ಪ್ರಿಯಾಮಣಿ ಮಕ್ಕಳನ್ನು ಇಷ್ಟ ಪಡುವುದಿಲ್ವಾ? ತಾಳ್ಮೆ ಬಗ್ಗೆ ಮಾತಾಡಿದ್ದೇಕೆ ನಟಿ?
ಒಂದಿಷ್ಟು ವರ್ಷ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಪ್ರಿಯಾಮಣಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದರು. ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲಿ ಸಿನಿಮಾ ಮಾಡುತ್ತಿದ್ದರು. ಮದುವೆ ಬಳಿಕ ಬಾಲಿವುಡ್ ಕಡೆ ಪಯಣ ಬೆಳೆಸಿದ್ದಾರೆ. ಹೆಚ್ಚಾಗಿ ಸಿನಿಮಾ ಹಾಗೂ ವೆಬ್ ಸೀರಿಸ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮುಂಬೈನಲ್ಲಿ ಸೆಟಲ್ ಆಗಿರುವ ಪ್ರಿಯಾಮಣಿ ಹಿಂದಿ ಕಡೆ ಮುಖ ಮಾಡಿದ್ದಾರೆ.
ಬಾಲಿವುಡ್ ಕಡೆಗೆ ಪಯಣ ಬೆಳೆಸಿದಾಗ, 'ಫ್ಯಾಮಿಲಿ ಮ್ಯಾನ್' ವೆಬ್ ಸೀರಿಸ್‌ನಲ್ಲಿ ಮಿಂಚಿದ್ದರು. ಇತ್ತೀಚೆಗೆ ತೆರೆಕಂಡಿದ್ದ ಶಾರುಖ್ ಖಾನ್ ಸಿನಿಮಾ 'ಜವಾನ್'ನಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಅವರ ಪಾತ್ರಕ್ಕೂ ಮೆಚ್ಚುಗೆ ವ್ಯಕ್ತವಾಗಿತ್ತು. ಮದುವೆ ಬಳಿಕವೂ ಪ್ರಿಯಾಮಣಿ ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದು, ಪತು ಮುಸ್ತಫಾ ರಾಜ್ ಬೆಂಬಲ ಕೊಡುತ್ತಿದ್ದಾರೆ.

ಪ್ರಿಯಾಮಣಿ ಹಾಗೂ ಮುಸ್ತಫಾ ರಾಜ್ ಇಬ್ಬರೂ ಕೆಲವು ವರ್ಷಗಳ ಕಾಲ ಡೇಟಿಂಗ್ ಮಾಡುತ್ತಿದ್ದರು. ಬಳಿಕ 2017ರಲ್ಲಿ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇಬ್ಬರದ್ದೂ ಬೇರೆ ಧರ್ಮಗಳಾಗಿದ್ದರೂ, ಮನೆಯವರನ್ನು ಒಪ್ಪಿಸಿ ಮದುವೆ ಆಗಿದ್ದರು. ಇಬ್ಬರ ದಾಂಪತ್ಯ ಬದುಕು ಅದ್ಭುತವಾಗಿದೆ. ಇದೇ ವೇಳೆ ಪ್ರಿಯಾಮಣಿ ಸಿಕ್ಕಾಗ ಆಗಾಗ ಫ್ಯಾಮಿಲಿ ಪ್ಲಾನಿಂಗ್ ಬಗ್ಗೆನೂ ಪ್ರಶ್ನೆಗಳು ಎದುರಾಗುತ್ತವೆ.
ಇತ್ತೀಚೆಗೆ ತೆಲುಗು ಮಾಧ್ಯಮವೊಂದರಲ್ಲಿ ಪ್ರಿಯಾಮಣಿ ಸಂದರ್ಶನ ನೀಡಿದ್ದರು. ಅದರಲ್ಲಿ ಪ್ರಿಯಾಮಣಿ ಫ್ಯಾಮಿಲಿ ಪ್ಲಾನಿಂಗ್ ಬಗ್ಗೆ ಮಾತಾಡಿದ್ದರು. ಈ ವೇಳೆ ಪ್ರಿಯಾಮಣಿ ತಾಯಿಯಾಗುತ್ತಾರಾ? ಅಂತ ಪ್ರಶ್ನೆ ಮಾಡಿದ್ದರು. ಆ ವೇಳೆ ನಿಖರವಾದ ಉತ್ತರವನ್ನು ನೀಡಲಿಲ್ಲ. ಇದೇ ಸಂದರ್ಭದಲ್ಲಿ ನೀವು ಮಕ್ಕಳನ್ನು ಇಷ್ಟ ಪಡುತ್ತೀರಾ? ಎಂದು ಪ್ರಶ್ನೆ ಮಾಡಲಾಗಿತ್ತು. ಅದಕ್ಕೆ ಪ್ರಿಯಾಮಣಿ ಕೊಟ್ಟ ಉತ್ತರ ಅಚ್ಚರಿ ಹುಟ್ಟಿಸಿತ್ತು.
ಮಕ್ಕಳನ್ನು ಇಷ್ಟ ಪಡುತ್ತೀರಾ ಎಂದು ಪ್ರಶ್ನೆ ಮಾಡಿದಾಗ ಫಿಫ್ಟಿ ಫಿಫ್ಟಿ ಎಂದು ಉತ್ತರ ಕೊಟ್ಟಿದ್ದರು. ನನ್ನ ಸಹೋದರನಿಗೆ ಮಗಳಿದ್ದಾಳೆ. ಅವಳನ್ನು ಬೆದರಿಸುವುದಕ್ಕೆ ನಾನು ಇಷ್ಟಪಡುತ್ತೇನೆ. ಅವಳು ಕೂಡ ನನ್ನಂತೆಯೇ ಇದ್ದಾಳೆ ಎಂದು ಹೇಳಿದ್ದರು. ಇದೇ ಸಂದರ್ಭದಲ್ಲಿ ತಾಯಿಯಾಗುವುದಕ್ಕೆ ತಾಳ್ಮೆ ಬೇಕು. ನನಗೆ ತಾಳ್ಮೆ ಎಂಬುವುದಿಲ್ಲ. ಈ ತಾಳ್ಮೆಯನ್ನು ಯಾವುದೋ ಒಂದು ಸಂದರ್ಭದಲ್ಲಿ ಕಲಿತುಕೊಳ್ಳುವುದಲ್ಲ. ಸಮಯ ಬಂದಾಗ ತಾನಾಗಿಯೇ ಕಲಿಸುತ್ತೆ. ತನಗೂ ಒಳ್ಳೆಯ ತಾಯಿಯಾಗುವ ಭರವಸೆಯಿದೆ ಎಂದಿದ್ದರು.

