ಹಾಸ್ಯ ನಟನ ಕೋಣೆಯಲ್ಲಿ ಮಲಗಿದ್ದ ಶಕೀಲಾ; ಆ ರಾತ್ರಿ ನಟಿಯನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಿದ್ದ ವೇಣು ಮಾಧವ

ಭಾರತೀಯರಿಗೆ ಜನಪ್ರಿಯ ನಟಿ ಶಕೀಲಾ ಹೊಸ ಪರಿಚಯವೇನಲ್ಲ. ವಯಸ್ಕರ ಸಿನಿಮಾಗಳಿಂದಲೇ ಜನಪ್ರಿಯರಾಗಿದ್ದ ಈ ನಟಿ ಇತ್ತೀಚೆಗೆ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶಕೀಲಾ ಅವರ ಜೀವನ ಚರಿತ್ರೆಯೇ ಸಿನಿಮಾ ಆಗಿದ್ದೂ ಗೊತ್ತೇ ಇದೆ. ಇಂದ್ರಜಿತ್ ಲಂಕೇಶ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಶಕೀಲಾ ಒಂದು ಸಂದರ್ಶನದಲ್ಲಿ ತೆಲುಗಿನ ಹಾಸ್ಯ ನಟ ದಿವಂಗತ ವೇಣು ಮಾಧವ ಅವರೊಂದಿಗಿನ ಹಾಸ್ಯದ ಸನ್ನಿವೇಶವನ್ನು ಹಂಚಿಕೊಂಡಿದ್ದರು.

ಬೋಲ್ಡ್ ಪಾತ್ರಗಳಲ್ಲಿ ನಟಿಸೋ ನಟಿಯರು ಅಂದಕೂಡಲೇ ಅವರ ಬಗೆಗಿನ ಅಭಿಪ್ರಾಯವೇ ಬದಲಾಗುತ್ತೆ. ಚಿತ್ರರಂಗದಲ್ಲಿಯೇ ಅವರ ಬಗ್ಗೆ ತಾರತಮ್ಯ ಇರುವ ಸನ್ನಿವೇಶಗಳು ಇರುತ್ತೆ. ಕೆಲವೊಮ್ಮೆ ಅವರ ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತೆ. ಇಂತಹ ಸಾಕಷ್ಟು ಸನ್ನಿವೇಶಗಳ ಬಗ್ಗೆ ಹಲವು ನಟಿಯರು ಈಗಾಗಲೇ ಆರೋಪ ಮಾಡಿದ ಸಾಕಷ್ಟು ಉದಾಹರಣೆಗಳು ಇವೆ. ಹಾಗೇ ಕೆಲವರು ತುಂಬಾನೇ ಗೌರವದಿಂದ ಕಾಣುತ್ತಿದ್ದ ಉದಾಹರಣೆಗಳೂ ಕೂಡ ಇವೆ.

Once Shakeela explained funny situation staying with late actor Venu Madhav in single room

ಇತ್ತೀಚೆಗೆ ನೀಡಿದ್ದ ಒಂದು ಸಂದರ್ಶನದಲ್ಲಿ ಶಕೀಲಾ ಒಂದು ಹಾಸ್ಯದ ಸನ್ನಿವೇಶವನ್ನು ಹಂಚಿಕೊಂಡಿದ್ದರು. ವೇಣು ಮಾಧವ, ಬ್ರಹಮ್ಮಾನಂದಂ, ರಘು ಬಾಬು ಅಂತಹ ಕಲಾವಿದರೊಂದಿಗೆ ಶಕೀಲಾ ನಟಿಸುತ್ತಿದ್ದರು. ಚಿತ್ರೀಕರಣದ ಸಮಯದಲ್ಲಿ ಶಕೀಲಾ ಹಾಸ್ಯ ನಟ ವೇಣು ಮಾಧವ ರೂಮ್‌ನಲ್ಲಿ ಮಲಗಬೇಕಾದ ಪರಿಸ್ಥಿತಿ ಎದುರಾಗಿತ್ತು. ಆ ರಾತ್ರಿ ನಡೆದ ಘಟನೆಯನ್ನು ಶಕೀಲಾ ಸ್ವಾರಸ್ಯಕರವಾಗಿ ವಿವರಿಸಿದ್ದರು. ಆ ಘಟನೆ ಏನು ಅಂತ ನೋಡುವುದಾರೇ,

