ಈ ನಟಿ ಬಾಲಿವುಡ್ ತೊರೆದು ಗೂಗಲ್ ಇಂಡಿಯಾದಲ್ಲಿ ಕೋಟಿ ದುಡಿಯುತ್ತಿರೋ ಈ ನಟಿ ಯಾರು?

90ರ ದಶಕದ ಸಿನಿಮಾ ಪ್ರೇಮಿಗಳಿಗೆ ಈ ನಟಿ ಕಣ್ಣಿಗೆ ಕಟ್ಟಿದ ಹಾಗಿದೆ. ಇಂದಿಗೂ ಆಕೆ ನಟಿಸಿದ ಹಾಡುಗಳು ಕವಿಯಲ್ಲಿ ಗುನುಗುತ್ತವೆ. ಆಕೆ ಅಂದರ ಮುಖ ಕಣ್ಮುಂದೆ ಬಂದು ಬಿಡುತ್ತೆ. ಬಾಲಿವುಡ್‌ ಎಂಟ್ರಿ ಕೊಟ್ಟ ಮೊದಲ ಸಿನಿಮಾದಲ್ಲಿಯೇ ಈ ನಟಿಗೆ ಸ್ಟಾರ್ ಪಟ್ಟ ಸಿಕ್ಕಿತ್ತು. ಆದರೆ, ಹೆಚ್ಚು ದಿನ ಬಾಲಿವುಡ್‌ನಲ್ಲಿ ಉಳಿಯಲಿಲ್ಲ. ಸಿನಿಮಾರಂಗವನ್ನು ತೊರೆದು ಗೂಗಲ್ ಅಂತಹ ಪ್ರತಿಷ್ಟಿತ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದರು.

ನೀಲಿ ಕಣ್ಣುಗಳ ಈ ಬಾಲಿವುಡ್ ಬ್ಯೂಟಿಯೇ ಮಯೂರಿ ಕಾಂಗೋ. 90ರ ದಶಕದ ಹಿಂದಿ ಹಾಡುಗಳ ಲವರ್ ಆಗಿದ್ದವರು ಇಂದಿಗೂ "ಘರ್ ಸೇ ನಿಕಲ್ ತೇ ಹೀ.." ಅಂತ ಗುನುಗುತ್ತಲೇ ಇರುತ್ತಾರೆ. 'ಪಾಪಾ ಕೆಹತೆ ಹೈ' ಸಿನಿಮಾದ ಈ ಹಾಡಿನಲ್ಲಿ ಮಯೂರಿ ಕಾಂಗೋ ನೋಡಿ ಇಷ್ಟ ಪಟ್ಟವರು ಅದೆಷ್ಟೋ ಮಂದಿ. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಅಷ್ಟೊಂದು ಮೋಡಿ ಮಾಡದೇ ಹೋದರೂ, ಮಯೂರಿ ಕಾಂಗೋ ಪ್ರೇಕ್ಷಕರಿಗೆ ಇಷ್ಟ ಆಗಿದ್ದರು.

Papa Kehte Hai movie actress left bollywood moved to US became head of Google

ಮಯೂರಿ ಕಾಂಗೋ ಅವರದ್ದು ಮಧ್ಯಮ ವರ್ಷದ ಕುಟುಂಬ. ಮಹಾರಾಷ್ಟ್ರದ ಛತ್ರಪತಿ ಸಾಂಬಾಜಿನಗರದವರು. ತಾಯಿಯೊಂದಿಗೆ ಮುಂಬೈಗೆ ಬಂದಾಗ ನಿರ್ದೇಶಕ ಸೈಯದ್ ಅಖ್ತರ್ ಮಿರ್ಜಾ ಅವರನ್ನು ಭೇಟಿ ಮಾಡಿದ್ದರು. ಆಗ ಈ ನಿರ್ದೇಶಕರು ಮಯೂರಿ ಲುಕ್‌ ಮೆಚ್ಚಿಕೊಂಡು 'ನಸೀಮ್' ಅನ್ನುವ ಸಿನಿಮಾಗೆ ಅವಕಾಶ ಕೊಟ್ಟಿದ್ದರು. 1995ರಲ್ಲಿ ಈ ಸಿನಿಮಾ ತೆರೆಕಂಡಿತ್ತು.

'ನಸೀಮ್' ರಿಲೀಸ್ ಆಗುತ್ತಿದ್ದಂತೆ ಮಯೂರಿ ಕಾಂಗೋ ಸ್ಕ್ರೀನ್ ಅಪಿಯರೆನ್ಸ್ ಅಂದಿನ ಸ್ಟಾರ್ ಡೈರೆಕ್ಟರ್ ಮಹೇಶ್ ಭಟ್‌ಗೆ ಇಷ್ಟ ಆಗಿತ್ತು. ಹೀಗಾಗಿ ಅವರು ನಿರ್ದೇಶಿಸುತ್ತಿದ್ದ 'ಪಾಪ ಕೆಹತೇ ಹೈ' ಅನ್ನೋ ಸಿನಿಮಾಗೆ ನಾಯಕಿಯನ್ನಾಗಿ ಆಯ್ಕೆ ಮಾಡಿದ್ದರು. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡದೇ ಹೋದರೂ, ಇದೇ ಸಿನಿಮಾದ "ಘರ್ ಸೇ ನಿಕಲ್ ತೇ ಹೀ.." ಅನ್ನೋ ಹಾಡು ಜನಪ್ರಿಯವಾಗಿತ್ತು. ಹಾಗೇ ಮಯೂರಿನ ನಟನೆಗೂ ಮೆಚ್ಚುಗೆ ವ್ಯಕ್ತವಾಗಿತ್ತು.

