"ಬೆಳಗ್ಗೆ ಮಗಳಂತೆ ನೋಡುತ್ತಿದ್ದರು.. ರಾತ್ರಿ ಬೇರೆ ರೀತಿನೇ ಇರ್ತಿದ್ರು"; ಪಾಕ್ ನಟಿಯ ಗಂಭೀರ ಆರೋಪ

ಮೀಟೂ ಪ್ರಕರಣಗಳು ಭಾರತೀಯ ಚಿತ್ರರಂಗವನ್ನು ತಲ್ಲಣಗೊಳಿಸಿತ್ತು. ನಟಿಯರು ಮುಂದೆ ಬಂದು ತಮಗಾದ ಕಹಿ ಅನುಭವಗಳನ್ನು ಹಂಚಿಕೊಂಡಿದ್ದರು. ಒಬ್ಬೊಬ್ಬರೇ ಮುಂದೆ ಬಂದು ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು ಹಾಗೂ ನಟರ ಮೇಲೆ ಆರೋಪ ಮಾಡುತ್ತಿದ್ದರೆ, ಸಿನಿಮಾ ಮಂದಿಗೆ ಎದೆ ಬಡಿತ ಹೆಚ್ಚಾಗಿತ್ತು. ಇಂತಹ ಪ್ರಕರಣದಲ್ಲಿ ಹೆಸರು ಕೇಳಿ ಬಂದ ಕೆಲವರು ಕೆಲಸ ಕಳೆದುಕೊಂಡಿದ್ದಾರೆ. ಇನ್ನು ಕೆಲವರರು ಛೀಮಾರಿ ಹಾಕಲಾಗಿತ್ತು.

ಚಿತ್ರರಂಗದಲ್ಲಿ ನಟಿಯರ ಮೇಲೆ ದೌರ್ಜನ್ಯ ಆಗುತ್ತಲೇ ಇದೆ. ಇದು ಇಂದಿನ ಸಂಗತಿಯೇನಲ್ಲ. ಹಲವು ವರ್ಷಗಳಿಂದ ಇದೆಲ್ಲವನ್ನು ಸಹಿಸಿಕೊಂಡು ಬಂದಿದ್ದಾರೆ. ಕೆಲವು ಘಟನೆಗಳಂತೂ ಗಂಭೀರ ಸ್ವರೂಪವನ್ನು ಪಡೆದುಕೊಂಡಿವೆ. ಆದರೆ, ಮೀಟು ಅಭಿಯಾನ ಆರಂಭ ಆಗುವುದಕ್ಕೂ ಮುನ್ನ ಕೆಲವು ಇಂತಹ ಪ್ರಕರಣಗಳು ಹೊರ ಬಿದ್ದಿವೆ. ಅದರಲ್ಲಿ ಪಾಕಿಸ್ತಾನಿ ನಟಿ ಮೀರಾ ಮಾಡಿದ ಆರೋಪ ಕೂಡ ಒಂದು.

Pakistani actress Meera said Mahesh Bhatt treated as daughter in Day in night his behavior changes

ಪಾಕಿಸ್ತಾನದ ನಟಿ ಮೀರಾ ಬಾಲಿವುಡ್‌ನ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಜನಪ್ರಿಯ ನಿರ್ದೇಶಕ ಮಹೇಶ್ ಭಟ್ ಈ ಪಾಕಿಸ್ತಾನಿ ನಟಿಯನ್ನು ಬಾಲಿವುಡ್‌ ಕರೆದುಕೊಂಡು ಬಂದಿದ್ದರು. ಆ ಸಿನಿಮಾವೇ 'ನಜರ್'. ಹಿಂದಿ ಚಿತ್ರರಂಗಕ್ಕೆ ಬರುತ್ತಿದ್ದಂತೆ ಮೀರಾಗೆ ಭಾರತದಲ್ಲಿಯೂ ಅಭಿಮಾನಿಗಳು ಹುಟ್ಟಿಕೊಂಡಿದ್ದರು. ಆ ವೇಳೆ ಮೀರಾ ಹಾಗೂ ನಿರ್ದೇಶಕ ಮಹೇಶ್ ಭಟ್ ಇಬ್ಬರೂ ಸಿಕ್ಕಾಪಟ್ಟೆ ಕ್ಲೋಸ್ ಆಗಿದ್ದರು.

'ನಜರ್' ಸಿನಿಮಾ ಪಾಕ್ ನಟಿ ಮೀರಾರನ್ನು ಭಾರತದಲ್ಲಿ ಫೇಮಸ್ ಮಾಡಿತ್ತು. ಆ ವೇಳೆ ಮಹೇಶ್ ಭಟ್ ಅವರನ್ನು ಹೊಗಳಿಕೊಂಡಾಡಿದ್ದರು. ಆ ವೇಳೆ ಮಹೇಶ್ ಭಟ್ ಅವರನ್ನು ತಮ್ಮ ಗುರು, ಮಾರ್ಗದರ್ಶಕ ಎಂದು ಕೊಂಡಾಡಿದ್ದರು. ಈ ಮಟ್ಟಿಗೆ ಹಾಡಿ ಹೊಗಳಿದ್ದ ಮೀರಾ ಕೆಲವು ದಿನಗಳಲ್ಲಿ ಉಲ್ಟಾ ಹೊಡೆದಿದ್ದರು. ಮಹೇಶ್ ಭಟ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಹೊರಿಸಿದ್ದರು. ಇದು ಬಾಲಿವುಡ್ ಮಂದಿಗೆ ಅಚ್ಚರಿ ಮೂಡಿಸಿದ್ದರು.