ಒಂದು ತೆಲುಗು ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಅದರಲ್ಲಿ ಶಕೀಲಾ ಜೊತೆ ಹಾಸ್ಯ ದಿಗ್ಗಜರಾದ ಬ್ರಹ್ಮಾನಂದಂ, ದಿವಂಗತ ನಟ ವೇಣು ಮಾಧವ್, ರಘು ಬಾಬು ಸೇರಿದಂತೆ ಹಲವು ಮಂದಿ ನಟಿಸುತ್ತಿದ್ದರು. ಹೀಗಾಗಿ ಇವೆರೆಲ್ಲರೂ ಒಂದೇ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು. ಇವರೆಲ್ಲರಿಗೂ ಪ್ರತ್ಯೇಕವಾದ ಕೊಠಡಿಗಳನ್ನು ಬುಕ್ ಕಾಯ್ದಿರಿಸಲಾಗಿತ್ತು. ಇವರೆಲ್ಲರಿಗೂ ಶಕೀಲಾ ಪರಿಚಯವಿದ್ದರಿಂದ ಆತ್ಮೀಯತೆ ಇತ್ತು. ಹೀಗಾಗಿ ಒಂದು ದಿನ ಶಕೀಲಾ ಅವರ ರೂಮಿನಲ್ಲಿ ಇವರೆಲ್ಲರೂ ಭೋಜನ ಮಾಡಿದ್ದರು.

ಹೀಗಾಗಿ ಶಕೀಲಾ ಅವರ ರೂಮ್ ಅಸ್ಥವ್ಯಸ್ಥವಾಗಿತ್ತು. ಅಲ್ಲಿ ಶಕೀಲಾ ಅವರು ಮಲಗುವುದಕ್ಕೆ ಸಾಧ್ಯವಿರಲ್ಲ. ಆ ಸಮಯದಲ್ಲಿ ಕ್ಲೀನಿಂಗ್ ಮಾಡುವುದಕ್ಕೂ ಸಾಧ್ಯವಿರಲಿಲ್ಲ. ಹೀಗಾಗಿ ಶಕೀಲಾ ಅಂದು ಹಾಸ್ಯ ನಟ ದಿವಂಗತ ವೇಣು ಮಾಧವ ಅವರ ಬಳಿ ಬಂದು ನಿಮ್ಮ ರೂಮ್‌ನಲ್ಲಿ ಮಲಗಬಹುದೇ ಎಂದು ಕೇಳಿದ್ದರು. ಶಕೀಲಾ ಅವರ ಮನವಿಗೆ ವೇಣು ಮಾಧವ "ಖಂಡಿತ, ಬಂದು ಮಲಗಬಹುದು" ಎಂದು ಸಮ್ಮತಿಸಿದ್ದರು.

Once Shakeela explained funny situation staying with late actor Venu Madhav in single room

ಆದರೆ, ಸಹಜವಾಗಿ ಶಕೀಲಾ ಅವರಿಗೆ ಭಯ, ಮುಜುಗರ ಎರಡೂ ಇತ್ತು. ಒಂದು ಬದಿಯ ಹಾಸಿಗೆಯಲ್ಲಿ ಶಕೀಲಾ ಮಲಗಿದ್ದರೆ, ಇನ್ನೊಂದು ಬದಿಯಲ್ಲಿ ವೇಣು ಮಾಧವ ಮಲಗಿದ್ದರು. ಆ ಸಮಯದಲ್ಲಿ ವೇಣು ಮಾಧವ "ನಾನು ಒಂದು ಮಾತು ಕೇಳುತ್ತೇನೆ. ನೀನು ಇಲ್ಲ ಎನ್ನಬಾರದು" ಎಂದು ಕೇಳಿದರು. ವೇಣು ಮಾಧವ ಹೀಗೆ ಹೇಳುತ್ತಿದ್ದಂತೆ ಶಕೀಲಾಗೆ ಅನುಮಾನ ಶುರುವಾಯಿತು.

