಯೂಟಿ ನೋಡಿ ಅಜಯ್ ದೇವಗನ್ ಕಳೆದು ಹೋಗಿದ್ದರು. ಈ ವಿಷಯವನ್ನು 'ಟೋಟಲ್ ಧಮಾಲ್' ಸಿನಿಮಾದ ಪ್ರಚಾರದ ವೇಳೆ ಮಾಧುರಿ ದೀಕ್ಷಿತ್ ಸಮ್ಮುಖದಲ್ಲಿಯೇ ರಿವೀಲ್ ಮಾಡಿದ್ದರು.
'ಯೇ ರಾಸ್ತೆ ಹೇ ಪ್ಯಾರ್ ಕೆ' ಸಿನಿಮಾದ ಶೂಟಿಂಗ್ ವೇಳೆ ಅಜಯ್ ದೇವಗನ್ ಸಿನಿಮಾ ತಂಡದೊಂದಿಗೆ ಸಿಟಿಂಗ್ ಹಾಕಿದ್ದರು. ಆ ವೇಳೆ ಮಾಧುರಿ ದೀಕ್ಷಿತ್ ಇವರ ಮುಂದೆ ಪಾಸ್ ಆಗಿದ್ದರು. ಆ ವೇಳೆ ಮಾಧುರಿ ದೀಕ್ಷಿತ್ ಸೌಂದರ್ಯವನ್ನು ನೋಡಿ ಅಜಯ್ ದೇವಗನ್ ಹುಚ್ಚನಂತೆ ಆಗಿದ್ದರು. ಆ ಸಂದರ್ಭದಲ್ಲಿ ಅಜಯ್ ದೇವಗನ್ ಅಚಾನಕ್ ಆಗಿ ಕೈಲ್ಲಿದ್ದ ಸಿಗರೇಟ್ ಅನ್ನು ಮುಖಕ್ಕೆ ಇಟ್ಟುಕೊಂಡಿದ್ದರು. ಅದರಿಂದ ಆದ ಸುಟ್ಟಗಾಯದ ಗುರುತು ಇನ್ನೂ ಇದೆ ಎಂದು ಅಜಯ್ ದೇವಗನ್ ಹೇಳಿಕೊಂಡಿದ್ದರು.
ಇನ್ನು ಅಜಯ್ ದೇವಗನ್ ಜೊತೆ ಬಾಲಿವುಡ್‌ನ ಅನೇಕ ನಟಿಯರ ಹೆಸರುಗಳು ಆ ಕಾಲಕ್ಕೆ ತಳುಕು ಹಾಕಿಕೊಂಡಿತ್ತು. ಕಪೂರ್ ಕುಟುಂಬದ ಕುಡಿ ಕರೀಷ್ಮಾ ಕಪೂರ್ ಜೊತೆ ಅಜಯ್ ದೇವಗನ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಹಾಗೇ ಮನಿಷಾ ಕೋಯಿರಾಲಾ, ರವೀನಾ ಟಂಡನ್, ಟಬು ಜೊತೆ ಅಜಯ್ ದೇವಗನ್ ಪ್ರೀತಿಯಲ್ಲಿ ಬಿದ್ದಿದ್ದರು ಎಂಬ ಸುದ್ದಿ ಹಬ್ಬಿತ್ತು.


Click it and Unblock the Notifications










