"ಬಡವನಂತೆ ಕಾಣ್ತಾನೆ..ಅವನೊಂದಿಗೆ ನಟಿಸುವುದಿಲ್ಲ" ಎಂದು ಮನೋಜ್ ಬಾಜಪೇಯಿಯನ್ನು ತಿರಸ್ಕರಿಸಿದ್ದ ಜೂಹಿ ಚಾವ್ಲಾ!

ಜೂಹಿ ಚಾವ್ಲಾ ಅಂದ ಕೂಡಲೇ ಕನ್ನಡಿಗರಿಗೆ ನೆನಪಾಗೋದು ಮೂರು ಸಿನಿಮಾ. ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ನಟಿಸಿದ 'ಪ್ರೇಮಲೋಕ', 'ಕಿಂದರ ಜೋಗಿ' ಮತ್ತೆ 'ಶಾಂತಿ ಕ್ರಾಂತಿ'. ಹಾಗೇ 'ರಣಧೀರ' ಸಿನಿಮಾದಲ್ಲಿ ಚಿಕ್ಕದೊಂದು ಝಲಕ್ ಕೊಟ್ಟು ಹೋಗಿದ್ದರು. ಹೀಗಾಗಿ ಕನ್ನಡಿಗರಿಗೂ ಜೂಹಿ ಚಾವ್ಲಾ ಚೆನ್ನಾಗೇ ಗೊತ್ತು.

ಇನ್ನು ಹಿಂದಿ ಸಿನಿಮಾ ಪ್ರಿಯರಿಗೆ ಜೂಹಿ ಚಾವ್ಲಾರನ್ನು ನೆನಪಿಸೋ ಅಗತ್ಯವೇ ಇಲ್ಲ. 90ರ ದಶಕದಲ್ಲಿ ಜೂಹಿ ಚಾವ್ಲಾಗೆ ಇದ್ದ ಅಭಿಮಾನಿಗಳ ಸಂಖ್ಯೆಯೇನು ಕಮ್ಮಿಯಿರಲಿಲ್ಲ. ಒಂದರ ಹಿಂದೊಂದು ಹಿಟ್ ಸಿನಿಮಾಗಳನ್ನು ಕೊಟ್ಟು ಸ್ಟಾರ್ ನಟಿ ಎನಿಸಿಕೊಂಡಿದ್ದರು. ಮದುವೆ ಆಗುವವರೆಗೂ ಜೂಹಿ ಚಾವ್ಲಾಗೆ ಕ್ರೇಜ್ ಕಮ್ಮಿ ಆಗಿರಲಿಲ್ಲ.

Once Juhi Chawla refused to act with Manoj Bajpayees throwback story

ವಿವಾಹದ ಬಳಿಕ ಜೂಹಿ ಚಾವ್ಲಾ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುವ ದಾಟಿ ಬದಲಾಗುತ್ತಾ ಬಂತು. ಈಗ ಪೋಷಕ ಪಾತ್ರಗಳಲ್ಲಿ ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುತ್ತಾರೆ. 2016ರಲ್ಲಿ ಜೂಹಿ ಚಾವ್ಲಾ ಸಿನಿಮಾವೊಂದರಲ್ಲಿ ನಟಿಸಿದ್ದರು. ಅದೇ ಸಿನಿಮಾದಲ್ಲಿ ಮನೋಜ್ ಬಾಜಪೇಯಿ ನಟಿಸಬೇಕಿತ್ತು. ಆದರೆ, ಜೂಹಿ ಚಾವ್ಲಾ ನಟಿಸಲು ಹಿಂದೇಟು ಹಾಕಿದ್ದರು. ಅದ್ಯಾಕೆ ಅನ್ನೋದನ್ನು ತಿಳಿಯಲು ಮುಂದೆ ಓದಿ..

ರಾಷ್ಟ್ರ ಪಶಸ್ತಿ ಪಡೆದ ನಟ ಮನೋಜ್ ಬಾಜಪೇಯಿ

ಮನೋಜ್ ಬಾಜಪೇಯಿ ಓಟಿಟಿಯ ಶಾರುಖ್ ಖಾನ್ ಎಂದೇ ಫೇಮಸ್. ಫ್ಯಾಮಿಲಿ ಮ್ಯಾನ್ ವೆಬ್ ಸೀರಿಸ್ ಮೂಲಕ ಮನೋಜ್ ಬಾಜಪೇಯಿ ಮತ್ತಷ್ಟು ಉತ್ತುಂಗಕ್ಕೆ ಏರಿದೆ. ಸಿನಿಮಾ ವೆಬ್ ಸೀರಿಸ್ ಯಾವುದೇ ಇರಲಿ ಮನೋಜ್ ಬಾಜಪೇಯಿ ಇದ್ದಾರೆಂದರೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವೇ ಇರಲಿಲ್ಲ. ಇಂತಹ ನಟ 2016ರಲ್ಲಿ ಜೂಹಿ ಚಾವ್ಲಾ ನಟಿಸುತ್ತಿದ್ದ 'ಚಾಕ್ ಅಂಡ್ ಡಸ್ಟರ್' ಸಿನಿಮಾದಲ್ಲಿ ನಟಿಸಬೇಕಿತ್ತು. ಕ್ವಿಜ್ ಮಾಸ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಆದರೆ ಆಗಿದ್ದೇ ಬೇರೆ.