ಇನ್ನೊಂದು ಕಡೆ ಪತಿ ಮುಸ್ತಫಾ ರಾಜ್ ಈ ಹಿಂದೆ ಆಯೇಷಾ ಎಂಬುವವರೊಂದಿಗೆ ಮದುವೆ ಆಗಿದ್ದರು. ಪ್ರಿಯಾಮಣಿಯೊಂದಿಗೆ ವಿವಾಹವಾಗುವಾಗ ಇಬ್ಬರು ಬೇರ್ಪಟ್ಟಿದ್ದರು ಎನ್ನಲಾಗಿತ್ತು. ಆದರೆ, ವಿವಾಹದ ಬಳಿಕ ಆಯೇಷಾ ತಗಾದೆ ತೆಗೆದಿದ್ದರು. ಮುಸ್ತಫಾ ರಾಜ್ ಇನ್ನೂ ನನ್ನೊಂದಿಗೆ ಕಾನೂನು ಬದ್ಧವಾಗಿ ವಿಚ್ಛೇದನ ಪಡೆದಿಲ್ಲ ಎಂದಿದ್ದರು. ಕೆಲವು ದಿನ ಪ್ರಿಯಾಮಣಿ ದಾಂಪತ್ಯ ಗೊಂದಲಕ್ಕೆ ಸಿಲುಕಿತ್ತು.
ಶಾರುಖ್ ಖಾನ್ ಅವ್ರನ್ನ ನೀವು ದ್ವೇಷಿಸಬಹುದು ಆದರೆ ಪ್ರೀತಿಸುವವರ ಸಂಖ್ಯೆ ಹೆಚ್ಚಿದೆ ಎಂದ ಪ್ರಿಯಾಮಣಿ
ಸದ್ಯ ಮುಸ್ತಫಾ ರಾಜ್ ಹಾಗೂ ಪ್ರಿಯಾಮಣಿ ಮುಂಬೈನಲ್ಲಿ ವಾಸವಿದ್ದಾರೆ. ಪ್ರಿಯಾಮಣಿಗೆ ಬಾಲಿವುಡ್ ಹಾಗೂ ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದೆಲ್ಲಾ ಏನೇ ಇದ್ದರೂ 39 ವರ್ಷದ ನಟಿ ಸದ್ಯ ಫ್ಯಾಮಿಲಿ ಪ್ಲಾನಿಂಗ್ ಬಗ್ಗೆ ಯೋಚಿಸಿಲ್ಲ ಅನ್ನೋದಂತೂ ಸ್ಪಷ್ಟವಾಗಿ ಗೊತ್ತಾಗುತ್ತೆ.


Click it and Unblock the Notifications