Also Read
ಧರ್ಮಗುರು ಗಂಡನ ಆದೇಶ ; ಇಸ್ಲಾಂ ಧರ್ಮದ ಆಳ ಅರಿಯಲು 'ಮದರಸಾ' ಸೇರಿಕೊಂಡ 'ಕೂಲ್' ನಟಿ ಸನಾ ಖಾನ್
ಧರ್ಮಗುರು ಗಂಡನ ಆದೇಶ ; ಇಸ್ಲಾಂ ಧರ್ಮದ ಆಳ ಅರಿಯಲು 'ಮದರಸಾ' ಸೇರಿಕೊಂಡ 'ಕೂಲ್' ನಟಿ ಸನಾ ಖಾನ್

ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಹಲವು ನಟಿಯರನ್ನು ಪರಿಚಯಿಸಿದ್ದಾರೆ. ಅವರು ಸ್ಟಾರ್ ಆಗಿ ಮೆರೆದಿದ್ದಾರೆ. ಅಂತಹವರಲ್ಲಿ ಪಾಕಿಸ್ತಾನದ ನಟಿ ಮೀರಾ ಕೂಡ ಸೇರಿಕೊಂಡಿದ್ದಾರೆ. ಆದರೆ, ಗುರು ಎಂದು ಹೇಳಿದ್ದ ಅವರ ವಿರುದ್ಧವೇ ಯಾಕೆ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದರು ಅನ್ನೋದು ದೊಡ್ಡ ಮಟ್ಟಕ್ಕೆ ಸುದ್ದಿಯಾಗಿತ್ತು. "ಮಹೇಶ್ ಭಟ್ ಹಲವು ಬಾರಿ ಕಪಾಳಮೋಕ್ಷ ಮಾಡಿದ್ದರು. ಸುಭಾಷ್ ಘಾಯ್, ಮಣಿರತ್ನಂ ಅವರ ಜೊತೆ ಕೆಲಸ ಮಾಡುತ್ತೇನೆ ಎಂದು ಹೇಳಿದಾಗ ದೈಹಿಕವಾಗಿ ಹಿಂಸೆ ನೀಡಿದ್ದರು" ಎಂದು ಆರೋಪಿಸಿದ್ದರು.

Pakistani actress Meera said Mahesh Bhatt treated as daughter in Day in night his behavior changes

ಮಹೇಶ್ ಭಟ್ ವಿರುದ್ಧ ಇಲ್ಲಿಗೆ ಆರೋಪಗಳು ನಿಂತಿರಲಿಲ್ಲ. "ಮಹೇಶ್ ಭಟ್ ಹಗಲಲ್ಲಿ ಮಗಳಂತೆ ನೋಡುತ್ತಿದ್ದರು. ರಾತ್ರಿ ಬೇರೆ ರೀತಿ ನೋಡುತ್ತಿದ್ದರು. ಅವರ ಬಳಿ ಇನ್ನೊಂದು ಮುಖವಿದೆ. ಅವರು ಮಾಡಿದ ಕುತಂತ್ರದಿಂದ ಬಾಲಿವುಡ್ ತೊರೆಯಬೇಕಾಯ್ತು. ದೇಶ ಬಿಡಬೇಕಾಯ್ತು. ಇದರಿಂದ ನಾನು ಖಿನ್ನತೆಗೆ ಒಳಗಾಗಿದ್ದೆ. ಬಹಳ ದಿನ ಮಾನಸಿಕ ಯಾತನೆ ಅನುಭವಿಸಬೇಕಾಯ್ತು" ಎಂದು ಆರೋಪಿಸಿದ್ದಾರೆ.

ಇದು ವಿವಾದವನ್ನು ಸೃಷ್ಟಿಸಿತ್ತು. ಮಹೇಶ್ ಭಟ್ ವಿರುದ್ಧ ಟೀಕೆಗಳ ಸುರಿಮಳೆಯೇ ಸುರಿದಿತ್ತು. ಬಳಿಕ ಮೀರಾ ನಾನು ತಮಾಷೆ ಮಾಡಿದ್ದು, ನಾನು ಮಾಡಿದ ಆರೋಪಗಳೆಲ್ಲ ನಿಜವಲ್ಲ ಎಂದು ಹೇಳಿದ್ದರು. ಕೂಡಲೇ ಮಹೇಶ್ ಭಟ್ ಕಚೇರಿಗೆ ಹೋಗಿ ಕ್ಷಮೆ ಕೇಳುವ ಪ್ರಯತ್ನ ಮಾಡಿದ್ದರು. ಆದರೆ, ಮಹೇಶ್ ಭಟ್ ಅವರನ್ನು ಭೇಟಿ ಆಗಿಲ್ಲ ಎಂದು ವರದಿಯಾಗಿತ್ತು. ಹಾಗೇ ಮಹೇಶ್ ಭಟ್ ತಮ್ಮ ಮೇಲೆ ಮಾಡಿದ ಆರೋಪಗಳನ್ನು ತಳ್ಳಿ ಹಾಕಿದ್ದರು. 2009, 2011ರ ಸಮಯದಲ್ಲಿ ನಡೆದ ಈ ವಿವಾದ ಸಿನಿಮಾ ಮಂದಿಯ ಗಮನ ಸೆಳೆದಿತ್ತು.

More from Filmibeat

English summary
Pakistani actress Meera said Mahesh Bhatttreated as daughter in Day in night his behavior changes.
Read more about: meera mahesh bhatt allegation
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X