ಈ ನಟ ಬೇಡ ಅಂತ ಜೂಹಿ ಚಾವ್ಲಾ ಹಠ

'ಚಾಕ್ ಅಂಡ್ ಡಸ್ಟರ್' ಸಿನಿಮಾ ಮೊದಲ ದಿನದ ಶೂಟಿಂಗ್ ಆರಂಭ ಆಗಿತ್ತು. ಸೆಟ್ಟಿಗೆ ಜೂಹಿ ಚಾವ್ಲಾ ಬಂದಿದ್ದರು. ಅದೇ ದಿನ ಮನೋಜ್ ಬಾಜಪೇಯಿ ಸೀನ್ ಕೂಡ ಇತ್ತು. ಕ್ವಿಜ್ ಮಾಸ್ಟರ್ ಆಗಿ ಮನೋಜ್ ಬಾಜಪೇಯಿ ನಟಿಸಬೇಕಿತ್ತು. ಅಷ್ಟೊತ್ತಿಗೆ ಜೂಹಿ ತಗಾದೆ ತೆಗೆದಿದ್ದರು. ಆತ ಇದ್ದರೆ, ಈ ಸಿನಿಮಾದಲ್ಲಿ ನಟಿಸುವುದಿಲ್ಲವೆಂದು ಹಠ ಹಿಡಿದು ಕೂತಿದ್ದರು. ನಿರ್ದೇಶಕ ಅದೆಷ್ಟೇ ಪ್ರಯತ್ನ ಪಟ್ಟರೂ ಜೂಹಿ ಚಾವ್ಲಾ ಒಪ್ಪಲೇ ಇಲ್ಲ.

Once Juhi Chawla refused to act with Manoj Bajpayees throwback story

ಬಡವನಂತೆ ಕಾಣುತ್ತಾನೆ

ಜೂಹಿ ಚಾವ್ಲಾ ನಿರ್ದೇಶಕರೊಂದಿಗೆ ವಾದಕ್ಕೆ ಬಿದ್ದಿದ್ದರು. ಮನೋಜ್ ಬಾಜಪೇಯಿ ಬಡವಂತೆ ಕಾಣುತ್ತಾರೆ. ಈ ಪಾತ್ರಕ್ಕೆ ಅವರು ಉತ್ತಮ ಆಯ್ಕೆ ಅಲ್ಲ ಎಂದು ನಿರ್ದೇಶಕರ ಮೇಲೆ ಸಿಟ್ಟು ಮಾಡಿಕೊಂಡಿದ್ದರು. ನಿರ್ಮಾಪಕರು ಹಾಗೂ ನಿರ್ದೇಶಕರು ಅದೆಷ್ಟೇ ಪ್ರಯತ್ನ ಪಟ್ಟರೂ ಜೂಹಿ ರಂಪಾಟ ಜೋರಾಗುತ್ತಲೇ ಸಾಗಿತ್ತು. ಬಳಿಕ ವಿಧಿಯಿಲ್ಲದೆ ನಿರ್ಮಾಪಕರು ಮನೋಜ್ ಬಾಜಪೇಯಿ ಅವರನ್ನು ಸಿನಿಮಾದಿಂದ ಕಿತ್ತಾಕಿದ್ದರು.

ಮನೋಜ್ ಬಾಜಪೇಯಿ ಪಾತ್ರ ಮಾಡಿದ್ಯಾರು?

ಮನೋಜ್ ಬಾಜಪೇಯಿ ಸಿನಿಮಾದಿಂದ ಹೊರಕ್ಕೆ ಹೋಗಿದ್ದರು. ಆದರೆ, ಇವರು ಮಾಡಬೇಕಿದ್ದ ಪಾತ್ರದಲ್ಲಿ ರಿಷಿ ಕಪೂರ್ ನಟಿಸಬೇಕು ಅಂತಲೂ ಹಠ ಹಿಡಿದಿದ್ದರು. ಕೊನೆಗೂ ಅವರ ಆಸೆಯಂತೆ ರಿಷಿ ಕಪೂರ್ ಕ್ವಿಜ್ ಮಾಸ್ಟರ್ ಪಾತ್ರದಲ್ಲಿ ನಟಿಸಿದರು. ಆದರೂ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿತ್ತು. ಈ ಬಗ್ಗೆ ಎಂದಿಗೂ ಮನೋಜ್ ಬಾಜಪೇಯಿ ಪ್ರತಿಕ್ರಿಯೆ ನೀಡಲಿಲ್ಲ. ಆದ್ರೀಗ ಮನೋಜ್ ಬಾಜಪೇಯಿ ಬಾಲಿವುಡ್‌ನ ಬ್ಯುಸಿ ನಟರಲ್ಲಿ ಒಬ್ಬರು.

More from Filmibeat

English summary
Bollywood Actress Juhi Chawla refused to act with Manoj Bajpayee in Chalk n Duster Movie:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X