ಆರಂಭದಲ್ಲೇ ನೇಮ್ ಅಂಡ್ ಫೇಮ್ ಸಿಕ್ಕರೂ ಮಯೂರಿ ಕಾಂಗೋ ಹೆಚ್ಚು ಸಿನಿಮಾ ಮಾಡಲಿಲ್ಲ. ಒಳ್ಳೊಳ್ಳೆ ಪಾತ್ರಗಳು ಈ ನಟಿಗೆ ಸಿಗಲಿಲ್ಲ. 'ಬೇತಾಬಿ', 'ಹೋಗಿ ಪ್ಯಾರ್ ಕಿ ಜೀತ್', 'ಬಾದಲ್', 'ಜಂಗ್', 'ಶಿಕಾರಿ','ವಂಶಿ' ಹಾಗೂ 'ಜೀತೆಂಗೆ ಹಮ್' ಅಂತಹ ಸಿನಿಮಾಗಳಲ್ಲಿ ನಟಿಸಿದ್ದರು. ಇದರ ಜೊತೆ ಟಿವಿ ಶೋಗಳಲ್ಲಿಯೂ ಕಾಣಿಸಿಕೊಂಡಿದ್ದರು. ಆದರೂ ಈಕೆಗೆ ಸಿಗಬೇಕಿದ್ದ ಫೇಮ್ ಸಿಗಲೇ ಇಲ್ಲ.

Papa Kehte Hai movie actress left bollywood moved to US became head of Google

2003ರಲ್ಲಿ ಆದಿತ್ಯ ದಿಲ್ಲೋನ್ ಎಂಬುವವರೊಂದಿಗೆ ಮಯೂರಿ ಕಾಂಗೋ ವಿವಾಹವಾದರು. ಆ ಬಳಿಕ ನಟನೆಗೆ ಗುಡ್‌ ಬೈ ಹೇಳಿ ಪತಿಯೊಂದಿಗೆ ಅಮೆರಿಕಗೆ ತೆರಳಿದ್ದರು. ಅಮೆರಿಕಗೆ ತೆರಳಿದ ಬಳಿಕ ಮಯೂರಿ ಕಾಂಗೋ ಮಾರ್ಕೆಟಿಂಗ್ ಹಾಗೂ ಫೈನಾನ್ಸ್‌ನಲ್ಲಿ ಎಂಬಿಎ ಮುಗಿಸಿದ್ದರು. 2004 ರಿಂದ 2012ರವರೆಗೆ ಮಯೂರಿ ಅಮೆರಿಕದಲ್ಲಿಯೇ ಕೆಲಸ ಮಾಡುತ್ತಿದ್ದರು. 2013ರಲ್ಲಿ ಭಾರತಕ್ಕೆ ಮರಳಿದ ಮಯೂರಿ 'ಪೆರ್ಫೊರ್ಮಿಕ್ಸ್' ಎನ್ನುವ ಕಂಪನಿಯಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದರು.

2019ರಲ್ಲಿ ಮಯೂರಿ ಕಾಂಗೋ ಪ್ರತಿಷ್ಠಿತ ಗೂಗಲ್ ಕಂಪನಿಯಲ್ಲಿ ಉನ್ನತ ಹುದ್ದೆಯನ್ನು ಗಿಟ್ಟಿಸಿಕೊಂಡಿದ್ದರು. ಭಾರತದ ಗೂಗಲ್‌ನ ಇಂಡಸ್ಟ್ರಿ ಹೆಡ್ ಆಗಿ ಸೇರಿಕೊಂಡಿದ್ದರು. ಆ ವೇಳೆ ಮಯೂರಿ ಕಾಂಗೋ ಮತ್ತೆ ಸುದ್ದಿಯಲ್ಲಿದ್ದರು. ಈ ನಟಿ ಇನ್‌ಸ್ಟಾಗ್ರಾಂನಲ್ಲಿ ಆಕ್ಟಿವ್ ಆಗಿದ್ದು, ಸ್ಟೇಟಸ್‌ನಲ್ಲಿ ಇನ್ನೂ ಗೂಗಲ್ ಇಂಡಿಯಾದಲ್ಲಿಯೇ ಕೆಲಸ ಮಾಡುವುದಾಗಿ ಬರೆದುಕೊಂಡಿದ್ದಾರೆ.

More from Filmibeat

English summary
Do you know which actress became head of Google India?;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X