"ವೇಣು ಮಾಧವ ನನ್ನೊಂದಿಗೆ ಕೆಟ್ಟದಾಗಿ ವರ್ತಿಸ ಬಹುದೇ?" ಎಂಬ ಸಂಶಯ ಮೂಡುವುದಕ್ಕೆ ಶುರುವಾಗಿತ್ತು. ವೇಣು ಮಾಧವರನ್ನು ಉತ್ತಮ ಸ್ನೇಹಿತ ಎಂದು ಭಾವಿಸಿದ್ದರು. ಆದರೆ, ಆ ನಟ ಹೀಗ್ಯಾಕೆ ಕೇಳಿದರು ಅನ್ನೋದೇ ಅರ್ಥವಾಗಿರಲಿಲ್ಲ. ಕೋಪದಲ್ಲಿ "ಸರಿ, ಕೇಳಿ ಸಾಯಿ" ಎಂದು ಪ್ರತಿಕ್ರಿಯೆ ನೀಡಿದ್ದರಂತೆ. ವೇಣು ಮಾಧವ ಅವರು ತಮ್ಮ ಗಡಸು ಧ್ವನಿಯಲ್ಲಿ "ನೀನು ಆಗೋದಿಲ್ಲ ಅಂತ ಮಾತ್ರ ಹೇಳಬಾರದು" ಎಂದು ಮರು ಪ್ರಶ್ನೆ ಹಾಕಿದ್ದರಂತೆ.

ಹೀಗೆ ಹೇಳುತ್ತಿದ್ದಂತೆ ಶಕೀಲಾಳ ಅನುಮಾನ ಮತ್ತಷ್ಟು ಹೆಚ್ಚಾಗಿತ್ತು. ನೇರವಾಗಿ "ನಿಮ್ಮ ಕಷ್ಟವೇನು?" ಎಂದು ಕೋಪದಲ್ಲಿ ಪ್ರಶ್ನೆ ಮಾಡಿದ್ದರು. ಅದಕ್ಕೆ ವೇಣು ಮಾಧವ "ನನಗೆ ಮದುವೆಯಾಗಿ ಮಕ್ಕಳಿದ್ದಾರೆ. ಅವರು ಚೆನ್ನಾಗಿರಬೇಕಾದರೆ ನಾನು ಬದುಕಿರಬೇಕು" ಎಂದು ಹೇಳಿದ್ದರಂತೆ. ಆಗಲೂ ಶಕೀಲಾಗೆ ಅರ್ಥವಾಗದೆ "ಸರಿ, ಅದಕ್ಕೇನು ಈಗ? ಎಂದು ಕೇಳಿದಾಗ, ವೇಣು ಮಾಧವ ಇಬ್ಬರ ನಡುವೆ ದಿಂಬುಗಳನ್ನು ಇಟ್ಟು "ನೀನು ನಿದ್ದೆಯಲ್ಲಿ ಅಕಸ್ಮಾತ್ತಾಗಿ ನನ್ನ ಮೇಲೆ ನಿನ್ನ ಕಾಲುಗಳನ್ನು ಹಾಕಿದರೆ ನಾನು ಸತ್ತೇ ಹೋಗುತ್ತೇನೆ. ಹಾಗಾಗಿ ಈ ದಿಂಬುಗಳನ್ನು ಮಧ್ಯದಲ್ಲಿ ಇಡುತ್ತಿದ್ದೇನೆ. ನಿನ್ನ ಕಾಲು ಇವುಗಳ ಮೇಲೆ ಹಾಕೋ" ಎಂದಿದ್ದರಂತೆ.

ವೇಣು ಮಾಧವ ಅವರ ಈ ಮಾತುಗಳನ್ನು ಕೇಳಿ ಶಕೀಲಾಗೆ ನಗು ತಡೆಯೋಕೆ ಆಗಿರಲಿಲ್ಲ. ಆ ರಾತ್ರಿ ಪೂರ್ತಿ ನಗುತ್ತಲೇ ಇದ್ದರಂತೆ. ಅಲ್ಲದೆ ಮರು ದಿನ ಬೆಳಿಗ್ಗೆ ಬ್ರಹ್ಮಾನಂದಂ ಮತ್ತು ರಘು ಬಾಬು ಅವರಿಗೆ ಈ ಘಟನೆಯನ್ನು ವಿವರಿಸಿದಾಗ, ಅವರೆಲ್ಲರೂ ದಿನವಿಡೀ ನಕ್ಕಿದ್ದರು.

More from Filmibeat

English summary
Once Shakeela explained funny situation staying with late actor Venu Madhav in single room.
Read more about: shakeela comedy actor comedy
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X